ಬೆಂಗಳೂರು: ಕಳೆದ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಓಪನ್ಎಐ(OpenAI) ಕಂಪನಿಯ ಚಾಟ್ ಬಾಟ್, ಜಾಟ್‌ಜಿಪಿಟಿ(ChatGPT Banned) ಜಗತ್ತಿನಾದ್ಯಂತ ಸದ್ದು ಮಾಡುತ್ತದೆ. ಈ ಚಾಟ್ಬಾಟ್ ಬಳಕೆಯ ಸಾಧ್ಯತೆಗಳು ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಸಕಾರಾತ್ಮಕ ಬಳಕೆಯ ನಡುವೆ, ನಕಾರಾತ್ಮಕವಾಗಿಯೂ ಈ ಚಾಟ್ಬಾಟ್ ಬಳಕೆಯ ಸಾಧ್ಯತೆಗಳು ಬೇಕಾದಷ್ಟಿವೆ. ಕಾಲೇಜು ವಿದ್ಯಾರ್ಥಿಗಳು ಈ ಚಾಟ್‌ಬಾಟ್ ಅನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಸಾಧ್ಯತೆಯನ್ನು ಮನಗಂಡಿರುವ ಬೆಂಗಳೂರಿನ ಕೆಲವು ಶೈಕ್ಷಣಿಕ ಸಂಸ್ಥೆಗಳು, ವಿದ್ಯಾರ್ಥಿಗಳು ಜಾಟ್‌ಜಿಪಿಟಿಯನ್ನು ಬಳಸುವುದನ್ನು ನಿಷೇಧಿಸಿವೆ! ಅಮೆರಿಕ ಮತ್ತು ಫ್ರಾನ್ಸ್‌ನ ಕೆಲವು ಕಾಲೇಜುಗಳೂ ಇದೇ ಹಾದಿಯನ್ನು ತುಳಿದಿವೆ.
ಬೆಂಗಳೂರಿನ ಆರ್‌ವಿ ಯುನಿರ್ವಸಿಟಿಯು ಜಾಟ್‌ಜಿಪಿಟಿ ಟೂಲ್ ಬಳಸುದಂತೆ ವಿದ್ಯಾರ್ಥಿಗಳಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ. ಈ ವಿವಿಯ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ಡೀನ್ ಸಂಜಯ್ ಚಿಟ್ನಿಸ್ ಅವರು, ಕೃತಕ ಬುದ್ದಿಮತ್ತೆ ಟೂಲ್‌ಗಳಾದ ಚಾಟ್‌ಜಿಪಿಟಿ, ಜಿಟ್‌ಹಬ್ ಕೋಪಿಲಾಟ್, ಬ್ಲ್ಯಾಕ್‌ಬಾಕ್ಸ್‌ಗಳನ್ನು ಬಳಸುವುದನ್ನು ನಿಷೇಧಿಸಿ ಔಪಚಾರಿಕ ಸಲಹೆ ಹೊರಡಿಸಿದ್ದಾರೆ. ಲ್ಯಾಬ್ ಮತ್ತು ಬೋಧನಾ ಕ್ಲಾಸ್‌ಗಳಿಗೆ ಚಾಟ್‌ಜಿಪಿಟಿ ಅಕ್ಸೆಸ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಜನವರಿ ಒಂದರಿಂದಲೇ ಆರ್ ವಿ ವಿಶ್ವವಿದ್ಯಾಲಯದಲ್ಲಿ ಈ ನಿಯಮ ಜಾರಿಗೆ ಬಂದಿದೆ.
ಯಾಕೆ ನಿಷೇಧ?
ಬೆಂಗಳೂರಿನ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾಗಿರುವ ದಯಾನಂದ ಸಾಗರ ಯುನಿರ್ವಿಸಿಟಿ ಆ್ಯಂಡ್ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ ಕೂಡ ಚಾಟ್‌ಜಿಪಿಟಿಯಂಥ ಎಐ ಟೂಲ್‌ಗಳ ಮೇಲೆ ವಿದ್ಯಾರ್ಥಿಗಳು ಅವಲಂಬನೆಯಾಗುವುದನ್ನು ತಪ್ಪಿಸುವ ದಾರಿಗಳನ್ನು ಹುಡುಕುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ChatGPT and Whatsapp: ವಾಟ್ಸಾಪ್‌ನಲ್ಲಿ ಜಾಟ್‌ಜಿಪಿಟಿ ಬಳಸಬಹುದಾ? ಇದರಿಂದ ಏನು ಲಾಭ?
ಕ್ರೈಸ್ಟ್ ಯುನಿವರ್ಸಿಟಿ ಕೂಡ ಎಐ ಟೂಲ್‌ಗಳನ್ನು ವಿದ್ಯಾರ್ಥಿಗಳ ಬಳಸದಂತೆ ತಿಳಿಸಿದೆ ಎಂದು ಹೇಳಲಾಗುತ್ತಿದೆ. ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಬೆಂಗಳೂರು ಚಾಟ್‌ಜಿಪಿಯನ್ನು ಬಳಸುವ ಬಗ್ಗೆ ರಚನಾತ್ಮಕ ಚೌಕಟ್ಟನ್ನು ಅಭಿವೃದ್ಧಿಪಡಿಸಲು ಸಮಿತಿಯನ್ನು ರಚಿಸಿದೆ ಎಂದು ತಿಳಿದು ಬಂದಿದೆ. ಫ್ರಾನ್ಸ್‌ನ ಪ್ರತಿಷ್ಠ ವಿವಿಯಾಗಿರುವ Sciences Po ಸಂಪೂರ್ಣವಾಗಿ ಜಾಟ್‌ಜಿಪಿಟಿ ಬಳಕೆಯನ್ನು ನಿಷೇಧಿಸಿದೆ.