Site icon Vistara News

Tata Punch: ಟಾಟಾ ಪಂಚ್. ಇವಿ ಲಾಂಚ್; 10.99 ಲಕ್ಷ ರೂ. ಪರಿಚಯಾತ್ಮಕ ಆರಂಭಿಕ ಬೆಲೆ

Pure Ev Punch.ev launched by TPEM, Tat Motors

ಬೆಂಗಳೂರು: ಟಾಟಾ ಮೋಟಾರ್ಸ್‌ನ (Tata motors) ಅಂಗಸಂಸ್ಥೆ ಮತ್ತು ಭಾರತದ ಇವಿ ಕ್ರಾಂತಿಯ ಪ್ರವರ್ತಕ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (TPEM), ಇಂದು ತನ್ನ ಮೊದಲ ಪ್ಯೂರ್ ಇವಿ (Pure EV) – ಪಂಚ್.ಇವಿ (Punch.EV) ಅನ್ನು ಬಿಡುಗಡೆ ಮಾಡಿದೆ. ಇದು ಟಿಪಿಇಎಂ ಇತ್ತೀಚೆಗೆ ಪರಿಚಯಿಸಿದ, ಸುಧಾರಿತ ಪ್ಯೂರ್ ಇವಿ ಆರ್ಕಿಟೆಕ್ಚರ್ ಆ್ಯಕ್ಟಿ.ಇವಿ ಅನ್ನು ಆಧರಿಸಿ ತಯಾರಿಸಿದ ಮೊದಲ ಉತ್ಪನ್ನವಾಗಿದ್ದು, ಪಂಚ್.ಇವಿ ಅದರ ಅತ್ಯಾಧುನಿಕ ತಂತ್ರಜ್ಞಾನ, ಪರಿಸರ ಪ್ರಜ್ಞೆ ಮತ್ತು ವೆಚ್ಚ-ಪರಿಣಾಮಕಾರಿತ್ವದಿಂದಾಗಿ ಅಸಾಮಾನ್ಯವಾಗಿ ಮೂಡಿಬಂದಿದೆ.

ಸ್ಮಾರ್ಟ್, ಅಡ್ವೆಂಚರ್ ಮತ್ತು ಎಂಪವರ್ಡ್ ಎಂಬ ಮೂರು ವಿಭಿನ್ನ ಶೈಲಿಗಳಲ್ಲಿ ಕಾರು ಲಭ್ಯವಿದೆ. ಪಂಚ್.ಇವಿ ಬಹುಮುಖ ಮತ್ತು ಬಹು-ಶಕ್ತಿಶಾಲಿ ಎಲೆಕ್ಟ್ರಿಕ್ ವಾಹನವಾಗಿದ್ದು, ಸೊಗಸಾದ ಅದ್ಭುತವಾದ ಕ್ಲಾಸಿಕಲ್ ಎಸ್‌ಯುವಿ ವಿನ್ಯಾಸ ಹೊಂದಿದೆ. ರೂ.10.99 ಲಕ್ಷದ ಪರಿಚಯಾತ್ಮಕ ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಿದೆ. ಪಂಚ್.ಇವಿ ದೇಶಾದ್ಯಂತ ಇರು ಎಲ್ಲಾ ಟಾಟಾ ಮೋಟಾರ್ಸ್ ಶೋರೂಮ್‌ಗಳ ಅಧಿಕೃತ ಇವಿ ಮಾರಾಟ ಕೇಂದ್ರಗಳಲ್ಲಿ ಮತ್ತು ಟಾಟಾ.ಇವಿ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ.

ಪಂಚ್.ಇವಿಯು ಟಾಟಾ.ಇವಿಯ ಪೋರ್ಟ್‌ಫೋಲಿಯೊಗೆ ಪ್ರವರ್ತಕ ಮಾದರಿಯ ಸೇರ್ಪಡೆಯಾಗಿದ್ದು, ಸಮಕಾಲೀನ ಗ್ರಾಹಕರ ಅಗತ್ಯತೆಗಳು ಮತ್ತು ಜೀವನಶೈಲಿಯಲ್ಲಿ ಪರಿವರ್ತನೆಯ ಬದಲಾವಣೆಯನ್ನು ತರಲಿದೆ. ಇದು ಪಂಚ್ ಬ್ರಾಂಡ್‌ನ ವಿಶ್ವಾಸಾರ್ಹತೆಯನ್ನು ವಿದ್ಯುತ್ ವಾಹನ ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರಗತಿಗಳೊಂದಿಗೆ ಸಂಯೋಜಿಸುತ್ತದೆ. ಝೀರೋ ಎಮಿಷನ್ ಗಳೊಂದಿಗೆ ಅಸಾಧಾರಣ ಚಾಲನೆಯ ಅನುಭವವನ್ನು ನೀಡುತ್ತದೆ.

ವಿವಿಧ ಗ್ರಾಹಕ ಬಳಕೆಯನ್ನು ಗಮನದಲ್ಲಿಟ್ಟುಕೊಂಡು, ಪಂಚ್.ಇವಿ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ. ಅದರಲ್ಲಿ ಒಂದು 25 ಕೆಡಬ್ಲ್ಯೂಎಚ್ ಆಗಿದ್ದು, 315 ಕಿಮೀಗಳ ಎಂಐಡಿಸಿ ರೇಂಜ್ ಒದಗಿಸುತ್ತದೆ. ಇನ್ನೊಂದು 35 ಕೆಡಬ್ಲ್ಯೂಎಚ್ ಬ್ಯಾಟರಿ ಆಯ್ಕೆಯಾಗಿದ್ದು, ಇದು 421 ಕಿಮೀಗಳ ಎಂಐಡಿಸಿ ರೇಂಜ್ ಅನ್ನು ನೀಡುತ್ತದೆ. ಈ ಬ್ಯಾಟರಿ ಪ್ಯಾಕ್ ಆಯ್ಕೆಗಳು ಟೂಇ-ಡ್ರೈವ್ ಆಯ್ಕೆಗಳೊಂದಿಗೆ ಬರುತ್ತಿದ್ದು, 60ಕೆಡಬ್ಲ್ಯೂಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಏಸಿ ಮೋಟಾರ್, 114ಎನ್ಎಂ ಉತ್ಪಾದಿಸುತ್ತದೆ ಮತ್ತು 90ಕೆಡಬ್ಲ್ಯೂ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಏಸಿ ಮೋಟಾರ್ 190ಎನ್ಎಂ ಟಾರ್ಕ್‌ ಉತ್ಪಾದಿಸುತ್ತದೆ. ಇದರ ಪರಿಣಾಮವಾಗಿ ವೇಗವು 0 ರಿಂದ 100 ಕಿಮೀ/ಗಂಟೆಗೆ ತಲುಪಲು ಕೇವರ 9.5 ಸೆಕೆಂಡ್ ಸಾಕು. ಈ ವಿದ್ಯುನ್ಮಾನ ಸೀಮಿತ ಕಾರಿನ ಗರಿಷ್ಠ ವೇಗ 140ಕಿಮೀ/ಗಂಟೆಗೆ. ಪಂಚ್.ಇವಿಯ ಬ್ಯಾಟರಿ ಪ್ಯಾಕ್ ಮತ್ತು ಮೋಟಾರ್ IP67 ರೇಟ್ ಮಾಡಲಾಗಿದ್ದು, ಧೂಳು ಮತ್ತು ನೀರಿನಿಂದ ರಕ್ಷಣೆ ಒದಗಿಸಲಿದೆ. 8 ವರ್ಷ ಅಥವಾ 1,60,000 ಕಿಮೀ (ಯಾವುದು ಮೊದಲು ತಲುಪುತ್ತದೋ ಅದು) ವಾರಂಟಿ ನೀಡುವುದರಿಂದ ನಿಮಗೆ ಸಂಪೂರ್ಣ ಮನಸ್ಸಿನ ಶಾಂತಿಯನ್ನು ನೀಡುತ್ತದೆ.

ಹೆಚ್ಚುವರಿಯಾಗಿ, ಪಂಚ್.ಇವಿ ಲಾಂಗ್ ರೇಂಜ್ (ಎಲ್ಆರ್), 3.3ಕೆಡಬ್ಲ್ಯೂ ಮತ್ತು 7.2 ಕೆಡಬ್ಲ್ಯೂ ಏಸಿ ಫಾಸ್ಟ್ ಚಾರ್ಜರ್ ಆಯ್ಕೆಯೊಂದಿಗೆ ಲಭ್ಯವಿದೆ, ಇದನ್ನು ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಸ್ಥಾಪಿಸಬಹುದು. ಡಿಸಿ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ, ಯಾವುದೇ 50 ಕೆಡಬ್ಲ್ಯೂ ಡಿಸಿ ವೇಗದ ಚಾರ್ಜರ್‌ನಿಂದ 56 ನಿಮಿಷಗಳಲ್ಲಿ 10% ರಿಂದ 80% ವರೆಗೆ ವೇಗವಾಗಿ ಚಾರ್ಜ್ ಮಾಡಬಹುದು.

6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಐಸೋಫಿಕ್ಸ್, ರೋಲ್-ಓವರ್ ಮಿಟಿಗೇಶನ್, ಬ್ರೇಕ್ ಡಿಸ್ಕ್ ವೈಪಿಂಗ್, ಹೈಡ್ರಾಲಿಕ್‌ಫೇಡಿಂಗ್ ಪರಿಹಾರಗಳು ಎಲ್ಲಾ ಮಾಡೆಲ್ ಗಳಲ್ಲಿ ಸ್ಟಾಂಡರ್ಡ್ ಆಗಿ ಲಭ್ಯವಿದೆ. ಪಂಚ್.ಇವಿ ಭಾರತೀಯ ರಸ್ತೆಗಳಲ್ಲಿ ಲಭ್ಯವಿರುವ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಹೆಚ್ಚುವರಿಯಾಗಿ ತನ್ನ ಪ್ರಯಾಣಿಕರಿಗೆ ಇ-ಕಾಲ್ ಮತ್ತು ಬಿ-ಕಾಲ್‌ನೊಂದಿಗೆ ಎಸ್ಓಎಸ್ ಕಾಲಿಂಗ್, ಆಟೋ ಹೋಲ್ಡ್‌ ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಅದರ ಉನ್ನತ-ಮಟ್ಟದ ಮಾದರಿಗಳಲ್ಲಿ ಬ್ಲೈಂಡ್ ಸ್ಪಾಟ್ ಮಾನಿಟರ್‌ನೊಂದಿಗೆ 360 ಸರೌಂಡ್ ವ್ಯೂ ಕ್ಯಾಮೆರಾ ಸಿಸ್ಟಮ್‌ನಂತಹ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಈ ಸುದ್ದಿಯನ್ನೂ ಓದಿ: Tata Punch CNG : ಎಕ್ಸ್​ಟೆರ್​ ಸಿಎನ್​ಜಿಗೆ ಪಂಚ್​ ಕೊಡಲು ಬಂದಿದೆ ಟಾಟಾ ಪಂಚ್; ಬೆಲೆ ಮತ್ತಿತರ ವಿವರ ಇಲ್ಲಿದೆ

Exit mobile version