Site icon Vistara News

WhatsApp New Feature: ಕಾಲ್ ಬ್ಯಾಕ್ ಹೊಸ ಫೀಚರ್ ಪರಿಚಯಿಸಿದ ವಾಟ್ಸಾಪ್! ಇದರಿಂದ ಏನು ಲಾಭ?

WhatsApp Call Back

#image_title

ಬೆಂಗಳೂರು: ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಾಟ್ಸಾಪ್ ಆಗಾಗ ಹೊಸ ಫೀಚರ್‌ಗಳನ್ನು (WhatsApp New Feature) ಲಾಂಚ್ ಮಾಡುತ್ತದೆ. ಈ ಮೂಲಕ ಬಳಕೆದಾರರ ವಾಟ್ಸಾಪ್ ಬಳಕೆಯ ಅನುಭವವನ್ನು ಹೆಚ್ಚಿಸುತ್ತದೆ. ಇದೀಗ ವಾಟ್ಸಾಪ್ ಮತ್ತೊಂದು ಹೊಸ ಫೀಚರ್ ಲಾಂಚ್ ಮಾಡಿದೆ. ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಕರೆಗಳು ಸಾಕಷ್ಟು ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಕರೆಗಳ ಅನುಭವವನ್ನು ವಿಸ್ತರಿಸುವ ಕೆಲಸವನ್ನು ವಾಟ್ಸಾಪ್ ಮಾಡಿದ್ದು, ಈಗ ಕಾಲ್ ಬ್ಯಾಕ್ (Call Back) ಎಂಬ ಫೀಚರ್ ಪರಿಚಯಿಸಿದೆ.

ವಾಟ್ಸಾಪ್‌ಗೆ ಸಂಬಂಧಿಸಿದ ಸುದ್ದಿ ಮತ್ತು ನವೀಕರಣಗಳನ್ನು ಟ್ರ್ಯಾಕ್ ಮಾಡುವ WABetaInfo ವರದಿಯ ಪ್ರಕಾರ, ಈ ಕಾಲ್ ಬ್ಯಾಕ್ ಫೀಚರ್ ಸಾಕಷ್ಟು ನಾವೀನ್ಯತೆಯಿಂದ ಕೂಡಿದೆ. ಹಾಗಾಗಳ ಬಳಕೆದಾರರಿಗೆ ಸಾಕಷ್ಟು ನೆರವು ಒದಗಿಸಲಿದೆ. ಈ ಹಿನ್ನೆಲೆಯಲ್ಲಿ ಈ ಕಾಲ್ ಬ್ಯಾಕ್ ಫೀಚರ್ ಹೇಗೆ ವರ್ಕ್ ಮಾಡುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.

WABetaInfo ಜಾಲತಾಣದಲ್ಲಿ ಅಪ್‌ಡೇಟ್ ಮಾಡಿರುವ ಫೋಟೋ ಪ್ರಕಾರ, ವಾಟ್ಸಾಪ್‌ನಲ್ಲಿ ಕಾಲ್ ಮಿಸ್ ಕಾಲ್ ಆದಾಗ ಈವೆಂಟ್ ಸಂದೇಶದಲ್ಲಿ ಈ ‘ಕಾಲ್ ಬ್ಯಾಕ್’ ಬಟನ್ ಈಗ ಗೋಚರಿಸುತ್ತದೆ. ಹಾಗಾಗಿ, ಮೊದಲ ಕರೆ ಮಾಡಿದ ವ್ಯಕ್ತಿಗೆ ಮರಳಿ ಕರೆ ಮಾಡಲು ಬಟನ್ ಅನ್ನು ಟ್ಯಾಪ್ ಮಾಡದ್ರೆ ಸಾಕು. ಮಿಸ್ಡ್ ಕಾಲ್ ಸ್ವೀಕರಿಸಿದ ನಂತರ ಸಂಪರ್ಕವನ್ನು ಮರಳಿ ಕರೆ ಮಾಡುವ ಸಾಧ್ಯತೆಗೆ ಸಂದೇಶದ ಈವೆಂಟ್ ಅನ್ನು ಮೀಸಲಿಡಲಾಗಿದೆ ಎಂದು ಸ್ಪಷ್ಟಪಡಿಸಲು ಈ ಕಾಲ್ ಬ್ಯಾಕ್ ಫೀಚರ್ ಪರಿಚಯಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಕಾಲ್ ಬ್ಯಾಕ್ ಫೀಚರ್ ಬೀಟಾ ಬಳಕೆದಾರರಿಗ ಮಾತ್ರವೇ ಲಭ್ಯವಿದ್ದು, ಶೀಘ್ರವೇ ಎಲ್ಲ ಬಳಕೆದಾರರಿಗೂ ದೊರೆಯಲಿದೆ.

ಫೋನ್ ನಂಬರ್ ಬದಲಿಗೆ ಯೂಸರ್ ನೇಮ್

ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್‌ ಹೊಸ ಫೀಚರ್ (WhatsApp New Feature) ಲಾಂಚ್ ಮಾಡುತ್ತಿದ್ದು, ಬಳಕೆದಾರರ ನಂಬರ್‌ (Phone Number) ಬದಲಿಗೆ ಯೂಸರ್‌ ನೇಮ್‌ಗೆ (Username) ಅವಕಾಶ ಕಲ್ಪಿಸಲಾಗುತ್ತದೆ. ಗೂಗಲ್ ಪ್ಲೇ ಬೀಟಾ ಪ್ರೋಗ್ರಾಮ್ ಮೂಲಕ ಈ ಹೊಸ ಅಪ್‌ಡೇಟ್ ಮಾಡಲಿದೆ ಕಂಪನಿಯು. ಸದ್ಯಕ್ಕೆ ಈ ಫೀಚರ್ ಪರೀಕ್ಷಾ ಹಂತದಲ್ಲಿದ್ದು ಶೀಘ್ರವೇ ಎಲ್ಲ ಬಳಕೆದಾರರಿಗೆ ದೊರೆಯಲಿದೆ.

ವಾಟ್ಸಾಪ್‌ ಅಭಿವೃದ್ಧಿಪಡಿಸುತ್ತಿರುವ ಹೊಸ ಫೀಚರ್‌ಗಳ ಬಗ್ಗೆ ನಾವು ಕಳೆದು ತಿಂಗಳ ಸಾಕಷ್ಟು ವರದಿ ಮಾಡಿದ್ದೇವೆ. ಈ ಎಲ್ಲ ಫೀಚರ್‌ಗಳು ಬಳಕೆದಾರರಿಗೆ ಉತ್ತಮ ಅನುಭವವನ್ನು ಒದಗಿಸುವ ಬದ್ಧತೆಯನ್ನು ಹೊಂದಿವೆ ಎಂಬುದನ್ನು ನಾವು ದೃಢೀಕರಿಸುತ್ತೇವೆ. ಆದರೆ, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಇತ್ತೀಚಿನ ಆಂಡ್ರಾಯ್ಡ್ 2.23.11.15 ಅಪ್‌ಡೇಟ್‌ ಮಾಡಿದಾಗ, ತುಂಬ ಭಿನ್ನವಾದ ವೈಶಿಷ್ಟ್ಯವನ್ನು ನಾವು ಗುರುತಿಸಿದ್ದೇವೆ ಎಂದು ವಾಟ್ಸಾಪ್‌ ಬೆಳವಣಿಗೆಗಳ ಮೇಲೆ ನಿಗಾ ಇಡುವ WABetaInfo ತನ್ನ ಪುಟದಲ್ಲಿ ಬರೆದುಕೊಂಡಿದೆ.

ಈ ಸುದ್ದಿಯನ್ನೂ ಓದಿ: WhatsApp New Feature: ವಾಟ್ಸಾಪ್‌ನಿಂದ ಕೀಪ್ ಇನ್ ಚಾಟ್ ಹೊಸ ಫೀಚರ್; ಬಳಕೆದಾರರಿಗೆ ಏನು ಲಾಭ?

ಸರಳವಾಗಿ ಹೇಳಬೇಕು ಎಂದರೆ, ವಾಟ್ಸಾಪ್‌ ಯೂಸರ್ ನೇಮ್ ಫೀಚರ್(username feature) ಕುರಿತು ಕೆಲಸ ಮಾಡುತ್ತಿದೆ. ತಮ್ಮ ಕಾಂಟಾಕ್ಟ್‌ಗಳಿಗಾಗಿ ಬಳಕೆದಾರರು ತಮಗೆ ಬೇಕಾದ ವಿಶಿಷ್ಟ ಯೂಸರ್‌ನೇಮ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಸದ್ಯಕ್ಕೆ ಈ ಫೀಚರ್ ಇನ್ನೂ ಪರೀಕ್ಷಾ ಹಂತದಲ್ಲಿದ್ದು, ಶೀಘ್ರವೇ ಎಲ್ಲ ಬಳಕೆದಾರರಿಗೆ ಸಿಗುವ ಸಾಧ್ಯತೆ ಇದೆ.

ತಂತ್ರಜ್ಞಾನದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version