ಬೆಂಗಳೂರು, ಕರ್ನಾಟಕ: ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ (Electric Scooters) ಮತ್ತು ನಾಲ್ಕು ಚಕ್ರ ವಾಹನಗಳ (electric Vehicles) ಬಳಕೆಯಲ್ಲಿ ಕ್ರಾಂತಿಯಾಗುತ್ತಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಉತ್ತೇಜನದಿಂದಾಗಿ ಬಹಳಷ್ಟು ಜನರು ಬ್ಯಾಟರಿ ಚಾಲಿತ ವಾಹನಗಳನ್ನು ಬಳಸುವತ್ತು ಮನಸ್ಸು ಮಾಡುತ್ತಿದ್ದಾರೆ. ಈ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಓಲಾ ಕಂಪನಿ ಕೂಡ ಹಿಂದೆ ಬಿದ್ದಿಲ್ಲ. ಭವೀಶ್ ಅಗ್ರವಾಲ್ (Bhavish Aggrawal) ನೇತೃತ್ವದ ಓಲಾ ಎಲೆಕ್ಟ್ರಿಕ್ (Ola Electric) ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂಲಕ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿವೆ. ಕಂಪನಿಯು ಈ ವರೆಗೆ ಸುಮಾರು 250000 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಈ ಮೂಲಕ 18 ತಿಂಗಳಲ್ಲಿ ಓಲಾ ಕಂಪನಿಯು ಸುಮಾರು 2 ಕೋಟಿಗೂ ಅಧಿಕ ಪೆಟ್ರೋಲ್ (Petrol) ಉಳಿತಾಯ ಮಾಡಿದೆ!
ಹೌದು, ಈ ವಿಷಯವನ್ನು ಓಲಾ ಎಲೆಕ್ಟ್ರಿಕ್ ಸಿಇಒ ಭವೀಶ್ ಅಗ್ರವಾಲ್ ಅವರು ಟ್ವೀಟ್ ಮಾಡಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಓಲಾ ಸ್ಕೂಟರ್‌ಗಳು 100 ಕಿ.ಮೀ ಪೂರೈಸಿವೆ. ಇದರಿಂದ 2 ಕೋಟಿಗೂ ಅಧಿಕ ಪೆಟ್ರೋಲ್ ಉಳಿತಾಯವಾದಂತಾಗಿದೆ. ಮೊದಲ ಸ್ಕೂಟರ್ ಮಾರಾಟ ಮಾಡಿದ 18 ತಿಂಗಳಲ್ಲಿ ಇದು ಸಾಧ್ಯವಾಗಿದೆ. ಪಯಣ ಇನ್ನೂ ವೇಗವಾಗಿ ಹೋಗಲಿದೆ ಎಂದು ಭವೀಶ್ ಅಗ್ರವಾಲ್ ಅವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
Ola Electric: ಭವೀಶ್ ಅಗ್ರವಾಲ್ ಅವರ ಟ್ವೀಟ್
This week we crossed 1 billion (100 crore) kms driven on @OlaElectric scooters! That’s more than 2 crore litres of petrol saved!!
— Bhavish Aggarwal (@bhash) May 27, 2023
In just 18 months since the first scooter was sold.
And the journey is accelerating super fast! #endICEage pic.twitter.com/DjNmiZQDFr
ಓಲಾ ಎಲೆಕ್ಟ್ರಿಕ್ ಕಂಪನಿಯು ಆರಂಭದಲ್ಲಿ ಎಸ್1 ಮತ್ತು ಎಸ್1 ಪ್ರೋ ಮಾದರಿಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಲಾಂಚ್ ಮಾಡಿತ್ತು. ಈ ಮೂರನೇ ವೆರಿಯಂಟ್ ಎಸ್ 1 ಏರ್ ಕೂಡ ಪರಿಚಯಿಸಲಾಗಿದೆ. ಇದು ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲೇ ಅತ್ಯಂತ ಅಗ್ಗದ ಸ್ಕೂಟರ್ ಆಗಿದೆ. ಈಗಾಗಲೇ ಎಸ್ 1 ಏರ್‌ಗೆ ಮುಂಗಡ ಬುಕ್ಕಿಂಗ್ ಆರಂಭವಾಗಿದ್ದರೂ, ಟೆಸ್ಟ್ ರೈಡ್ ಮತ್ತು ಮಾರಾಟ ವ್ಯವಸ್ಥೆಯು ಜುಲೈ ನಂತರ ಶುರುವಾಗಲಿದೆ.
ಬ್ಯಾಟರಿ ಪ್ಯಾಕ್ ಆಧರಿಸಿ ಓಲಾ ಎಸ್1 ಏರ್ ಮೂರು ಟ್ರಿಮ್‌ಗಳಲ್ಲಿ ಗ್ರಾಹಕರಿಗೆ ಸಿಗಲಿದೆ. ಅಂದರೆ, 2 kWh, 3 kWh ಮತ್ತು 4 kWh ಬ್ಯಾಟರಿ ಪ್ಯಾಕ್‌ಗಳಲ್ಲಿ ದೊರೆಯಲಿದೆ. ಈ ಮೂರು ಬ್ಯಾಟರಿಗಳು ಸಿಂಗಲ್ ಚಾರ್ಜ್‌ನಲ್ಲಿ ಬೇರೆ ಬೇರೆ ರೀತಿಯಲ್ಲಿ ಬಾಳಕೆ ಬರಲಿವೆ.
ಈ ಸುದ್ದಿಯನ್ನೂ ಓದಿ: Ola S1 Scooter : ಸುರಕ್ಷತೆಯ ದೃಷ್ಟಿಯಿಂದ ಬಳಕೆದಾರರಿಗೆ ಎಸ್1 ಸ್ಕೂಟರ್‌ನ ಬಿಡಿಭಾಗ ಬದಲಿಸುವ ಆಯ್ಕೆ ನೀಡಿದ ಓಲಾ
ಈ ಮಧ್ಯೆ, ಬ್ಯಾಟರಿ ರಸೆಲ್ ಗಿಗಾಫ್ಯಾಕ್ಟರಿ ಆರಂಭಿಸುವುದಾಗಿ ಓಲಾಎಲೆಕ್ಟ್ರಿಕ್ ಘೋಷಣೆ ಮಾಡಿದೆ. ಇದು ದೇಶದಲ್ಲಿ ಅತಿದೊಡ್ಡ ಇವಿ ಸೆಲ್ ಫ್ಯಾಕ್ಟರಿಯಾಗಲಿದೆ ಎಂದು ಹೇಳಲಾಗುತ್ತಿದೆ. ತಮಿಳುನಾಡಿನ ಕೃಷ್ಣಗಿರಿಯಲ್ಲಿ ಈ ಫ್ಯಾಕ್ಟರಿ ಆರಂಭವಾಗಲಿದ್ದು, ವರ್ಷಕ್ಕೆ ಸುಮಾರು 10 ಗಿಗಾವ್ಯಾಟ್ ಗಂಟೆಗಳ ಉತ್ಪಾದೆಯ ಸಾಮರ್ಥ್ಯಹೊಂದಲಿದೆ ಎನ್ನಲಾಗುತ್ತಿದೆ.
ಆಟೋಮೊಬೈಲ್‌ನ ಇನ್ನಷ್ಟು ಆಸಕ್ತಿಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.