ನವದೆಹಲಿ: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿ. (BSNL), ಏರ್‌ಟೆಲ್(Airtel), ರಿಲಯನ್ಸ್ (Reliance) ಕಂಪನಿಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ. ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಮತ್ತು ಹೊಸ ಗ್ರಾಹಕರನ್ನು ಸೆಳೆಯುವುದಕ್ಕಾಗಿ ಹೊಸ ಪ್ಲ್ಯಾನ್ ಲಾಂಚ್ (BSNL Recharge Plans) ಮಾಡುತ್ತಿದೆ. ಈಗ ಕಂಪನಿಯು 87 ರೂ. ರಿಚಾರ್ಜ್ ಹೊಸ ಪ್ಲ್ಯಾನ್ ಲಾಂಚ್ ಮಾಡಿದೆ. ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ನಿತ್ಯು 1 ಜಿಬಿ ಡೇಟಾ (1 GB Data) ಪಡೆಯಬಹುದಾಗಿದೆ.
ಕಡಿಮೆ ದರದ ಪ್ಲ್ಯಾನ್ ಎದುರು ನೋಡುತ್ತಿರುವವರಿಗೆ ಬಿಎಸ್ಸೆನ್ನೆಲ್‌ನ ಈ ಪ್ಲ್ಯಾನ್ ಹೆಚ್ಚು ಸೂಕ್ತವಾಗಿದೆ. ರೂ.87 ಮೌಲ್ಯದ ಪ್ಲ್ಯಾನ್ ಹೆಚ್ಚು ಲಾಭ ತಂದುಕೊಡಲಿದೆ. ಒಂದೊಮ್ಮೆ ನೀವು ಈ ಪ್ಲ್ಯಾನ್ ಬಳಿಸಕೊಂಡರೆ ನಿಮಗೆ ನಿತ್ಯ 1 ಜಿಬಿ ಡೇಟಾ ದೊರೆಯಲಿದೆ. ಯಾವುದೇ ಅಡೆ ತಡೆ ಇಲ್ಲದೇ ನೀವು ಇಂಟರ್ನೆಟ್ ಬಳಸಬಹುದಾಗಿದೆ.
ನಿತ್ಯ 1 ಜಿಬಿ ಇಂಟರ್ನೆಟ್ ಜತೆಗೆ ನೀವು ಅನಿಯಂತ್ರಿತ ಕರೆಗಳನ್ನು ಯಾವುದೇ ನೆಟ್ವರ್ಕ್‌ಗೆ ಮಾಡಬಹುದು. ಯಾವುದೇ ನಿರ್ಬಂಧಗಳಿಲ್ಲದೇ ತಡೆ ರಹಿತ ಧ್ವನಿ ಕರೆಗಳನ್ನು ಮಾಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ ನಿತ್ಯ 100 ಎಸ್ಸೆಮ್ಮೆಸ್ ಕೂಡ ದೊರೆಯಲಿವೆ.
87 ರೂ. ಮೌಲ್ಯದ ಪ್ಲ್ಯಾನ್‍ನಲ್ಲಿ ನಿತ್ಯು 1 ಜಿಬಿ ಡೇಟಾ ಸಿಗುತ್ತದೆ ಅಂತ ಹೇಳಿದೆವು ಅಲ್ಲವೇ. ಒಂದೊಮ್ಮೆ ಡೇಟಾ ಖಾಲಿಯಾದರೆ ಸಂಪೂರ್ಣವಾಗಿ ಇಂಟರ್ನೆಟ್ ಸ್ಥಗಿತವಾಗುವುದಿಲ್ಲ. ಕಡಿಮೆ ವೇಗದಲ್ಲಿ ನೀವು ಇಂಟರ್ನೆಟ್ ಪಡೆಯುತ್ತೀರಿ. ಅಂದರೆ, 40ಕೆಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ದೊರೆಯುತ್ತದೆ. ದೇಶದ ಎಲ್ಲ ಬಿಎಸ್ಸೆನ್ನೆಲ್ ಸರ್ಕಲ್‌ಗಳಲ್ಲಿ ಈ ಪ್ಲ್ಯಾನ್ ಲಭ್ಯವಿದೆ. ರಾಷ್ಟ್ರಾದ್ಯಂತ ಇದರ ಕವರೇಜ್ ದೊರೆಯಲಿದೆ.
ಈ ಸುದ್ದಿಯನ್ನೂ ಓದಿ: ಬಿಎಸ್ಸೆನ್ನೆಲ್ ಯೂಸರ್ಸ್‌ಗೆ ಖುಷಿ ಸುದ್ದಿ! 146, 439 ರೂ. ಪ್ಲ್ಯಾನ್‌ನಿಂದ 90 ದಿನಗಳವರೆಗೆ ಕಾಲಿಂಗ್ ಸೇವೆ!
ಅಂದ ಹಾಗೆ ಈ ಪ್ಲ್ಯಾನ್ ವ್ಯಾಲಿಡಿಟಿ ಕೇವಲ ಅರ್ಧ ತಿಂಗಳು ಮಾತ್ರ. ಅಂದರೆ, 14 ದಿನ ವ್ಯಾಲಿಡಿಟಿ ಇರಲಿದೆ. ಒಂದು ವೇಳೆ, ವ್ಯಾಲಿಡಿಟಿ ವಿಸ್ತರಣೆ ಬೇಕಾದರೆ, ಇತರ ಪ್ಲ್ಯಾನ್‌ಗಳನ್ನು ಪರಿಗಣಿಸಬಹುದಾಗಿದೆ. ಇದಕ್ಕಾಗಿ ದಿಲ್ಲಿ ಮತ್ತು ಮುಂಬೈ ಸರ್ಕಲ್‌ಗಳಲ್ಲಿ 108 ರೂ. ಮೌಲ್ಯದ ಪ್ಲ್ಯಾನ್ ಇದೆ. ಅನ್‌ಲಿಮಿಡೆಟ್ ಕಾಲಿಂಗ್ ಸೇವೆ ಇದ್ದು, ಎಂಟಿಎನ್ಎಲ್ ನೆಟ್ವರ್ಕ್‌ಗೆ ಮಾತ್ರ ನೆನಪಿಡಬೇಕು. ಜತೆಗೆ 1 ಜಿಬಿ ಡೇಟಾ ಫ್ರಿ ಇದ್ದು, 28 ದಿನಗಳ ವ್ಯಾಲಿಡಿಟಿ ಇದೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.