Site icon Vistara News

Royal Enfield | ಬೈಕ್​ ಮೇಲೆ ಸ್ಟಂಟ್​, ಭಾರತೀಯ ಸೇನಾ ಪಡೆ ಅಧಿಕಾರಿಗಳಿಂದ ಮೂರು ವಿಶ್ವ ದಾಖಲೆ ಸೃಷ್ಟಿ

Royal enfield

ನವ ದೆಹಲಿ : ಭಾರತೀಯ ಸೇನೆ ಗಡಿ ಭದ್ರತಾ ಪಡೆಯಲ್ಲಿ (ಬಿಎಸ್​ಎಫ್​) ಬೈಕ್​ನಲ್ಲಿ ಸಾಹನ ಮಾಡುವ ಸುಸಜ್ಜಿತ ತಂಡವೊಂದಿದೆ. ಜನಾಬ್ಜ್​ ಡೇರ್​ಡೆವಿಲ್ಸ್​ ಮೋಟಾರ್​ಸೈಕಲ್​ ಟೀಮ್​ ಎಂದು ಆ ತಂಡಕ್ಕೆ ಹೆಸರಿದೆ. ಈ ವಿಭಾಗಕ್ಕೆ ಸೇರಿದ ಸಾಹಸಿಗಳು ರಾಯಲ್​ ಎನ್​ಫೀಲ್ಡ್​ ಬೈಕ್​ಗಳ (Royal Enfield) ಮೂಲಕ ಮೂರು ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ. ಸೇನಾ ಪಡೆಯ ಈ ಸಾಹಸ ಲಿಮ್ಕಾ ಬುಕ್​ ಆಫ್ ರೆಕಾರ್ಡ್ಸ್​ನಲ್ಲಿ ದಾಖಲಾಗಿದೆ. ಡಿಸೆಂಬರ್​ 16ರಂದು ನವದೆಹಲಿಯ ಛವಾಲ್​ನ ಬಿಎಸ್​ಎಫ್ ಕ್ಯಾಂಪಸ್​ನಲ್ಲಿ ನಡೆದ ವಿಜಯ್ ದಿವಸ್​ ಕಾರ್ಯಕ್ರಮದಲ್ಲಿ ಈ ಮೂರು ದಾಖಲೆಗಳು ಸೃಷ್ಟಿಯಾಗಿವೆ.

ರಾಯಲ್​ ಎನ್​ಫೀಲ್ಡ್​ 350 ಸಿಸಿಯ ಬೈಕ್​ನಲ್ಲಿ 12.9 ಅಡಿಯ ಏಣಿಯನ್ನು ಕಟ್ಟಿ ಅದರ ಮೇಳೆ ಬಿಎಸ್​ಎಫ್​ನ ಇಬ್ಬರು ಸಾಹಸಿ ಅಧಿಕಾರಿಗಳು 171.1 ಕಿಲೋ ಮೀಟರ್ ಪ್ರಯಾಣ ಮಾಡಿದ್ದಾರೆ. ಅದಕ್ಕಾಗಿ ಅವರು 5 ಗಂಟೆ 26 ನಿಮಿಷಗಳನ್ನು ತೆಗೆದುಕೊಂಡಿದ್ದಾರೆ. ಬಿಎಸ್​ಎಫ್​ನ ಇನ್​ಸ್ಟೆಕ್ಟರ್​ ಅವಧೇಶ್​ ಕುಮಾರ್​ ಹಾಗೂ ಕ್ಯಾಪ್ಟನ್​ ಸುಧಾಕರ್ ಅವರು ಈ ಸಾಹಸದಲ್ಲಿ ಪಾಲ್ಗೊಂಡಿದ್ದರು.

ಮಲಗಿಕೊಂಡೇ ರಾಯಲ್​ ಎನ್​ಫೀಲ್ಡ್​ ಬೈಕ್​ ಅನ್ನು 70.2 ಕಿಲೋ ಮೀಟರ್​ ಚಲಾಯಿಸಿದ್ದು ಇನ್ನೊಂದು ದಾಖಲೆಯಾಗಿದೆ. ಜನಾಬ್ಜ್​ ಡೇರ್​ಡೆವಿಲ್ಸ್​ ಮೋಟಾರ್​ಸೈಕಲ್​ನ ಇನ್​ಸ್ಪೆಕ್ಟರ್​ ವಿಶ್ವಜಿತ್​ ಭಾಟಿಯಾ ಅವರು ಈ ಸಾಹಸದಲ್ಲಿ ಪಾಲ್ಗೊಂಡವರು. ಅವರು ಇಷ್ಟೊಂದು ದೂರ ಕ್ರಮಿಸಲು 2.6 ಗಂಟೆಗಳನ್ನು ತೆಗೆದುಕೊಂಡಿದ್ದಾರೆ.

ಮೂರನೇ ವಿಶ್ವ ದಾಖಲೆಯನ್ನು ಮಾಡಿದವರು ಮಹಿಳಾ ಇನ್​ಸ್ಪೆಕ್ಟರ್​ ಹಿಮಾನ್ಷು ಸಿರೋಹಿ. ಅವರು ಸೀಮಾ ಭಾವ್ನಿ ಆಲ್​ ವುಮೆನ್ ಮೋಟಾರ್​ ಸೈಕಲ್​ ತಂಡದ ಇನ್​ಸ್ಪೆಕ್ಟರ್​. ಸೀಮಾ ಅವರು ರಾಯಲ್​ ಎನ್​ಫೀಲ್ಡ್​ ಬೈಕ್​ನ ಸೈಡ್​ ಬ್ರಾಕೆಟ್​ ಮೇಲೆ ನಿಂತುಕೊಂಡು 178.6 ಕಿಲೋ ಮೀಟರ್​ ದೀರ್ಘ ಪ್ರಯಾಣ ಮಾಡಿದ್ದಾರೆ. ಅದಕ್ಕಾಗಿ ಅವರು 6 ಗಂಟೆ 3 ನಿಮಿಷ ತೆಗೆದುಕೊಂಡಿದ್ದಾರೆ.

ಪ್ರತಿ ವರ್ಷ ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಫರೇಡ್​ನಲ್ಲಿ ಬಿಎಸ್​ಎಫ್​ನ ಬೈಕ್​ ಸ್ಟಂಟ್ ಪ್ರದರ್ಶನವಿರುತ್ತದೆ.

ಇದನ್ನೂ ಓದಿ | Royal Enfield | ಹಂಟರ್‌ ಮೇನಿಯಾ; ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳ ಮಾರಾಟದಲ್ಲಿ ಭರ್ಜರಿ ಏರಿಕೆ

Exit mobile version