ಬೆಂಗಳೂರು, ಕರ್ನಾಟಕ: ಸದ್ಯ ಟಾಕ್ ಆಫ್ ದಿ ಟೌನ್ ಆಗಿರುವ ಚಾಟ್‌ಜಿಪಿಟಿಯ ಹೊಸ ವರ್ಷನ್ ಅನ್ನು ಮೈಕ್ರೋಸಾಫ್ಟ್ (Microsoft) ಮುಂದಿನ ವಾರ್ ರಿಲೀಸ್ ಮಾಡಲಿದೆ. ಚಾಟ್‌ಜಿಪಿಟಿ-4 (ChatGPT-4) ನೆಕ್ಸ್ಟ್ ಜನರೇಷನ್ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್(LLM) ಬಿಡುಗಡೆಯಾಗಲಿದೆ. ಸದ್ಯಕ್ಕೆ ಕೃತಕ ಬುದ್ಧಿಮತ್ತೆಯ ಈ ಚಾಟ್‌ಬಾಟ್ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಓಪನ್ಎಐ(openAI) ಪ್ರಾಡಕ್ಟ್‌ಗಳಲ್ಲಿ ಈ ಚಾಟ್‌ಬಾಟ್ ಬಳಕೆಯನ್ನು ಕಾಣಬಹುದು. ಇದೇ ವೇಳೆ, ಚಾಟ್‌ಜಿಪಿಟಿ-4 ಆ್ಯಪ್ ಕೂಡ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಸದ್ಯಕ್ಕೆ ಚಾಟ್‌ಜಿಪಿಟಿ ಬಳಕೆದಾರರು ಟೆಕ್ಸ್ಟ್ ಮೂಲಕ ಕೇಳುವ ಪ್ರಶ್ನೆಗಳಿಗೆ ಮಾತ್ರವೇ ನಿರ್ದಿಷ್ಟವಾಗಿ ಉತ್ತರಸುತ್ತಿದೆ. ಆದರೆ, ಹೊಸ ತಲೆಮಾರಿನ ಚಾಟ್‌ಜಿಪಿ ಎಐ ಬೆಂಬಲಿತ ಫಿಲ್ಮ್ಸ್ ಮತ್ತು ಇತರ ಕಂಟೆಂಟ್ ಕೂಡ ಉತ್ಪಾದಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಮೈಕ್ರೋಸಾಫ್ಟ್ ಬೆಂಬಲಿತ ಓಪನ್ಎಐ ಈ ಚಾಟ್‌ಜಿಪಿಟಿಯನ್ನು ಅಭಿವೃದ್ದಿಪಡಿಸಿದೆ.
ಮೈಕ್ರೋಸಾಫ್ಟ್ ಜರ್ಮನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಆಂಡ್ರಿಯಾಸ್ ಬ್ರಾನ್ (Andreas Braun) ಅವರು, ಜರ್ಮನ್ ಸುದ್ದಿ ವೆಬ್‌ಸೈಟ್ ಹೈಸ್ ಈ ಬಗ್ಗೆ ಮಾಹಿತಿ ನೀಡಿದ್ದು, ನಾವು ಮುಂದಿನ ವಾರ GPT-4 ಪರಿಚಯಿಸುತ್ತೇವೆ. ವಿಡಿಯೋಗಳು ಸೇರಿದಂತೆ ನಾವು ಸಂಪೂರ್ಣವಾಗಿ ವಿಭಿನ್ನ ಸಾಧ್ಯತೆಗಳನ್ನು ನೀಡುವ ಮಲ್ಟಿಮಾಡೆಲ್ ಮಾದರಿಯನ್ನು ಹೊಂದಿದ್ದೇವೆ ಎಂದು ಅವರು ಹೇಳಿದ್ದಾರೆ.
ಈವರೆಗೆ ಬಳೆಕಾದರರು ಟೆಕ್ಸ್ಟ್ ಮೂಲಕ ಕೇಳಿದ ಪ್ರಶ್ನೆಗೆ ಚಾಟ್‌ಜಿಪಿಟಿ ಟೆಕ್ಸ್ಟ್ ಮೂಲಕ ಮಾತ್ರವೇ ಉತ್ತರಿಸುತ್ತಿತ್ತು. ಇದೀಗ, ಹೊಸ ತಲೆಮಾರಿನ ಜಾಟ್‌ಜಿಪಿಟಿಯು, ಬಳಕೆದಾರರು ಕೇಳುವ ಪ್ರಶ್ನೆಗಳಿಗೆ ವಿಡಿಯೋ, ಆಡಿಯೋ, ಕಿನಸ್ತೆಟಿಕ್ ಕಟೆಂಟ್‌ಗಳ ಮೂಲಕ ಪ್ರತಿಕ್ರಿಯಿಸಲಿದೆ. ಹಾಗಾಗಿ, ಬಳಕೆದಾರರಿಗೆ ವಿಶಿಷ್ಟ ಅನುಭವ ದೊರೆಯಲಿದೆ.
ಶೀಘ್ರವೇ ಚಾಟ್‌ಜಿಪಿಟಿ-4 ಆ್ಯಪ್?
ಈಗ ಗೊತ್ತಾಗಿರುವ ಮಾಹಿತಿಯ ಪ್ರಕಾರ, ಓಪನ್ಎಐ ಚಾಟ್‌ಜಿಪಿಟಿ-4 ಸ್ಮಾರ್ಟ್‌ಫೋನ್ ಅಪ್ಲಿಕೇಷನ್ ಕೂಡ ರೂಪಿಸುತ್ತಿದೆ. ಸದ್ಯ ಚಾಟ್‌ಜಿಪಿಟಿಯ ಯಾವುದೇ ಮೊಬೈಲ್ ಅಪ್ಲಿಕೇಷನ್ ಇಲ್ಲ. ಇದು ವೆಬ್ ಆಧರಿತಾ ಭಾಷಾ ಮಾದರಿಯಾಗಿದೆಯಷ್ಟೇ. ಒಂದೊಮ್ಮೆ ಆ್ಯಪ್ ಕೂಡ ಬಳಕೆಗೆ ದೊರೆತರೆ ಚಾಟ್‌ಜಿಪಿಟಿಯ ಬಳಕೆ ಇನ್ನಷ್ಟು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.