Site icon Vistara News

EV ಬ್ಲಾಸ್ಟ್ ಹಿಂದೆ ಬಿಸಿನೆಸ್‌ ಮಾಡೆಲ್‌ ಇದೆಯೇ?

EV ಬ್ಲಾಸ್ಟ್

ನವದೆಹಲಿ: ದೇಶದಲ್ಲಿ ಅನೇಕ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು ಸುಟ್ಟು ಬೂದಿಯಾದ ಅನೇಕ ಪ್ರಕರಣಗಳು ವರದಿಯಾಗಿತ್ತು. ಹೀಗೆ EV ಬ್ಲಾಸ್ಟ್ ಆಗುವ ಹಿಂದೆ ಏನು ಕಾರಣಗಳಿವೆ?

ಕಡಿಮೆ ಗುಣಮಟ್ಟದ ಬ್ಯಾಟರಿ ಬಳಸಿರುವುದು ಹಾಗೂ ಸರಿಯಾದ ತಪಾಸಣೆ ನಡೆಯದಿರುವುದು ಈ ದುರಂತಗಳಿಗೆ ಕಾರಣವಾಗಿದೆ ಎಂದು ಡಿಆರ್‌ಡಿಒ ತಿಳಿಸಿದೆ. ಈ ವರದಿಯ ಕುರಿತು ಮಾಹಿತಿ ಉಳ್ಳ ತಜ್ಞರೊಬ್ಬರು ಈ ಕುರಿತು ಪ್ರತಿಕ್ರಿಯಿಸಿ, ಎಲೆಕ್ಟ್ರಿಕ್‌ ವಾಹನಗಳ ಸಂಸ್ಥೆಯು ಉದ್ದೇಶಪೂರ್ವಕವಾಗಿ ಕಡಿಮೆ ಗುಣಪಟ್ಟದ ಬ್ಯಾಟರಿಯನ್ನು ಬಳಸಿರುವ ಸಾಧ್ಯತೆ ಇದೆ ಎಂದಿದ್ದಾರೆ.

ಭಾರತದಲ್ಲಿ ಪ್ರಸ್ತುತ ಎಲೆಕ್ಟ್ರಿಕ್‌ ವಾಹನಗಳ ಪಾಲು 2% ಇದೆ. 2030ರ ವೇಳೆಗೆ ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಪಾಲು ಸುಮಾರು 80% ಆಗುವ ಅಂದಾಜಿದೆ. ಈ ಧಾವಂತದಲ್ಲಿ ಅನೇಕ ಸಂಸ್ಥೆಗಳು ಉತ್ತಮ ಗುಣಮಟ್ಟದ ಬ್ಯಾಟರಿಯನ್ನು ಬಳಸಲಿಲ್ಲ. ವಾಹನಗಳನ್ನು ಮಾರುಕಟ್ಟೆಗೆ ಬಿಡುವುದೊಂದೆ ಪ್ರಮುಖವಾಗಿತ್ತು. ಈ ಕಾರಣದಿಂದ ಬ್ಯಾಟರಿಗಳನ್ನು ಸರಿಯಾಗಿ ತಪಾಸಣೆ ಮಾಡುವಲ್ಲಿ ನಿರ್ಲಕ್ಷ್ಯ ಮಾಡಲಾಗಿದೆ. ಈ ಕಾರಣದಿಂದಲೇ ಅನೇಕ ಅಗ್ನಿ ದುರಂತಕ್ಕೆ ಸಂಭವಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆದರೆ, ಇತ್ತೀಚೆಗೆ ಸಂಭವಿಸಿದ ಸಾಲು ಸಾಲು ದುರಂತಗಳಿಂದ ಗ್ರಾಹಕರು ಎಲೆಕ್ಟ್ರಿಕ್‌ ವಾಹನ ಖರೀದಿಯ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದಾರೆ. ಒಕಿನಾವಾ, ಪ್ಯೂರ್‌ ಇ.ವಿ, ಒಲಾ ಸೇರಿದಂತೆ ಅನೇಕ ಕಂಪನಿಗಳ ವಾಹನಗಳು ಎಲೆಕ್ಟ್ರಿಕ್‌ ವಾಹನವನ್ನು ಮಾರುಕಟ್ಟಗೆ ಪರಿಚಯಿಸಿದ್ದವು. ಎಲ್ಲ ಸಂಸ್ಥೆಗಳ ವಾಹನವೂ ಸುಟ್ಟು ಹೋಗಿದ್ದವು.

ದ್ವಿಚಕ್ರ ವಾಹನಗಳಿಂದ ಸಂಭವಿಸುತ್ತಿದ್ದರ ಬಗ್ಗೆ ತನಿಖೆ ನಡೆಸಲು ಸಾರಿಗೆ ಸಚಿವಾಲಯವು ಡಿಆರ್‌ಡಿಒ ಸಂಸ್ಥೆಯ ವಿಭಾಗವಾದ ಅಗ್ನಿ, ಸ್ಫೋಟಕ ಹಾಗೂ ಪರಿಸರ ಸಂರಕ್ಷಣಾ ಕೇಂದ್ರಕ್ಕೆ ಸೂಚನೆ ನೀಡಿತ್ತು. ಈ ಬಗ್ಗೆ ತನಿಖೆ ನಡೆಸಿದ ವಿಭಾಗವು ಕಳೆದ ವಾರ ಸಚಿವಾಲಯಕ್ಕೆ ವರದಿಮಾಡಿದೆ.

ದ್ವಿಚಕ್ರ ವಾಹನದಲ್ಲಿ ಉಪಯೋಗಿಸಲಾದ ಕಡಿಮೆ ಗುಣಪಟ್ಟದ ಬ್ಯಾಟರಿಗಳಿಂದ ಈ ದುರಂತ ಸಂಭವಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಎಲೆಕ್ಟ್ರಿಕ್‌ ವಾಹನಗಳನ್ನು ತಯಾರಿಸುವ ಸಂಸ್ಥೆಗಳು ಬ್ಯಾಟರಿಗಳನ್ನು ಎಲ್ಲ ವಾತಾವರಣದ ಸನ್ನಿವೇಶಗಳಲ್ಲಿ, ವಿವಿಧ ತಾಪಮಾನದಲ್ಲಿ ಸರಿಯಾದ ತಪಾಸಣೆ ನಡೆಸಿಲ್ಲ ಎಂದು ಹೇಳಲಾಗಿದೆ. ಮುಂದಿನ ವರ್ಷದಿಂದ ಬ್ಯಾಟರಿ ಗುಣಮಟ್ಟದ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿಲಾಗಿದೆ. ಹಾಗಾಗಿ, ಅತಿ ಶೀಘ್ರದಲ್ಲಿ ಗುಣಮಟ್ಟದ ಬ್ಯಾಟರಿಯನ್ನು ಅಳವಡಿಸುವುದು ಸೂಕ್ತ ಎಂದು ತಜ್ಞರು ತಿಳಿಸಿದ್ದಾರೆ.

ಪ್ರಸ್ತುತ‌ ಭಾರತದಲ್ಲಿ AIS-156 ಸ್ಟಾಂಡರ್ಡ್ ಬಳಸಲಾಗುತ್ತಿದೆ. ಮುಂದೆ ಇನ್ನೂ ಹೆಚ್ಚಿನ ಗುಣಮಟ್ಟದ AIS-048 ಸ್ಟಾಂಡರ್ಡ್‌ ಬಳಸಲಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: OLA EV ಅಗ್ನಿ ದುರಂತ; 1,441 ವಾಹನಗಳ ಹಿಂಪಡೆತ

Exit mobile version