Site icon Vistara News

Tesla cars : ಭಾರತದಲ್ಲಿ ಕಾರ್ಖಾನೆ ನಿರ್ಮಾಣಕ್ಕೆ ಟೆಸ್ಲಾ ಮಾತುಕತೆ ಶುರು, 20 ಲಕ್ಷ ರೂ.ಗೆ ಕಾರು

Tesla

ನವ ದೆಹಲಿ: ಕೊನೆಗೂ ಉದ್ಯಮಿ ಎಲಾನ್‌ ಮಸ್ಕ್‌ ನೇತೃತ್ವದ ಟೆಸ್ಲಾ ಎಲೆಕ್ಟ್ರಿಕ್‌ ಕಾರು ಕಂಪನಿಯು ಭಾರತದಲ್ಲಿ ತನ್ನ ಕಾರ್ಖಾನೆಯನ್ನು ನಿರ್ಮಿಸುವ ಬಗ್ಗೆ ಸರ್ಕಾರದ ಜತೆಗೆ ಮಾತುಕತೆ ಶುರು ಮಾಡಿದೆ. (Tesla cars ) ಹೂಡಿಕೆಯ ಪ್ರಸ್ತಾಪದ ಬಗ್ಗೆ ಸರ್ಕಾರದ ಜತೆ ಟೆಸ್ಲಾ ಮಾತುಕತೆ ನಡೆಯುತ್ತಿದೆ. ವರ್ಷಕ್ಕೆ 5 ಲಕ್ಷ ಎಲೆಕ್ಟ್ರಿಕ್‌ ಕಾರುಗಳನ್ನು ಕಾರ್ಖಾನೆ ಉತ್ಪಾದಿಸುವ ನಿರೀಕ್ಷೆ ಇದೆ.

ಭಾರತದಲ್ಲಿ ಟೆಸ್ಲಾ ಕಾರುಗಳ ದರ 20 ಲಕ್ಷ ರೂ.ಗಳಿಂದ ಟೆಸ್ಲಾ ಕಾರುಗಳು ಮಾರಾಟವಾಗಲಿದೆ. ಚೀನಾದಲ್ಲಿ ಟೆಸ್ಲಾ ಕಾರುಗಳು ಗಣನೀಯವಾಗಿ ಅಸ್ತಿತ್ವದಲ್ಲಿವೆ. ಟೆಸ್ಲಾದ ಕಾರ್ಖಾನೆಯೂ ಅಲ್ಲಿದೆ. ಇದೀಗ ಭಾರತದಲ್ಲಿ ಉತ್ಪಾದನೆ ಹೆಚ್ಚಿಸಿ ರಫ್ತು ಮಾಡಲು ಟೆಸ್ಲಾ ಆಲೋಚಿಸಿದೆ. ಇಂಡೊ-ಪೆಸಿಫಿಕ್‌ ವಲಯದಲ್ಲಿ ಟೆಸ್ಲಾ ಕಾರುಗಳ ಮಾರಾಟಕ್ಕೆ ಎಲಾನ್‌ ಮಸ್ಕ್‌ ಯೋಜಿಸಿದ್ದಾರೆ.

ಟೆಸ್ಲಾ ಮಹತ್ತ್ವಾಕಾಂಕ್ಷೆಯೊಂದಿಗೆ ಭಾರತಕ್ಕೆ ಬರುತ್ತಿದೆ. ಭಾರತದಲ್ಲಿ ನಮಗೆ ಸಕಾರಾತ್ಮಕ ಪ್ರೋತ್ಸಾಹ ಸಿಗಲಿದೆ ಎಂಬ ವಿಶ್ವಾಸ ಇದೆ. ಸ್ಥಳೀಯ ತಯಾರಕರು ಮತ್ತು ರಫ್ತುದಾರರ ಸಹಕಾರವನ್ನು ಮುಖ್ಯವಾಗಿ ನಿರೀಕ್ಷಿಸುತ್ತಿದ್ದೇವೆ ಎಂದು ಕಂಪನಿಯ ಮೂಲಗಳು ತಿಳಿಸಿವೆ. ಉತ್ತಮ ಡೀಲ್‌ ನಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲಾನ್‌ ಮಸ್ಕ್‌ ಅವರು ಕಳೆದ ತಿಂಗಳು ಅಮೆರಿಕಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ಜತೆಗೆ ಮಾತುಕತೆ ನಡೆಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ನಾನು ಪ್ರಧಾನಿ ಮೋದಿಯ ಅಭಿಮಾನಿ ಎಂದು ಮಸ್ಕ್‌ ಬಳಿಕ ಹೇಳಿದ್ದರು. ಮೋದಿಯವರು ಭಾರತದ ಬಗ್ಗೆ ನಿಜಕ್ಕೂ ಕಾಳಜಿ ಹೊಂದಿದ್ದಾರೆ. ಭಾರತದಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದೇವೆ ಎಂದು ಹೇಳಿದ್ದರು.

ಇದನ್ನೂ ಓದಿ: Tesla CEO Elon Musk : ಕರ್ನಾಟಕದಲ್ಲಿ ಹೂಡಿಕೆಗೆ ಎಲಾನ್‌ ಮಸ್ಕ್‌ಗೆ ರಾಜ್ಯ ಸರ್ಕಾರ ಆಹ್ವಾನ, ಕೊಟ್ಟಿರುವ ಆಫರ್‌ ಏನು?

ಈ ಹಿಂದೆಯೇ ಟೆಸ್ಲಾ ಭಾರತದ ಕಾರು ಮಾರುಕಟ್ಟೆ ಪ್ರವೇಶಿಸಲು ಬಯಸಿತ್ತು. ಆದರೆ ಆಮದು ಕಾರಿಗೆ ಸುಂಕ ಕಡಿತ ಮಾಡಬೇಕು ಎಂಬ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿತ್ತು. ಚೀನಾ ಸೇರಿದಂತೆ ಬೇರೆ ಕಡೆ ಉತ್ಪಾದಿಸುವ ಬದಲಿಗೆ ಭಾರತದಲ್ಲೇ ತಯಾರಿಸಿ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಭಾರತವು 2022ರಲ್ಲಿ ಚೀನಾ ಮತ್ತು ಅಮೆರಿಕದ ಬಳಿಕ ಮೂರನೇ ಅತಿ ದೊಡ್ಡ ವಾಹನ ಮಾರುಕಟ್ಟೆಯಾಗಿ ಹೊರಹೊಮ್ಮಿತ್ತು.

Exit mobile version