ನವದೆಹಲಿ: ಚಂದ್ರಯಾನ -3 ಲ್ಯಾಂಡರ್ ಮಾಡ್ಯೂಲ್ ಬುಧವಾರ ಸಂಜೆಯ 6 ಗಂಟೆ 04 ನಿಮಿಷಕ್ಕೆ ಚಂದ್ರನ ಮೇಲ್ಮೈಯಲ್ಲಿ ಭಾರತೀಯರ ಸಂಭ್ರಮ ಮುಗಿಲುಮುಟ್ಟಲಿದೆ. ಆದರೆ ಇಸ್ರೋಗೆ ಪಾಲಿಗೆ ಅದು ಅರ್ಧ ಕೆಲಸ ಮುಗಿದಂತೆ! ಯಾಕೆಂದರೆ ಇಸ್ರೋ ವಿಜ್ಞಾನಿಗಳ ನಿಜವಾದ ಕೆಲಸವು ಸಾಫ್ಟ್ ಲ್ಯಾಂಡ್ ಆದ ಬಳಿ ಪ್ರಾರಂಭವಾಗುತ್ತದೆ. ಏಕೆಂದರೆ ಅವರು ಒಂದು ಚಂದ್ರ ದಿನದಲ್ಲಿ (14 ಭೂಮಿಯ ದಿನಗಳು) ಲ್ಯಾಂಡರ್ ಒಳಗಿರುವ ರೋವರ್ ಕಾರ್ಯಾಚರಣೆಯಲ್ಲಿ ನಡೆಸಬೇಕಾಗುತ್ತದೆ. ಲ್ಯಾಂಡರ್ (3 ಪೇಲೋಡ್) ಮತ್ತು ರೋವರ್ (2 ಪೇಲೋಡ್) ನಲ್ಲಿರುವ ಐದು ವೈಜ್ಞಾನಿಕ ಉಪಕರಣಗಳಿಂದ ಬರುವ ಟನ್ಗಟ್ಟಲೆ ಡೇಟಾವನ್ನು ವಿಶ್ಲೇಷಣೆ ಮಾಡಬೇಕಾಗುತ್ತದೆ.
ಲ್ಯಾಂಡರ್ ಟಚ್ಡೌನ್ ಆದ ಸ್ವಲ್ಪ ಸಮಯದ ನಂತರ ವಿಕ್ರಮ್ ಲ್ಯಾಂಡರ್ನ ಒಂದು ಬದಿಯ ಫಲಕವು ತೆರೆದುಕೊಳ್ಳುತ್ತದೆ. ಇದು ಒಳಗಿರುವ ಪ್ರಜ್ಞಾನ್ ರೋವರ್ಗೆ ರ‍್ಯಾಂಪ್ ಸೃಷ್ಟಿಸುತ್ತದೆ. ತ್ರಿವರ್ಣ ಧ್ವಜ ಮತ್ತು ಅದರ ಚಕ್ರಗಳ ಮೇಲೆ ಇಸ್ರೋ ಲಾಂಛನ ಹೊಂದಿರುವ ಆರು ಚಕ್ರಗಳ ಪ್ರಜ್ಞಾನ್ 4 ಗಂಟೆಗಳ ನಂತರ ಚಂದ್ರನ ಮೇಲ್ಮೈನಲ್ಲಿ ಇಳಿದಿರುವ ಲ್ಯಾಂಡರ್ನ ಹೊಟ್ಟೆಯಿಂದ ಇಳಿಯುತ್ತದೆ. ಸೆಕೆಂಡಿಗೆ 1 ಸೆಂ.ಮೀ ವೇಗದಲ್ಲಿ ಚಲಿಸಲು ಆರಂಭಿಸುತ್ತದೆ. ಅದು ಚಂದ್ರನ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ಕ್ಯಾನ್ ಮಾಡಿಕೊಳ್ಳುತ್ತದೆ. ಅದಕ್ಕಾಗಿ ನ್ಯಾವಿಗೇಷನ್ ಕ್ಯಾಮೆರಾಗಳನ್ನು ಬಳಸುತ್ತದೆ. ಲ್ಯಾಂಡರ್ ಹೊಟ್ಟೆಯಿಂದ ಹೊರಗೆ ಬರುವ ರೋವರ್ ಚಂದ್ರನ ಮೇಲೆ ತ್ರಿವರ್ಣ ಧ್ವಜ ಮತ್ತು ಇಸ್ರೋ ಲಾಂಛನದ ಮುದ್ರೆಗಳನ್ನು ಅಚ್ಚೊತ್ತಲಿದೆ. ಈ ಮೂಲಕ ಚಂದ್ರನ ಮೇಲೆ ಭಾರತದ ಹೆಗ್ಗುರುತನ್ನು ಮೂಡಿಸುತ್ತದೆ. ಅದೇ ರೀತಿ ಚಂದ್ರನ ಮೇಲ್ಮೈಗೆ ಸಂಬಂಧಿಸಿದ ಡೇಟಾವನ್ನು ರವಾನಿಸಲು ರೋವರ್ ಪೇಲೋಡ್ನೊಂದಿಗೆ ಕಾನ್ಫಿಗರ್ ಮಾಡಿದ ಉಪಕರಣಗಳನ್ನು ಬಳಸುತ್ತವೆ. ಇದು ಚಂದ್ರನ ವಾತಾವರಣದ ಧಾತು ಸಂಯೋಜನೆಯ ಬಗ್ಗೆ ಡೇಟಾವನ್ನು ಸಂಗ್ರಹಿಸುತ್ತದೆ ಮತ್ತು ಲ್ಯಾಂಡರ್ಗೆ ಡೇಟಾ ಕಳುಹಿಸುತ್ತದೆ. ಮೂರು ಪೇಲೋಡ್ಗಳೊಂದಿಗೆ, ವಿಕ್ರಮ್ ಲ್ಯಾಂಡರ್ ಹತ್ತಿರದ ಮೇಲ್ಮೈ ಪ್ಲಾಸ್ಮಾ (ಅಯಾನುಗಳು ಮತ್ತು ಎಲೆಕ್ಟ್ರಾನ್ಗಳನ್ನು) ಸಾಂದ್ರತೆಯನ್ನು ಅಳೆಯುತ್ತದೆ. ಚಂದ್ರನ ಮೇಲ್ಮೈಯ ಉಷ್ಣ ಗುಣಲಕ್ಷಣಗಳ ಮಾಪನಗಳನ್ನು ನಡೆಸುತ್ತದೆ. ಲ್ಯಾಂಡಿಂಗ್ ಸೈಟ್ ಸುತ್ತಲೂ ಭೂಕಂಪನ ಅಳೆಯುತ್ತದೆ. ಚಂದ್ರನ ಹೊರಪದರ ಮತ್ತು ಕವಚದ ರಚನೆಯನ್ನು ಅಳೆಯುತ್ತದೆ.
ಎರಡು ವಾರ ಅಧ್ಯಯನ
ಸೌರಶಕ್ತಿ ಚಾಲಿತ ಲ್ಯಾಂಡರ್ ಮತ್ತು ರೋವರ್ ಚಂದ್ರನ ಸುತ್ತಮುತ್ತಲಿನ ಪ್ರದೇಶಗಳನ್ನು ಅಧ್ಯಯನ ಮಾಡಲು ಸುಮಾರು ಎರಡು ವಾರಗಳನ್ನು ಹೊಂದಿದೆ. ರೋವರ್ ಲ್ಯಾಂಡರ್ನೊಂದಿಗೆ ಮಾತ್ರ ಸಂವಹನ ನಡೆಸಬಹುದು. ಲ್ಯಾಂಡರ್ ಭೂಮಿಯೊಂದಿಗೆ ನೇರವಾಗಿ ಸಂವಹನ ನಡೆಸುತ್ತದೆ. ಇದೇ ವೇಳೆ ಚಂದ್ರಯಾನ -2 ಆರ್ಬಿಟರ್ ಅನ್ನು ಆಕಸ್ಮಿಕ ಸಂವಹನ ಪ್ರಸಾರವಾಗಿಯೂ ಬಳಸಬಹುದು ಎಂದು ಇಸ್ರೋ ಹೇಳಿದೆ. ಸೋಮವಾರ ಚಂದ್ರಯಾನ -2 ಆರ್ಬಿಟರ್ ಚಂದ್ರಯಾನ 3ರ ಲ್ಯಾಂಡರ್ ಮಾಡ್ಯುಲ್ನೊಂದಿಗೆ ಸಂವಹನ ನಡೆಸಿದೆ.
ಮಾಧ್ಯಮದ ಜತೆ ಮಾತನಾಡಿದ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್, 14 ಭೂಮಿಯ ದಿನಗಳಲ್ಲಿ ರೋವರ್ ಪ್ರಯಾಣಿಸಲಿರುವ ನಿಜವಾದ ದೂರವನ್ನು ಈಗ ಅಂದಾಜು ಮಾಡಲು ಸಾಧ್ಯವಿಲ್ಲ. ಏಕೆಂದರೆ ಅದನ್ನು ವಿವಿಧ ವಿಷಯಗಳ (ಲೆಕ್ಕಾಚಾರಗಳು) ಆಧಾರದ ಮೇಲೆ ಮಾಡಲಾಗುತ್ತದೆ ಎನ್ನಲಾಗುತ್ತದೆ.
ರೋವರ್ ಮತ್ತು ಲ್ಯಾಂಡರ್ ಚಂದ್ರನ ಎರಡನೇ ದಿನ ಬದುಕುಳಿಯಬೇಕಾದರೆ ಮೊದಲು ದಕ್ಷಿಣ ಧ್ರುವದಲ್ಲಿ ಚಂದ್ರನ ರಾತ್ರಿಯ ಮೈನಸ್ 238 ಡಿಗ್ರಿ ಸೆಲ್ಸಿಯಸ್ ಘನೀಕರಿಸುವ ತಾಪಮಾನ ತಡೆದುಕೊಳ್ಳಬೇಕು. ಆದಾಗ್ಯೂ ಲ್ಯಾಂಡರ್ ಮತ್ತು ರೋವರ್ ಎರಡೂ ಮತ್ತೊಂದು ಚಂದ್ರನ ದಿನ ಬದುಕುವ ಸಾಧ್ಯತೆಯಿದೆ ಎಂದು ಇಸ್ರೋ ಅಧ್ಯಕ್ಷರು ತಿಳಿಸಿದ್ದಾರೆ.
ಪರಿಪೂರ್ಣ ಕಾರ್ಯ ನಿರ್ವಹಣೆ
ಇಸ್ರೋ ಅಧ್ಯಕ್ಷರು ಸೋಮವಾರ ದೆಹಲಿಯಲ್ಲಿ ಬಾಹ್ಯಾಕಾಶ ಸಚಿವ ಜಿತೇಂದ್ರ ಸಿಂಗ್ ಅವರಿಗೆ ಚಂದ್ರಯಾನ -3 ರ ಆರೋಗ್ಯ ಸ್ಥಿತಿಯ ಬಗ್ಗೆ ವಿವರಿಸಿದ್ದಾರೆ. ಎಲ್ಲಾ ವ್ಯವಸ್ಥೆಗಳು ಪರಿಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಬುಧವಾರ ಯಾವುದೇ ಆಕಸ್ಮಿಕಗಳನ್ನು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಲ್ಯಾಂಡಿಂಗ್ನ ಅಂತಿಮ ಕ್ರಮವನ್ನು ಎರಡು ದಿನಗಳ ಮುಂಚಿತವಾಗಿ ಲೋಡ್ ಮಾಡಿ ಪರೀಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Chandrayaan- 3 : ಚಂದ್ರಯಾನ ಕುತೂಹಲಿಗಳು ತಿಳಿಯಲೇಬೇಕಾದ ಸಂಗತಿಗಳಿವು; ವಿಜ್ಞಾನಿ ಗುರುಪ್ರಸಾದ್ Exclusive Details
ಚಂದ್ರಯಾನ -3 ಮಿಷನ್ ಪ್ರಾಥಮಿಕ ಉದ್ದೇಶಗಳು ಮೂರು ವಿಧದ್ದು. ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಮೃದುವಾಗಿ ಇಳಿಸುವುದು, ಚಂದ್ರನ ಮೇಲೆ ರೋವರ್ ತಿರುಗುವುದು ಮತ್ತು ಆಂತರಿಕ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು. ಯುಎಸ್, ರಷ್ಯಾ ಮತ್ತು ಚೀನಾದ ನಂತರ ಲ್ಯಾಂಡಿಂಗ್ ಸಾಧನೆಯನ್ನು ಸಾಧಿಸಿದ ವಿಶ್ವದ ನಾಲ್ಕನೇ ದೇಶ ಭಾರತವಾಗಲಿದೆ. ಆದರೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ವಿಶ್ವದ ಏಕೈಕ ದೇಶವಾಗಲಿದೆ ಎಂದು ಅವರು ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಜಿತೇಂದ್ರ ಸಿಂಗ್ “ನಾವು ದಕ್ಷಿಣ ಧ್ರುವಕ್ಕೆ ಹೋಗಲು ಕಾರಣವೆಂದರೆ ಯಾರೂ ಅನ್ವೇಷಿಸದ ಸ್ಥಳಗಳನ್ನು ಅನ್ವೇಷಿಸಲು ಬಯಸಿದ್ದು. ಚಂದ್ರನ ಮೇಲೆ ಕಪ್ಪು (ಶಾಶ್ವತವಾಗಿ ನೆರಳು) ಕುಳಿಗಳ ಚಿತ್ರಗಳನ್ನು ನಾವು ಸ್ವೀಕರಿಸಿದ್ದೇವೆ. ಅದು ನೀರನ್ನು ಹೊಂದಿರಬಹುದು ಎಂದು ಸೂಚನೆ ನೀಡಿದೆ. ಚಂದ್ರಯಾನ -3ರಲ್ಲಿ ಹೈಡ್ರೋಜನ್ ಮತ್ತು ಆಮ್ಲಜನಕವನ್ನು ಒಳಗೊಂಡಿರುವ ಪುರಾವೆಗಳನ್ನು ಕಂಡುಕೊಂಡರೆ, ಅದು ಸಾಕಷ್ಟು ವೈಜ್ಞಾನಿಕ ಅನ್ವೇಷಣೆಗೆ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಜಲಜನಕವನ್ನು ನೀರಿನಿಂದ ಹೊರತೆಗೆಯಲು ಸಾಧ್ಯವಾದರೆ, ಅದು ಶುದ್ಧ ಶಕ್ತಿಯ ಸಮೃದ್ಧ ಮೂಲವಾಗಬಹುದು ಎಂದು ಹೇಳಿದ್ದಾರೆ.