Site icon Vistara News

ಇ ಸ್ಕೂಟರ್ ಖರೀದಿಸುವವರಿಗೆ ಸರ್ಕಾರದಿಂದ 40 ಸಾವಿರ ರೂ. ಸಹಾಯಧನ!

E Scooter

Madhya Pradesh govt to provide Rs 40,000 aid to labourers for purchasing e-scooters: CM Yadav

ಭೋಪಾಲ್‌: ಇ ಸ್ಕೂಟರ್‌ (Electric Scooter) ಖರೀದಿಸುವ ಕಾರ್ಮಿಕರಿಗೆ ಮಧ್ಯಪ್ರದೇಶ ಸರ್ಕಾರ ಸಿಹಿ ಸುದ್ದಿ ನೀಡಿದೆ. “ಇ-ಸ್ಕೂಟರ್‌ ಖರೀದಿಸುವ ಕಾರ್ಮಿಕರಿಗೆ (Labourers) 40 ಸಾವಿರ ರೂಪಾಯಿ ಸಹಾಯಧನ (Financial Assistance) ನೀಡುವುದಾಗಿ” ಮುಖ್ಯಮಂತ್ರಿ ಮೋಹನ್‌ ಯಾದವ್‌ (Mohan Yadav) ಘೋಷಿಸಿದ್ದಾರೆ. ಗ್ವಾಲಿಯರ್‌ ವಿಮಾನ ನಿಲ್ದಾಣದ ಟರ್ಮಿನಲ್‌ಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೂ ಮೊದಲು ಮೋಹನ್‌ ಯಾದವ್‌ ಅವರು ಈ ಘೋಷಣೆ ಮಾಡಿದ್ದಾರೆ.

“ಮಧ್ಯಪ್ರದೇಶದಲ್ಲಿ ಕಾರ್ಮಿಕರು ಮೃತಪಟ್ಟರೆ ಅವರ ಕುಟುಂಬಸ್ಥರಿಗೆ ನೀಡುವ ಪರಿಹಾರವನ್ನು 1 ಲಕ್ಷ ರೂಪಾಯಿಯಿಂದ 4 ಲಕ್ಷ ರೂಪಾಯಿಗೆ ಏರಿಕೆ ಮಾಡಿದ್ದೇವೆ. ಅಂಗವೈಕಲ್ಯಕ್ಕೀಡಾಗುವ ಕಾರ್ಮಿಕರಿಗೆ ನೀಡುವ ಪರಿಹಾರವನ್ನೂ 4 ಲಕ್ಷ ರೂಪಾಯಿಗೆ ಏರಿಕೆ ಮಾಡಿದ್ದೇವೆ. ವಿದ್ಯುತ್‌ಚಾಲಿತ ಸ್ಕೂಟರ್‌ ಖರೀದಿಸುವವರಿಗೆ 40 ಸಾವಿರ ರೂ. ಸಹಾಯಧನ ನೀಡುತ್ತೇವೆ” ಎಂದು ಕಾರ್ಮಿಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ತೆಗೆದುಕೊಂಡಿರುವ ತೀರ್ಮಾನಗಳ ಕುರಿತು ಮಾಹಿತಿ ನೀಡಿದರು.

ಕಾರ್ಮಿಕರ ಮಾಸಿಕ ವೇತನ ಹೆಚ್ಚಳ

ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರ ಮಾಸಿಕ ವೇತನವನ್ನೂ ಜಾಸ್ತಿ ಮಾಡಲಾಗಿದೆ ಎಂದು ಮೋಹನ್‌ ಯಾದವ್‌ ತಿಳಿಸಿದರು. “ಕೌಶಲರಹಿತ ಕಾರ್ಮಿಕರಿಗೆ ನೀಡುವ ಮಾಸಿಕ ವೇತನವನ್ನು 11,450 ರೂ.ಗೆ, ಅರೆಕೌಶಲ ಕಾರ್ಮಿಕರಿಗೆ 12,446 ರೂ. ಹಾಗೂ ಕೃಷಿ ಕಾರ್ಮಿಕರಿಗೆ 9,160 ರೂ.ಗೆ ಏರಿಕೆ ಮಾಡಲಾಗಿದೆ” ಎಂದು ತಿಳಿಸಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಮೋಹನ್‌ ಯಾದವ್‌ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು, ಹಲವು ಜನಪರ ಘೋಷಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Ather 450 Apex : ಭಾರತದ ಅತ್ಯಂತ ವೇಗದ ಇವಿ ಸ್ಕೂಟರ್​ ಬಿಡುಗಡೆ

ನೆಕ್ಸಾನ್ ಇವಿಗೆ ಡಿಸ್ಕೌಂಟ್‌

ಕೆಲ ದಿನಗಳ ಹಿಂದಷ್ಟೇ ಟಾಟಾ ನೆಕ್ಸಾನ್‌ನ ಎಲೆಕ್ಟ್ರಿಕ್‌ ಕಾರುಗಳಿಗೆ ರಿಯಾಯಿತಿ ಘೋಷಿಸಲಾಗಿದೆ. ನೆಕ್ಸಾನ್ ಇವಿ ಫೇಸ್ ಲಿಫ್ಟ್ ನ ಫಿಯರ್ ಲೆಸ್ ಎಂಆರ್, ಎಂಪವರ್ಡ್ + ಎಲ್ ಆರ್ ಮತ್ತು ಎಂಪವರ್ಡ್ ಎಂಆರ್ ವೇರಿಯೆಂಟ್​ಗಳು 50,000 ರೂ.ಗಳವರೆಗೆ ರಿಯಾಯಿತಿಗಳನ್ನು ಪಡೆದರೆ, ಫಿಯರ್ ಲೆಸ್ + ಎಂಆರ್, ಫಿಯರ್ ಲೆಸ್ + ಎಸ್ ಎಂಆರ್, ಫಿಯರ್ ಲೆಸ್ + ಎಲ್ ಆರ್ ರೂಪಾಂತರಗಳು 65,000 ರೂ.ಗಳವರೆಗೆ ರಿಯಾಯಿತಿ ಲಭ್ಯವಿದೆ. ಫಿಯರ್​ಲೆಸ್​ ಎಲ್ಆರ್ ರೂಪಾಂತರವು 85,000 ರೂ.ಗಳವರೆಗೆ ರಿಯಾಯಿತಿ ಪಡೆದರೆ, ಟಾಪ್-ಸ್ಪೆಕ್ ಫಿಯರ್ಲೆಸ್ + ಎಸ್ ಎಲ್ಆರ್ 1 ಲಕ್ಷ ರೂ.ಗಳವರೆಗೆ ರಿಯಾಯಿತಿ ಮತ್ತು ಪ್ರಯೋಜನಗಳನ್ನು ಪಡೆಯುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version