ಬೆಂಗಳೂರು: ಭಾರತದ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್ (TATA Motors) ದಕ್ಷಿಣ ಏಷ್ಯಾದ ಪ್ರೀಮಿಯರ್ ನಿರ್ಮಾಣ ಯಂತ್ರೋಪಕರಣಗಳ ಪ್ರದರ್ಶನವಾಗಿರುವ ಎಕ್ಸ್ ಕಾನ್ 2023 (EXCON 2023)ನಲ್ಲಿ ತನ್ನ ವಿಸ್ತಾರವಾದ ಭವಿಷ್ಯದ ಸಾರಿಗೆಯ ಆವಿಷ್ಕಾರಕ ಮತ್ತು ಅತ್ಯಾಧುನಿಕ ಪರಿಹಾರಗಳನ್ನು ಅನಾವರಣಗೊಳಿಸಿದೆ. `ಭಾರತವನ್ನು ಮುಂದಕ್ಕೆ ಚಲಿಸುವುದು’ ಎಂಬ ಪರಿಕಲ್ಪನೆಯನ್ನು ಅಳವಡಿಸಿಕೊಂಡಿರುವ ಕಂಪನಿಯು ನಾವೀನ್ಯತೆ, ಸುಸ್ಥಿರತೆ ಮತ್ತು ಶ್ರೇಷ್ಠತೆಯನ್ನು ಕಾಪಾಡುವ ನಿಟ್ಟಿನಲ್ಲಿ ತನ್ನ ಬದ್ಧತೆಯನ್ನು ಬಲಪಡಿಸಿಕೊಳ್ಳುವ ಮೂಲಕ ದೇಶಕ್ಕೆ ಹೆಮ್ಮೆಯ ಸೇವೆ ಸಲ್ಲಿಸುತ್ತಿದೆ. ಟಾಟಾ ಮೋಟರ್ಸ್ ನ್ಯಾಚುರಲ್ ಗ್ಯಾಸ್(LNG Vehicle) ಮತ್ತು ಬ್ಯಾಟರಿ ಎಲೆಕ್ಟ್ರಿಕ್ (Electric Vehicle) ಸೇರಿದಂತೆ ಹಸಿರು ಇಂಧನಗಳಿಂದ (Green Energy) ಚಾಲಿತ ವಾಹನಗಳ ನಿರ್ಮಾಣ ಮತ್ತು ಮೂಲಸೌಕರ್ಯ ಕ್ಷೇತ್ರಗಳಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾದ ತನ್ನ ಟ್ರಕ್ಗಳು ಮತ್ತು ಟಿಪ್ಪರ್ ಗಳನ್ನು (Trucks and Tipper) ಪ್ರದರ್ಶಿಸಿದೆ. ಇದು ಕೈಗಾರಿಕಾ ಉಪಕರಣಗಳು, ಆಕ್ಸಲ್ಗಳು ಮತ್ತು ಜೆನ್ಸೆಟ್ ಗಳಿಗಾಗಿ ವಿನ್ಯಾಸಗೊಳಿಸಲಾಗಿರುವ ಎಂಜಿನ್ ಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಅನಾವರಣಗೊಳಿಸಿದೆ.
ಎಕ್ಸ್ ಕಾನ್ 2023 ರಲ್ಲಿ ಟಾಟಾ ಮೋಟರ್ಸ್ ವಾಣಿಜ್ಯ ವಾಹನಗಳ ಪ್ರದರ್ಶನದ ಪ್ರಮುಖಾಂಶಗಳು:
-ಟಾಟಾ ಮೋಟರ್ಸ್ ನಿಂದ ತನ್ನ ವಿಶೇಷ ಶ್ರೇಣಿಯ LNG ಚಾಲಿತ ವಾಣಿಜ್ಯ ವಾಹನಗಳ ಬಿಡುಗಡೆ
-ಟಾಟಾ ಪ್ರೈಮಾ 5528.S LNG ಜಿ ಮತ್ತು ಟಾಟಾ ಪ್ರೈಮಾ 3528.ಕೆ ಎಲ್ಎನ್ ಜಿ ಬಿಡುಗಡೆ ಮಾಡುವ ಮೂಲಕ ಆಕರ್ಷಣೆಯ ಕೇಂದ್ರ ಬಿಂದುವಾಗಿ ಹೊರಹೊಮ್ಮಿದ ಟಾಟಾ ಮೋಟರ್ಸ್
-ಪ್ರದರ್ಶನಗಳು: ಟಾಟಾ ಪ್ರೈಮಾ ಇ.28ಕೆ, ನಿರ್ಮಾಣ ಕ್ಷೇತ್ರಕ್ಕಾಗಿ ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿರುವ ಟಾಟಾ ಮೋಟರ್ಸ್ ನ ಇ-ಮೊಬಿಲಿಟಿ ಪರಿಕಲ್ಪನೆ
-ಪ್ರಸ್ತುತಪಡಿಸುವಿಕೆ: ಟಾಟಾ ಪ್ರೈಮಾ 2830.ಟಿಕೆ ವಿಎಕ್ಸ್ ಮತ್ತು ಟಾಟಾ ಸಿಗ್ನಾ 3530.ಟಿಕೆ ವಿಎಕ್ಸ್ ಶ್ರೇಣಿಯ ಟಿಪ್ಪರ್ ಗಳು
ಟಾಟಾ ಮೋಟರ್ಸ್ ತನ್ನ ಎಲ್ಎನ್ ಜಿ- ಚಾಲಿತ ಟಾಟಾ ಪ್ರೈಮಾ ಶ್ರೇಣಿಯ ಟ್ರಕ್ ಗಳು ಮತ್ತು ಟಿಪ್ಪರ್ ಗಳ ವಾಣಿಜ್ಯ ಬಿಡುಗಡೆ ಮಾಡುವ ಮೂಲಕ ಸುಸ್ಥಿರ ಸಾರಿಗೆಯಲ್ಲಿ ಗಮನಾರ್ಹವಾದ ದಿಟ್ಟ ಹೆಜ್ಜೆ ಇಟ್ಟಿದೆ. ಇದು ಟಾಟಾ ಪ್ರೈಮಾ 5528.S LNG ಜಿ ಮತ್ತು ಭಾರತದ ಮೊಟ್ಟ ಮೊದಲ ಎಲ್ಎನ್ ಜಿ- ಚಾಲಿತ ಟಿಪ್ಪರ್ ಆಗಿರುವ ಟಾಟಾ ಪ್ರೈಮಾ 3528.ಕೆ ಎಲ್ಎನ್ ಜಿ ಯನ್ನು ಒಳಗೊಂಡಿರುವ ಒಂದು ಹೆಮ್ಮೆಯ ಸಾಧನೆಯಾಗಿದೆ. ಈ ಮೂಲಕ ಟಾಟಾ ಮೋಟರ್ಸ್ ಶೂನ್ಯ ಮಾಲಿನ್ಯ ಹೊರಸೂಸುವಿಕೆ ತಂತ್ರಜ್ಞಾನದ ಪರಿಹಾರಗಳ ಬದ್ಧತೆಯನ್ನು ಪ್ರದರ್ಶಿಸಿದೆ. ಈ ವಾಹನಗಳು 2045 ರ ವೇಳೆಗೆ ನಿವ್ವಳ ಶೂನ್ಯ GHG ಹೊರಸೂಸುವಿಕೆಯನ್ನು ಸಾಧಿಸುವ ಟಾಟಾ ಮೋಟರ್ಸ್ ನ ಗುರಿಯನ್ನು ಪುನರುಚ್ಚರಿಸುತ್ತವೆ. ಶುದ್ಧ ಇಂಧನ ಮೂಲಗಳ ಕಡೆಗೆ ಉದ್ಯಮದ ಬದಲಾವಣೆಯನ್ನು ಗಣನೀಯ ಪ್ರಮಾಣದ ಪ್ರಗತಿಯನ್ನು ಪ್ರತಿನಿಧಿಸುತ್ತವೆ.
ಟಾಟಾ ಸಿಗ್ನಾ 3530.ಟಿಕೆ ವಿಎಕ್ಸ್
ಇದಲ್ಲದೇ, ಟಾಟಾ ಮೋಟರ್ಸ್ ಟಾಟಾ ಪ್ರೈಮಾ 2830.ಟಿಕೆ ವಿಎಕ್ಸ್ ಮತ್ತು ಟಾಟಾ ಸಿಗ್ನಾ 3530.ಟಿಕೆ ವಿಎಕ್ಸ್ ನಂತಹ ಅಧಿಕ ಕಾರ್ಯದಕ್ಷತೆಯ ಟ್ರಕ್ ಗಳನ್ನೂ ಅನಾವರಣ ಮಾಡಿದೆ. ಈ ವಾಹನಗಳನ್ನು ವೈವಿಧ್ಯಮಯ ನಿರ್ಮಾಣ ಕಾರ್ಯಗಳಿಗೆ ಬಳಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ವಾಹನಗಳ ವಿಶೇಷತೆಯೆಂದರೆ:- ಇವುಗಳಲ್ಲಿ ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಟ್ರಾಕ್ಷನ್ ಕಂಟ್ರೋಲ್ ಮತ್ತು ನ್ಯೂಮ್ಯಾಟಿಕ್ ಸಸ್ಪೆಂಡ್ ಡ್ರೈವರ್ ಸೀಟ್ ನಂತಹ ಹಲವಾರು ಸುಧಾರಿತ ವೈಶಿಷ್ಟ್ಯತೆಗಳಿವೆ. ಈ ವೈಶಿಷ್ಟ್ಯತೆಗಳು ನಿರ್ವಾಹಕರು ಅಥವಾ ಮಾಲೀಕರಿಗೆ ಕಾರ್ಯಕ್ಷಮತೆ, ಸೌಕರ್ಯ ಮತ್ತು ಸುರಕ್ಷತೆಯನ್ನು ಹೆಚ್ಚು ಮಾಡುವ ಗುರಿಯನ್ನು ಹೊಂದಿವೆ. ಈ ವಾಹನಗಳು ಉದ್ಯಮದ ಹೊಸ ಮಾನದಂಡಗಳಿಗೆ ಪೂರಕವಾಗಿವೆ. ಅದೇ ರೀತಿ ನಾವೀನ್ಯತೆ ಮತ್ತು ಸುರಕ್ಷತಾ ಮಾನದಂಡಗಳ ಹೊಸ ಯುಗದ ಆರಂಭಕ್ಕೆ ನಾಂದಿ ಹಾಡಿವೆ.
ಎಲೆಕ್ಟ್ರಿಕ್ ಟಿಪ್ಪರ್
ಎಕ್ಸ್ ಕಾನ್ 2023 ರಲ್ಲಿ ಟಾಟಾ ಮೋಟರ್ಸ್ ನ ಪೆವಿಲಿಯನ್ ಅನ್ನು ಉದ್ಘಾಟನೆ ಮಾಡಿ ಮಾತನಾಡಿದ ಟಾಟಾ ಮೋಟರ್ಸ್ ನ ಉಪಾಧ್ಯಕ್ಷ ಮತ್ತು ಟ್ರಕ್ಸ್ ವಿಭಾಗದ ಬ್ಯುಸಿನೆಸ್ ಹೆಡ್ ರಾಜೇಶ್ ಕೌಲ್ ಅವರು, “ಎಕ್ಸ್ ಕಾನ್ 2023 ನಮ್ಮ ಉತ್ಕೃಷ್ಟವಾದ ತಂತ್ರಜ್ಞಾನವನ್ನು ಪ್ರದರ್ಶಿಸಲು ಮತ್ತು ನಿರ್ಮಾಣ ಉದ್ಯಮಕ್ಕೆ ಶ್ರೇಷ್ಠತೆಯನ್ನೂ ಮೀರಿದ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಒಂದು ಅತ್ಯುತ್ತಮವಾದ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಎಲ್ಎನ್ ಜಿ-ಚಾಲಿತ ಶ್ರೇಣಿಯ ಟ್ರಕ್ ಗಳು ಮತ್ತು ಟಿಪ್ಪರ್ ಗಳ ಅನಾವರಣವು ನಾವೀನ್ಯತೆಯಲ್ಲಿ ಮುನ್ನಡೆಸುವ ನಮ್ಮ ಸಂಕಲ್ಪದ ಪ್ರತೀಕವಾಗಿದೆ. ಸುಸ್ಥಿರವಾದ ಪ್ರಯಾಣವನ್ನು ಆರಂಭಿಸಲು ಸಿದ್ಧರಾಗಿರುವ ಫ್ಲೀಟ್ ಮಾಲೀಕರ ವಿಕಸನ ಅಗತ್ಯತೆಗಳಿಗೆ ಅನುಗುಣವಾಗಿ ಗ್ರಾಹಕ ಕೇಂದ್ರಿತ ಕಂಪನಿಯಾಗಿ, ಫ್ಲೀಟ್ ಮಾಲೀಕರು ದೀರ್ಘಾವಧಿಯ ಸಾರಿಗೆ ಮತ್ತು ನಿರ್ಮಾಣ, ಗಣಿಗಾರಿಕೆಯಂತಹ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಮೌಲ್ಯವನ್ನು ಬಯಸುತ್ತಾರೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ನಾವು ನಮ್ಮ ಎಲೆಕ್ಟ್ರಿಕ್ ಟಿಪ್ಪರ್ ಪರಿಕಲ್ಪನೆಯಾಗಿರುವ ಪ್ರೈಮಾ ಇ.28ಕೆ ಯನ್ನು ಸಹ ಈ ಎಕ್ಸ್ ಕಾನ್ ನಲ್ಲಿ ಪ್ರದರ್ಶಿಸಿದ್ದೇವೆ. ಈ ಎಲೆಕ್ಟ್ರಿಕ್ ಟಿಪ್ಪರ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡುವುದರ ಜೊತೆಯಲ್ಲೇ ನಿರ್ಮಾಣ ವಿಭಾಗದಲ್ಲಿ ವಿದ್ಯುತ್ ಚಲನಶೀಲತೆಗೆ ನೆರವಾಗುವ ನಿಟ್ಟಿನಲ್ಲಿ ನಾವು ಸಮಗ್ರ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತೇವೆ. ನಮ್ಮ ಪೆವಿಲಿಯನ್ ನಲ್ಲಿ ಪ್ರದರ್ಶಿಸಲಾಗಿರುವ ಪ್ರೈಮಾ ಮತ್ತು ಸಿಗ್ನಾದ ಹೊಸ ವಿಎಕ್ಸ್ ರೂಪಾಂತರಗಳ ವಾಹನಗಳು ಸುರಕ್ಷತೆ, ಉತ್ಪಾದಕತೆ ಮತ್ತು ಚಾಲಕ ಸೌಕರ್ಯಕ್ಕಾಗಿ ಉದ್ಯಮದಲ್ಲಿ ಹೊಸ ಮಾದರಿಯನ್ನು ಒಳಗೊಂಡಿವೆ’’ ಎಂದು ವಿವರಿಸಿದರು.
ಟಾಟಾ ಮೋಟರ್ಸ್ ವಿಶಾಲವಾದ ವಾಣಿಜ್ಯ ವಾಹನ ಪೋರ್ಟ್ ಫೋಲಿಯೋವನ್ನು ನೀಡುತ್ತದೆ ಮತ್ತು BS6 ಹಂತ 2 ಅನುಸರಣೆಯನ್ನು ಮೀರಿದ ಪೋರ್ಟ್ ಫೋಲಿಯೋ ಇದಾಗಿದೆ. ಕಂಪನಿಯು ತನ್ನ ವಾಹನಗಳನ್ನು ಬಂಪರ್-ಟು-ಬಂಪರ್ ಅನ್ನು ಹೆಚ್ಚಿನ ವೈಶಿಷ್ಟ್ಯತೆಗಳು, ಪರಿಣಾಮಕಾರಿಯಾದ ಪವರ್ ಟ್ರೇನ್ ಗಳು ಮತ್ತು ಉತ್ಕೃಷ್ಟ ಮೌಲ್ಯವರ್ಧನೆಯೊಂದಿಗೆ ನವೀಕರಿಸಿದೆ. ಉತ್ತಮ ಗುಣಮಟ್ಟದ ಟಾಟಾ ವಾಹನಗಳನ್ನು ಖರೀದಿಸುವುದರ ಹೊರತಾಗಿ ಫ್ಲೀಟ್ ಮಾಲೀಕರು ಉತ್ತಮ ಇಂಧನ ದಕ್ಷತೆ, ಕಡಿಮೆ ನಿರ್ವಹಣಾ ವೆಚ್ಚಗಳು, ಹೆಚ್ಚಿನ ವಾಹನ ಅಪ್ ಟೈಮ್, ನೈಜ ಸಮಯದ ವಾಹನ ಟ್ರ್ಯಾಕಿಂಗ್ ಮತ್ತು ತಮ್ಮ ಫ್ಲೀಟ್ ಅನ್ನು ಪರಿಣಾಮಕಾರಿಯಾಗಿ ಚಲಾಯಿಸುವ ಮೂಲಕ ಆನಂದವನ್ನು ಹೊಂದುತ್ತಾರೆ.
ಟಾಟಾ ಮೋಟರ್ಸ್ ವಾಣಿಜ್ಯ ವಾಹನಗಳು ತನ್ನ ಸಂಪೂರ್ಣ ಸೇವಾ 2.0 ಉಪಕ್ರಮದ ಮೂಲಕ ಸಮಗ್ರ ವಾಹನ ಜೀವನಚಕ್ರ ನಿರ್ವಹಣೆಗೆ ಮೌಲ್ಯವರ್ಧಿತ ಸೇವೆಗಳ ಶ್ರೇಣಿಯಿಂದ ಪೂರಕವಾಗಿವೆ. ಫ್ಲೀಟ್ ಎಡ್ಜ್ ನೊಂದಿಗೆ ಟಾಟಾ ಮೋಟರ್ಸ್ ನ ಅತ್ಯುತ್ತಮವಾದ ಫ್ಲೀಟ್ ನಿರ್ವಹಣೆಗೆ ಮುಂದಿನ ಪೀಳಿಗೆಯ ಡಿಜಿಟಲ್ ಪರಿಹಾರವನ್ನು ನೀಡುತ್ತವೆ. ಇದು ನಿರ್ವಾಹಕರು ಅಥವಾ ಮಾಲೀಕರು ತಮ್ಮ ವಾಹನಗಳ ಸಮಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಮತ್ತು ಮಾಲೀಕತ್ವದ ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಇದಲ್ಲದೇ, ದೇಶಾದ್ಯಂತ ವಿಶಾಲವಾದ
ಸೇವಾ ಜಾಲವು ದಿನದ 24 ಗಂಟೆಯೂ ಸೇವೆಯನ್ನು ಒದಗಿಸುವ ಮೂಲಕ ಬೆಂಬಲವನ್ನು ನೀಡುತ್ತದೆ. ಈ ಮೂಲಕ ಹೊಸ ಮಾನದಂಡಗಳಿಗೆ ಅನುಗುಣವಾಗಿ ಟಾಟಾ ಮೋಟರ್ಸ್ ಸಮಗ್ರ ಸಾರಿಗೆ ಪರಿಹಾರಗಳನ್ನು ನೀಡುತ್ತಿದೆ.
ಎಕ್ಸ್ ಕಾನ್ 2023 ರಲ್ಲಿ ಟಾಟಾ ಮೋಟರ್ಸ್ ನ ಒಟ್ಟಾರೆ ಪ್ರಮುಖಾಂಶಗಳು:
-ಟಾಟಾ ಮೋಟರ್ಸ್ ಅಡೆತಡೆ ಇಲ್ಲದ ಮತ್ತು ಆರ್ಥಿಕ ಕಾರ್ಯಾಚರಣೆಗಳಿಗೆ ಸೂಕ್ತವಾದ ವಾಹನಗಳ ವಿನ್ಯಾಸ
-ನಿರ್ಮಾಣ, ಮೂಲಸೌಕರ್ಯ ಮತ್ತು ಸರಕು ನಿರ್ವಹಣೆ ಮಾಡುವ ಉದ್ಯಮಗಳ ಬಳಕೆಗೆ ಅಗತ್ಯವಾದ ಸುಧಾರಿತ ಪರಿಹಾರಗಳ ಪ್ರದರ್ಶನ
-ಟಾಟಾ ಮೋಟರ್ಸ್ ಜೆನ್ಸೆಟ್ ಗಳು: ತಾಂತ್ರಿಕವಾಗಿ ಸುಧಾರಿತ CPCB IV+ ಹೊಂದಿದ ಎಂಜಿನ್ ಗಳಿಂದ ಸುಸಜ್ಜಿತವಾಗಿದೆ
-ಟಾಟಾ ಮೋಟರ್ಸ್ ಇಂಡಸ್ಟ್ರಿಯಲ್ ಎಂಜಿನ್ ಗಳು: ವಿಶೇಷತೆ ಮತ್ತು ಬಾಳಿಕೆಗೆ ಹೆಸರುವಾಸಿ
-ಟಾಟಾ ಮೋಟರ್ಸ್ ಲೈವ್ ಆಕ್ಸೆಲ್ ಗಳು: ವಿಶ್ವಾಸಾರ್ಹತೆ ಮತ್ತು ಕಾರ್ಯದಕ್ಷತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಉದ್ಯಮದ ಅಗತ್ಯಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ
-ಟಾಟಾ ಮೋಟರ್ಸ್ ಟ್ರೇಲರ್ ಆಕ್ಸೆಲ್ಸ್ ಮತ್ತು ಬಿಡಿಭಾಗಗಳು: ಬಹು ಅಪ್ಲಿಕೇಶನ್ ಗಳಾದ್ಯಂತ ಅತ್ಯಧಿಕ ಕಾರ್ಯದಕ್ಷತೆಯನ್ನು ಖಾತರಿಪಡಿಸುತ್ತದೆ
ಟಾಟಾ ಮೋಟರ್ಸ್ ಎಕ್ಸ್ ಕಾನ್ 2023 ರಲ್ಲಿ ತನ್ನ ಸಮಗ್ರ ಶ್ರೇಣಿಯ ಉತ್ಪನ್ನಗಳನ್ನು ಪ್ರದರ್ಶನ ಮಾಡಿದೆ. ಈ ಮೂಲಕ ನಾವೀನ್ಯತೆ ಮತ್ತು ಕಾರ್ಯಕ್ಷಮತೆಯ ಬದ್ಧತೆಯನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿಕೊಟ್ಟಿದೆ. ಇದರಲ್ಲಿ ಪ್ರಮುಖವಾಗಿ ಇಂಧನ-ಸಮರ್ಥವಾದ ಅಂದರೆ ಇಂಧನ ಉಳಿತಾಯದ ಟಾಟಾ ಮೋಟರ್ಸ್ ಜೆನ್ ಸೆಟ್ ಗಳು ಇವೆ. 25kVA ರಿಂದ 125kVA ವರೆಗಿನ ಈ ಜೆನ್ ಸೆಟ್ ಗಳು CPCB IV+ ಎಂಜಿನ್ ಗಳನ್ನು ಒಳಗೊಂಡಿವೆ. ಹೊಸ ಪೀಳಿಗೆಯ 55-138hp ಪವರ್ ನೋಡ್ ಗಳು, ಲೈವ್ ಆಕ್ಸೆಲ್ ಗಳಲ್ಲಿ CEV BS V ಇಂಡಸ್ಟ್ರಿಯಲ್ ಎಂಜಿನ್ ಗಳಿವೆ. ಹೆಚ್ಚು ಲೋಡ್ ಮತ್ತು ಟಾರ್ಕ್ ಅಗತ್ಯತೆಗಳಿಗೆ ಅನುಗುಣವಾಗಿ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ತನ್ನ ಪ್ರೈಮ್ ಮೂವರ್ ಗಳಿಗೆ ಯಾವುದೇ ಅಡೆತಡೆಯಿಲ್ಲದೇ ಕಾರ್ಯ ನಿರ್ವಹಣೆಗೆ ಪೂರಕವಾಗಿ ಅಭಿವೃದ್ಧಿಪಡಿಸಲಾಗಿದೆ.
ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಟಾಟಾ ಮೋಟರ್ಸ್ ಕಮರ್ಷಿಯಲ್ ವೆಹಿಕಲ್ಸ್ ನ ಸ್ಪೇರ್ಸ್ ಅಂಡ್ ನಾನ್-ವೆಹಿಕಲರ್ ವಿಭಾಗದ ಮುಖ್ಯಸ್ಥ ವಿಕ್ರಂ ಅಗರ್ವಾಲ್ ಅವರು, “ನಾವು ಈ ವಸ್ತು ಪ್ರದರ್ಶನದಲ್ಲಿ ನಮ್ಮ ಇತ್ತೀಚಿನ
ಶ್ರೇಣಿಯ ಉತ್ಪನ್ನಗಳು ಮತ್ತು CPCB IV+ ಎಂಜಿನ್ ಗಳನ್ನು ಅನಾವರಣ ಮಾಡುತ್ತಿರುವುದಕ್ಕೆ ಸಂತಸವೆನಿಸುತ್ತಿದೆ. ಎಕ್ಸ್ ಕಾನ್ 2023 ನಮ್ಮ ಗ್ರಾಹಕರೊಂದಿಗೆ ತೊಡಗಿಸಿಕೊಳ್ಳಲು ಸೂಕ್ತವಾದ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಇಲ್ಲಿ ನಾವು ನಮ್ಮ ವಿಶ್ವ ದರ್ಜೆಯ ಶ್ರೇಣಿಯನ್ನು ಪ್ರದರ್ಶಿಸುತ್ತದೆ. ನಾವೀನ್ಯತೆ, ವಿಶ್ವಾಸಾರ್ಹತೆ ಮತ್ತು ಕಾರ್ಯಕ್ಷಮತೆಯ ಮೇಲೆ ಕೇಂದ್ರೀಕರಿಸುವ ಮೂಲಕ ಟಾಟಾ ಮೋಟರ್ಸ್ ಹೊಸ ಮಾನದಂಡಗಳನ್ನು ಅನುಸರಿಸುವುದನ್ನು ಮುಂದುವರಿಸಿದೆ. ಇದರೊಂದಿಗೆ ನಮ್ಮ ಗ್ರಾಹಕರ ವ್ಯವಹಾರದ ಪ್ರಗತಿಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ. ಈ ನಮ್ಮ ಕೊಡುಗೆಗಳು ಸುಗಮ ಮತ್ತು ವೆಚ್ಚ-ಪರಿಣಾಮಕಾರಿ ಕಾರ್ಯಾಚರಣೆಗಳನ್ನು ಖಾತರಿಪಡಿಸುವ ಮೂಲಕ ವಿವಿಧ ವಲಯಗಳಾದ್ಯಂತ ಭಾರತದ ಕೈಗಾರಿಕೆಗಳನ್ನು ಸಶಕ್ತಗೊಳಿಸಲಿವೆ ಎಂಬ ವಿಶ್ವಾಸ ನಮ್ಮದಾಗಿದೆ’’ ಎಂದರು.
ಟಾಟಾ ಮೋಟರ್ಸ್ ನ ಉತ್ಪನ್ನಗಳು ಮತ್ತು ಜೆನ್ ಸೆಟ್ ಗಳು ಅವುಗಳ ವಿಶ್ವಾಸಾರ್ಹತೆ ಮತ್ತು ಬಾಳಿಕೆಗೆ ಹೆಸರುವಾಸಿಯಾಗಿವೆ. ಇದಕ್ಕೆ ಪೂರಕವಾಗಿ ಶಕ್ತಿಯುತ ಮತ್ತು ಆರ್ಥಿಕ ಕಾರ್ಯಕ್ಷಮತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಪ್ಯಾನ್ ಇಂಡಿಯಾದಲ್ಲಿ ವಿವಿಧ ಬಗೆಯ ಕಾನ್ಫಿಗರೇಷನ್ ಗಳಲ್ಲಿ ಲಭ್ಯವಿರುತ್ತದೆ. ವಿವಿಧ ರೀತಿಯ ಅಪ್ಲಿಕೇಶನ್ ಗಳು ಮತ್ತು ವಲಯಗಳಲ್ಲಿ ವಿಕಸನಗೊಳ್ಳುತ್ತಿರುವ ಅವಶ್ಯಕತೆಗಳನ್ನು ಪೂರೈಸುತ್ತದೆ. ಕಟ್ಟುನಿಟ್ಟಾದ ಪರೀಕ್ಷೆಯೊಂದಿಗೆ ದೃಢವಾದ ಇಂಜಿನಿಯರಿಂಗ್ ಮೂಲಕ ವಿಶ್ವದರ್ಜೆಯ ಸೌಲಭ್ಯಗಳನ್ನು ಉತ್ಪಾದಿಸುತ್ತದೆ.
ಈ ಸುದ್ದಿಯನ್ನೂ ಓದಿ: ಸಿಂಗೂರು ಭೂ ವಿವಾದ; ಹೋರಾಟ ಗೆದ್ದ ಟಾಟಾ ಮೋಟರ್ಸ್, 766 ಕೋಟಿ ರೂ. ಪರಿಹಾರಕ್ಕೆ ಆದೇಶ!