ನವ ದೆಹಲಿ: ಗುಜರಾತ್‌ನಲ್ಲಿ ಫೋರ್ಡ್ ಮೋಟಾರ್ ಘಟಕವನ್ನು ಟಾಟಾ ಮೋಟಾರ್ಸ್ ೭೫೦ ಕೋಟಿ ರೂ.ಗಳ ಡೀಲ್‌ನಲ್ಲಿ ಖರೀದಿಸಲಿದೆ.
ಗುಜರಾತ್‌ನ ಸನಂದ್‌ನಲ್ಲಿ ಇರುವ ಘಟಕವನ್ನು ಟಾಟಾ ಮೋಟಾರ್ಸ್ ಖರೀದಿಸಲಿದೆ. ಉದ್ಯೋಗಿಗಳೂ ಟಾಟಾ ಮೋಟಾರ್ಸ್‌ನ ಭಾಗವಾಗಲಿದ್ದಾರೆ. ಇಡೀ ಕಟ್ಟಡ, ಕಚೇರಿ, ಉತ್ಪಾದನಾ ಘಟಕಗಳು ಹಾಗೂ ಅರ್ಹ ಎಲ್ಲ ಉದ್ಯೋಗಿಗಳನ್ನು ಫೋರ್ಡ್, ಟಾಟಾ ಮೋಟಾರ್ಸ್‌ಗೆ ವರ್ಗಾಯಿಸಲಿದೆ.
ಇದರೊಂದಿಗೆ ಟಾಟಾ ಮೋಟಾರ್ಸ್‌ನ ಉತ್ಪಾದನಾ ಸಾಮರ್ಥ್ಯ ೪.೨ ಲಕ್ಷ ಯುನಿಟ್‌ಗೆ ಏರಿಕೆಯಾಗಲಿದೆ. ಪ್ಯಾಸೆಂಜರ್ ಕಾರು ಹಾಗೂ ಎಲೆಕ್ಟ್ರಿಕ್ ವೆಹಿಕಲ್ ವಿಭಾಗದಲ್ಲಿ ಕಂಪನಿಗೆ ಹೆಚ್ಚಿನ ಪ್ರಗತಿ ಸಾಧಿಸಲು ಇದರಿಂದ ಅನುಕೂಲವಾಗಲಿದೆ ಎಂದು ಟಾಟಾ ಮೋಟಾರ್ಸ್‌ನ ಪ್ಯಾಸೆಂಜರ್ ವೆಹಿಕಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ತಿಳಿಸಿದ್ದಾರೆ. ಅಮೆರಿಕ ಮೂಲದ ಫೋರ್ಡ್, ೨೦೨೧ರಲ್ಲಿ ಭಾರತದಿಂದ ನಿರ್ಗಮಿಸುವುದಾಗಿ ಘೋಷಿಸಿತ್ತು.