ನವದೆಹಲಿ: ಬ್ಯಾಂಕ್ ಗ್ರಾಹಕರನ್ನೇ ಟಾರ್ಗೆಟ್ ಮಾಡಿಕೊಂಡಿರುವ, ಆಂಡ್ರಾಯ್ಡ್ ಸಾಧನಗಳಿಗೆ ಹಾನಿಯುಂಟು ಮಾಡವ ಹೊಸ ಮಾಲ್ವೇರ್‌ವೊಂದು ಪತ್ತೆಯಾಗಿದೆ. ಭಾರತದ 18 ಬ್ಯಾಂಕುಗಳ ಗ್ರಾಹಕರನ್ನು ಈ ಕುತಂತ್ರಾಂಶ ಡ್ರಿನಿಕ್ ಆಂಡ್ರಾಯ್ಡ್ ಟ್ರೋಜನ್ (Drinik Virus) ಟಾರ್ಗೆಟ್ ಮಾಡಿದೆ ಎಂದು ತಿಳಿದು ಬಂದಿದೆ. ಈ ಮಾಲ್ವೇರ್ ನಿಮ್ಮ ವೈಯಕ್ತಿಕ ಮಾಹಿತಿ ಹಾಗೂ ಬ್ಯಾಂಕ್ ಸಂಬಂಧಿ ಮಾಹಿತಿಯನ್ನು ನಿಮ್ಮ ಸ್ಮಾರ್ಟ್‌ಫೋನ್‌ಗಳಿಂದ ಕದಿಯುವ ಸಾಮರ್ಥ್ಯವನ್ನು ಹೊಂದಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸೇರಿದಂತೆ 27 ಬ್ಯಾಂಕಿಂಗ್ ಸಂಸ್ಥೆಗಳನ್ನು ಈ ವೈರಸ್ ಟಾರ್ಗೆಟ್ ಮಾಡಿಕೊಂಡಿದೆ. ಡ್ರಿನಿಕ್ ವೈರಸ್‌ನ ಹೊಸ ಆವೃತ್ತಿಯು ಬಳಕೆದಾರರನ್ನು ಫಿಶಿಂಗ್ ಪೇಜ್‌ಗೆ ಕರೆದೊಯ್ಯುತ್ತದೆ ಮತ್ತು ಬಳಕೆದಾರರ ಎಲ್ಲ ಮಾಹಿತಿಯನ್ನು ಕದಿಯುತ್ತದೆ. ಈ ಮಾಲ್ವೇರ್ ಅಭಿವೃದ್ಧಿಪಡಿಸಿದವರು ಪೂರ್ತಿಯಾಗಿ ಆಂಡ್ರಾಯ್ಡ್ ಬ್ಯಾಂಕಿಂಗ್ ಟ್ರೋಜನ್ ಆಗಿ ರೂಪಿಸಿದ್ದಾರೆ.
ಇಷ್ಟು ಮಾತ್ರವಲ್ಲದೇ, ಬಳಕೆದಾರರು ತಪ್ಪಾಗಿ ಇನ್‌ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್ ಮ್ಯಾನೇಜ್‌ಮೆಂಟ್ ಟೂಲ್ ಆಗಿ ಡೌನ್‌ಲೋಡ್ ಮಾಡಿಕೊಂಡರೆ, ಆಗ ಈ ಮಾಲ್ವೇರ್, ರೀಡ್, ರಿಸೀವ್, ಸಂದೇಶಗಳನ್ನು ಕಳುಹಿಸುವ ಅನುಮತಿಯನ್ನು ಕೇಳುತ್ತದೆ. ಇದಕ್ಕೆ ಹೆಚ್ಚುವರಿಯಾಗಿ ಎಲ್ಲ ಕಾಲ್ ಲಾಗ್, ಎಕ್ಸ್‌ಟರ್ನಲ್ ಸ್ಟೋರೇಜ್ ಅನುಮತಿಯನ್ನೂ ಪಡೆದುಕೊಳ್ಳುತ್ತದೆ. ಈ ಅನುಮತಿ ಸಿಗುತ್ತಿದ್ದಂತೆ ಅದು ಗೂಗಲ್ ಪ್ಲೇ ಪ್ರೋಟೆಕ್ಟ್ ಅನ್ನು ಡಿಸೇಬಲ್ ಮಾಡಿ ಬಿಡುತ್ತದೆ. ಈ ಹಿನ್ನೆಲೆಯಲ್ಲಿ ಬಳಕೆದಾರರು ಹೆಚ್ಚು ಸುರಕ್ಷತೆಯಿಂದ ಇರುವುದು ಅತ್ಯಗತ್ಯವಾಗಿದೆ.
ಇದನ್ನೂ ಓದಿ | ವಿಸ್ತಾರ Explainer | ನಿಮ್ಮ ಹಣ ಕದಿಯುವ SOVA Virus! ಮೊಬೈಲ್ ಬಳಸುವಾಗ ಹುಷಾರ್!