ನವ ದೆಹಲಿ: ಭಾರತದಲ್ಲಿ ಕಳೆದ 2022-23ರಲ್ಲಿ 38.89 ಲಕ್ಷ ವಾಹನಗಳು ಮಾರಾಟವಾಗಿವೆ. 2021-22ರ ಸಾಲಿಗೆ ಹೋಲಿಸಿದರೆ 27% ಏರಿಕೆ ದಾಖಲಿಸಿದೆ. (Passenger Vehicle sales) ಆಗ 30.69 ಲಕ್ಷ ವಾಹನಗಳು ಮಾರಾಟವಾಗಿತ್ತು ಎಂದು ಆಟೊಮೊಬೈಲ್ ಡೀಲರ್‌ಗಳ ಒಕ್ಕೂಟ ಎಫ್‌ಎಡಿಎ ತಿಳಿಸಿದೆ. (Federation of automobile dealers associations) ಈ ಹಿಂದೆ 2018-19ರಲ್ಲಿ 32 ಲಕ್ಷ ವಾಹನಗಳು ಮಾರಾಟವಾಗಿತ್ತು.
ಸೆಮಿಕಂಡಕ್ಟರ್‌ಗಳ ಕೊರತೆಯಿಂದ ಉಂಟಾಗಿದ್ದ ಬಿಕ್ಕಟ್ಟು ಬಗೆಹರಿದಿರುವುದರಿಂದ 2022-23ರಲ್ಲಿ ವಾಹನಗಳ ಮಾರಾಟದಲ್ಲಿ ಗಣನೀಯ ಚೇತರಿಕೆ ಉಂಟಾಗಿತ್ತು. ಹೊಸ ಮಾದರಿಯ ವಾಹನಗಳೂ ಸಾಕಷ್ಟು ಸಂಖ್ಯೆಯಲ್ಲಿ ಬಿಡುಗಡೆಯಾಗಿತ್ತು ಎಂದು ಒಕ್ಕೂಟದ ಅಧ್ಯಕ್ಷ ಮನೀಶ್ ರಾಜ್ ಸಿಂಘಾನಿಯಾ ತಿಳಿಸಿದ್ದಾರೆ.
ಮಾರ್ಚ್‌ನಲ್ಲಿ ದ್ವಿಚಕ್ರವಾಹನಗಳ ನೋಂದಣಿ 12%, ತ್ರಿ ಚಕ್ರ ವಾಹನಗಳ ನೋಂದಣಿ 69%, ಪ್ರಯಾಣಿಕರ ವಾಹನ ಮಾರಾಟದಲ್ಲಿ 14% ಹೆಚ್ಚಳ ದಾಖಲಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ಈಗಲೂ ವಾಹನಗಳ ಮಾರಾಟ ಒತ್ತಡದಲ್ಲಿದೆ. ಹಣದುಬ್ಬರ ಇದಕ್ಕೆ ಕಾರಣ ಎಂದು ಅವರು ತಿಳಿಸಿದ್ದಾರೆ.
ಮಾರುತಿ ಸುಜುಕಿ, ಹುಂಡೈ ಮತ್ತು ಟಾಟಾ ಮೋಟಾರ್ಸ್ 2022-23ರಲ್ಲಿ ಉತ್ತಮ ವಹಿವಾಟು ದಾಖಲಿಸಿವೆ. 2023-24ರಲ್ಲಿ ವಾಹನಗಳ ಮಾರಾಟ 40.5 ಲಕ್ಷದಿಂದ 41 ಲಕ್ಷಕ್ಕೆ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ವಾಹನಗಳ ಮಾರಾಟ | ಮಾರ್ಚ್ 2023 | ಮಾರ್ಚ್ 2022 | % ಬದಲಾವಣೆ |
ಮಾರುತಿ ಸುಜುಕಿ | 1,32,763 | 1,33,861 | -0.8 |
ಹುಂಡೈ | 50,600 | 44,600 | 13.5 |
ಟಾಟಾ ಮೋಟಾರ್ಸ್ | 44,044 | 42,293 | 4 |
ಮಹೀಂದ್ರಾ & ಮಹೀಂದ್ರಾ | 35,997 | 27,603 | 30 |