ಪುಣೆ: ಆಳವಾದ ಕಮರಿಗಳು ಮತ್ತು ಕಂದಕಗಳಲ್ಲಿ ಕಾರು ಬಿದ್ದರೆ ಪ್ರಯಾಣಿಕರು ಪ್ರಾಣ ಸಹಿತ ಉಳಿಯುವುದಿಲ್ಲ. ಆದರೆ, ಮಹಿಳೆಯೊಬ್ಬರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರೊಂದು ಸೇತುವೆಯೊಂದರಿಂದ 180 ಅಡಿ ಆಳದಲ್ಲಿದ್ದ ನಿರ್ಮಾಣ ಸ್ಥಳಕ್ಕೆ ಬಿದ್ದರೂ ಆಕೆ ಸ್ವಲ್ಪವೂ ಗಾಯವಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದು ರೀತಿಯಲ್ಲಿ ಇದು ಪವಾಡವೇ ಆಗಿದ್ದರೂ ಮತ್ತೊಂದು ಬಗೆಯಲ್ಲಿ ಯೋಚಿಸುವುದಾದರೆ ಇದು ಟಾಟಾ ಮೋಟಾರ್ಸ್ನ ಬಿಲ್ಡ್ ಕ್ವಾಲಿಟಿಯ ತಾಕತ್ತು ಎನಿಸಿದೆ. ಅವರ ಕಾರು ಹೊರಗಡೆಯಿಂದ ನಜ್ಜುಗುಜ್ಜಾಗಿದ್ದರೂ ಮಹಿಳೆಗೆ ಮಾತ್ರ ಗಾಯಗಳೇ ಆಗಿಲ್ಲ ಎಂಬುದು ಆಶ್ಚರ್ಯ.
ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದೆ. ಟಾಟಾ ಆಲ್ಟ್ರೋಜ್ ಹ್ಯಾಚ್ ಬ್ಯಾಕ್ ಅನ್ನು ಚಾಲನೆ ಮಾಡುತ್ತಿದ್ದ ಮಹಿಳೆ ಸೇತುವೆಯಿಂದ ಕಾರಿನ ಸಮೇತ 180 ಅಡಿ ಆಳಕ್ಕೆ ಬಿದ್ದಿದ್ದಾರೆ. ಮೇಲಿನಿಂದ ನೋಡಿದರೆ ಪ್ರಪಾತ ಸಾಕಷ್ಟು ಆಳದಲ್ಲಿದೆ. ಕಣ್ಣಿಗೆ ನಿಲುಕದಷ್ಟು ಪ್ರಪಾತವಿದೆ. ಜತೆಗೆ ಅವರ ಟಾಟಾ ಆಲ್ಟ್ರೋಜ್ ಕಾರು ಸಂಪೂರ್ಣ ಪುಡಿಯಾಗಿದೆ. ಆದರೆ, ಮಹಿಳೆ ಮಾತ್ರ ಸೇಫ್ ಆಗಿದ್ದಾರೆ.
ಘಟನೆಯ ವಿಡಿಯೊವನ್ನು ನಿಖಿಲ್ ರಾಣಾ ಎಂಬ ಯೂಟ್ಯೂಬರ್ ಅಪ್ಲೋಡ್ ಮಾಡಿದ್ದಾರೆ. ದುರದೃಷ್ಟಕರ ಘಟನೆಗಳು ಮತ್ತು ರಸ್ತೆ ಸುರಕ್ಷತೆಯ ಸಮಯದಲ್ಲಿ ಜನಪ್ರಿಯ ಕಾರುಗಳ ವರ್ತನೆ ಸೇರಿದಂತೆ ಆಟೋಮೊಬೈಲ್ ಕ್ಷೇತ್ರ ವಿಷಯವನ್ನು ಈ ಚಾನೆಲ್ ಪ್ರಕಟ ಮಾಡುತ್ತದೆ. ಅಂತೆಯೇ ಈ ಬಾರಿ ಮಹಾರಾಷ್ಟ್ರದ ಪುಣೆಯಿಂದ ಮಹಿಳೆರ ಆಲ್ಟ್ರೋಜ್ ಕಾರು ಪ್ರಪಾತಕ್ಕೆ ಬಿದ್ದಿರುವುದನ್ನು ವರದಿ ಮಾಡಿದ್ದಾರೆ. ಅನಿರೀಕ್ಷಿತ ಕಾರಣದಿಂದಾಗಿ, ಮಹಿಳೆ ವಾಹನದ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯ ಬದಿಯಿಂದ 180 ಅಡಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ನಿರ್ಮಾಣ ಸ್ಥಳದ ಬಳಿ ಬಿದ್ದ ಆಲ್ಟ್ರೋಜ್ ಕಾರಿನ ದೃಶ್ಯಗಳು ಅಪ್ಲೋಡ್ ಮಾಡಲಾಗಿದೆ. ಅಷ್ಟೊಂದು ಮೇಲಿಂದ ಬಿದ್ದರೆ ಯಾರಾದರೂ ಬದುಕುಳಿಯುತ್ತಾರೆ ಎಂದು ನಂಬುವುದೇ ಕಷ್ಟ.
ಇದನ್ನೂ ಓದಿ : Maruti Suzuki : ಮಾರುತಿ ಕಂಪನಿಯ ಅತಿ ದೊಡ್ಡ ಕಾರಿನ ಬುಕಿಂಗ್ ಆರಂಭ
ವೀಡಿಯೊದಲ್ಲಿನ ಮಾಹಿತಿಯ ಪ್ರಕಾರ, ಮಹಿಳೆ ಈ ಅಪಘಾತದಲ್ಲಿ ಸಣ್ಣ ಗಾಯಗಳೊಂದಿಗೆ ಬದುಕುಳಿದಿದ್ದಾರೆ. ಅಪಘಾತದ ನಂತರ ಮಹಿಳೆ ನಡೆದುಕೊಂಡೇ ಹೋಗಿದ್ದಾರೆ. ಇದು ಕಾರಿನ ನಿರ್ಮಾಣ ನಿರ್ಮಾಣ ಗುಣಮಟ್ಟಕ್ಕೆ ಸಾಕ್ಷಿ. ಆಲ್ಟ್ರೋಜ್ ಕಾರಿನ ಪಿಲ್ಲರ್ಗಳು ಮೇಲಿಂದ ಬೀಳುವ ವೇಳೆ ಹಾನಿಯನ್ನು ಚೆನ್ನಾಗಿ ತಡೆದುಕೊಂಡಿದೆ. ಇದರಿಂದಾಗಿ ಮಹಿಳೆ ಪಾರಾಗಿದ್ದಾರೆ.
ಬಲಿಷ್ಠ ಆಲ್ಟ್ರೋಜ್
ಆಲ್ಟ್ರೋಜ್ ಬಿಡುಗಡೆಯಾದ ನಂತರ, ಗಮನಾರ್ಹ ಫೈವ್-ಸ್ಟಾರ್ ಗ್ಲೋಬಲ್ ಎನ್ಸಿಎಪಿ ರೇಟಿಂಗ್ ಮೂಲಕ ಖ್ಯಾತಿ ಪಡದುಕೊಂದೆಇ. ಇದು ಭಾರತದಲ್ಲಿ ತಯಾರಿಸಿದ ಕಾರು ಸಾಧಿಸಿದ ಅತ್ಯಧಿಕ ಸ್ಕೋರ್ ಹೊಂದಿರುವ ಕಾರು. ಆದಾಗ್ಯೂ, ಮಹೀಂದ್ರಾ ಎಕ್ಸ್ ಯುವಿ 300 ಆಲ್ಟ್ರೊಜ್ ಅನ್ನು ಹಿಂದಿಕ್ಕಿ ಭಾರತದ ಸುರಕ್ಷಿತ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅದೇನೇ ಇದ್ದರೂ, ಆಲ್ಟ್ರೋಜ್ ತನ್ನ ಫೈವ್-ಸ್ಟಾರ್ ರೇಟಿಂಗ್ ಅನ್ನು ಉಳಿಸಿಕೊಂಡಿದೆ ಮತ್ತು ಪ್ರಸ್ತುತ ಮಾರುಕಟ್ಟೆಯಲ್ಲಿ ಮೂರನೇ ಸುರಕ್ಷಿತ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪರೀಕ್ಷೆಗಳನ್ನು ಗಂಟೆಗೆ 64 ಕಿ.ಮೀ ವೇಗದಲ್ಲಿ ನಡೆಸಲಾಗಿದೆ. ವಯಸ್ಕರ ಸುರಕ್ಷತೆಯ ವಿಷಯದಲ್ಲಿ, ಆಲ್ಟ್ರೊಜ್ 17 ಅಂಕಗಳಲ್ಲಿ 16.13 ಅಂಕಗಳನ್ನು ಗಳಿಸಿತು. ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ, ಕಾರು 49 ರಲ್ಲಿ 29 ಅಂಕಗಳನ್ನು ಗಳಿಸಿದೆ. ಟಾಟಾ ಆಲ್ಟ್ರೋಜ್ ನ ಎಲ್ಲಾ ಮಾದರಿಗಳು ಎರಡು ಏರ್ ಬ್ಯಾಗ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿವೆ.
ಗ್ಲೋಬಲ್ ಎನ್ಸಿಎಪಿ ವರದಿಯ ಪ್ರಕಾರ, ಆಲ್ಟ್ರೋಜ್ ಕಾರು ಚಾಲಕನ ಮತ್ತು ಸಹ-ಚಾಲಕನ ತಲೆ, ಕುತ್ತಿಗೆ ಮತ್ತು ಮೊಣಕಾಲುಗಳಿಗೆ ಉತ್ತಮ ರಕ್ಷಣೆಯನ್ನು ನೀಡುತ್ತದೆ, ಜತೆಗೆ ಎದೆಯ ಪ್ರದೇಶವು ಸಾಕಷ್ಟು ರಕ್ಷಣೆಯನ್ನು ಪಡೆಯುತ್ತದೆ.