ಗ್ಯಾಜೆಟ್ಸ್
Best Budget Camera Phone: 15 ಸಾವಿರ ರೂ. ಒಳಗಿನ, 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಫೋನ್‌ಗಳು!
ಕಡಿಮೆ ಬೆಲೆಗೆ ಅತ್ಯುತ್ತಮ ಕ್ವಾಲಿಟಿಯ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ರಿಯಲ್‌ಮಿಯಿಂದ ಹಿಡಿದು ಸ್ಯಾಮ್ಸಂಗ್‌ವರೆಗೆ ಈ ಫೋನ್‌ಗಳನ್ನು ಕಾಣಬಹುದು. 50 ಮೆಗಾಪಿಕ್ಸೆಲ್ ಕ್ಯಾಮೆರಾ ಇರುವ ಈ ಫೋನುಗಳ್ನು 15 ಸಾವಿರ ರೂ.ಒಳಗೆ ಖರೀದಿಸಬಹುದು(Best Budget Camera Phone).
ಬೆಂಗಳೂರು: ಫೋನುಗಳು ಈಗ ಕೇವಲ ಸಂವಹನದ ಸಾಧನಗಳಾಗಿ ಉಳಿದಿಲ್ಲ. ಸ್ಮಾರ್ಟ್‌ಫೋನ್‌ಗಳಂತೂ ಮಾನವನ ನಿತ್ಯದ ಅಗತ್ಯಗಳಲ್ಲಿ ಒಂದಾಗಿ ಮಾರ್ಪಟ್ಟಿವೆ. ಪ್ರತಿಯೊಂದು ಕೆಲಸವನ್ನು ಸ್ಮಾರ್ಟ್‌ಫೋನ್ ಮೂಲಕವೇ ಮಾಡಬಹುದು. ಹಲವರಿಗೆ ಹಲವು ರೀತಿಯ ಅಗತ್ಯಗಳಿಗೆ ಸ್ಮಾರ್ಟ್‌ಫೋನ್‌ಗಳು ಬಳಕೆಯಾಗುತ್ತವೆ. ಕೆಲವೊಬ್ಬರಿಗೆ ಸಂವಹನಕ್ಕಾಗಿ, ಮತ್ತೊಬ್ಬರಿಗೆ ಗೇಮ್ಸ್‌ಗಾಗಿ, ಇನ್ನೊಬ್ಬರಿಗೆ ಮನಂಜನೆಗಾಗಿ…. ಹೀಗೆ ಹಲವು ಉದ್ದೇಶಕ್ಕಾಗಿ ಫೋನ್ ಬಳಕೆಯಾಗುತ್ತದೆ. ಅದೇ ರೀತಿ, ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಕ್ಯಾಮೆರಾಗಳಾಗಿ ಬದಲಾಗಿವೆ. ಅದರಲ್ಲೂ ಹೈ ರೆಸೊಲ್ಯೂಷನ್ ಕ್ಯಾಮೆರಾಗಳಿಂದಾಗಿ ಸ್ಮಾರ್ಟ್‌ಫೋನ್‌ಗಳ ಖದರ್ ಬದಲಾಗಿದೆ. ಬಹಳಷ್ಟು ಮಂದಿ ಉತ್ತಮ ಕ್ಯಾಮೆರಾ ಫೋನ್‌ಗಳಿಗಾಗಿ ಹೆಚ್ಚಿನ ದುಡ್ಡು ವೆಚ್ಚ ಮಾಡಲು ಹೋಗುವುದಿಲ್ಲ. ಅಂಥವರಿಗಾಗಿ ಹಲವು ಕಂಪನಿಗಳು ಅತ್ಯುತ್ತಮ ಕ್ಯಾಮೆರಾಗಳನ್ನು ಹೊಂದಿರುವ ಫೋನ್‌ಗಳನ್ನು ಕಡಿಮೆ ರೇಟಿಗೆ ಮಾರಾಟ ಮಾಡುತ್ತವೆ(Best Budget Camera Phone). ಅಂಥ ಫೋನ್‌ಗಳ ಬಗ್ಗೆ ನಾವು ಇಲ್ಲಿ ಮಾಹಿತಿ ನೀಡಿದ್ದೇವೆ. ಸುಮಾರು 15 ಸಾವಿರ ರೂ. ಒಳಗಿನ ಹಾಗೂ 50 ಮೆಗಾ ಪಿಕ್ಸೆಲ್ ಕ್ಯಾಮೆರಾಗಳನ್ನು ಒಳಗೊಂಡಿರುವ ಬೆಸ್ಟ್ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲದೆ…
ಐಕ್ಯೂ ಜೆ6 ಲೈಟ್ 5ಜಿ (iQOO Z6 Lite 5G)
ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಪಾಲು ಹೊಂದಿರುವ ಐಕ್ಯೂ ಸ್ಮಾರ್ಟ್‌ಫೋನ್‌ಗಳು ಗಮನ ಸೆಳೆಯುಂತಿವೆ. ಸುಮಾರು 13,999 ರೂ. ಬೆಲೆಯ ಐಕ್ಯೂ ಜೆ6 ಲೈಟ್ 5ಜಿ (iQOO Z6 Lite 5G) ಫೋನ್ ಕೂಡ 50 ಮೆಗಾ ಪಿಕ್ಸೆಲ್ ಮೇನ್ ಕ್ಯಾಮೆರಾವನ್ನು ಒಳಗೊಂಡಿದೆ. ಉಳಿದಂತೆ 2 ಮೆಗಾ ಪಿಕ್ಸೆಲ್ ಎರಡು ಕ್ಯಾಮೆರಾಗಳ ಸೆಟ್‌ಅಪ್ ಇದೆ. 5000mAh ಬ್ಯಾಟರಿ ಇದೆ.
ಪೋಕೋ ಎಂ5 (Poco M5)
ಬ್ಯಾಟರಿ, ಕ್ಯಾಮೆರಾ, ಪ್ರದರ್ಶನ ಸೇರಿ ಎಲ್ಲ ರೀತಿಯಿಂದಲೂ ಪೋಕೋ ಎಂ5 (Poco M5)
ಫೋನ್ ಅತ್ಯುತ್ತಮವಾಗಿದೆ ಎಂಬ ವಿಶ್ಲೇಷಣೆಗಳಿವೆ. ಈ ಫೋನ್ ಬೆಲೆ 14,499 ರೂ. 2 ಮೆಗಾ ಪಿಕ್ಸೆಲ್‌ನ ಎರಡು ಕ್ಯಾಮೆರಾಗಳೊಂದಿಗೆ ಮೇನ್ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಇದೆ. ಎಲ್ಲ ವಿವರಗಳನ್ನು ಕ್ಯಾಮೆರಾ ಸ್ಪಷ್ಟವಾಗಿ ದಾಖಲಿಸುತ್ತದೆ.
ಮೊಟೊ ಜಿ62 5ಜಿ (Moto G62 5G)
RAM ಮತ್ತು ಸ್ಟೋರೇಜ್ ದೃಷ್ಟಿಯಿಂದ ಹೈ ಎಂಡ್ ಫೋನ್ ಎನಿಸಿರುವ ಮೊಟೊ ಜಿ62 5ಜಿ ಸ್ಮಾರ್ಟ್‌ಫೋನ್ ಬೆಲೆ ಕೇವಲ 14,999 ರೂ. ಅದೇ ರೀತಿ, ಈ ಫೋನಿನ ಕ್ಯಾಮೆರಾ ಕೂಡ ಅದ್ಭುತವಾಗಿದೆ. ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 695 ಚಿಪ್‌ಸೆಟ ಇದೆ. ಇನ್ನುಳಿದಂತೆ ಈ ಫೋನಿನ ಒಟ್ಟಾರೆ ಪ್ರದರ್ಶನವೂ ಅತ್ಯುತ್ತಮವಾಗಿದೆ.
ರಿಯಲ್‌ಮಿ10(Realme10)
ಚೀನಾ ಮೂಲದ ರಿಯಲ್‌ಮಿ ಕಂಪನಿಯ ಹೊಸ ಸ್ಮಾರ್ಟ್‌ಫೋನ್ ಇದು. ಸುಮಾರು 13,999 ರೂ. ಬೆಲೆ ಈ ಸ್ಮಾರ್ಟ್‌ಫೋನ್‌ನಲ್ಲೂ ನೀವು 50 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಕಾಣಬಹುದು. ಜತೆಗೆ, ಮೀಡಿಯಾಹೆಲಿಯೋ ಜಿ99 ಚಿಪ್‌ಸೆಟ್ ಇದೆ. ಸೆಲ್ಫಿ ಕ್ಯಾಮೆರಾ ಕೂಡ ಸಖತ್ ಆಗಿದೆ.
ಇದನ್ನೂ ಓದಿ: Samsung no. 1: ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ಗೆ ಮತ್ತೆ ಅಗ್ರ ಸ್ಥಾನ: ಸಮೀಕ್ಷೆ
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್23 5ಜಿ (Samsung Galaxy F23 5G)
ಸ್ನ್ಯಾಪ್‌ಡ್ರಾಗನ್ 750ಜಿ ಪ್ರೊಸೆಸರ್ ಹೊಂದಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್23 5ಜಿ ಫೋನ್ ಕೂಡ ಉತ್ತಮ ಫೋನ್ ಹೊಂದಿದೆ. ಅಂದ ಹಾಗೆ ಈ ಫೋನ್ ಬೆಲೆ ಹದಿನೈದು ಸಾವಿರಕ್ಕಿಂತಲೂ ಕೊಂಚ ಹೆಚ್ಚಿದೆ. ಅಂದರೆ, 15,999 ರೂ. ಇದೆ. ಇದು 4ಜಿಬಿ RAM ವೆರಿಯಂಟ್ ಫೋನ್ ಬೆಲೆ. ಇನ್ನೂ ಹೆಚ್ಚಿನ RAM ವೆರಿಯಂಟ್ ಖರೀದಿಸಿದರೆ ಬೆಲೆ ಕೂಡ ಹೆಚ್ಚಾಗಲಿದೆ. ಆದರೆ, ಈ ಫೋನ್‌ನಲ್ಲಿ ಪ್ರೈಮರಿ 50 ಮೆಗಾಪಿಕ್ಸೆಲ್ ಮತ್ತು ಅಲ್ಟ್ರಾವೈಡ್‌ಗಾಗಿ 8 ಮೆಗಾ ಪಿಕ್ಸೆಲ್ ಮ್ತತು 2 ಮೆಗಾಪಿಕ್ಸೆಲ್ ಮೈಕ್ರೊ ಲೆನ್ಸ್ ಕ್ಯಾಮೆರಾ ಒದಗಿಸಲಾಗಿದೆ. ಕಡಿಮೆ ಬೆಲೆಗೆ ಅತ್ಯುತ್ತಮ ಕ್ಯಾಮೆರಾ ಫೋನ್ ಬೇಕು ಎಂದಾದರೆ, ಈ ಫೋನ್ ಖರೀದಿಸಬಹುದು!
ಗ್ಯಾಜೆಟ್ಸ್
HP Pavilion Aero 13 ಲ್ಯಾಪ್‌ಟಾಪ್ ಲಾಂಚ್, ಏನೆಲ್ಲ ವಿಶೇಷತೆಗಳಿವೆ? ಬೆಲೆ ಎಷ್ಟು?
ಭಾರತೀಯ ಮಾರುಕಟ್ಟೆಗೆ ಮತ್ತೊಂದು ಹೊಸ ಲ್ಯಾಪ್‌ಟಾಪ್ ಲಾಂಚ್ ಆಗಿದೆ. ಸಾಕಷ್ಟು ಹೊಸ ಫೀಚರ್ಸ್‌ಗಳೊಂದಿಗೆ HP Pavilion Aero 13 ಲ್ಯಾಪ್‌ಟ್ಯಾಪ್ ಗಮನ ಸೆಳೆಯುತ್ತಿದೆ.
ಬೆಂಗಳೂರು: ಎಚ್‌ಪಿ ಕಂಪನಿಯು ಭಾರತದಲ್ಲಿ ತನ್ನ ಹೊಸ ಪೆವಿಲಿಯನ್ ಏರೋ 13 (HP Pavilion Aero 13) ಲ್ಯಾಪ್‌ಟ್ಯಾಪ್‌ಗಳನ್ನು ಮಂಗಳಾರ ಬಿಡುಗಡೆ ಮಾಡಿದೆ. ಶಕ್ತಿಯುತ ಕಾರ್ಯಕ್ಷಮತೆಗಾಗಿ AMD Ryzen™ 7 ಪ್ರೊಸೆಸರ್ ಮತ್ತು Radeon™ ಗ್ರಾಫಿಕ್ಸ್ ಒಳಗೊಂಡಿದೆ. GenZ ಮತ್ತು ಈ ಸಹಸ್ರಮಾನದ ಆಧುನಿಕ ಗ್ರಾಹಕರಿಗಾಗಿ ಈ ಸಾಧನವನ್ನು ನಿರ್ಮಿಸಲಾಗಿದೆ. ಯಾವುದೇ ಸಮಯ ಅಥವಾ ಸ್ಥಳದಲ್ಲಿ ಉತ್ಪಾದಕವಾಗಿ ಕೆಲಸ ಮಾಡಲು ಮತ್ತು ಕಲಿಯಲು ಅನುವು ಮಾಡಿಕೊಡುತ್ತದೆ.
ಆಧುನಿಕ ಜಗತ್ತಿನಲ್ಲಿ, ಬಹುಮುಖವಾದ ಹಲವು ಕಾರ್ಯಗಳನ್ನು ಮಾಡಬಲ್ಲ, ಕೆಲಸ ಮತ್ತು ಕಲಿಕೆ ಎರಡನ್ನೂ ನಿಭಾಯಿಸಬಲ್ಲ ಸಾಧನಗಳನ್ನು ಗ್ರಾಹಕರು ಅರಸುತ್ತಿರುತ್ತಾರೆ. ಹೈಬ್ರಿಡ್ ಕಾರ್ಯಶೈಲಿಗೆ ಸರಿಹೊಂದುವಂತೆ ಈ ಸಾಧನಗಳು ಹಗುರವಾಗಿರಬೇಕು ಮತ್ತು ಯುವ ಪೀಳಿಗೆಯ ಆದ್ಯತೆಗಳನ್ನು ಪೂರೈಸುವಂತೆ ಆಕರ್ಷಕವಾಗಿರಬೇಕು. ಹೊಚ್ಚ-ಹೊಸ HP ಪೆವಿಲಿಯನ್ ಏರೋ 13 ಲ್ಯಾಪ್‌ಟಾಪ್ Wi-Fi6 ಜತೆಗೆ ವೇಗದ ಮತ್ತು ವಿಶ್ವಾಸಾರ್ಹ ಸಂಪರ್ಕವನ್ನು ಹೊಂದಿದೆ. 10.5 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಇದ್ದು, ಯಾವುದೇ ಸ್ಥಳದಿಂದ ಕೆಲಸ, ಬ್ರೌಸಿಂಗ್ ಮತ್ತು ಸ್ಟ್ರೀಮಿಂಗ್ ಮಾಡಲು ಸೂಕ್ತವಾಗಿದೆ.
400 ನಿಟ್ಸ್ ಪ್ರಕಾಶಮಾನವಾದ ಮತ್ತು 16:10 ಆಕಾರ ಅನುಪಾತದಗ ಸ್ಕ್ರೀನ್ ಬಳಕೆದಾರರಿಗೆ ತಲ್ಲೀನಗೊಳಿಸುವ ವೀಕ್ಷಣೆಯ ಅನುಭವವನ್ನು ನೀಡುತ್ತದೆ. HP ಪೆವಿಲಿಯನ್ ಏರೋ 13 ಕೇವಲ 970 ಗ್ರಾಂ ಭಾರವಿದ್ದು, GenZ ಗಳು ಮತ್ತು ಈ ಸಹಸ್ರಮಾನದ ಯುವಜನರಿಗೆ ಪೋರ್ಟಬಿಲಿಟಿಯನ್ನು ಸಕ್ರಿಯಗೊಳಿಸುತ್ತದೆ. ಇದು ಅವರ ಶೈಲಿ ಮತ್ತು ಜೀವನಶೈಲಿಗೆ ಹೊಂದಿಕೊಳ್ಳಲು ಮೂರು ವಿಶಿಷ್ಟ ಬಣ್ಣಗಳಲ್ಲಿದೆ – ಪೇಲ್ ರೋಸ್ ಗೋಲ್ಡ್, ವಾರ್ಮ್ ಗೋಲ್ಡ್ ಮತ್ತು ನ್ಯಾಚುರಲ್ ಸಿಲ್ವರ್.
HP ಇಂಡಿಯಾ ಪರ್ಸನಲ್ ಸಿಸ್ಟಮ್ಸ್ ಹಿರಿಯ ನಿರ್ದೇಶಕ ವಿಕ್ರಮ್ ಬೇಡಿ ಮಾತನಾಡಿ, “ಪಿಸಿಗಳು ಹೈಬ್ರಿಡ್ ಪರಿಸರದಲ್ಲಿ ಜನರ ಜೀವನದ ಪ್ರಮುಖ ಅಂಶಗಳಾಗುತ್ತಿವೆ. ಆಧುನಿಕ ಜಗತ್ತಿನಲ್ಲಿ ಬಹುಮುಖ ಮತ್ತು ಶಕ್ತಿಯುತ ಕಂಪ್ಯೂಟಿಂಗ್ ಪರಿಹಾರಗಳಿಗಾಗಿ ವೃದ್ಧಿಸುತ್ತಿರುವ ಬೇಡಿಕೆಯನ್ನು ಪೂರೈಸಲು HP ವಿನ್ಯಾಸಗೊಳಿಸಿದ ಹೊಸ ಪೆವಿಲಿಯನ್ ಏರೋ 13 ಲ್ಯಾಪ್‌ಟಾಪ್ ಪರಿಚಯಿಸಲು ನಾವು ಹೆಮ್ಮೆಪಡುತ್ತೇವೆ. ಇದು ಅಸಾಧಾರಣ ಕಾರ್ಯಕ್ಷಮತೆ ಮತ್ತು ಚಲನಶೀಲತೆಯನ್ನು ನೀಡುತ್ತದೆ, ಬಳಕೆದಾರರು ಪ್ರಯಾಣಿಸುತ್ತಿರುವಾಗಲೂ ಉತ್ಪಾದಕವಾಗಿರಲು ಮತ್ತು ಮನೋರಂಜನೆಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ. HP ಪೆವಿಲಿಯನ್ ಏರೋ 13 ಆಕರ್ಷಕವಾದ ಪ್ರೀಮಿಯಂ ಲ್ಯಾಪ್‌ಟಾಪ್ ಆಗಿದೆ. ಕೆಲಸ ಮತ್ತು ಗೇಮಿಂಗ್ – ಎರಡೂ ವಿಷಯಗಳಲ್ಲಿ ಬಳಕೆದಾರರಿಗೆ ಅಸಾಧಾರಣವಾಗಿ ಆಪ್ತವಾಗುತ್ತದೆ.
ಹೈಬ್ರಿಡ್ ಪರಿಸರಕ್ಕೆ ಅನುಗುಣವಾಗಿ ಉನ್ನತ ದರ್ಜೆಯ ಕಾರ್ಯಕ್ಷಮತೆಯನ್ನು ನೀಡುವಂತೆ ಹಗುರವಾದ ಆದರೆ ಶಕ್ತಿಶಾಲಿಯಾದ HP ಪೆವಿಲಿಯನ್ ಏರೋ 13 ರೂಪಿಸಲಾಗದೆ. ಕೆಲಸ ಮಾಡಲು ಅಥವಾ ಸ್ನೇಹಿತರ ಜತೆಗೆ ಸ್ಪಷ್ಟವಾದ ವೀಡಿಯೋ ಕರೆಗಳನ್ನು ಮಾಡಲು ಮತ್ತು ಅನಗತ್ಯವಾದ ಹಿನ್ನೆಲೆಯ ಗದ್ದಲವನ್ನು ನಿವಾರಿಸುವ ಸೌಕರ್ಯವನ್ನು ಹೊಂದಿದೆ. 100% sRGB ಸಹಿತವಾದ ವಿಶಾಲವಾದ ಕಲರ್ ಪ್ಯಾಲೆಟ್ ವೆಬ್‌ನಲ್ಲಿ ಸರ್ಫ್ ಮಾಡುವಾಗ ಮತ್ತು ವೀಡಿಯೋಗಳನ್ನು ಸ್ಟ್ರೀಮ್ ಮಾಡುವಾಗ ಹೆಚ್ಚು ರೋಮಾಂಚಕ ಚಿತ್ರಗಳ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತದೆ. ಫ್ಲಿಕರ್-ರಹಿತವಾದ ಪರದೆಯು ದಿನವಿಡೀ ಕೆಲಸ ಮಾಡಲು ಮತ್ತು ರಾತ್ರಿಯಿಡೀ ಆಟವಾಡಲು ಸೌಕರ್ಯ ನೀಡುವುದು HP ಪೆವಿಲಿಯನ್ ಏರೋ ವಿಶೇಷತೆಯಾಗಿದೆ. ಹೆಚ್ಚುವರಿಯಾಗಿ, 2.5k ರೆಸಲ್ಯೂಶನ್ ಸ್ಕ್ರೀನ್ ಮೇಲೆ ತೀಕ್ಷ್ಣವಾದ ಚಿತ್ರಗಳು ಮತ್ತು ಪಠ್ಯಗಳನ್ನು ಮೂಡಿಸುತ್ತದೆ. ಇದನ್ನು 4-ಬದಿಗಳ ಕಿರಿದಾದ ಅಂಚಿನ ಸ್ಕ್ರೀನ್ ವೀಕ್ಷಣೆಗೆ ಇರುವ ಎಲ್ಲ ಅಡ್ಡಿಗಳನ್ನೂ ನಿವಾರಿಸುತ್ತದೆ.
ಸುಸ್ಥಿರತೆ ಮತ್ತು ಪರಿಸರ ರಕ್ಷಣೆಗೆ HP ಯ ಬದ್ಧತೆಗೆ ಅನುಗುಣವಾಗಿ HP ಪೆವಿಲಿಯನ್ ಏರೋ 13 ವಿನ್ಯಾಸಗೊಳಿಸಲಾಗಿದೆ. ಗ್ರಾಹಕರು ಬಳಸಿದ ಮರುಬಳಕೆಯ ಮತ್ತು ಸಾಗರದಿಂದ ಸಂಗ್ರಹಿಸಿದ ಪ್ಲಾಸ್ಟಿಕ್‌ನಿಂದ ನಿರ್ಮಿಸಲಾಗಿದೆ. VOC ಹೊರಸೂಸುವಿಕೆ ತಗ್ಗಿಸಲು ನೀರು-ಆಧಾರಿತ ಬಣ್ಣವನ್ನು ಬಳಸಲಾಗಿದೆ.
HP ಪೆವಿಲಿಯನ್ ಏರೋ 13 ವಿಶೇಷತೆಗಳೇನು?
ಡಿಸ್‌ಪ್ಲೇ ಹೇಗಿದೆ?
• 16:10 ಆಕಾರ ಅನುಪಾತದೊಂದಿಗೆ HP ಯ ಪ್ರಥಮ ಪೆವಿಲಿಯನ್ ಲ್ಯಾಪ್‌ಟಾಪ್
• ತಡೆರಹಿತ ಬ್ರೌಸಿಂಗ್ ಅನುಭವಕ್ಕಾಗಿ 400 ನಿಟ್‌ಗಳಷ್ಟು ಪ್ರಕಾಶಮಾನ ಡಿಸ್‌ಪ್ಲೇ
• ಫ್ಲಿಕರ್-ರಹಿತ ಪರದೆ
• ವೀಕ್ಷಣೆಯ ಅಡ್ಡಿಗಳನ್ನು ನಿವಾರಿಸಲು 4-ಬದಿ ಕಿರಿದಾದ ಅಂಚಿನ ಡಿಸ್‌ಪ್ಲೇ
• ತೀಕ್ಷ್ಣವಾದ ಚಿತ್ರಗಳು ಮತ್ತು ಪಠ್ಯಕ್ಕಾಗಿ 2.5k ರೆಸಲ್ಯೂಶನ್
• ಬಿಸಿಲಿನಲ್ಲೂ ಬ್ರೌಸಿಂಗ್ ಮಾಡುವುದಕ್ಕಾಗಿ 400 ನಿಟ್ಸ್ ಪ್ರಕಾಶ
• 100% sRGB ಯೊಂದಿಗೆ ವಿಶಾಲ ಕಲರ್ ಪ್ಯಾಲೆಟ್
ಕಾರ್ಯಕ್ಷಮತೆ
• ಸುಗಮ ಕಾರ್ಯಕ್ಷಮತೆಗಾಗಿ AMD Ryzen™ 7000 ಸರಣಿಯ ಪ್ರೊಸೆಸರ್, Radeon™ ಗ್ರಾಫಿಕ್ಸ್
• Wi-Fi 6 ಜೊತೆಗೆ ವಿಶ್ವಾಸಾರ್ಹ ಮತ್ತು ವೇಗದ ಸಂಪರ್ಕ
• ತಡೆರಹಿತ ಕಲಿಕೆ ಮತ್ತು ಕೆಲಸಕ್ಕಾಗಿ 10.5 ಗಂಟೆಗಳ ಬ್ಯಾಟರಿ ಬಾಳಿಕೆ
• ಉತ್ತಮ ವೀಡಿಯೊ ಕರೆಗಳಿಗಾಗಿ AI ನಾಯ್ಸ್ ರಿಮೂವಲ್ ಸೌಕರ್ಯ
• ಕಾರ್ಯಗಳ ಬೇಡಿಕೆಯನ್ನು ನಿರ್ವಹಿಸಲು DDR5 RAM
ವಿನ್ಯಾಸ
• ಕೇವಲ 970 ಗ್ರಾಂ ಭಾರವಿದ್ದು, ಪೋರ್ಟಬಿಲಿಟಿಯನ್ನು ಖಚಿತಪಡಿಸುತ್ತದೆ.
• ಮೂರು ಬಣ್ಣಗಳಲ್ಲಿ ಲಭ್ಯವಿದೆ – ರೋಸ್ ಪೇಲ್ ಗೋಲ್ಡ್, ವಾರ್ಮ್ ಗೋಲ್ಡ್ ಮತ್ತು ನ್ಯಾಚುರಲ್ ಸಿಲ್ವರ್
ಬೆಲೆ ಮತ್ತು ಲಭ್ಯತೆ
• HP Pavilion Aero 13 (Ryzen 5 ಸಹಿತ) 72,999 ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಿದೆ
• HP Pavilion Aero 13 (Ryzen 7 ಸಹಿತ) 1TB SSD 82,999 ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.
ಗ್ಯಾಜೆಟ್ಸ್
Honor 70 Lite 5G ಸ್ಮಾರ್ಟ್‌ಫೋನ್ ಲಾಂಚ್, ಹೊಸ ಫೀಚರ್ಸ್‌ಗಳೇನು?
ಚೀನಾ ಮೂಲದ ಹಾನರ್ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಹಾನರ್ 70 ಲೈಟ್ 5ಜಿ ಫೋನ್(Honor 70 Lite 5G), ಬ್ಯಾಟರಿ, ಕ್ಯಾಮೆರಾ ಹಾಗೂ ಇತರ ಫೀಚರ್ಸ್‌ಗಳಿಂದಾಗಿ ಗಮನ ಸೆಳೆಯುತ್ತಿದೆ.
ನವದೆಹಲಿ: ಇತ್ತೀಚೆಗಷ್ಟೇ ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಹಾನರ್ ಕಂಪನಿಯು ಮ್ಯಾಜಿಕ್ 5 ಸಿರೀಸ್‌ನಲ್ಲಿ ಮ್ಯಾಜಿಕ್ 5 ಮತ್ತು ಮ್ಯಾಜಿಕ್ 5 ಪ್ರೋ ಸ್ಮಾರ್ಟ್‌ಫೋನ್ ಲಾಂಚ್ ಮಾಡಿತ್ತು. ಇವುಗಳ ಜತೆಗೆ ಕಂಪನಿಯ ಮೊದಲ ಫೋಲ್ಡೇಬಲ್ ಸ್ಮಾರ್ಟ್‌ಫೋನ್ ಹಾನರ್ ಮ್ಯಾಜಿಕ್ ವಿಎಸ್ ಕೂಡ ಲಾಂಚ್ ಆಗಿತ್ತು. ಈಗ ಕಂಪನಿಯು ಜಾಗತಿಕ ಮಾರುಕಟ್ಟೆಗೆ ಹಾನರ್ 70 ಲೈಟ್ 5ಜಿ (Honor 70 Lite 5G) ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ.
ಈ ಹಾನರ್ 70 ಲೈಟ್ 5ಜಿ ಸ್ಮಾರ್ಟ್‌ಫೋನ್ ಒಂದೇ ವೆರಿಯಂಟ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ. 4 ಜಿಬಿ RAM ಹಾಗೂ 128 ಜಿಬಿ ಸ್ಟೋರೇಜ್ ವೆರಿಯಂಟ್ ಫೋನ್ ಬೆಲೆ 199 ಪೌಂಡ್ ಎಂದು ಹೇಳಲಾಗುತ್ತಿದೆ. ಅಂದರೆ, ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಅದು ಅಂದಾಜು 20 ಸಾವಿರ ರೂ. ಆಗಬಹುದು. ಭಾರತೀಯ ಮಾರುಕಟ್ಟೆಗೆ ಯಾವಾಗ ಈ ಫೋನ್ ಲಾಂಚ್ ಆಗಲಿದೆ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ.
ಟೈಟಾನಿಯಂ ಸಿಲ್ವರ್, ಓಷನ್ ಬ್ಲೂ, ಮಿಡ್ನೈಟ್ ಬ್ಲಾಕ್ ಎಂಬ ಮೂರು ಬಣ್ಣಗಳ ಆಯ್ಕೆಯಲ್ಲಿ ಈ ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಸಿಗಲಿದೆ. ಆದರೆ, ಈ ಮೂರು ಬಣ್ಣಗಳ ಫೋನ್ ಎಲ್ಲ ಮಾರುಕಟ್ಟೆಗಳಲ್ಲಿ ಸಿಗುತ್ತದೆ ಎಂಬುದಕ್ಕೆ ಗ್ಯಾರಂಟಿ ಇಲ್ಲ. ಈ ಬಗ್ಗೆ ವೆಬ್‌ಸೈಟ್‌ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
Honor 70 Lite 5G ವಿಶೇಷತೆಗಳೇನು?
Honor 70 Lite 5G ಸ್ಮಾರ್ಟ್‌ಫೋನ್ ಡುಯಲ್ ಸಿಮ್‌ಗೆ ಸಪೋರ್ಟ್ ಮಾಡುತ್ತದೆ. ಮ್ಯಾಜಿಕ್ ಯುಐ ಜತೆ ಆಂಡ್ರಾಯ್ಡ್ 12 ಸಂಯೋಜಿಸಲಾಗಿದೆ. 6.5 ಇಂಚ್ ಎಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್‌ಪ್ಲೇ ಇದ್ದು, Adreno 619 GPU ಜತೆ Snapdragon 480+ ಪ್ರೊಸೆಸರ್ ನೀಡಲಾಗಿದೆ. 4 ಜಿಬಿ RAM ಇದೆ.
ಕ್ಯಾಮೆರಾ ಹೇಗಿದೆ?
Honor 70 Lite 5G ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್ ಅಪ್ ಇದೆ. ಮೂರು ಕ್ಯಾಮೆರಾಗಳನ್ನು ಚೌಕಾಕಾರದ ಡಿಸೈನ್‌ನಲ್ಲಿ ಸೆಟ್ ಅಪ್ ಮಾಡಲಾಗಿದೆ. ಮೂರು ಕ್ಯಾಮೆರಾಗಳ ಪೈಕಿ ಮೊದಲನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾವಾಗಿದೆ. ಉಳಿದೆರಡು ಕ್ಯಾಮೆರಾಗಳು 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳಾಗಿವೆ. ಫೋನ್ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮಾರವನ್ನು ಸೆಲ್ಫಿಗಾಗಿ ನೀಡಲಾಗಿದೆ. ಚಾಟ್ ಮತ್ತು ವಿಡಿಯೋ ಕರೆಗಳಿಗಾಗಿ ಬಳಸಿಕೊಳ್ಳಬಹುದು.
ಇದನ್ನೂ ಓದಿ: ಸ್ಮಾರ್ಟ್‌ಫೋನ್ ಕಳೆದು ಹೋಗಿದೆಯೇ? IMEI Number ಮೂಲಕ ಟ್ರ್ಯಾಕ್ ಅಥವಾ ಬ್ಲಾಕ್ ಮಾಡಬಹುದು!
5000mAh ಬ್ಯಾಟರಿ ಇದ್ದು, 122.5 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಫೇಸ್ ಅನ್‌ಲಾಕ್ ಇದ್ದು, ಫೋನ್ ಬದಿಯಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಇದೆ. 128 ಜಿಬಿ ಇಂಟರ್ನಲ್ ಸ್ಟೋರೇಜ್ ಇದೆ. ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ, 5G, Wi-Fi 802.11ac, ಬ್ಲೂಟೂತ್ 5.1, GPS, USB ಟೈಪ್-C ಪೋರ್ಟ್, NFC, OTG ಮತ್ತು 3.5mm ಆಡಿಯೋ ಜ್ಯಾಕ್ ಸೌಲಭ್ಯಗಳಿವೆ.
ಗ್ಯಾಜೆಟ್ಸ್
WhatsApp: ಡಿಜಿಲಾಕರ್‌ನಲ್ಲಿರುವ ಆಧಾರ್, ಪಾನ್, ಡಿಎಲ್ ವಾಟ್ಸಾಪ್ ಮೂಲಕ ಡೌನ್ಲೋಡ್ ಮಾಡುವುದು ಹೇಗೆ?
WhatsApp: ಡಿಜಿಲಾಕರ್ ಆ್ಯಪ್ (DigiLocker) ಭಾರತ ಸರ್ಕಾರ ನಾಗರಿಕರಿಗೆ ಒದಗಿಸಿರುವ ಅಧಿಕೃತ ಡಿಜಿಟಲ್ ವೇದಿಕೆಯಾಗಿದೆ. ಈ ಆ್ಯಪ್‌ನಲ್ಲಿ ಸ್ಟೋರ್ ಮಾಡಲಾಗಿರುವ ಡಾಕ್ಯುಮೆಂಟ್ಸ್ ಬಳಕೆದಾರರು ವಾಟ್ಸಾಪ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಅದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.
ಬೆಂಗಳೂರು, ಕರ್ನಾಟಕ: ಡಿಜಿಲಾಕರ್ (DigiLocker) ಬಗ್ಗೆ ಎಲ್ಲರಿಗೂ ಗೊತ್ತೇ ಇರುತ್ತದೆ. ಸ್ಮಾರ್ಟ್‌ಫೋನ್ ಬಳಕೆದಾರರ ಈ ಡಿಜಿಲಾಕರ್ ಆ್ಯಪ್ ಬಳಸುತ್ತಿರುತ್ತಾರೆ. ಡ್ರೈವಿಂಗ್ ಲೆಸೆನ್ಸ್, ಪಾನ್ ಕಾರ್ಡ್, ಆಧಾರ್ ಸೇರಿದಂತೆ ಎಲ್ಲವನ್ನೂ ಡಿಜಿಟಲ್ ಆಗಿ ಸ್ಟೋರ್ ಮಾಡಲು ಇದು ಅವಕಾಶ ಕಲ್ಪಿಸುತ್ತದೆ. ಡಿಜಿಲಾಕರ್ ಕೇಂದ್ರ ಸರ್ಕಾರದ ಪ್ರಾಯೋಜಿತ ಸೇವೆಯಾದ್ದರಿಂದ ಅದಕ್ಕೆ ಅಧಿಕೃತ ಮಾನ್ಯತೆ ಇದೆ. ಈ ಸಂಗತಿಗಳು ಬಹುತೇಕರಿಗೆ ಗೊತ್ತೇ ಇರುತ್ತದೆ. ಆದರೆ ಗೊತ್ತಿಲ್ಲದಿರುವ ಸಂಗತಿಯನ್ನು ನಿಮಗೆ ಹೇಳುತ್ತೇವೆ ಬನ್ನಿ…(WhatsApp)
ಡಿಜಿಲಾಕರ್ ತನ್ನ ಡಿಜಿಟಲ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಒದಗಿಸಿದ ಭಾರತೀಯ ಡಿಜಿಟೈಸೇಶನ್ ಆನ್‌ಲೈನ್ ಸೇವೆಯಾಗಿದೆ. ಹಾಗಾಗಿ, ಡಿಜಿಲಾಕರ್ ಆ್ಯಪ್ ಬಳಕೆ ಡಿಜಿಟಲ್ ಅಧಿಕೃತೆಯನ್ನು ಸಾರುತ್ತದೆ. ಡಿಜಿಲಾಕರ್‌ನಲ್ಲಿರುವ ನಿಮ್ಮ ಡಾಕ್ಯುಮೆಂಟ್‌ಗಳನ್ನು ವಾಟ್ಸಾಪ್ ಮೂಲಕ ಪಡೆದುಕೊಳ್ಳಬಹುದು!
ಯೆಸ್… ಡಿಜಿಲಾಕರ್ ಆ್ಯಪ್ ಅಕ್ಸೆಸ್ ಮಾಡದೇ, ವಾಟ್ಸಾಪ್ ಮೂಲಕವೇ ಡಾಕ್ಯುಮೆಂಟ್ ಪಡೆದುಕೊಂಡು ಟೈಮ್ ಉಳಿತಾಯ ಮಾಡಬಹುದು ಮತ್ತು ಇದು ತುಂಬ ಈಜೀ ಕೂಡ. ಹಾಗಿದ್ದರೆ, ವಾಟ್ಸಾಪ್ ಮೂಲಕ ಡಿಜಿಲಾಕರ್‌ನಿಂದ ಡಾಕ್ಯುಮೆಂಟ್ ಪಡೆದುಕೊಳ್ಳಬಹುದು ನೋಡೋಣ ಬನ್ನಿ. ಆದರೆ, ಅದಕ್ಕಿಂತ ಮೊದಲು ಡಿಜಿಲಾಕರ್ ಅಂದ್ರೆ ಏನು ತಿಳಿದುಕೊಳ್ಳೋಣ.
ಏನಿದು ಡಿಜಿಲಾಕರ್?
ಭಾರತ ಸರ್ಕಾರವು ಡಿಜಿಟಲ್ ಇಂಡಿಯಾ ಯೋಜನೆಯಡಿ ಒದಗಿಸಿದ ಒಂದು ಡಿಜಿಟಲ್ ಸೇವೆಯಾಗಿದೆ. ಈ ಸೇವೆಯನ್ನು ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಇನ್ಫಾರ್ಮೇಷನ್ ಆ್ಯಂಡ್ ಟೆಕ್ನಾಲಜಿ ಸಚಿವಾಲಯವು ನಿರ್ವಹಣೆ ಮಾಡುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ನಾಗರಿಕರ ಅಗತ್ಯ ದಾಖಲೆಗಳ ಡಿಜಿಟಲ್ ಸಂಗ್ರಹಕ್ಕೆ ಸರ್ಕಾರವೇ ಅಧಿಕೃತವಾಗಿ ಒದಗಿಸಿದ ಡಿಜಿಟಲ್ ವೇದಿಕೆಯೇ ಡಿಜಿಲಾಕರ್.
ವಾಟ್ಸಾಪ್ ಮೂಲಕ ಡಾಕ್ಯುಮೆಂಟ್ಸ್ ಪಡೆದುಕೊಳ್ಳುವುದು ಹೀಗೆ…
ಮೊದಲಿಗೆ 9013151515 ನಂಬರ್ ಅನ್ನು ನಿಮ್ಮ ಮೊಬೈಲ್ ಮೈಗೌ ಹೆಲ್ಪ್ ಡೆಸ್ಕ್(MyGov Helpdesk) ಎಂದು ಸೇವ್ ಮಾಡಿಕೊಳ್ಳಿ. ಕೆಲವೊಮ್ಮೆ ನಿಮಗೆ ಗೊತ್ತಿಲ್ಲದೇ ಈ ನಂಬರ್, ನಿಮ್ಮ ಫೋನಿನಲ್ಲಿ ವಾಟ್ಸಾಪ್ ಅಲರ್ಟ್ ಎಂಬ ಹೆಸರಿನಲ್ಲಿ ಸೇವ್ ಆಗಿರುವ ಸಾಧ್ಯತೆಯೂ ಇರುತ್ತದೆ. ಗಮನಿಸಿ.
ನಂಬರ್ ಸೇವ್ ಮಾಡಿದ ಬಳಿಕ, ವಾಟ್ಸಾಪ್ ತೆರೆಯರಿ ಮತ್ತು ಸರ್ಚ್‌ನಲ್ಲಿ ಮೈಗೌ ಹೆಲ್ಪ್ ಡೆಸ್ಕ್ ಎಂದು ಸರ್ಚ್ ಮಾಡಿ. ಆಗ ಚಾಟ್‌ನಲ್ಲಿ ಡಿಜಿಲಾಕರ್ ಎಂದು ಟೈಪ್ ಮಾಡಿ. ತಕ್ಷಣವೇ ನಿಮಗೆ ನಮಸ್ತೆ ಅಥವಾ ಹಾಯ್ ಎಂಬ ಮೆಸೇಜ್ ಬರುತ್ತದೆ. ಆಗ, ಲಭ್ಯವಿರುವ ಆಯ್ಕೆಗಳು ಕಾಣಿಸುತ್ತವೆ. ನೀವು ಡಿಜಿಲಾಕರ್ ಖಾತೆಯನ್ನು ಹೊಂದಿದ್ದಿರಾ ಅಂತಾ ಕೇಳುತ್ತದೆ. ಆ ಪ್ರಶ್ನೆಗೆ ಯೆಸ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಇದಕ್ಕೂ ಮೊದಲು ನೀವು ಮೈಗೌ(MyGov)ನಲ್ಲಿ ನೋಂದಣಿಯಾಗಿದ್ದಿರಾ ಎಂದು ಕೇಳುತ್ತದೆ. ಒಂದೊಮ್ಮೆ ಇಲ್ಲ ಎಂದಾದರೆ, ಚಾಟ್‌ನಲ್ಲಿ ಕೇಳುವ ಅಂದರೆ, ನಿಮ್ಮ ಹೆಸರು, ನಿಮ್ಮ ರಾಜ್ಯ ಇತ್ಯಾದಿ ಮಾಹಿತಿಯನ್ನು ಕೇಳುತ್ತದೆ. ಅದಕ್ಕೆ ಆನ್ಸರ್ ಮಾಡಿ. ಬಳಿಕ ಒಟಿಪಿ ಬರುತ್ತದೆ. ಅದನ್ನು ಚಾಟ್ ಬಾಕ್ಸ್‌ನಲ್ಲಿ ಮೆನ್ಷನ್ ಮಾಡಿದ್ರೆ ಅಲ್ಲಿಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಬಳಿಕ, ವಾಟ್ಸಾಪ್ ಚಾಟ್‌ನಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಲು ಕೇಳುತ್ತದೆ. ಆಗ ನಿಮ್ಮ 12 ಸಂಖ್ಯೆಯುಳ್ಳ ಆಧಾರ್ ನಂಬರ್ ನಮೂದಿಸಿ. ಬಳಿಕ ನೋಂದಾಯಿತ ನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ. ಆಧಾರ್‌ನೊಂದಿಗೆ ಲಿಂಕ್ ಆಗಿರುವ ನಿಮ್ಮ ಎಲ್ಲ ಡಾಕ್ಯುಮೆಂಟ್ ಪಡೆಯಲು ಈ ಒಟಿಪಿಯನ್ನು ನಮೂದಿಸಬೇಕಾಗುತ್ತದೆ.
ಅಂತಿಮವಾಗಿ ನಿಮಗೆ ಬೇಕಾಗಿರುವ ಡಾಕ್ಯುಮೆಂಟ್ ಮೇಲೆ ಕ್ಲಿಕ್ ಮಾಡಿ ಮತ್ತು ಡೌನ್‌ಲೋಡ್ ಮಾಡಿಕೊಳ್ಳಿ. ವಾಟ್ಸಾಪ್ ಮೂಲಕ ಡಿಜಿಲಾಕರ್ ಡಾಕ್ಯುಮೆಂಟ್ ಪಡೆದುಕೊಳ್ಳುವುದರಿಂದ ನಿಮ್ಮ ಸಮಯ ಉಳಿತಾಯವಾಗುತ್ತದೆ. ಅಲ್ಲದೇ ಅತ್ಯಂತ ಸರಳವಾಗಿ ದಾಖಲೆಪತ್ರಗಳನ್ನು ಪಡೆದುಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ.
ಕರ್ನಾಟಕ
ಈಗ ಕಾರವಾರ, ಹಾವೇರಿ, ರಾಣೆಬೆನ್ನೂರು ನಗರಗಳಲ್ಲಿ Jio True 5G ಸೇವೆ ಲಭ್ಯ
ಕರ್ನಾಟಕದ ಹಾವೇರಿ(haveri), ರಾಣೆಬೆನ್ನೂರು (Ranebennur) ಮತ್ತು ಕಾರವಾರಗಳಲ್ಲಿ(karwar) ರಿಲಯನ್ಸ್ ತನ್ನ ಜಿಯೋ 5ಜಿ ಸೇವೆಯನ್ನು ಆರಂಭಿಸಿದೆ. ಇದರೊಂದಿಗೆ ದೇಶಾದ್ಯಂತ ಒಟ್ಟು 365 ನಗರಗಳಲ್ಲಿ ಈಗ ಜಿಯೋ ಟ್ರೂ 5ಜಿ ಸೇವೆ ದೊರೆಯುತ್ತಿದೆ(Jio True 5G).
ಬೆಂಗಳೂರು, ಕರ್ನಾಟಕ: ರಿಲಯನ್ಸ್ ಜಿಯೋ ಈಗ ಕಾರವಾರ(karwar), ರಾಣೆಬೆನ್ನೂರು(Ranebennur), ಹಾವೇರಿಯಲ್ಲಿ (haveri) ಜಿಯೋ ಟ್ರೂ 5ಜಿ ಸೇವೆ ಮಾರ್ಚ್ 15ರಿಂದ ಆರಂಭಿಸಿದೆ(Jio True 5G). ಕರ್ನಾಟಕದ ಈ 3 ನಗರ ಸೇರಿದಂತೆ ದೇಶದ ಹತ್ತು ರಾಜ್ಯಗಳ, ಒಟ್ಟು 34 ಹೊಸ ನಗರಗಳಲ್ಲಿ ತನ್ನ ಟ್ರೂ 5G ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ರಿಲಯನ್ಸ್ ಜಿಯೋದಿಂದ ಟ್ರೂ 5ಜಿ ಸೇವೆಗಳನ್ನು ಆರಂಭಿಸಿದ ಇತರ ನಗರಗಳು ಹೀಗಿವೆ ಆಂಧ್ರಪ್ರದೇಶದ ಅಮಲಾಪುರಂ, ಧರ್ಮಾವರಂ, ಕವಲಿ, ತನುಕು, ತುನಿ, ವಿನುಕೊಂಡ, ಹರಿಯಾಣದ ಭಿವಾನಿ, ಜಿಂದ್, ಕೈತಾಲ್, ರೇವಾರಿ, ರೇವಾರಿ, ಹಿಮಾಚಲ ಪ್ರದೇಶದ ಧರ್ಮಶಾಲಾ, ಕಾಂಗ್ರಾ, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ, ಕಥುವಾ, ಕತ್ರಾ, ಸೋಪೋರ್, ಕೇರಳದ ಅಟ್ಟಿಂಗಲ್, ಮೇಘಾಲಯದ ತುರಾ, ಒಡಿಶಾದ ಭವಾನಿಪಟ್ನಾ, ಜತಾನಿ, ಖೋರ್ಧಾ, ಸುಂದರ್‌ಗಢ, ತಮಿಳುನಾಡಿನ ಅಂಬೂರ್, ಚಿದಂಬರಂ , ನಾಮಕ್ಕಲ್, ಪುದುಕೋಟ್ಟೈ, ರಾಮನಾಥಪುರಂ, ಶಿವಕಾಶಿ, ತಿರುಚೆಂಗೋಡ್, ವಿಲುಪ್ಪುರಂ ಹಾಗೂ ತೆಲಂಗಾಣದ ಸೂರ್ಯಪೇಟ್ ನಲ್ಲಿ ಲಭ್ಯ ಇದೆ. ಇದರೊಂದಿಗೆ ದೇಶದ 365 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳು ಲಭ್ಯ ಆಗಲಿವೆ.
ಅಂದಹಾಗೆ, ಈ ಮೇಲ್ಕಂಡ ನಗರಗಳ ಪೈಕಿ ಬಹುತೇಕ ನಗರಗಳಲ್ಲಿ ಟ್ರೂ 5ಜಿ ಸೇವೆಗಳನ್ನು ಆರಂಭಿಸಿದ ಮೊದಲ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಆಗಿದೆ. ಟೆಲಿಕಾಂ ಆಪರೇಟರ್ ಜಿಯೋ ಭಾರತದ ಡಿಜಿಟಲ್ ರೂಪಾಂತರದ ಕಡೆಗೆ ಕೆಲಸ ಮಾಡುತ್ತಿದೆ. ಇಂದಿನಿಂದ ಹೆಚ್ಚಿನ ವೇಗದ, ಲೋ- ಲೇಟೇನ್ಸಿ, ಅದ್ವಿತೀಯ ಟ್ರೂ 5ಜಿ ಸೇವೆಗಳ ತಾಂತ್ರಿಕ ಪ್ರಯೋಜನಗಳನ್ನು ಈ ನಗರಗಳ ಜನರು ಮತ್ತು ವ್ಯವಹಾರಗಳಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಪ್ರವಾಸೋದ್ಯಮ, ಉತ್ಪಾದನೆ, ಎಸ್ ಎಂಇಗಳು, ಆಡಳಿತ, ಶಿಕ್ಷಣ, ಆರೋಗ್ಯ, ಕೃಷಿ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್ ಮತ್ತು ಐಟಿ ಈ ಕ್ಷೇತ್ರಗಳಲ್ಲಿ ಹೊಸ ಬೆಳವಣಿಗೆಯ ಅವಕಾಶಗಳನ್ನು ತೆರೆಯುತ್ತದೆ.
ಈ ಆರಂಭದ ಬಗ್ಗೆ ಪ್ರತಿಕ್ರಿಯಿಸಿದ ಜಿಯೋ ವಕ್ತಾರರು, “ಈ 34 ನಗರಗಳಲ್ಲಿ ಜಿಯೋ ಟ್ರೂ 5ಜಿ ಅನ್ನು ಆರಂಭಿಸಲು ನಾವು ಹೆಮ್ಮೆಪಡುತ್ತೇವೆ. ಜಿಯೋ ಟ್ರೂ 5ಜಿ ತಂತ್ರಜ್ಞಾನದ ಪ್ರಯೋಜನಗಳನ್ನು ಆನಂದಿಸಲು ಪ್ರಾರಂಭಿಸುವ ಈ ನಗರಗಳಲ್ಲಿನ ಲಕ್ಷಾಂತರ ಜಿಯೋ ಬಳಕೆದಾರರಿಗೆ ಇದು ಗೌರವವಾಗಿದೆ. ಪ್ರತಿ ಭಾರತೀಯನಿಗೂ ಟ್ರೂ-5ಜಿ ಅನ್ನು ತಲುಪಿಸಲು ಜಿಯೋ ಇಂಜಿನಿಯರ್‌ಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಇದರಿಂದಾಗಿ ಈ ತಂತ್ರಜ್ಞಾನದ ಪರಿವರ್ತನಾ ಶಕ್ತಿ ಮತ್ತು ಅಮೋಘ ಪ್ರಯೋಜನಗಳನ್ನು ದೇಶದ ಪ್ರತಿ ನಾಗರಿಕರು ಅನುಭವಿಸಬಹುದು.
ಇದನ್ನೂ ಓದಿ: ರಾಮನಗರ, ಭದ್ರಾವತಿ, ದೊಡ್ಡಬಳ್ಳಾಪುರ, ಚಿಂತಾಮಣಿ ನಗರಗಳಲ್ಲಿ Jio True 5G ಶುರು
“2023ರ ಡಿಸೆಂಬರ್ ವೇಳೆಗೆ ಜಿಯೋ ಟ್ರೂ 5ಜಿ ದೇಶದ ಪ್ರತಿ ಪಟ್ಟಣವನ್ನು ತಲುಪಲಿದೆ. ಭಾರತವನ್ನು ಡಿಜಿಟಲ್ ಸೊಸೈಟಿಯನ್ನಾಗಿ ಪರಿವರ್ತಿಸುವ ಜಿಯೋ ಬದ್ಧತೆಗೆ ಇದು ಸಾಕ್ಷಿಯಾಗಿದೆ. ತಮ್ಮ ಪ್ರದೇಶಗಳನ್ನು ಡಿಜಿಟಲೈಸ್ ಮಾಡುವುದಕ್ಕೆ ಬೆಂಬಲ ನೀಡಿದ ರಾಜ್ಯ ಸರ್ಕಾರಗಳು ಮತ್ತು ಆಡಳಿತಗಾರರಿಗೆ ನಾವು ಕೃತಜ್ಞರಾಗಿರುತ್ತೇವೆ,” ಎಂದಿದ್ದಾರೆ.
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ21 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಕರ್ನಾಟಕ24 hours ago
Life changing story : ನಿಂದನೆಯೇ ವರವಾಯಿತು, ಹಠ ತೊಟ್ಟು ವಕೀಲನಾಗಿ ಕರಿಕೋಟು ಧರಿಸಿ ವಾದಿಸಿ ಗೆದ್ದ ಯುವಕ!
-
ಆಟೋಮೊಬೈಲ್22 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್6 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ10 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ8 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ10 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ