ನವ ದೆಹಲಿ: ಆಟೊಮೊಬೈಲ್ ದಿಗ್ಗಜ ಟಾಟಾ ಮೋಟಾರ್ಸ್ ಕಂಪನಿಯ (TATA Motors) ವಾಹನಗಳ ದರದಲ್ಲಿ ನವೆಂಬರ್ 7ರಿಂದ ಏರಿಕೆಯಾಗಲಿದೆ.
ಟಾಟಾ ಮೋಟಾರ್ಸ್ ಕಾರುಗಳ ಮಾರಾಟದಲ್ಲಿ ಪ್ರಗತಿ ದಾಖಲಾಗಿದೆ. ದರದಲ್ಲಿ 0.9% ಹೆಚ್ಚಳ ನಿರೀಕ್ಷಿಸಲಾಗಿದೆ.
ಉತ್ಪಾದನಾ ವೆಚ್ಚದಲ್ಲಿ ಏರಿಕೆಯ ಹಿನ್ನೆಲೆಯಲ್ಲಿ ವಾಹನಗಳ ದರ ಏರಿಕೆ ಅನಿವಾರ್ಯವಾಗಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ. ಟಾಟಾ ಮೋಟಾರ್ಸ್ ಕಳೆದ ಅಕ್ಟೋಬರ್‌ನಲ್ಲಿ 45,000ಕ್ಕೂ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದೆ.