maruti-suzuki-invicto-bookings-now-open Maruti Suzuki : ಮಾರುತಿ ಕಂಪನಿಯ ಅತಿ ದೊಡ್ಡ ಕಾರಿನ ಬುಕಿಂಗ್​ ಆರಂಭ - Vistara News

ಆಟೋಮೊಬೈಲ್

Maruti Suzuki : ಮಾರುತಿ ಕಂಪನಿಯ ಅತಿ ದೊಡ್ಡ ಕಾರಿನ ಬುಕಿಂಗ್​ ಆರಂಭ

ಮಾರುತಿ ಸುಜುಕಿ ಕಂಪನಿಯ ಇನ್​ವಿಕ್ಟೊ ಕಾರು ಜುಲೈ 5ರಂದು ಬಿಡುಗಡೆಯಾಗಲಿದ್ದು, ಈಗಲೇ 25 ಸಾವಿರ ರೂಪಾಯಿ ನೀಡಿ ಕಾಯ್ದಿರಿಸಬಹುದು.

VISTARANEWS.COM


on

Maruti Suzuki Invicto
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಅತ್ಯಂತ ದುಬಾರಿ ಮತ್ತು ಪ್ರೀಮಿಯಂ ಮಾಡೆಲ್​ ಇನ್ವಿಕ್ಟೊ ಎಂಪಿವಿ ಕಾರಿನ ಬುಕಿಂಗ್ ಆರಂಭಿಸಿದೆ. ಮಾರುತಿ ಸುಜುಕಿಯ ಅಧಿಕೃತ ವೆಬ್​ಸೈಟ್​ ಮತ್ತು ನೆಕ್ಸಾ ಶೋರೂಮ್​ನಲ್ಲಿ ಗ್ರಾಹಕರು 25,000 ರೂಪಾಯಿ ಪಾವತಿಸಿ ಇನ್ವಿಕ್ಟೋ ಕಾರನ್ನು ಕಾಯ್ದಿರಿಸಬಹುದು. ಇದು ಮಾರುತಿ ಸುಜುಕಿಯ ಸಂಗ್ರಹಗಳ ಪೈಕಿ ಗರಿಷ್ಠ ಮೊತ್ತದ ಕಾರಾಗಿದೆ. ಇದು ಗ್ರ್ಯಾಂಡ್​ ವಿಟಾರಾಗಿಂತಲೂ ಉನ್ನತ ದರ್ಜೆಯ ಕಾರಾಗಿದೆ. ಈ ಹೊಸ ಬ್ರಾಂಡ್​ಗೆ ಟೊಯೋಟಾ ಇನ್ನೋವಾ ಹೈಕ್ರಾಸ್ ನ ತಾಂತ್ರಿಕತೆಯನ್ನು ಎರವಲು ಪಡೆಯಲಾಗಿದೆ. ಜುಲೈ 5ರಂದು ಈ ಕಾರನ್ನು ಕಂಪನಿ ಬಿಡುಗಡೆ ಮಾಡಲಿದೆ.

ಬಾಹ್ಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇನ್ವಿಕ್ಟೋ ಕಾರು ಟೊಯೊಟಾ ಇನ್ನೋವಾ ಹೈಕ್ರಾಸ್ ರೀತಿಯೇ ಇರಲಿದೆ. ಆದರೆ ಬ್ರಾಂಡ್ ಭಿನ್ನತೆಗಾಗಿ ಕೆಲವು ಫೀಚರ್​ಗಳ ವ್ಯತ್ಯಾಸ ಇರಲಿದೆ. ಮುಂಭಾಗದ ಗ್ರಿಲ್, ಇದು ಎರಡು ಕ್ರೋಮ್ ಸ್ಲಾಟ್​​ಗಳನ್ನು ಹೊಂದಿರಲಿದೆ. ಅದು ಹೆಡ್​ಲೈಟ್​ ತನಕವೂ ವಿಸ್ತರಿಸಿಕೊಂಡಿರುತ್ತದೆ. ಹೆಚ್ಚುವರಿಯಾಗಿ, ಮಾರುತಿ ಸುಜುಕಿ ಕಾರಿನ ಬಂಪರ್​ಗೂ ಸಣ್ಣ ತಿರುವು ಕೊಟ್ಟಿದೆ. ಹೊಸ ಮಾದರಿಯ ಹೆಡ್ ಲೈಟ್ ಮತ್ತು ಟೈಲ್ ಲೈಟ್ ನೊಂದಿಗೆ ಕಂಗೊಳಿಸಲಿದೆ. ಜತೆಗೆ ವಿಶೇಷ ಮಾದರಿಯ ಅಲಾಯ್ ವ್ಹೀಲ್ ವಿನ್ಯಾಸ ಹೊಂದಿರಲಿದೆ.

ಇನ್ವಿಕ್ಟೊ ಕಾರಿನ ಇಂಟೀರಿಯರ್​ನಲ್ಲೂ ಕೆಲವೊಂದು ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದು. ಪ್ರೀಮಿಯಂ ಅನುಭವವನ್ನು ನೀಡುವ ನಡುವೆ ಬೆಲೆಯೊಂದಿಗೆ ಸಮತೋಲನವನ್ನು ಸಾಧಿಸುವ ಗುರಿಯನ್ನೂ ಕಂಪನಿ ಹೊಂದಿದೆ. ಅಡ್ವಾನ್ಡ್ಸ್​​ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ಅಡಾಸ್​) ಲಭ್ಯತೆ ಬಗ್ಗೆ ಖಾತರಿಯಿಲ್ಲ. ಉಳಿದಂತೆ ಎಕ್ಸ್​ಟೀರಿಯರ್​ ರೀತಿಯಲ್ಲೇ ಇಂಟೀರಿಯರ್​ ಕೂಡ ಟೊಯೊಟಾ ಇನ್ನೋವಾದಂತೆಯೇ ಉಳಿಯಲಿದೆ. ವೆಂಟಿಲೇಟೆಡ್ ಫ್ರಂಟ್ ಸೀಟ್​್ಗಳು, ವೈರ್​​ಲೆಸ್ ಚಾರ್ಜರ್, ಪನೋರಮಿಕ್ ಸನ್​​ರೂಫ್, 9 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ವೈರ್​​ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಮತ್ತು ಪೂರ್ಣ-ಟಿಎಫ್ಟಿ​​ ಇನ್ಸ್ ಟ್ರೂಮೆಂಟ್ ಕನ್ಸೋಲ್ ಇರಲಿದೆ.

ಎಂಜಿನ್​ ಹೇಗಿರಬಹುದು?

ಇನ್ವಿಕ್ಟೋದ ಹೈ ಎಂಡ್ ವೇರಿಯೆಂಟ್​​ಗಳು ದೃಢವಾದ 2.0-ಲೀಟರ್​ನ ಸ್ಟ್ರಾಂಗ್-ಹೈಬ್ರಿಡ್ ಎಂಜಿನ್​ ಹೊಂದಿರಲಿದೆ. ಇದು 183 ಬಿಎಚ್​​ಪಿ ಪವರ್​ ಬಿಡುಗಡೆ ಮಾಡಲಿದೆ. ಇ-ಸಿವಿಟಿ ಟ್ರಾನ್ಸ್ ಮಿಷನ್ ಇರಲಿದೆ. ಎಂಟ್ರಿ ಲೆವೆಲ್ ಟ್ರಿಮ್ ಗಳು 2.0-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್​ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್ 173 ಬಿಎಚ್​ಪಿ ಪವರ್​ ಬಿಡುಗಡೆ ಮಾಡುತ್ತದೆ. ಇದರಲ್ಲೂ ಆಟೋಮ್ಯಾಟಿಕ್​ (ಸಿವಿ) ಗೇರ್​ಬಾಕ್ಸ್​ ಇರಬಹುದು. ಎಲ್ಲದಿಕ್ಕಿಂತ ಹೆಚ್ಚಾಗಿ ಕೇವಲ ಆಟೋಮ್ಯಾಟಿಕ್ ಗೇರ್​ಬಾಕ್ಸ್​ ಹೊಂದಿರುವ ಮಾರುತಿ ಸುಜುಕಿಯ ಮೊದಲ ಕಾರು ಎನಿಸಿಕೊಳ್ಳಲಿದೆ.

ಇದನ್ನೂ ಓದಿ : Hyundai Exter: ಹ್ಯುಂಡೈ ಕಂಪನಿಯ ಹೊಸ ಎಕ್ಸ್​ಟೆರ್​ ಕಾರಿನ ವಿನ್ಯಾಸ ಹೇಗಿದೆ?

ಬೆಂಗಳೂರಿನ ಬಿಡದಿಯಲ್ಲಿರುವ ಟೋಯೊಟಾ ಕಿರ್ಲೊಸ್ಕರ್ ಘಟಕದಲ್ಲಿ ಇನ್ವಿಕ್ಟೊ ಉತ್ಪಾದನೆಯಾಗಲಿದೆ ಎಂದು ಹೇಳಲಾಗುತ್ತಿದೆ. ಮಾರುತಿಯ ಕಾರುಗಳನ್ನು ಉತ್ಪಾದನೆ ಮಾಡುವ ಉದ್ದೇಶಕ್ಕೆ ಕಂಪನಿಯು ಹೆಚ್ಚುವರಿ ಅವಧಿಯನ್ನು ಮೀಸಲಿರಿಸಿದೆ ಎಂದು ಹೇಳಲಾಗಿದೆ. ಫ್ಲ್ಯಾಟ್​ಫಾರ್ಮ್ ಹಂಚಿಕೊಂಡಿರುವುದಕ್ಕಾಗಿ ಮಾರುತಿ ಸುಜುಕಿ ಕಂಪನಿಯು ಟೋಯೊಟಾಗೆ ರಾಯಲ್ಟಿಯನ್ನು ಪಾವತಿ ಮಾಡಲಿದೆ.

ಬೆಲೆ ಎಷ್ಟಿರಬಹುದು?

ಇನ್ವಿಕ್ಟೊದ ವೇರಿಯೆಂಟ್​ಗಳು ಇನ್ನೋವಾ ಹೈಕ್ರಾಸ್​ನಷ್ಟೇ ಬೆಲೆಯನ್ನು ಹೊಂದಿರಬಹುದು. ಕೇವಲ ಪೆಟ್ರೋಲ್​ ಎಂಜಿನ್​ ಮಾತ್ರ ಹೊಂದಿರುವ ಹೈಕ್ರಾಸ್​ ಬೆಲೆ 18.55 ಲಕ್ಷ ರೂ.ಗಳಿಂದ 19.45 ಲಕ್ಷ ರೂ.ಗಳವರೆಗೆ (ಎಕ್ಸ್ ಶೋ ರೂಂ, ಮುಂಬೈ) ಇದೆ. ಹೈಬ್ರಿಡ್ ಎಂಜಿನ್​ ಹೊಂದಿರುವ ಹೈಕ್ರಾಸ್​ ಕಾರುಗಳು ರೂ.25.03 ಲಕ್ಷದಿಂದ ರೂ.29.99 ಲಕ್ಷ (ಎಕ್ಸ್ ಶೋ ರೂಂ, ಮುಂಬೈ) ನಡುವೆ ಇದೆ. ರಾಯಲ್ಟಿ ಮತ್ತು ಇನ್ನಿತರ ಸೇವೆಗಳಿಗೆ ಟೋಯೋಟಾಗೆ ಹಣ ಪಾವತಿ ಮಾಡಬೇಕಾಗಿರುವ ಕಾರಣ ಮಾರುತಿಯ ಇನ್ವಿಕ್ಟೊ ಸ್ವಲ್ಪ ಹೆಚ್ಚಿನ ದರವನ್ನು ಹೊಂದಿರಬಹುದು ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಟೋಮೊಬೈಲ್

Maruti Suzuki: ಮಾರುತಿ ಸುಜುಕಿ ಸಿಎನ್‌ಜಿ ವಾಹನದ ಟೀಸರ್ ಔಟ್‌; ಹಲವು ವೈಶಿಷ್ಟ್ಯಗಳ ನಿರೀಕ್ಷೆ

ಮಾರುತಿ ಸುಜುಕಿ (Maruti Suzuki) ತನ್ನ ಎಸ್ ಸಿಎನ್‌ಜಿ ಶ್ರೇಣಿಗಾಗಿ ಹೊಸ ತಂತ್ರಜ್ಞಾನವನ್ನು ಪರಿಚಯಿಸಲು ಸಿದ್ಧವಾಗಿದೆ. ಕಂಪನಿಯು ಬಿಡುಗಡೆ ಮಾಡಿರುವ ಹೊಸ ಸಿಎನ್‌ಜಿ ಟೀಸರ್‌ನಲ್ಲಿ ಮಾರುತಿ ಸುಜುಕಿಯಲ್ಲಿನ ಅತ್ಯಾಕರ್ಷಕ ಬೆಳವಣಿಗೆಗಳ ಮುನ್ನೋಟವನ್ನು ನೀಡುತ್ತಿದೆ. ಸಿಎನ್‌ಜಿ ವಾಹನಗಳ ಕುರಿತಾದ ಮಾರುತಿ ಸುಜುಕಿಯ ಟೀಸರ್‌ ನೀವೇ ನೋಡಿ.

VISTARANEWS.COM


on

By

Maruti Suzuki
Koo

ಭಾರತದ (India) ಮಾರುಕಟ್ಟೆಗೆ (market) ಶೀಘ್ರದಲ್ಲೇ ಪ್ರವೇಶಿಸಲಿರುವ ಮಾರುತಿ ಸುಜುಕಿಯ (Maruti Suzuki) ಸಿಎನ್‌ಜಿ (CNG) ವಾಹನಗಳಲ್ಲಿರುವ ವಿಶೇಷತೆ ಕುರಿತು ಹೊಸ ಟೀಸರ್ (New Teaser) ಅನ್ನು ಬಿಡುಗಡೆ ಮಾಡಿದೆ. ಒಇಎಂ ಬಿಡುಗಡೆ ಮಾಡಿರುವ ಈ ಸಣ್ಣ ವಿಡಿಯೋ ಕ್ಲಿಪ್ ಸಿಎನ್‌ಜಿಯ ಮಾದರಿಗಳ ಮೇಲೆ ಕೇಂದ್ರೀಕರಿಸಿದೆ. ಇದು ಬ್ರ್ಯಾಂಡ್ ಎಸ್‌ಸಿಎನ್‌ಜಿ (S CNG) ಬ್ಯಾಡ್ಜ್‌ನೊಂದಿಗೆ ಬರಲಿದೆ. ಸಿಎನ್‌ಜಿಯಲ್ಲಿ ಕಾರ್ಯನಿರ್ವಹಿಸಲು ಅಗತ್ಯವಿರುವ ಅತ್ಯಾಧುನಿಕ ಸಾಧನಗಳನ್ನು ಹೊಂದಿವೆ.

ಮಾರುತಿ ಸುಜುಕಿ ಭಾರತೀಯ ಕಾರು ಮಾರುಕಟ್ಟೆಯಲ್ಲಿ ದೊಡ್ಡ ಮಾರುಕಟ್ಟೆ ಪಾಲನ್ನು ಹೊಂದಿದೆ. ಅದರ ಮಾರಾಟ ಸಂಖ್ಯೆಗೆ ದೊಡ್ಡ ಕೊಡುಗೆಯನ್ನು ಸಿಎನ್‌ಜಿ ಪವರ್‌ಟ್ರೇನ್‌ಗಳೊಂದಿಗೆ ಮಾಡೆಲ್‌ಗಳು ಮಾಡುತ್ತವೆ.
ಮಾರುತಿ ಸುಜುಕಿ ತನ್ನ ಹೆಚ್ಚಿನ ಫ್ಲೀಟ್ ಅನ್ನು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಒದಗಿಸುವ ಏಕೈಕ ವಾಹನ ತಯಾರಕ ಕಂಪೆನಿಯಾಗಿದೆ. ಗ್ರಾಹಕರಿಗೆ ಇಂಧನ ಸಾಮರ್ಥ್ಯ ಆಯ್ಕೆಯನ್ನು ನೀಡಲು ಬ್ರ್ಯಾಂಡ್ ತನ್ನ ಹೆಚ್ಚಿನ ಕಾರುಗಳಲ್ಲಿ ಎಸ್ ಸಿಎನ್ ಜಿ ಕಿಟ್‌ಗಳನ್ನು ನೀಡುತ್ತದೆ.

ಈಗ ಮಾರುತಿ ಸುಜುಕಿ ತನ್ನ ಎಸ್ ಸಿಎನ್‌ಜಿ ಶ್ರೇಣಿಗಾಗಿ ಹೊಸ ತಂತ್ರಜ್ಞಾನವನ್ನು ಪರಿಚಯಿಸಲು ಸಿದ್ಧವಾಗಿದೆ. ಕಂಪೆನಿಯು ಬಿಡುಗಡೆ ಮಾಡಿರುವ ಹೊಸ ಸಿಎನ್‌ಜಿ ಟೀಸರ್ ನಲ್ಲಿ ಮಾರುತಿ ಸುಜುಕಿಯಲ್ಲಿನ ಅತ್ಯಾಕರ್ಷಕ ಬೆಳವಣಿಗೆಗಳು ನಡೆಯುತ್ತಿವೆ ಎಂಬುದನ್ನು ಸೂಚಿಸುತ್ತದೆ.


ಅವಳಿ ಸಿಲಿಂಡರ್ ನಿರೀಕ್ಷೆ

ಟಾಟಾದಂತಹ ಕಾರು ತಯಾರಕರು ತಮ್ಮ ಸಿಎನ್‌ಜಿ ಕೊಡುಗೆಗಳನ್ನು ಟ್ವಿನ್- ಸಿಲಿಂಡರ್ ತಂತ್ರಜ್ಞಾನ ಮತ್ತು ಸಿಎನ್‌ಜಿಗೆ ಹೊಂದಿಕೆಯಾಗುವ ಎಎಂಟಿ ಗೇರ್‌ಬಾಕ್ಸ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ಹೆಚ್ಚಿಸಿದ್ದಾರೆ. ಸಿಎನ್‌ಜಿ ವಾಹನ ವಿಭಾಗದಲ್ಲಿನ ಈ ಸುಧಾರಣೆಯು ಟಾಟಾ ಸಿಎನ್‌ಜಿ ವಾಹನಗಳ ಮಾರಾಟವನ್ನು ಹೆಚ್ಚಿಸಿದೆ. ಮಾರುತಿ ಸುಜುಕಿ ಇನ್ನೂ ಒಂದೇ ಸಿಎನ್‌ಜಿ ಟ್ಯಾಂಕ್ ಅನ್ನು ನೀಡುತ್ತದೆ.

ಈಗಿನ ಟೀಸರ್ ನಲ್ಲಿ ಮಾರುತಿ ಕೆಲವು ಹೊಸ ತಂತ್ರಜ್ಞಾನವನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ಸೂಚಿಸುತ್ತದೆ. ಸಿಎನ್ ಜಿ ವಾಹನಗಳಲ್ಲಿ ನೇರ ಸಿಎನ್ ಜಿ ಪ್ರಾರಂಭ ಮತ್ತು ಸ್ವಿಚ್‌ಓವರ್ ವ್ಯವಸ್ಥೆಯೊಂದಿಗೆ ಅವಳಿ ಸಿಲಿಂಡರ್ ತಂತ್ರಜ್ಞಾನವನ್ನು ಬ್ರ್ಯಾಂಡ್ ಪ್ರಾರಂಭಿಸುತ್ತದೆ ಎಂಬುದನ್ನು ನಿರೀಕ್ಷಿಸಬಹುದು.

ಇದನ್ನೂ ಓದಿ: Tata Motors: ಟಾಟಾ ಮೋಟಾರ್ಸ್‌ನಿಂದ ʼಆಲ್ಟ್ರೋಜ್ ರೇಸರ್ʼ ಬಿಡುಗಡೆ; ದರ ಎಷ್ಟು?

ಅವಳಿ ಸಿಲಿಂಡರ್ ತಂತ್ರಜ್ಞಾನವು ಎರಡು 25- 30 ಲೀಟರ್ ಸಿಲಿಂಡರ್‌ಗಳನ್ನು ಸ್ಪೇರ್ ವೀಲ್‌ನ ಜಾಗದಲ್ಲಿ ಇರಿಸುವ ನಿರೀಕ್ಷೆಯಿದೆ. ಬಿಡಿ ಚಕ್ರವನ್ನು ಬೂಟ್ ಅಡಿಯಲ್ಲಿ ಇರಿಸಬಹುದು. ಆದರೆ, ಹೊಸ ತಂತ್ರಜ್ಞಾನದಲ್ಲಿ ಏನನ್ನು ತರಲಿದೆ ಎಂಬುದನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.

ಅರೆನಾ ಔಟ್‌ಲೆಟ್‌ಗಳ ಮೂಲಕ ಮಾರಾಟವಾಗುವ ಮಾದರಿಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಡಿಜೈರ್, ಆಲ್ಟೊ, ಎರ್ಟಿಗಾ, ವ್ಯಾಗನ್ಆರ್, ಸೆಲೆರಿಯೊ, ಇಕೊ, ಎಸ್-ಪ್ರೆಸ್ಸೊ ಮತ್ತು ಬ್ರೆಝಾ ಸೇರಿವೆ. ಏತನ್ಮಧ್ಯೆ, ಫ್ರಾಂಕ್ಸ್, ಬಲೆನೊ, ಗ್ರ್ಯಾಂಡ್ ವಿಟಾರಾ ಮತ್ತು ಎಕ್ಸ್‌ಎಲ್ 6 ನಂತಹ ಇತರ ಮಾದರಿಗಳನ್ನು ನೆಕ್ಸಾ ಔಟ್‌ಲೆಟ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ.

Continue Reading

ಪ್ರಮುಖ ಸುದ್ದಿ

HSRP Number Plate : ಎಚ್​ಎಸ್​ಆರ್​ಪಿ ನಂಬರ್​ ಪ್ಲೇಟ್​ ಅಳವಡಿಕೆ ಗಡುವು ಜುಲೈ 4 ರವರೆಗೆ ವಿಸ್ತರಣೆ; ವಾಹನ ಮಾಲೀಕರಿಗೆ ನೆಮ್ಮದಿ

HSRP Number Plate : ಹೊಸ ಮಾದರಿಯ ಸುರಕ್ಷಿತ ನಂಬರ್ ಪ್ಲೇಟ್​ ಅಳವಡಿಕೆಗೆ ನೀಡಲಾಗಿರುವ ಗಡುವು ವಿಸ್ತರಿರಣೆಗೆ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಎಚ್‌ಎಸ್‌ಆರ್‌ಪಿ ತಯಾರಿಕಾ ಕಂಪನಿ ಬಿಎನ್‌ಡಿ ಎನರ್ಜಿ ಲಿಮಿಟೆಡ್‌ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು .ಅದನ್ನು ವಿಚಾರಣೆ ಮಾಡಿದ ನ್ಯಾಯಮೂರ್ತಿ ಎನ್‌ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ್‌ ಅವರಿದ್ದ ವಿಭಾಗೀಯ ಪೀಠ ಜುಲೈ 4ರ ವರೆಗೆ ವಿಸ್ತರಣೆ ಮಾಡುವಂತೆ ಹೇಳಿದೆ.

VISTARANEWS.COM


on

HSRP Number plate
Koo

ಬೆಂಗಳೂರು: 2019ಕ್ಕಿಂತ ಹಿಂದೆ ಮಾರುಕಟ್ಟೆಗೆ ಇಳಿದ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಸಂಖ್ಯೆ ಫಲಕ (HSRP Number Plate) ಕಡ್ಡಾಯವಾಗಿ ಅಳವಡಿಸಬೇಕೆಂಬ ಗಡುವು ಜುಲೈ 4ರವರೆಗೆ ವಿಸ್ತರಣೆಯಾಗಿದೆ. ಹೀಗಾಗಿ ನಾನಾ ತಾಂತ್ರಿಕ ಕಾರಣಗಳಿಂದಾಗಿ ಇನ್ನೂ ನಂಬರ್​ಪ್ಲೇಟ್​ ಅಳವಡಿಸದ ವಾಹನಗಳ ಮಾಲೀಕರಿಗೆ ನೆಮ್ಮದಿ ಸಿಕ್ಕಿದೆ. ಹೊಸ ನಂಬರ್​ ಪ್ಲೇಟ್ ಅಳವಡಿಸದ ವಾಹನ ಮಾಲೀಕರ ವಿರುದ್ಧ ಯಾವುದೇ ಕಠಿಣ ಕೈಗೊಳ್ಳಬಾರದು ಎಂದು ಹೈಕೋರ್ಟ್‌ ಮೇ 21ರಂದು ಹೊರಡಿಸಿದ್ದ ಆದೇಶ ಜುಲೈ 4ರವರೆಗೆ ವಿಸ್ತರಣೆಯಾಗಿರುವುದರಿಂದ ವಾಹನ ಮಾಲೀಕರಿಗೆ ತೊಂದರೆ ತಪ್ಪಿದೆ.

ಹೊಸ ಮಾದರಿಯ ಸುರಕ್ಷಿತ ನಂಬರ್ ಪ್ಲೇಟ್​ ಅಳವಡಿಕೆಗೆ ನೀಡಲಾಗಿರುವ ಗಡುವು ವಿಸ್ತರಿರಣೆಗೆ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಎಚ್‌ಎಸ್‌ಆರ್‌ಪಿ ತಯಾರಿಕಾ ಕಂಪನಿ ಬಿಎನ್‌ಡಿ ಎನರ್ಜಿ ಲಿಮಿಟೆಡ್‌ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು .ಅದನ್ನು ವಿಚಾರಣೆ ಮಾಡಿದ ನ್ಯಾಯಮೂರ್ತಿ ಎನ್‌ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ್‌ ಅವರಿದ್ದ ವಿಭಾಗೀಯ ಪೀಠ ಜುಲೈ 4ರ ವರೆಗೆ ವಿಸ್ತರಣೆ ಮಾಡುವಂತೆ ಹೇಳಿದೆ.

ಪ್ರಕರಣದಲ್ಲಿ ಸರಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿಕ್ರಮ್‌ ಹುಯಿಲಗೋಳ, ಅವರೂ ಸರ್ಕಾರದ ನಿಲುವನ್ನು ಇದೇ ವೇಳೆ ವ್ಯಕ್ತಪಡಿಸಿದ್ದಾರೆ. “ಎಚ್‌ಎಸ್‌ಆರ್‌ಪಿ ಫಲಕಗಳ ಅಳವಡಿಕೆ ಅವಧಿಯನ್ನು ರಾಜ್ಯ ಸರಕಾರ 2024ರ ಆಗಸ್ಟ್‌ ಇಲ್ಲವೇ ಸೆಪ್ಟೆಂಬರ್‌ವರೆಗೂ ವಿಸ್ತರಿಸುವ ಚಿಂತನೆ ನಡೆಸಿದೆ. ಹೈಕೋರ್ಟ್‌ ಅನುಮತಿ ನೀಡಿದಲ್ಲಿ ಸರಕಾರ ಈ ಸಂಬಂಧ ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸಲಿದೆ,” ಎಂದು ಮನವರಿಕೆ ಮಾಡಿದರು. ಈ ವೇಳೆ ನ್ಯಾಯಪೀಠ, ವಾಹನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವ ಅವಧಿಯನ್ನು ವಿಸ್ತರಿಸುವ ನಿರ್ಧಾರ ತೆಗೆದುಕೊಳ್ಳಲು ಸರಕಾರ ಸ್ವತಂತ್ರ,” ಎಂದು ಹೇಳಿತು.

ರಾಜ್ಯದಲ್ಲಿ 2019ರ ಏಪ್ರಿಲ್‌ 1ಕ್ಕಿಂತ ಮುನ್ನ ನೋಂದಣಿಯಾದ ಎಲ್ಲ ಮಾದರಿಯ ವಾಹನಗಳಿಗೆ ಮೂಲ ಉಪಕರಣ ತಯಾರಕ (ಓಇಎಂ) ಅಧಿಕೃತ ಡೀಲರ್‌ಗಳ ಮೂಲಕ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಲು ರಾಜ್ಯ ಸರಕಾರ 2023ರ ಆಗಸ್ಟ್‌ 17ರಂದು ಅಧಿಸೂಚನೆ ಹೊರಡಿಸಿತ್ತು. ಆದರೆ, ವಿತರಣೆ, ಅಳವಡಿಕೆ ಸೇರಿದಂತೆ ನಾನಾ ಸಮಸ್ಯೆಗಳಿಂದ ಈ ಯೋಜನೆಗೆ ಸಮಸ್ಯೆಯಾಗುತ್ತಿದೆ. ಸುರಕ್ಷಿತ ನಂಬರ್​ ಪ್ಲೇಟ್ ಅಳವಡಿಸಲು ಸುಮಾರು ಅರ್ಧದಷ್ಟು ವಾಹನ ಮಾಲೀಕರಿಗೆ ಇನ್ನೂ ಆಗಿಲ್ಲ. ಹೀಗಾಗಿ ಗಡುವು ವಿಸ್ತರಣೆ ಆಗುತ್ತಲೇ ಇದೆ. ಇದೀಗ ಕೋರ್ಟ್​ ಆದೇಶದ ಮೂಲಕ ಮತ್ತಷ್ಟು ವಿಸ್ತರಣೆಯಾಗಿದೆ. ಸರ್ಕಾರವೂ ಇದನ್ನು ಇನ್ನಷ್ಟು ಮುಂದುವರಿಸುವ ಯೋಜನೆ ಹೊಂದಿದೆ.

ಕೇಂದ್ರ ಮೋಟಾರು ವಾಹನಗಳ ನಿಯಮಗಳನ್ನು ಮೀರಿ ಕೆಲವು ಸಂಸ್ಥೆಗಳನ್ನು ಅಧಿಸೂಚನೆಯಿಂದ ಹೊರಗಿಡಲಾಗಿದೆ. ಪ್ರಭಾವಿ ಸಂಸ್ಥೆಗಳಿಗಷ್ಟೇ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಆಕ್ಷೇಪಿಸಿ ಹೈ ಸೆಕ್ಯುರಿಟಿ ರೆಜಿಸ್ಪ್ರೇಷನ್‌ ಪ್ಲೇಟ್‌ ಮ್ಯಾನುಫ್ಯಾಕ್ಚರರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಸೇರಿ ಅವಕಾಶ ವಂಚಿತ ಕೆಲ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗಿವೆ. ಆ ಅರ್ಜಿ ಜತೆಗೆ ಮಧ್ಯಂತರ ಅರ್ಜಿ ಹೂಡಿರುವ ಬಿಎನ್‌ಡಿ ಎನರ್ಜಿ ಲಿಮಿಟೆಡ್‌ ಎಚ್‌ಎಸ್‌ಆರ್‌ಪಿ ಅಳವಡಿಕೆ ವಿಧಿಸಿರುವ ಗಡುವು ವಿಸ್ತರಿಸಲು ಕೋರಿದೆ.

Continue Reading

ಕರ್ನಾಟಕ

Tata Motors: ಟಾಟಾ ಮೋಟಾರ್ಸ್‌ನಿಂದ ʼಆಲ್ಟ್ರೋಜ್ ರೇಸರ್ʼ ಬಿಡುಗಡೆ; ದರ ಎಷ್ಟು?

Tata Motors: ಟಾಟಾ ಮೋಟಾರ್ಸ್ ಇಂದು ಕಂಪನಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಸ್ಪೋರ್ಟಿ ವರ್ಷನ್ ಆಗಿರುವ ಆಲ್ಟ್ರೋಜ್ ರೇಸರ್ ಅನ್ನು ಬಿಡುಗಡೆ ಮಾಡಿದೆ. 1.2 ಲೀ ಟರ್ಬೊ ಪೆಟ್ರೋಲ್ ಎಂಜಿನ್‌ ಹೊಂದಿರುವ ಅಲ್ಟ್ರೋಜ್ ಅತ್ಯುನ್ನತ ಕಾರ್ಯಕ್ಷಮತೆಯನ್ನು ಒದಗಿಸುವಂತೆ ವಿನ್ಯಾಸಗೊಂಡಿದೆ. 360 ಡಿಗ್ರಿ ಕ್ಯಾಮೆರಾ, 26.03 ಸೆಂ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್, ವೆಂಟಿಲೇಟೆಡ್ ಸೀಟ್‌ಗಳು ಮತ್ತು 6 ಏರ್‌ಬ್ಯಾಗ್‌ಗಳು ಹೀಗೆ ಹಲವಾರು ಫೀಚರ್‌ಗಳನ್ನು ಹೊಂದಿವೆ.

VISTARANEWS.COM


on

Altroz Racer launched by Tata Motors
Koo

ಬೆಂಗಳೂರು: ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ (Tata Motors) ಇಂದು ಕಂಪನಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಸ್ಪೋರ್ಟಿ ವರ್ಷನ್ ಆಗಿರುವ ಆಲ್ಟ್ರೋಜ್ ರೇಸರ್ ಅನ್ನು ಬಿಡುಗಡೆ ಮಾಡಿದೆ. 1.2 ಲೀ ಟರ್ಬೊ ಪೆಟ್ರೋಲ್ ಎಂಜಿನ್‌ ಹೊಂದಿರುವ ಅಲ್ಟ್ರೋಜ್ ಅತ್ಯುನ್ನತ ಕಾರ್ಯಕ್ಷಮತೆಯನ್ನು ಒದಗಿಸುವಂತೆ ವಿನ್ಯಾಸಗೊಂಡಿದೆ. ರೇಸ್ ಕಾರ್‌ಗಳಿಂದ ಸ್ಫೂರ್ತಿ ಪಡೆದು ರಚಿಸಿದ ಹೊರಾಂಗಣ ಮತ್ತು ಒಳಾಂಗಣ ಲುಕ್ ಅನ್ನು ಹೊಂದಿದೆ.

5500 ಆರ್‌ಪಿಎಂನಲ್ಲಿ 120 ಪಿಎಸ್ ಉತ್ಪಾದಿಸುವ, 1750ರಿಂದ 4000 ಆರ್‌ಪಿಎಂನಲ್ಲಿ 170 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಅಲ್ಟ್ರೋಜ್ ಅತ್ಯುನ್ನತ ಡ್ರೈವಿಂಗ್ ಅನುಭವವನ್ನು ಒದಗಿಸಲಿದೆ. 360 ಡಿಗ್ರಿ ಕ್ಯಾಮೆರಾ, 26.03 ಸೆಂ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್, ವೆಂಟಿಲೇಟೆಡ್ ಸೀಟ್‌ಗಳು ಮತ್ತು 6 ಏರ್‌ಬ್ಯಾಗ್‌ಗಳು (ರೇಸರ್‌ನಲ್ಲಿ ಸ್ಟ್ಯಾಂಡರ್ಡ್ ಆಗಿ ಬರುತ್ತವೆ) ಹೀಗೆ ಹಲವಾರು ಫೀಚರ್‌ಗಳನ್ನು ಹೊಂದಿರುವ ರೇಸರ್ ಆವೃತ್ತಿಯು ಆಲ್ಟ್ರೊಜ್‌ ಕಾರು ಆವೃತ್ತಿಗಳಲ್ಲಿಯೇ ಅಗ್ರಸ್ಥಾನದಲ್ಲಿದೆ.

ಇದನ್ನೂ ಓದಿ: University Grants Commission : ಇನ್ನು ಮುಂದೆ ವಿಶ್ವವಿದ್ಯಾಲಯಗಳಲ್ಲಿ ವರ್ಷಕ್ಕೆ ಎರಡು ಬಾರಿ ಅಡ್ಮಿಷನ್​

ಇದು 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಒದಗಿಸುವ ಏಕೈಕ ಹ್ಯಾಚ್‌ಬ್ಯಾಕ್ ಆಗಿದ್ದು, ನಗರದ ಟ್ರಾಫಿಕ್ ಮತ್ತು ಹೆದ್ದಾರಿಗಳಲ್ಲಿ ಅತ್ಯುತ್ತಮ ಚಾಲನಾ ಅನುಭವವನ್ನು ಒದಗಿಸುತ್ತದೆ. ಸುಧಾರಿತ ತಂತ್ರಜ್ಞಾನ, ವೈಶಿಷ್ಟ್ಯಗಳು ಮತ್ತು ಹ್ಯಾಚ್‌ಬ್ಯಾಕ್‌ನಲ್ಲಿ ಕ್ಲಾಸ್-ಲೀಡಿಂಗ್ ಸುರಕ್ಷತೆಯನ್ನು ಹೊಂದಿರುವ ಆಲ್ಟ್ರೋಜ್ ರೇಸರ್ 3 ವೇರಿಯಂಟ್‌ಗಳಲ್ಲಿ (ಆರ್1, ಆರ್2 ಮತ್ತು ಆರ್3) ಲಭ್ಯವಿರುತ್ತದೆ. ಮೂರು ಬಣ್ಣಗಳ (ಪ್ಯೂರ್ ಗ್ರೇ, ಅಟಾಮಿಕ್ ಆರೆಂಜ್ ಮತ್ತು ಅವೆನ್ಯೂ ವೈಟ್) ಆಯ್ಕೆ ಗ್ರಾಹಕರಿಗೆ ಸಿಗುತ್ತದೆ.

ಇದರ ಜತೆಗೆ ಅಲ್ಟ್ರೋಜ್ ಶ್ರೇಣಿಯನ್ನು ವಿಸ್ತರಿಸುತ್ತಾ ಟಾಟಾ ಮೋಟಾರ್ಸ್ ಎರಡು ಹೊಸ ವೇರಿಯಟ್‌ಗಳನ್ನು (ಎಕ್ಸ್‌ ಝಡ್‌ ಎಲ್‌ಯುಎಕ್ಸ್‌ ಮತ್ತು ಎಕ್ಸ್‌ ಝಡ್‌+ಎಸ್‌ ಎಲ್‌ಯುಎಕ್ಸ್‌) ಪರಿಚಯಿಸಿದೆ ಮತ್ತು ಅಲ್ಟ್ರೋಜ್ ಶ್ರೇಣಿಯ ಒಂದು ವೇರಿಯಂಟ್ ಅನ್ನು (ಎಕ್ಸ್‌ ಝಡ್‌+ಓಎಸ್) ನವೀಕರಿಸಿದೆ. ಈ ಎರಡು ಹೊಸ ಹೆಚ್ಚುವರಿ ವೇರಿಯಂಟ್‌ಗಳು ಪೆಟ್ರೋಲ್ ಮ್ಯಾನ್ಯುವಲ್, ಪೆಟ್ರೋಲ್ ಡಿಸಿಎ, ಡೀಸೆಲ್ ಮತ್ತು ಸಿ ಎನ್ ಜಿ ವಿಭಾಗಗಳ ಆಯ್ಕೆಯಲ್ಲಿ ಲಭ್ಯವಿರುತ್ತವೆ.

ದರ ಪಟ್ಟಿ

ರೇಸರ್ ವೇರಿಯಂಟ್‌ಗಳು ಪರಿಚಯಾತ್ಮಕ ಬೆಲೆ (ಪೆಟ್ರೋಲ್ ಎಂಟಿ), ಭಾರತೀಯ ರೂಪಾಯಿಗಳಲ್ಲಿ, ಎಕ್ಸ್ ಶೋರೂಂ, ದೆಹಲಿ ಆರ್1 -9,49,000, ಆರ್2- 10,49,000, ಆರ್3- 10,99,000 ಆಗಿವೆ.

ವೇರಿಯಂಟ್‌ಗಳು ಪರಿಚಯಾತ್ಮಕ ಬೆಲೆ (ಪೆಟ್ರೋಲ್ ಎನ್ಎ ಎಂಟಿ), ಭಾರತೀಯ ರೂಪಾಯಿಗಳಲ್ಲಿ, ಎಕ್ಸ್ ಶೋರೂಂ, ದೆಹಲಿ ಎಕ್ಸ್‌ ಝಡ್‌ ಎಲ್‌ಯುಎಕ್ಸ್ (ಹೊಸತು) – 8,99,900, ಎಕ್ಸ್‌ ಝಡ್‌+ಎಸ್ ಎಲ್‌ಯುಎಕ್ಸ್ – (ಹೊಸತು) -9,64,990, ಎಕ್ಸ್‌ ಝಡ್‌+ಓಎಸ್ (ಅಪ್ ಗ್ರೇಡೆಡ್) -9,98,900 ರಷ್ಟಿದೆ.

ಇದನ್ನೂ ಓದಿ: EPF Account Rules: ಕ್ಲೈಮ್ ಇತ್ಯರ್ಥ ಇನ್ನು ಸುಲಭ; ಇಪಿಎಫ್‌ಒ ಮಾಡಿದೆ ಹಲವು ಹೊಸ ಬದಲಾವಣೆ

ಟಾಟಾ ಆಲ್ಟ್ರೊಜ್ ರೇಸರ್ ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಮುಖ್ಯ ವಾಣಿಜ್ಯ ಅಧಿಕಾರಿ ವಿವೇಕ್ ಶ್ರೀವತ್ಸ ಮಾತನಾಡಿ, ಪ್ರತಿ ದಿನ ವಾಹನ ಚಾಲನೆ ಮಾಡುವವರಿಗೆ ಉತ್ಕೃಷ್ಟ ಅನುಭವ ಒದಗಿಸಲೆಂದೇ ವಿನ್ಯಾಸಗೊಂಡಿರುವ ಆಲ್ಟ್ರೋಜ್ ರೇಸರ್ ಅನ್ನು ಬಿಡುಗಡೆ ಮಾಡವ ಮೂಲಕ ಆಲ್ಟ್ರೋಜ್ ಶ್ರೇಣಿಯನ್ನು ಬಲಪಡಿಸಲು ಹೆಮ್ಮೆ ಪಡುತ್ತೇವೆ. ವಿಭಾಗ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿರುವ ಮತ್ತು ತಂತ್ರಜ್ಞಾನ ಆಧರಿತವಾಗಿ ರೂಪುಗೊಂಡಿರುವ, ಅತ್ಯುನ್ನತ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ರೇಸರ್, ವಿಭಿನ್ನ ಕಾರನ್ನು ಡ್ರೈವ್ ಮಾಡಲು ಬಯಸುವ, ಕನೆಕ್ಟೆಡ್ ಆಗಿರುವ ಮತ್ತು ಫ್ಯಾಷನ್ ಆಸಕ್ತಿಯನ್ನು ಹೊಂದಿರುವ ಹೊಸ ಪೀಳಿಗೆಯ ಗ್ರಾಹಕರನ್ನು ಹೆಚ್ಚು ಆಕರ್ಷಿಸಬಹುದಾಗಿದೆ.

ಅದ್ಭುತ ಕಾರ್ಯಕ್ಷಮತೆಯ ಡಿಎನ್ಎ ಹೊಂದಿರುವ ಮತ್ತು ರೇಸ್ ಕಾರ್‌ನಿಂದ ಸ್ಫೂರ್ತಿ ಪಡೆದಿರುವ ಲುಕ್ ಹೊಂದಿರುವ ರೇಸರ್ ನಿಮ್ಮನ್ನು #RacePastTheRoutine ಎಂಬ ಭಾವನೆ ಉಂಟು ಮಾಡುವ ಪರಿಪೂರ್ಣ ಒಡನಾಡಿಯಾಗುವ ವಿಶ್ವಾಸ ನಮಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಜೂ. 29ರಂದು ನಿವೃತ್ತ ನ್ಯಾ. ಚಂದ್ರಶೇಖರಯ್ಯಗೆ ಅಭಿನಂದನೆ

2.5 ಲಕ್ಷ ಗ್ರಾಹಕರನ್ನು ಹೊಂದಿರುವ ಅಲ್ಟ್ರೋಜ್ ಅದರ ಸೊಗಸಾದ ವಿನ್ಯಾಸ, ಅಪೂರ್ವ ವೈಶಿಷ್ಟ್ಯಗಳು, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಉತ್ತಮ ಸುರಕ್ಷತೆಯ ಮೂಲಕ ಭಾರತದಲ್ಲಿನ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳಲ್ಲಿಯೇ ಉನ್ನತ ಮಾನದಂಡವನ್ನು ಸ್ಥಾಪಿಸಿದೆ. ಈ ಕಾರು ಅನೇಕ ವಿಭಾಗಗಳಲ್ಲಿ ಪ್ರವರ್ತಕ ಫೀಚರ್ ಗಳನ್ನು ಹೊಂದಿದೆ. ಗ್ಲೋಬಲ್ ಎಸಿಎಪಿ 5 ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿದ ಭಾರತದ ಮೊದಲ ಹ್ಯಾಚ್‌ಬ್ಯಾಕ್ ಎಂಬ ಹೆಗ್ಗಳಿಗೆ ಗಳಿಸಿದೆ. ಟ್ವಿನ್-ಸಿಲಿಂಡರ್ ತಂತ್ರಜ್ಞಾನವನ್ನು ಒಳಗೊಂಡಿರುವ ದೇಶದ ಮೊದಲ ಸಿಎನ್‌ಜಿ ಕಾರ್ ಮತ್ತು ಗ್ರಾಹಕರಿಗೆ ಆಯ್ಕೆ ಮಾಡಲು ಪವರ್‌ಟ್ರೇನ್ ಆಯ್ಕೆಗಳನ್ನು ಒದಗಿಸುವ ಏಕೈಕ ಹ್ಯಾಚ್‌ಬ್ಯಾಕ್ ಆಗಿದೆ.

Continue Reading

Latest

Yamaha Fascino S : ಎಲ್ಲಿದ್ದೀಯಾ ಅಂಥ ಕೇಳಿದ್ರೆ, ಇಲ್ಲಿದ್ದೀನಿ ಅನ್ನುತ್ತೆ ಈ ಸ್ಕೂಟರ್​! ವಿಶೇಷ ಫೀಚರ್ ಇರುವ ಸ್ಕೂಟರ್ ಈಗ ಭಾರತದಲ್ಲಿ

Fascino S : ಇಂಡಿಯಾ ಯಮಹಾ ಮೋಟಾರ್ (IYM) ಪ್ರೈವೇಟ್ ಲಿಮಿಟೆಡ್, ‘ದಿ ಕಾಲ್ ಆಫ್ ದಿ ಬ್ಲೂ’ ಬ್ರಾಂಡ್ ಅಭಿಯಾನಕ್ಕೆ ಅನುಗುಣವಾಗಿ ‘ಆನ್ಸರ್​ ಬ್ಯಾಕ್’ (Answer Back)ಫೀಚರ್​ ಹೊಂದಿರುವ ಫ್ಯಾಸಿನೊ ಎಸ್ (Fascino S) ಮಾದರಿ ಸ್ಕೂಟರ್ ಬಿಡುಗಡೆ ಮಾಡಿದೆ. ಫ್ಯಾಸಿನೊ ಎಸ್ ಯುರೋಪಿಯನ್ ವಿನ್ಯಾಸ, ಕಾರ್ಯಕ್ಷಮತೆ ಮತ್ತು ಹೊಸತನದೊಂದಿಗೆ ರಸ್ತೆ ಇಳಿದಿದೆ.

VISTARANEWS.COM


on

Yamaha Fascino S
Koo

ಬೆಂಗಳೂರು: ನಗರದೊಳಗಿನ ಪಾರ್ಕಿಂಗ್​ನಲ್ಲಿ ಇಟ್ಟಿರುವ ಸ್ಕೂಟರ್​ಗಳನ್ನು ಪತ್ತೆ ಮಾಡುವುದು ಸಾಹಸದ ಕೆಲಸ. ರಾಶಿಯೊಳಗೆ ಎಲ್ಲಿಟ್ಟಿದ್ದೇವೆ ಎಂದು ಮರೆತು ಹೋಗುವುದು ಮೊದಲ ಸಮಸ್ಯೆಯಾದರೆ, ಒಂದೇ ರೀತಿಯ ಹತ್ತಾರು ಸ್ಕೂಟರ್​ಗಳು ಒಂದೇ ಕಡೆ ಇದ್ದಾಗ ನಮ್ಮದು ಯಾವುದು ಎಂದು ಪತ್ತೆ ಹಚ್ಚುವುದೂ ಕಷ್ಟ. ಇದಕ್ಕೆಲ್ಲ ಪರಿಹಾರ ಎಂಬ ಫೀಚರ್​ಗಳನ್ನು ಅಳವಡಿಸಿಕೊಂಡಿರು ಸ್ಕೂಟರ್ ಅನ್ನು ಯಮಹಾ ಇಂಡಿಯಾ ಬಿಡುಗಡೆ ಮಾಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಫ್ಯಾಸಿನೊ ಸ್ಕೂಟರ್​ನ ಸುಧಾರಿತ ಫ್ಯಾಸಿನೊ ಎಸ್ (Yamaha Fascino S)​​ ಅವೃತ್ತಿಯಲ್ಲಿ ಈ ಫೀಚರ್ ಲಭ್ಯವಿದ್ದು, ‘ಆನ್ಸರ್ ಬ್ಯಾಕ್​ ಫೀಚರ್​ ಮೂಲಕ ಮೊಬೈಲ್​ನಲ್ಲೇ ಒಂದು ಬಟನ್ ಒತ್ತಿ ಸ್ಕೂಟರ್​ ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗುತ್ತದೆ.

ಇಂಡಿಯಾ ಯಮಹಾ ಮೋಟಾರ್ (IYM) ಪ್ರೈವೇಟ್ ಲಿಮಿಟೆಡ್, ‘ದಿ ಕಾಲ್ ಆಫ್ ದಿ ಬ್ಲೂ’ ಬ್ರಾಂಡ್ ಅಭಿಯಾನಕ್ಕೆ ಅನುಗುಣವಾಗಿ ‘ಆನ್ಸರ್​ ಬ್ಯಾಕ್’ (Answer Back)ಫೀಚರ್​ ಹೊಂದಿರುವ ಫ್ಯಾಸಿನೊ ಎಸ್ (Yamaha Fascino S) ಮಾದರಿ ಸ್ಕೂಟರ್ ಬಿಡುಗಡೆ ಮಾಡಿದೆ. ಫ್ಯಾಸಿನೊ ಎಸ್ ಯುರೋಪಿಯನ್ ವಿನ್ಯಾಸ, ಕಾರ್ಯಕ್ಷಮತೆ ಮತ್ತು ಹೊಸತನದೊಂದಿಗೆ ರಸ್ತೆ ಇಳಿದಿದೆ. ಇದು ಯಮಹಾದ ಪೋರ್ಟ್ ಫೋಲಿಯೊಗೆ ರೋಮಾಚಂಕಾರಿ ಸೇರ್ಪಡೆಯಾಗಿದ್ದು ಪ್ರೀಮಿಯಂ ಸ್ಕೂಟರ್ ಮಾದರಿಯಲ್ಲಿ ಆಕರ್ಷಕ ಮ್ಯಾಟ್ ರೆಡ್ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ. ಅಲ್ಲದೆ ಆಕರ್ಷಕ ಡಾರ್ಕ್ ಮ್ಯಾಟ್ ಬ್ಲೂ ಬಣ್ಣದಲ್ಲೂ ಸಿಗಲಿದೆ.

ಫ್ಯಾಸಿನೊ ಎಸ್ ಎಲ್ಲಾ ಯಮಹಾ ಅಧಿಕೃತ ಶೋರೂಂಗಳಲ್ಲಿ ಈ ಕೆಳಗಿನ ಬೆಲೆಯಲ್ಲಿ ಲಭ್ಯವಿದೆ

  • ಮ್ಯಾಟ್ ರೆಡ್ ಮತ್ತು ಮ್ಯಾಟ್ ಬ್ಲ್ಯಾಕ್ ರೂ. 93,730/-
  • ಡಾರ್ಕ್ ಮ್ಯಾಟ್ ಬ್ಲೂ ರೂ. 94,530/-

2024ರ ಫ್ಯಾಸಿನೊ ಎಸ್ ಮಾದರಿಯ ಪ್ರಮುಖ ಅಂಶವೆಂದರೆ ‘ಆನ್ಸರ್​ ಬ್ಯಾಕ್’ ಫಂಕ್ಷನ್. ‘ಯಮಹಾ ಸ್ಕೂಟರ್ ಆನ್ಸರ್​​ ಬ್ಯಾಕ್’ ಎಂಬ ಯಮಹಾದ ಮೊಬೈಲ್ ಅಪ್ಲಿಕೇಶನ್ ಮೂಲಕ ಗ್ರಾಹಕರು ಈ ಫೀಚರ್​ ಅನ್ನು ಬಳಸಬಹುದು. ಅಪ್ಲಿಕೇಶನ್ ನೊಳಗಿನ ಆನ್ಸರ್​ ಬ್ಯಾಕ್ ಬಟನ್ ಒತ್ತುವ ಮೂಲಕ, ಸವಾರರು ತಮ್ಮ ಸ್ಕೂಟರ್ ಅನ್ನು ಸುಲಭವಾಗಿ ಪತ್ತೆಹಚ್ಚಬಹುದು. ಇದು ಸುಮಾರು ಎರಡು ಸೆಕೆಂಡುಗಳ ಕಾಲ ಹಾರ್ನ್ ಮಾಡುತ್ತಾ ಎಡ ಮತ್ತು ಬಲ ಇಂಡಿಕೇಟರ್​ಗಳನ್ನು ಸಕ್ರಿಯಗೊಳಿಸುವ ಮೂಲಕ ಪ್ರತಿಕ್ರಿಯಿಸುತ್ತದೆ. ಇದು ಗ್ರಾಹಕರಿಗೆ ಹೆಚ್ಚು ಆರಾಮದಾಯಕ ಸವಾರಿ ಅನುಭವ ನೀಡುತ್ತದೆ. ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇಸ್ಟೋರ್ / ಆ್ಯಪ್ ಸ್ಟೋರ್ ನಿಂದ ಸುಲಭವಾಗಿ ಇನ್​ಸ್ಟಾಲ್​ ಮಾಡಬಹುದು.

ಇದನ್ನೂ ಓದಿ: Chandrababu Naidu: ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿ; ಚಂದ್ರಬಾಬು ನಾಯ್ಡು ಘೋಷಣೆ

125 ಸಿಸಿಯ ಅತ್ಯುತ್ತಮ ಎಂಜಿನ್​

ಫ್ಯಾಸಿನೊ ಎಸ್ ಮಾದರಿಯು ಯಮಹಾದ ಅತ್ಯಾಧುನಿಕ ಬಿಎಸ್ 6 ಕಾಂಪ್ಲೈಂಟ್, ಏರ್-ಕೂಲ್ಡ್, ಫ್ಯೂಯಲ್-ಇಂಜೆಕ್ಟೆಡ್ (ಎಫ್ಐ), ಸ್ಮಾರ್ಟ್ ಮೋಟಾರ್ ಜನರೇಟರ್ (ಎಸ್ಎಂಜಿ) ನೊಂದಿಗೆ 125 ಸಿಸಿ ಬ್ಲೂ ಕೋರ್ ಹೈಬ್ರಿಡ್ ಎಂಜಿನ್ ಹೊಂದಿದೆ, ಎಂಜಿಜನ್​​ “ಸೈಲೆಂಟ್ ಸ್ಟಾರ್ಟ್” ಅನ್ನು ಆ್ಯಕ್ಟಿವೇಟ್ ಮಾಡುತ್ತದೆ. ಸರಿಸಾಟಿಯಿಲ್ಲದ “ಪವರ್ ಅಸಿಸ್ಟ್” ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಮಾದರಿಯು ನಾರ್ಮಲ್ ಮೋಡ್ ಮತ್ತು ಟ್ರಾಫಿಕ್ ಮೋಡ್ ಸೇರಿದಂತೆ ಸುಧಾರಿತ ಸ್ವಯಂಚಾಲಿತ ಸ್ಟಾಪ್ & ಸ್ಟಾರ್ಟ್ ಸಿಸ್ಟಮ್ (ಎಸ್ಎಸ್ಎಸ್) ಅನ್ನು ಸಹ ಹೊಂದಿದೆ. ಈ ಫೀಚರ್​ ಮೂಲಕ ಮೈಲೇಜ್​ ಹೆಚ್ಚಿಸಲಾಗಿದೆ.

ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಯಮಹಾ ಮೋಟಾರ್ ಇಂಡಿಯಾ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷ ಈಶಿನ್ ಚಿಹಾನಾ, “ದ್ವಿಚಕ್ರ ವಾಹನ ಉದ್ಯಮದಲ್ಲಿ ವಿಕಸನಗೊಳ್ಳುತ್ತಿರುವ ವಿದ್ಯಮಾನಗಳೊಂದಿಗೆ ಗ್ರಾಹಕರಿಗೆ ವಿಶೇಷ ಫೀಚರ್​ಗಳನ್ನು ಒದಗಿಸುವುದು ಅತ್ಯಂತ ಮಹತ್ವದ್ದಾಗಿದೆ. ಇಂದು ಭಾರತದ ನಗರಗಳಲ್ಲಿರುವ ಗ್ರಾಹಕರು ಸ್ಮಾರ್ಟ್ ಆಯ್ಕೆಗಳನ್ನು ಮಾಡುತ್ತಾರೆ. ಯಮಹಾದಲ್ಲಿ, ನಾವು ನಿರಂತರವಾಗಿ ಗ್ರಾಹಕರ ಅಗತ್ಯಗಳಿಗೆ ಆದ್ಯತೆ ನೀಡುತ್ತೇವೆ. ಸವಾರಿ ಅನುಭವಕ್ಕೆ ಮೌಲ್ಯ ನೀಡುವ ಪರಿಹಾರಗಳನ್ನು ನೀಡುತ್ತಿದ್ದೇವೆ. ಫ್ಯಾಸಿನೊ ಎಸ್ ನಲ್ಲಿರುವ ‘ಆನ್ಸರ್​ ಬ್ಯಾಕ್’ ಫೀಚರ್​ ಯಮಹಾದ ವಿಶಿಷ್ಟ ಶೈಲಿ ಮತ್ತು ಗ್ರಾಹಕರ ಬೇಡಿಕೆಯನ್ನು ಪೂರೈಸುತ್ತದೆ. ನಮ್ಮ ಗ್ರಾಹಕರಿಗೆ ಸಮೃದ್ಧ ಅನುಭವ ನೀಡಲು ನಾವು ಅಂತಹ ಫೀಚಗಳ ಆವಿಷ್ಕಾರ ಮುಂದುವರಿಸುತ್ತೇವೆ ಎಂದು ಹೇಳಿದರು.

ಈ ಅತ್ಯಾಕರ್ಷಕ ಫೀಚರ್​ಗಳು ಸ್ಕೂಟರ್ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ನಿಗದಿಪಡಿಸಲಿದೆ. ಹೊಸತನ ಮತ್ತು ಗ್ರಾಹಕರ ತೃಪ್ತಿಗೆ ಯಮಹಾದ ಬದ್ಧತೆಯಾಗಿದೆ. ಫ್ಯಾಸಿನೊ ಎಸ್ ತನ್ನ ಶೈಲಿ ಮತ್ತು ತಂತ್ರಜ್ಞಾನದ ಮಿಶ್ರಣದ ಮೂಲಕ ರಾಷ್ಟ್ರವ್ಯಾಪಿ ಮೋಡಿ ಮಾಡುತ್ತಿದೆ. ಯಮಹಾ ನಗರದ ಸವಾರಿಯಲ್ಲಿ ಪ್ರೀಮಿಯಂ ಫೀಚರ್​ಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ.

Continue Reading
Advertisement
Jammu Kashmir
ದೇಶ2 hours ago

Jammu Kashmir: ಕಾಶ್ಮೀರದಲ್ಲಿ ಮತ್ತೊಂದು ದುರಂತ; ಸೇನಾ ವಾಹನ ಕಣಿವೆಗೆ ಬಿದ್ದು ಯೋಧ ಸಾವು, ನಾಲ್ವರಿಗೆ ಗಾಯ

Forest department agrees to give 500 acres for yEttina hole project work says DCM DK Shivakumar
ಕರ್ನಾಟಕ2 hours ago

DK Shivakumar: ಎತ್ತಿನಹೊಳೆ ಕಾಮಗಾರಿಗೆ 500 ಎಕರೆ ನೀಡಲು ಅರಣ್ಯ ಇಲಾಖೆ ಒಪ್ಪಿಗೆ

Maharaj
ಸಿನಿಮಾ2 hours ago

Maharaj: ಹಿಂದುಗಳಿಗೆ ಅವಮಾನ; ಆಮೀರ್‌ ಖಾನ್‌ ಪುತ್ರನ ‘ಮಹಾರಾಜ್’‌ ಸಿನಿಮಾ ಬಿಡುಗಡೆಗೆ ಕೋರ್ಟ್‌ ತಡೆ

ISIS Terrorists
ಕರ್ನಾಟಕ3 hours ago

ದೇಶದ ಪ್ರತಿ ಜಿಲ್ಲೆಗೂ ಉಗ್ರರ ನೇಮಿಸಲು ಬಳ್ಳಾರಿಯಲ್ಲಿ ಸಂಚು; ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ!

Actress Ramya
ಕರ್ನಾಟಕ4 hours ago

Actress Ramya: ಕಾನೂನಿಗಿಂತ ಯಾರೂ ದೊಡ್ಡೋರಲ್ಲ; ದರ್ಶನ್‌ಗೆ ಮತ್ತೆ ನಟಿ ರಮ್ಯಾ ಕ್ಲಾಸ್!

Namma Clinic
ಕರ್ನಾಟಕ4 hours ago

Namma Clinic: ಬಸ್‌ ನಿಲ್ದಾಣ ಸೇರಿದಂತೆ 254 ಕಡೆ ʼನಮ್ಮ ಕ್ಲಿನಿಕ್‌ʼ ಸ್ಥಾಪನೆ

Maruti Suzuki
ಆಟೋಮೊಬೈಲ್5 hours ago

Maruti Suzuki: ಮಾರುತಿ ಸುಜುಕಿ ಸಿಎನ್‌ಜಿ ವಾಹನದ ಟೀಸರ್ ಔಟ್‌; ಹಲವು ವೈಶಿಷ್ಟ್ಯಗಳ ನಿರೀಕ್ಷೆ

Reliance Retail Tira unveils skin care brand Akind
ದೇಶ5 hours ago

Reliance Retail: ಚರ್ಮ ರಕ್ಷಣೆಯ ʼಅಕೈಂಡ್ʼ ಬ್ರಾಂಡ್‌ನ ಕ್ರೀಮ್‌ ಬಿಡುಗಡೆ

Union Budget 2024
ದೇಶ6 hours ago

Union Budget 2024: ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಯಾವಾಗ? ಇಲ್ಲಿದೆ ಬಿಗ್‌ ಅಪ್‌ಡೇಟ್‌

AIDSO protest demanding investigation into corruption in NEET entrance exam
ರಾಯಚೂರು6 hours ago

Raichur News: ನೀಟ್ ಭ್ರಷ್ಟಾಚಾರದ ತನಿಖೆಗೆ ಆಗ್ರಹಿಸಿ ಮಾನ್ವಿಯಲ್ಲಿ ಎಐಡಿಎಸ್ಒ ಪ್ರತಿಭಟನೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ2 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ2 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ3 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ6 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ6 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌