Site icon Vistara News

Reliance Jio: ಕರ್ನಾಟಕದಲ್ಲಿ ರಿಲಯನ್ಸ್ ಜಿಯೋ 3300 ಮೆಗಾ ಹಟ್ಜ್ ಬ್ಯಾಂಡ್ ಪ್ರಯೋಗ ಯಶಸ್ವಿ

Reliance Jio 5G

ದೂರಸಂಪರ್ಕ ಇಲಾಖೆಯ ಕರ್ನಾಟಕದಾದ್ಯಂತ (Karnataka State) ಇರುವಂಥ ಪರವಾನಗಿ ಪಡೆದ ಸೇವಾ ಪ್ರದೇಶದಲ್ಲಿ 5ಜಿ ಸೇವೆಗಳ (5G Service) ವೇಗವಾದ ಜಾರಿ ಮುಂದುವರಿದಂತೆ, ಭಾರತ ಸರ್ಕಾರವು (Indian Government) ರಿಲಯನ್ಸ್‌ಗೆ ಸೇರಿದ 5ಜಿ ಸ್ಥಳಗಳಲ್ಲಿ 26 ಗಿಗಾ ಹಟ್ಜ್ (GHz) ಬ್ಯಾಂಡ್ ಮತ್ತು 3300 ಮೆಗಾ ಹಟ್ಜ್ (MHz) ಬ್ಯಾಂಡ್‌ನಲ್ಲಿ ಮೊದಲ ಹಂತದ ಪರೀಕ್ಷಾರ್ಥ ಜಾರಿಯನ್ನು ಯಶಸ್ವಿಯಾಗಿ ಮುಗಿಸಿದೆ. ಈ ಚಟುವಟಿಕೆಯ ಭಾಗವಾಗಿ, ಮೊದಲ ಹಂತದಲ್ಲಿ ರಿಲಯನ್ಸ್ ಜಿಯೋಗೆ ಮಂಜೂರಾದ 5ಜಿ ಸ್ಥಳಗಳಲ್ಲಿ 26 ಗಿಗಾ ಹಟ್ಜ್ ಸೇವೆಗಳ ಜಾರಿಯ ಪರೀಕ್ಷೆಯನ್ನು ಮಾಡಲಾಯಿತು. ರಿಲಯನ್ಸ್ ಜಿಯೋಗೆ (Reliance Jio) ಬೆಂಗಳೂರಿನ ಜಯನಗರ, 9 ನೇ ಬ್ಲಾಕ್‌ನಲ್ಲಿ, ರಾಮನಗರ ಜಿಲ್ಲೆಯ ಕನಕಪುರದಲ್ಲಿ 3300 ಮೆಗಾ ಹಟ್ಜ್ ಪರೀಕ್ಷೆ ನಡೆಸಲಾಯಿತು ಎಂದು ಕರ್ನಾಟಕದಲ್ಲಿ ದೂರ ಸಂಪರ್ಕ ಇಲಾಖೆಯ ಎಲ್ಎಸ್ಎ ಟ್ವೀಟ್ ಮಾಡಿದ್ದಾರೆ. ಈ ಪರೀಕ್ಷೆಯು ಆಗಸ್ಟ್ ಎಂಟನೇ ತಾರೀಕಿನಿಂದ ಹತ್ತನೇ ತಾರೀಕಿನ ತನಕ ನಾಲ್ಕು ದಿನಗಳ ಕಾಲ ವ್ಯಾಪಿಸಿತ್ತು.

ಜಿಯೋ ನೆಟ್ ವರ್ಕ್ ನಲ್ಲಿ 26 ಗಿಗಾ ಹಟ್ಜ್ ಬ್ಯಾಂಡ್ ನಲ್ಲಿ ಪರೀಕ್ಷೆ ಮಾಡುವ ವೇಳೆಯಲ್ಲಿ 5ಜಿ ವೇಗವು 2.5 ಜಿಬಿಪಿಎಸ್ (Gbps)ಎಂದು ಅಳೆಯಲಾಗಿದೆ. ರಿಲಯನ್ಸ್ ಜಿಯೋ ತನ್ನ ಟ್ರೂ 5ಜಿ ನೆಟ್‌ವರ್ಕ್ ಅನ್ನು ವೃತ್ತದಾದ್ಯಂತ ವೇಗವಾಗಿ ವಿಸ್ತರಿಸುತ್ತಿದೆ ಮತ್ತು ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ 5ಜಿ ನೆಟ್‌ವರ್ಕ್ ಉಪಸ್ಥಿತಿ ಇರುವ ಏಕೈಕ ಟೆಲಿಕಾಂ ಆಪರೇಟರ್ ಆಗಿದೆ ಎಂಬುದು ಪ್ರಸ್ತಾಪಿಸುವುದಕ್ಕೆ ಇಲ್ಲಿ ಸೂಕ್ತವಾಗಿದೆ.

ಪ್ರೀಮಿಯಂ 700 ಮೆಗಾ ಹಟ್ಜ್ (MHz) ಬ್ಯಾಂಡ್‌ನಲ್ಲಿ ಸ್ಪೆಕ್ಟ್ರಮ್ ಹೊಂದಿರುವ ಏಕೈಕ ಸೇವಾ ಪೂರೈಕೆದಾರ ಜಿಯೋ ಆಗಿದ್ದು, 5ಜಿ ನೆಟ್‌ವರ್ಕ್ ನಿಯೋಜನೆಗೆ ಹೆಚ್ಚು ಸೂಕ್ತವೆಂದು ಪರಿಗಣಿಸಲಾಗಿದೆ. ಜಿಯೋ ವೆಲ್ ಕಮ್ ಆಫರ್ ಭಾಗವಾಗಿ, ಜಿಯೋ ಬಳಕೆದಾರರು ಸದ್ಯಕ್ಕೆ 1 ಜಿಬಿಪಿಎಸ್+ ವೇಗದಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅನಿಯಮಿತ ಡೇಟಾವನ್ನು ಪಡೆಯುತ್ತಾರೆ.

ಈ ಸುದ್ದಿಯನ್ನೂ ಓದಿ: Reliance Jio: ರಿಲಯನ್ಸ್ ಜಿಯೋಗೆ ಮೊದಲ ತ್ರೈಮಾಸಿಕದಲ್ಲಿ 4863 ಕೋಟಿ ರೂ. ನಿವ್ವಳ ಲಾಭ

ಜಿಯೋ ಟ್ರೂ 5ಜಿ ಮೂರು-ಪಟ್ಟು ಪ್ರಯೋಜನ ಹೊಂದಿದ್ದು, ಇದು 4ಜಿ ನೆಟ್‌ವರ್ಕ್‌ನಲ್ಲಿ ಶೂನ್ಯ ಅವಲಂಬನೆಯೊಂದಿಗೆ ಸುಧಾರಿತ 5ಜಿ ನೆಟ್‌ವರ್ಕ್‌ನೊಂದಿಗೆ ಸ್ಟ್ಯಾಂಡ್-ಅಲೋನ್ 5ಜಿ ಆರ್ಕಿಟೆಕ್ಚರ್ ಅನ್ನು ಒಳಗೊಂಡಿದೆ. ಹೀಗಿರುವ ಭಾರತದ ಏಕೈಕ ಆಪರೇಟರ್ ಜಿಯೋ ಆಗಿದೆ.

700 ಮೆಗಾ ಹಟ್ಜ್ , 3500 ಮೆಗಾ ಹಟ್ಜ್ , ಮತ್ತು 26 ಗಿಗಾ ಹಟ್ಜ್ ಬ್ಯಾಂಡ್‌ಗಳಾದ್ಯಂತ 5ಜಿ ಸ್ಪೆಕ್ಟ್ರಮ್‌ನ ಅತಿದೊಡ್ಡ ಮತ್ತು ಉತ್ತಮ ಮಿಶ್ರಣ ಹೊಂದಿದೆ; ಕ್ಯಾರಿಯರ್ ಒಟ್ಟುಗೂಡಿಸುವಿಕೆ (ಕ್ಯಾರಿಯರ್ ಅಗ್ರಿಗೇಷನ್) ಎಂಬ ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು, ಈ 5ಜಿ ಫ್ರೀಕ್ವೆನ್ಸಿಗಳನ್ನು ಏಕರೂಪದ “ಡೇಟಾ ಹೈವೇ” ಆಗಿ ಸಂಯೋಜಿಸುತ್ತದೆ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version