Site icon Vistara News

OLA EV ಅಗ್ನಿ ದುರಂತ; 1,441 ವಾಹನಗಳ ಹಿಂಪಡೆತ

ಅಟೋಮೊಬೈಲ್: ಓಲಾ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು ಬೆಂಕಿ ಹತ್ತಿದ ಹಿನ್ನೆಲೆಯಲ್ಲಿ ಕಂಪನಿಯವರು 1,441 ಗಾಡಿಗಳನ್ನು ಹಿಂಪಡೆದಿದ್ದಾರೆ. ಈ ಹಿಂದೆ ಅನೇಕ ಓಲಾ ವಿದ್ಯತ್‌ ವಾಹನಗಳು ಬೆಂಕಿ ಹೊತ್ತಿಕೊಂಡು ಉರಿದಿದ್ದವು. ಇದೀಗ ಓಲಾ ಎಲೆಕ್ಟ್ರಿಕ್ ಸಂಸ್ಥೆ ವಾಹನಗಳನ್ನು ಹಿಂಪಡೆಯಲು ಮುಂದಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ. ಅಲ್ಲದೆ, ಪುಣೆಯಲ್ಲಿ ಮಾರ್ಚ್‌ 26ರಂದು ಸಂಭವಿಸಿದ ಅಗ್ನಿ ದುರಂತದ ಕುರಿತು ತನಿಖೆ ನಡೆಸಲಾಗುತ್ತಿದೆ ಎಮದು ಮುಖ್ಯಸ್ಥರು ತಿಳಿಸಿದ್ದಾರೆ.

ಒಲಾ ಎಲೆಕ್ಟ್ರಿಕ್ ಸಂಸ್ಥೆಯ ಮುಖ್ಯಸ್ಥರು ಮಾತನಾಡಿ ʼಇನ್ನು ಮುಂದೆ ಮಾರುಕಟ್ಟಗೆ ಸಾಗಲಿರುವ ಎಲ್ಲಾ ವಾಹನಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುವುದು. ಈ ಹಿಂದೆ ಹೋದ ಒಂದು ಬ್ಯಾಚ್‌ನ ವಾಹನಗಳು ಅಗ್ನಿ ದುರಂತಕ್ಕೆ ಕಾರಣವಾಗಿದೆ. ಹಾಗಾಗಿ ಅವುಗಳನ್ನು ಕೂಡಲೇ ಹಿಂಪಡೆದಯಲಾಗುತ್ತದೆ. ಆ ವಾಹನಗಳನ್ನು ಇಂಜಿನಿಯರ್‌ಗಳು ಹಾಗೂ ತಜ್ಞರು ಮತ್ತೊಮ್ಮೆ ಪರಿಶೀಲಿಸಲಿದ್ದು, ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನವಹಿಸಲಿದೆʼ ಎಂದು ತಿಳಿಸಿದ್ದಾರೆ.

ಓಲಾ ಎಲೆಕ್ಟ್ರಿಕ್‌ ಸಂಸ್ಥೆಯು ಈಗಾಗಲೆ ಬ್ಯಟರಿ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಮದು ತಿಳಿಸಲಾಗಿದೆ. ಭಾರತದ ಬ್ಯಾಟರಿಗಳಿಗೆ ಹೊಸದಾಗಿ ನೀಡುವ AIS 156 ಪ್ರಮಾಣದ ಒಪ್ಪಿಗೆ ಪಡೆದಂತಹ ಬ್ಯಾಟರಿಗಳನ್ನು ಅಳವಡಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.

ಈ ರೀತಿಯ ಅಗ್ನಿ ದುರಂತಗಳು ಅನೇಕ ವಿದ್ಯತ್‌ ವಾಹನ ನಿರ್ಮಿಸುವ ಸಂಸ್ಥೆಗಳ ವಾಹನಗಳಲ್ಲಿ ಕಂಡುಬಂದಿತ್ತು. ಆ ಕಂಪನಿಗಳು ವಾಹನಗಳನ್ನು ಹಿಂಪಡೆಯುವ ಮೂಲಕ ಜವಾಬ್ದಾರಿಯುತ ನಡೆ ನಡೆದಿತ್ತು. ಓಕಿನಾವಾ ಅಟೋಟೆಕ್‌ (Okinawa Autotech) ವಾಹನಗಳಲ್ಲೂ ಈ ಸಮಸ್ಯೆ ಕಂಡುಬಂದಿದ್ದು, ಸುಮಾರು 3,000ಕ್ಕೂ ಅಧಿಕ ವಾಹನಗಳನ್ನು ಸಂಸ್ಥೆಯು ಹಿಂಪಡೆದಿತ್ತು. ಹಾಗೂ ಪ್ಯೂರ್‌ ಇ.ವಿ.(PureEV) ಸುಮಾರು 2000ಕ್ಕೂ ಅಧಿಕ ವಾಹನಗಳನ್ನು ಹಿಂಪಡೆದಿತ್ತು.

ಸಾಲು ಸಾಲಾಗಿ ಕಂಡುಬಂದ ವಿದ್ಯುತ್‌ ವಾಹನಗಳ ಬೆಂಕಿ ದುರಂತ ಕಂಡು ಭಾರತ ಸರ್ಕಾರವು ಮುಂಬರುವ ವಿದ್ಯುತ್‌ ವಾಹನಗಳ ತಪಾಸಣೆಗೆ ಪ್ರತ್ಯೇಕ ವಿಭಾಗವನ್ನು ರಚಿಸಿದೆ. ಅಲ್ಲದೆ, ಸಂಸ್ಥೆಗಳು ಅಲಕ್ಯದಿಂದ ವಾಹನಗಳನ್ನು ಮಾರುಕಟ್ಟೆಗೆ ಕಳುಹಿಸಿದಲ್ಲಿ ದಂಡ ವಿಧಿಸಲಾಗುವುದು ಎಂದು ಭಾರತ ಸರ್ಕಾರ ಸೂಚನೆ ನೀಡಿದೆ.

ಇದನ್ನೂ ಓದಿ: Explainer: EVಗಳೇಕೆ ಹೊತ್ತಿ ಉರಿಯುತ್ತಿವೆ?

Exit mobile version