Site icon Vistara News

Tata Punch EV: ಟಾಟಾ ಪಂಚ್ ಎಲೆಕ್ಟ್ರಿಕ್ ಕಾರ್ ಲಾಂಚ್, ಏನೆಲ್ಲಾ ವಿಶೇಷತೆಗಳಿವೆ?

Tata Punch EV launched and Check details

ಮುಂಬೈ: ಟಾಟಾ ಕಂಪನಿಯ (Tata Motors) ಪಂಚ್ ಕಾರ್‌ಗೆ (Punch SUV) ಸಾಕಷ್ಟು ಬೇಡಿಕೆ ಇರುವಾಗಲೇ, ಅದರ ಎಲೆಕ್ಟ್ರಿಕಲ್ ಆವೃತ್ತಿ ‘ಪಂಚ್.ಇವಿ’ (Tata Punch EV) ಪರಿಚಯಿಸಲಾಗಿದೆ. ಚಿಕ್ಕ ಎಸ್‌ಯುವಿಗಳ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಪಂಚ್, ಈಗ ಎಲೆಕ್ಟ್ರಿಕ್ ‌ಆವೃತ್ತಿ ಮೂಲಕ ಮತ್ತೊಂದು ಹಂತಕ್ಕೆ ಏರಿದೆ. ಟಾಟಾ ಕಂಪನಿ ಈ ಹಿಂದೆ ನೆಕ್ಸಾನ್ ಎಸ್‌ಯುವಿಯನ್ನು (Nexon SUV) ಐಸಿಇ ಮತ್ತು ಎಲೆಕ್ಟ್ರಿಕ್ ವರ್ಷನ್‌ಗಳಲ್ಲಿ ಲಾಂಚ್ ಮಾಡಿತ್ತು. ಅದೇ ಸಾಲಿನಲ್ಲಿ ಪರಿಚಯಿಸಲಾಗಿರುವ ಪಂಚ್, ಟಾಟಾ ಕಂಪನಿಯ ಎರಡನೇ ವಾಹನವಾಗಿದೆ. ಪಂಚ್‌ ಎಲೆಕ್ಟ್ರಿಕ್ ಆವೃತ್ತಿಗೆ ಬುಕ್ಕಿಂಗ್ ಆರಂಭವಾಗಿದ್ದು, 21 ಸಾವಿರ ನೀಡಿ ಬುಕ್ ಮಾಡಬಹುದಾಗಿದೆ.

ಕಳೆದ ವರ್ಷ ಬಿಡುಗಡೆಯಾದ ನೆಕ್ಸಾನ್ ಇವಿ ತಯಾರಾದ ಪ್ಲಾಟ್‌ಫಾರ್ಮ್‌ನಲ್ಲಿ ಟಾಟಾ ಪಂಚ್ ಇವಿ ಕೂಡ ನಿರ್ಮಾಣವಾಗುತ್ತಿದೆ. ಈ ಕುರಿತು ಟಾಟಾ ಮೋಟಾರ್ಸ್ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು, ಸ್ಲಿಮ್ ಎಲ್ಇಡಿ ಹೆಡ್‌ಲೈಟ್ಸ್, ಕ್ಲೋಸ್ಡ್ ಗ್ರಿಲ್, ಎಲ್ಇಡಿ ಡಿಆರ್‌ಎಲ್‌ಎಸ್ ಸೇರಿದಂತೆ ನಾನಾ ಫೀಚರ್‌ಗಳನ್ನು ಕಾಣಬಹುದಾಗಿದೆ.

ಟಾಟಾ ಪಂಚ್ ಇವಿ ದೊಡ್ಡ ಬ್ಯಾಟರಿಯನ್ನು ಹೊಂದಿದ್ದು ಮತ್ತು ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ. ಈ ಪ್ಲಾಟ್‌ಫಾರ್ಮ್‌ನಲ್ಲಿ ತಯಾರಾದ ಬ್ಯಾಟರಿಯು 300 ಕಿ.ಮೀ ವ್ಯಾಪ್ತಿಯ ಸಾಮರ್ಥ್ಯವನ್ನು ಹೊಂದಿದ್ದು, ಇದನ್ನು 600 ಕಿ.ಮೀ.ವರೆಗೂ ವಿಸ್ತರಿಸಬಹುದು. ಆದರೆ, ಅದು ಬ್ಯಾಟರಿ ಗಾತ್ರದ ಮೇಲೆ ನಿರ್ಧರಿತವಾಗಿರುತ್ತದೆ.

ನೆಕ್ಸಾನ್ ರೀತಿಯಲ್ಲೇ ಟಾಟಾ ಪಂಚ್ ಇವಿ ಎರಡು ಆವೃತ್ತಿಗಳಲ್ಲಿ ಮಾರಾಟಕ್ಕೆ ಸಿಗಲಿದೆ. ಮಿಡ್ ರೇಂಜ್‌ ವರ್ಷನ್‌ನಲ್ಲಿ 25kWh ಬ್ಯಾಟರಿ ಪ್ಯಾಕ್ ಇದ್ದರೆ, ಲಾಂಗ್ ರೇಂಜ್‌ನಲ್ಲಿ ಬ್ಯಾಟರಿ ದೊಡ್ಡದಿದ್ದು, 35 kWh ಸಾಮರ್ಥ್ಯವಿರಲಿದೆ. ಹೊಸ ಬ್ಯಾಟರಿ ಪ್ಯಾಕ್ ಹೆಚ್ಚು ವಿಸ್ತಾರವಾಗಿದ್ದು, ಹೆಚ್ಚು ಸಾಂದ್ರತೆಯ ಸೆಲ್‌ಗಳನ್ನು ಹೊಂದಿರಲಿದೆ. ಹಾಗಾಗಿ, ಶೇ.10ರಷ್ಟು ಹೆಚ್ಚಿನ ದಕ್ಷತೆಯನ್ನು ನಿರೀಕ್ಷಿಸಬಹುದಾಗಿದೆ.

ಈ ಹೊಸ ಟಾಟಾ ಪಂಚ್ ಇವಿ ಕಾರ್ ಭಾರತ್ ಎನ್‌ಸಿಎಪಿ ಅಥವಾ ಗ್ಲೋಬಲ್ ಎನ್‌ಸಿಎಪಿಯ್ಲಲಿ 5 ಸ್ಟಾರ್ ಪಡೆದುಕೊಂಡಿದೆ. ಹೆಚ್ಚು ಶಕ್ತಿ ಶಾಲಿ ಮಟಿರೀಯಲ್ಸ್ ಬಳಸಿದ್ದು ಮಾತ್ರವಲ್ಲದೇ, ಕ್ಯಾಬಿನ್ ಒಳಗೆ ಹೆಚ್ಚು ಸ್ಪೇಸ್ ಸೃಷ್ಟಿಸಲಾಗಿದೆ. ಜತೆಗೆ, ಗ್ರೌಂಡ್ ಕ್ಲಿಯರನ್ಸ್ ಕೂಡ ಚೆನ್ನಾಗಿದೆ. ಇದರಿಂದಾಗಿ ಸವಾಲಿನ ರಸ್ತೆಗಳಲ್ಲೂ ಪಂಚ್ ಸರಾಗ ಅನುಭವನ್ನು ಒದಗಿಸಲಿದೆ. ಹಾಗೆಯೇ, ಆರು ಏರ್‌ಬ್ಯಾಗ್ಸ್ ನೀಡಲಾಗಿದ್ದು, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದಲೂ ಹೆಚ್ಚು ಗಮನ ಸೆಳೆಯುತ್ತಿದೆ.

5ಜಿ ಕನೆಕ್ಟಿವಿಟಿ, ವೆಹಿಕಲ್ ಟು ಲೋಡ್(ವಿಟುಎಲ್), ವೆಹಿಕಲ್ ಟು ವೆಹಿಕಲ್ ಚಾರ್ಜಿಂಗ್( ವಿ2ವಿ) ತಂತ್ರಜ್ಞಾನ ಸೇರಿದಂತೆ ಇನ್ನಷ್ಟು ಫೀಚರ್‌ಗಳನ್ನು ಭವಿಷ್ಯದಲ್ಲಿ ಈ ಕಾರಿಗೆ ಅಪ್‌ಡೇಟ್ ಆಗುವ ಸಾಧ್ಯತೆಗಳಿವೆ. ಸದ್ಯಕ್ಕೆ ಎಲೆಕ್ಟ್ರಿಕ್ ಸನ್‌ರೂಫ್, 10.25 ಇಂಚ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್, 10.23 ವರ್ಚವಲ್ ಕಾಕ್‌ಪಿಟ್ ಮತ್ತು 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಇನ್ನಿತರ ಫೀಚರ್‌ಗಳು ಇರಲಿವೆ. ಆದರೆ, ಈ ಕಾರಿನ ಬೆಲೆ ಎಷ್ಟಿರಲಿದೆ ಎಂಬುದು ಇನ್ನೂ ಗೊತ್ತಾಗಿಲ್ಲ.

ಈ ಸುದ್ದಿಯನ್ನೂ ಓದಿ: Tata Punch CNG : ಎಕ್ಸ್​ಟೆರ್​ ಸಿಎನ್​ಜಿಗೆ ಪಂಚ್​ ಕೊಡಲು ಬಂದಿದೆ ಟಾಟಾ ಪಂಚ್; ಬೆಲೆ ಮತ್ತಿತರ ವಿವರ ಇಲ್ಲಿದೆ

Exit mobile version