Site icon Vistara News

Best Budget Camera Phone: 15 ಸಾವಿರ ರೂ. ಒಳಗಿನ, 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಫೋನ್‌ಗಳು!

Best Budget Camera Phone under RS 15000 with 50MP Camera

ಬೆಂಗಳೂರು: ಫೋನುಗಳು ಈಗ ಕೇವಲ ಸಂವಹನದ ಸಾಧನಗಳಾಗಿ ಉಳಿದಿಲ್ಲ. ಸ್ಮಾರ್ಟ್‌ಫೋನ್‌‌ಗಳಂತೂ ಮಾನವನ ನಿತ್ಯದ ಅಗತ್ಯಗಳಲ್ಲಿ ಒಂದಾಗಿ ಮಾರ್ಪಟ್ಟಿವೆ. ಪ್ರತಿಯೊಂದು ಕೆಲಸವನ್ನು ಸ್ಮಾರ್ಟ್‌ಫೋನ್ ಮೂಲಕವೇ ಮಾಡಬಹುದು. ಹಲವರಿಗೆ ಹಲವು ರೀತಿಯ ಅಗತ್ಯಗಳಿಗೆ ಸ್ಮಾರ್ಟ್‌ಫೋನ್‌ಗಳು ಬಳಕೆಯಾಗುತ್ತವೆ. ಕೆಲವೊಬ್ಬರಿಗೆ ಸಂವಹನಕ್ಕಾಗಿ, ಮತ್ತೊಬ್ಬರಿಗೆ ಗೇಮ್ಸ್‌ಗಾಗಿ, ಇನ್ನೊಬ್ಬರಿಗೆ ಮನಂಜನೆಗಾಗಿ…. ಹೀಗೆ ಹಲವು ಉದ್ದೇಶಕ್ಕಾಗಿ ಫೋನ್‌ ಬಳಕೆಯಾಗುತ್ತದೆ. ಅದೇ ರೀತಿ, ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಕ್ಯಾಮೆರಾಗಳಾಗಿ ಬದಲಾಗಿವೆ. ಅದರಲ್ಲೂ ಹೈ ರೆಸೊಲ್ಯೂಷನ್ ಕ್ಯಾಮೆರಾಗಳಿಂದಾಗಿ ಸ್ಮಾರ್ಟ್‌ಫೋನ್‌ಗಳ ಖದರ್ ಬದಲಾಗಿದೆ. ಬಹಳಷ್ಟು ಮಂದಿ ಉತ್ತಮ ಕ್ಯಾಮೆರಾ ಫೋನ್‌ಗಳಿಗಾಗಿ ಹೆಚ್ಚಿನ ದುಡ್ಡು ವೆಚ್ಚ ಮಾಡಲು ಹೋಗುವುದಿಲ್ಲ. ಅಂಥವರಿಗಾಗಿ ಹಲವು ಕಂಪನಿಗಳು ಅತ್ಯುತ್ತಮ ಕ್ಯಾಮೆರಾಗಳನ್ನು ಹೊಂದಿರುವ ಫೋನ್‌ಗಳನ್ನು ಕಡಿಮೆ ರೇಟಿಗೆ ಮಾರಾಟ ಮಾಡುತ್ತವೆ(Best Budget Camera Phone). ಅಂಥ ಫೋನ್‌ಗಳ ಬಗ್ಗೆ ನಾವು ಇಲ್ಲಿ ಮಾಹಿತಿ ನೀಡಿದ್ದೇವೆ. ಸುಮಾರು 15 ಸಾವಿರ ರೂ. ಒಳಗಿನ ಹಾಗೂ 50 ಮೆಗಾ ಪಿಕ್ಸೆಲ್ ಕ್ಯಾಮೆರಾಗಳನ್ನು ಒಳಗೊಂಡಿರುವ ಬೆಸ್ಟ್ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲದೆ…

ಐಕ್ಯೂ ಜೆ6 ಲೈಟ್ 5ಜಿ (iQOO Z6 Lite 5G)

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಪಾಲು ಹೊಂದಿರುವ ಐಕ್ಯೂ ಸ್ಮಾರ್ಟ್‌ಫೋನ್‌ಗಳು ಗಮನ ಸೆಳೆಯುಂತಿವೆ. ಸುಮಾರು 13,999 ರೂ. ಬೆಲೆಯ ಐಕ್ಯೂ ಜೆ6 ಲೈಟ್ 5ಜಿ (iQOO Z6 Lite 5G) ಫೋನ್ ಕೂಡ 50 ಮೆಗಾ ಪಿಕ್ಸೆಲ್ ಮೇನ್ ಕ್ಯಾಮೆರಾವನ್ನು ಒಳಗೊಂಡಿದೆ. ಉಳಿದಂತೆ 2 ಮೆಗಾ ಪಿಕ್ಸೆಲ್ ಎರಡು ಕ್ಯಾಮೆರಾಗಳ ಸೆಟ್‌ಅಪ್ ಇದೆ. 5000mAh ಬ್ಯಾಟರಿ ಇದೆ.

ಪೋಕೋ ಎಂ5 (Poco M5)

ಬ್ಯಾಟರಿ, ಕ್ಯಾಮೆರಾ, ಪ್ರದರ್ಶನ ಸೇರಿ ಎಲ್ಲ ರೀತಿಯಿಂದಲೂ ಪೋಕೋ ಎಂ5 (Poco M5)
ಫೋನ್ ಅತ್ಯುತ್ತಮವಾಗಿದೆ ಎಂಬ ವಿಶ್ಲೇಷಣೆಗಳಿವೆ. ಈ ಫೋನ್ ಬೆಲೆ 14,499 ರೂ. 2 ಮೆಗಾ ಪಿಕ್ಸೆಲ್‌ನ ಎರಡು ಕ್ಯಾಮೆರಾಗಳೊಂದಿಗೆ ಮೇನ್ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಇದೆ. ಎಲ್ಲ ವಿವರಗಳನ್ನು ಕ್ಯಾಮೆರಾ ಸ್ಪಷ್ಟವಾಗಿ ದಾಖಲಿಸುತ್ತದೆ.

ಮೊಟೊ ಜಿ62 5ಜಿ (Moto G62 5G)

RAM ಮತ್ತು ಸ್ಟೋರೇಜ್ ದೃಷ್ಟಿಯಿಂದ ಹೈ ಎಂಡ್ ಫೋನ್‌ ಎನಿಸಿರುವ ಮೊಟೊ ಜಿ62 5ಜಿ ಸ್ಮಾರ್ಟ್‌ಫೋನ್ ಬೆಲೆ ಕೇವಲ 14,999 ರೂ. ಅದೇ ರೀತಿ, ಈ ಫೋನಿನ ಕ್ಯಾಮೆರಾ ಕೂಡ ಅದ್ಭುತವಾಗಿದೆ. ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 695 ಚಿಪ್‌ಸೆಟ ಇದೆ. ಇನ್ನುಳಿದಂತೆ ಈ ಫೋನಿನ ಒಟ್ಟಾರೆ ಪ್ರದರ್ಶನವೂ ಅತ್ಯುತ್ತಮವಾಗಿದೆ.

ರಿಯಲ್‌ಮಿ10(Realme10)

ಚೀನಾ ಮೂಲದ ರಿಯಲ್‌ಮಿ ಕಂಪನಿಯ ಹೊಸ ಸ್ಮಾರ್ಟ್‌ಫೋನ್ ಇದು. ಸುಮಾರು 13,999 ರೂ. ಬೆಲೆ ಈ ಸ್ಮಾರ್ಟ್‌ಫೋನ್‌ನಲ್ಲೂ ನೀವು 50 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಕಾಣಬಹುದು. ಜತೆಗೆ, ಮೀಡಿಯಾಹೆಲಿಯೋ ಜಿ99 ಚಿಪ್‌ಸೆಟ್‌ ಇದೆ. ಸೆಲ್ಫಿ ಕ್ಯಾಮೆರಾ ಕೂಡ ಸಖತ್ ಆಗಿದೆ.

ಇದನ್ನೂ ಓದಿ: Samsung no. 1: ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ಗೆ ಮತ್ತೆ ಅಗ್ರ ಸ್ಥಾನ: ಸಮೀಕ್ಷೆ

ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್23 5ಜಿ (Samsung Galaxy F23 5G)

ಸ್ನ್ಯಾಪ್‌ಡ್ರಾಗನ್ 750ಜಿ ಪ್ರೊಸೆಸರ್ ಹೊಂದಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್23 5ಜಿ ಫೋನ್‌ ಕೂಡ ಉತ್ತಮ ಫೋನ್ ಹೊಂದಿದೆ. ಅಂದ ಹಾಗೆ ಈ ಫೋನ್ ಬೆಲೆ ಹದಿನೈದು ಸಾವಿರಕ್ಕಿಂತಲೂ ಕೊಂಚ ಹೆಚ್ಚಿದೆ. ಅಂದರೆ, 15,999 ರೂ. ಇದೆ. ಇದು 4ಜಿಬಿ RAM ವೆರಿಯಂಟ್ ಫೋನ್ ಬೆಲೆ. ಇನ್ನೂ ಹೆಚ್ಚಿನ RAM ವೆರಿಯಂಟ್ ಖರೀದಿಸಿದರೆ ಬೆಲೆ ಕೂಡ ಹೆಚ್ಚಾಗಲಿದೆ. ಆದರೆ, ಈ ಫೋನ್‌ನಲ್ಲಿ ಪ್ರೈಮರಿ 50 ಮೆಗಾಪಿಕ್ಸೆಲ್ ಮತ್ತು ಅಲ್ಟ್ರಾವೈಡ್‌ಗಾಗಿ 8 ಮೆಗಾ ಪಿಕ್ಸೆಲ್ ಮ್ತತು 2 ಮೆಗಾಪಿಕ್ಸೆಲ್ ಮೈಕ್ರೊ ಲೆನ್ಸ್ ಕ್ಯಾಮೆರಾ ಒದಗಿಸಲಾಗಿದೆ. ಕಡಿಮೆ ಬೆಲೆಗೆ ಅತ್ಯುತ್ತಮ ಕ್ಯಾಮೆರಾ ಫೋನ್ ಬೇಕು ಎಂದಾದರೆ, ಈ ಫೋನ್ ಖರೀದಿಸಬಹುದು!

Exit mobile version