Site icon Vistara News

Best Phones Under Rs 15000: ತುಟ್ಟಿ ಕಾಲದಲ್ಲಿ 15 ಸಾವಿರ ರೂ.ನಲ್ಲಿ ಭರ್ಜರಿ ಸ್ಮಾರ್ಟ್‌ಫೋನ್ಸ್! 5G ಫೋನ್ ಕೂಡ ಇವೆ…

Best Phones

ನವದೆಹಲಿ: ಇದು ತುಟ್ಟಿ ದುನಿಯಾ. ಇಲ್ಲಿ ಅಗ್ಗದ ಬೆಲೆ ಏನೂ ಸಿಗುವುದಿಲ್ಲ. ಅದರಲ್ಲೂ ಅತ್ಯುತ್ತಮ ಫೋನ್‌ಗಳು(Smartphones), 5ಜಿ ಫೋನುಗಳು ಬೇಕು (5G Smartphones) ಎಂದರೆ ಭಾರೀ ಹಣ ಕೊಟ್ಟು ಖರೀದಿಸಬೇಕಾಗುತ್ತದೆ. ಆದರೆ, ಕೇವಲ 15 ಸಾವಿರ ರೂಪಾಯಿ (Best Phones Under Rs 15000) ಒಳಗೇ ಅತ್ಯುತ್ತಮ 5ಜಿ ಸ್ಮಾರ್ಟ್‌ಫೋನ್‌ಗಳು ಸಿಗುತ್ತವೆ ಗೊತ್ತಾ? ಹೌದು, ಹಲವು ಕಂಪನಿಗಳು ಅಗ್ಗದ ರೇಟಿಗೆ 5ಜಿ ಫೋನ್‌ಗಳನ್ನು ಮಾರಾಟ ಮಾಡುತ್ತವೆ.

ಈ ಫೋನುಗಳು ಇತರ ಫೋನ್‌ಗಳಂತೆ ಯಾವುದರಲ್ಲೂ ಕಡಿಮೆ ಇಲ್ಲ. ಎಲ್ಲ ರೀತಿಯ ಫೀಚರ್‌ಗಳನ್ನು ಒಳಗೊಂಡಿರುತ್ತವೆ. ನಾವು ಕೊಡುತ್ತಿರುವ ಈ ಲಿಸ್ಟ್‌ನಲ್ಲಿ 4ಜಿ ಮತ್ತು 5ಜಿ ಎರಡೂ ಫೋನುಗಳಿವೆ. ನಿಮ್ಮ ಅಗತ್ಯಕ್ಕೆ ಅನುಸಾರ ಫೋನ್ ಆಯ್ಕೆ ಮಾಡಬಹುದಾಗಿದೆ. ನಾವು ನೀಡಿದ ಪಟ್ಟಿಯೇ ಅಂತಿಮವಲ್ಲ. ಮಾರುಕಟ್ಟೆಯಲ್ಲಿ ಅಗ್ಗದ ಬೆಲೆ ಫೋನ್‌ಗಳು ದೊರೆಯುತ್ತವೆ ಎಂಬುದನ್ನು ಮರೆಯಬಾರದು. ನಾವು ಇಲ್ಲಿ ನೀಡಿರುವ ಪಟ್ಟಿಯಲ್ಲಿ ಬ್ಯಾಟರಿ, ಕ್ಯಾಮೆರಾ, RAM, ಡಿಸ್‌ಪ್ಲೇ ಸೇರಿದಂತೆ ಹಲವಾರು ಸಂಗತಿಗಳನ್ನು ಗಮನಿಸಿ, ಮಾಹಿತಿಯನ್ನು ನೀಡಿದ್ದೇವೆ.

ಇನ್ಫಿನಿಕ್ಸ್ ನೋಟ್ 30 5ಜಿ

ಇನ್ಫಿನಿಕ್ಸ್ ನೋಟ್ 30 5ಜಿ(Infinix Note 30 5G) ಫೋನ್ ಅನ್ನು ಆಲ್ರೌಂಡರ್ ಫೋನ್ ಎಂದು ಹೇಳಬಹುದು. 4GB RAM ಮತ್ತು MediaTek Dimensity 6080 ಪ್ರೊಸೆಸರ್ ಒಳಗೊಂಡಿದೆ. ಇದೊಂದು ಮಿಡ್ ಲೇವಲ್ ಗೇಮಿಂಗ್ ಫೋನ್. 5,000mAh ಬ್ಯಾಟರಿ ನೀಡಲಾಗಿದೆ. ಕಡಿಮೆ ಬೆಲೆಗೆ 5ಜಿ ಸ್ಮಾರ್ಟ್‌ಫೋನ್ ಬೇಕು ಅನ್ನೋರಿಗೆ ಇದೊಂದು ಅತ್ಯುತ್ತಮ ಆಯ್ಕೆಯಾಗಿದೆ.

ಐಕ್ಯೂ ಜೆಡ್6 ಲೈಟ್ 5ಜಿ

ಐಕ್ಯೂ ಜೆಡ್6 ಲೈಟ್ 5ಜಿ (iQoo Z6 Lite 5G) ಸ್ಮಾರ್ಟ್‌ಫೋನ್, ನಿಮಗೆ ವಿಶ್ವಾಸಾರ್ಹ ಕ್ಯಾಮರಾ ಕಾರ್ಯಕ್ಷಮತೆ ಮತ್ತು ಆಕರ್ಷಕ ಬೆಲೆಯಲ್ಲಿ ಉತ್ತಮವಾದ ವಿನ್ಯಾಸವನ್ನು ನೀಡುತ್ತದೆ. ಇದು 5ಜಿ ಫೋನ್ ಆಗಿದೆ. Qualcomm Snapdragon 4 Gen 1 SoC ಮತ್ತು 5,000mAh ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ಬಾಕ್ಸ್‌ನಲ್ಲಿ ಚಾರ್ಜರ್ ಇರುವುದಿಲ್ಲ.

ಮೋಟೋ ಜಿ52

ಇದು 5ಜಿ ಫೋನ್ ಅಲ್ಲ. ಮೋಟೋ ಜಿ52 (Moto G52) 90Hz ರಿಫ್ರೇಶ್ ರೇಟ್ pOLED ಡಿಸ್‌ಪ್ಲೇಯನ್ನು ಒಳಗೊಂಡಿದೆ. ಸ್ಟೇರಿಯೋ ಸ್ಪೀಕರ್ಸ್‌ಗಳಿದ್ದು, ಡಾಲ್ಬಿ ಅಟ್ಮೋಸ್‌ಗೆ ಸಪೋರ್ಟ್ ಮಾಡುತ್ತದೆ. ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 680 ಪ್ರೊಸೆಸರ್ ಇದ್ದು, 5,000mAh ಬ್ಯಾಟರಿ ನೀಡಲಾಗಿದೆ. ಚಾರ್ಜರ್‌ ಫೋನ್‌ ಬಾಕ್ಸ್‌ನೊಂದಿಗೆ ಬರುತ್ತದೆ.

ರೆಡ್‌ಮಿ 10 ಪ್ರೈಮ್

ರೆಡ್‌ಮಿ 10 ಪ್ರೈಮ್ (Redmi 10 Prime) ದೊಡ್ಡದಾದ ಡಿಸ್‌ಪ್ಲೇ ಹೊಂದಿದೆ. ಅಂದರೆ, 6.5 ಇಂಚ್‌ ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಇದ್ದು, 90Hz ರಿಫ್ರೆಶ್ ದರವನ್ನು ಹೊಂದಿದೆ. MediaTek Helio G88 SoC ಇದೆ. 6,000mAh ಪವರ್ ಫುಲ್ ಬ್ಯಾಟರಿ ನೀಡಲಾಗಿದೆ. ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತಿದೆ. ಕ್ಯಾಮೆರಾ ಚೆನ್ನಾಗಿದೆ.

ಈ ಸುದ್ದಿಯನ್ನೂ ಓದಿ: Honor 70 Lite 5G ಸ್ಮಾರ್ಟ್‌ಫೋನ್ ಲಾಂಚ್, ಹೊಸ ಫೀಚರ್ಸ್‌ಗಳೇನು?

ರಿಯಲ್‌ಮಿ ನಾರ್ಜೋ 30 5ಜಿ

ರಿಯಲ್‌ಮಿ ನಾರ್ಜೋ 30 5ಜಿ (Realme Narzo 30 5G) ಸ್ಮಾರ್ಟ್‌ಫೋನ್ ಸ್ಟೈಲಿಶ್ ಆಗಿದೆ. ಡಿಸ್‌ಪ್ಲೇ, ಬ್ಯಾಟರಿ, ಗೇಮಿಂಗ್ ಪ್ರದರ್ಶನ ಎಲ್ಲವೂ ಚೆನ್ನಾಗಿದೆ. ಆದರೆ, ಕ್ಯಾಮೆರಾ ಮಾತ್ರ ಕೊಂಚ ನಿರಾಸೆ ಮಾಡುತ್ತದೆ. ನಿಮ್ಮ ಹತ್ತಿರ ಸಾಕಷ್ಟು ಹಣ ಇಲ್ಲ ಆದರೂ 5ಜಿ ಫೋನ್ ಬೇಕು ಎಂದಾದರೆ ಈ ಫೋನ್ ಖರೀದಿಸಬಹುದು. 5000mah ಬ್ಯಾಟರಿ ನೀಡಲಾಗಿದೆ.

Exit mobile version