Site icon Vistara News

Bhavish Aggarwal | ಭವೀಶ್‌ ಅಗ್ರವಾಲ್‌ರ ಓಲಾದಿಂದ ಅಗ್ಗದ ಎಲೆಕ್ಟ್ರಿಕ್‌ ಕಾರು ಉತ್ಪಾದನೆ? ಟೆಸ್ಲಾಗೆ ಸವಾಲು?

bhavish

ನವ ದೆಹಲಿ: ಉದ್ಯಮಿ ಭವೀಶ್‌ ಅಗ್ರವಾಲ್‌ ( Bhavish Aggarwal) ಅವರು ಅಗ್ಗದ ದರದ ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆಗೆ ಮುಂದಾಗಲಿದ್ದಾರೆಯೇ ಎಂಬ ಕುತೂಹಲ ಇದೀಗ ಉಂಟಾಗಿದೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭವೀಶ್‌ ಅಗ್ರವಾಲ್‌ ಅವರು, ” ಟೆಸ್ಲಾ ಎಲೆಕ್ಟ್ರಿಕ್‌ ಕಾರುಗಳ ದರ 50,000 ಡಾಲರ್‌ಗಳಿಂದ (ಅಂದಾಜು 41 ಲಕ್ಷ ರೂ.) ಆರಂಭವಾಗುತ್ತದೆ. ಆದರೆ ವಿಶ್ವದ ಬಹುತೇಕ ಕಡೆಗಳಲ್ಲಿ ಅದನ್ನು ಖರೀದಿಸಲು ಜನತೆಗೆ ಕಷ್ಟವಾಗಬಹುದು. ಹೀಗಾಗಿ ನಾವು 1,000 ಡಾಲರ್‌ ಮತ್ತು 50,000 ಡಾಲರ್‌ ತನಕದ ಮೌಲ್ಯವಿರುವ ( ೮೨,೦೦೦ ರೂ. ಮತ್ತು 41 ಲಕ್ಷ ರೂ. ತನಕ) ಎಲೆಕ್ಟ್ರಿಕ್‌ ಕಾರುಗಳನ್ನು ತಯಾರಿಸಲು ಅವಕಾಶ ಇದೆ ʼʼ ಎಂದಿದ್ದರು.

ಹೀಗಿದ್ದರೂ, ಭವೀಶ್‌ ಅಗ್ರವಾಲ್‌ ಅವರು ಅಗ್ಗದ ಎಲೆಕ್ಟ್ರಿಕ್‌ ಕಾರು ಉತ್ಪಾದನೆಯ ಬಗ್ಗೆ ಸ್ಪಷ್ಟಪಡಿಸಲಿಲ್ಲ.

Exit mobile version