Site icon Vistara News

e Airplane | ಯಶಸ್ವಿ ಹಾರಾಟ ನಡೆಸಿದ ಜಗತ್ತಿನ ಮೊದಲ ಇ- ಪ್ರಯಾಣಿಕ ವಿಮಾನ!

ನವ ದೆಹಲಿ: ಜಗತ್ತಿನ ಮೊದಲ ಇ-ಏರೋಪ್ಲೇನ್ (e Airplane) ಯಶಸ್ವಿಯಾಗಿ ಹಾರಾಟ ನಡೆಸಿದೆ. ಮಂಗಳವಾರ ಹಾರಾಟ ಕೈಗೊಂಡ ದಿ ಎವಿಯೇಷನ್ ಏರ್‌ಕ್ರಾಫ್ಟ್ ಅಲೈಸ್ ಏರೋಪ್ಲೇನ್ ದಾಖಲೆ ಬರೆದಿದೆ. ಈ ಹಿಂದೆ ಈ ಎಲೆಕ್ಟ್ರಿಕ್ ಏರೋಪ್ಲೇನ್ ಅನೇಕ ಹಿನ್ನಡೆಗಳನ್ನು ಅನಭವಿಸಿತ್ತು. ಆದರೆ, ಈಗ ಯಶಸ್ವಿಯಾಗಿ ಹಾರಾಟ ನಡೆಸುವ ಮೂಲಕ ಇ-ವಿಮಾನ ಭರ್ಜರಿಯಾಗಿ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದೆ.

ಈ ಇ-ಅಲೈಸ್ ಫ್ಲೈಟ್ ಸುಮಾರು 8 ನಿಮಿಷಗಳ ಕಾಲ ಹಾರಾಟ ನಡೆಸಿದೆ. ವಾಷಿಂಗ್ಟನ್‌ನ ಗ್ರಾಂಟ್ ಕೌಂಟೀ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಿಂದ ಮಂಗಳವಾರ ಬೆಳಗ್ಗೆ ಟೇಕ್ ಆಫ್ ಆದ ಇ-ವಿಮಾನವು ಗರಿಷ್ಠ 3,500 ಅಡಿ ಎತ್ತರದವರೆಗೂ ಹಾರಾಟ ನಡೆಸಿತು.

ಈ ವಿಮಾನದ ವೇಗವು ಗಂಟೆಗೆ ಗರಿಷ್ಠ 260 ನಾಟ್ಸ್ ಇತ್ತು. ಅಂದರೆ, ಪ್ರತಿ ಗಂಟೆಗೆ 300 ಮೈಲಿ. 640 ಕಿಲೋ ವ್ಯಾಟ್ (858 ಎಚ್‌ಪಿ) ಸಾಮರ್ಥ್ಯ ಎರಡು ಎಂಜಿನ್‌ಗಳನ್ನು ಬಳಸಲಾಗಿತ್ತು. ಆದರೆ, ಈ ವಿಮಾನಕ್ಕೆ ಬಳಸಲಾದ ಬ್ಯಾಟರಿ ಸಾಮರ್ಥ್ಯವನ್ನು ಬಹಿರಂಗಗೊಳಿಸಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕಂಪನಿಯ ಸಿಇಒ ಜಾರ್ಜರೀ ಡೇವಿಸ್ ಅವರು ಮಾತನಾಡಿ, ಕಂಪನಿಯು ಗರಿಷ್ಠ 200ರಿಂದ 300 ನಾಟಿಕಲ್ ಮೈಲ್ಸ್ ವೇಗದಲ್ಲಿ ಚಲಿಸುವ ಸಾಮರ್ಥ್ಯದ ಎಂಜಿನ್‌ಕ್ಕೆ ಪ್ರಯತ್ನಿಸುತ್ತಿದ್ದೇವೆ. ಗರಿಷ್ಠ 26000 ಪೌಂಡ್ಸ್ ತೂಕವನ್ನು ಈ ಇ-ವಿಮಾನ ಹೊತ್ತೊಯ್ಯಬಲ್ಲದು ಎಂದು ಹೇಳಿದ್ದಾರೆ.

ಹಾರಾಟ ನಡೆಸಿದ್ದು ಪ್ಯಾಸೇಂಜರ್ ವಿಮಾನವಾದರೂ ಯಾವುದೇ ಪ್ರಯಾಣಿಕರು ಈ ವಿಮಾನದಲ್ಲಿ ಇರಲಿಲ್ಲ. ಸ್ಟೀವ್ ಕ್ರೇನ್ ಅವರು ಪೈಲಟ್ ಆಗಿದ್ದರು. ಇ-ವಿಮಾನ ನಿಟ್ಟಿನಲ್ಲಿ ನಾವೀಗ ಚಿಕ್ಕ ಹೆಜ್ಜೆಗಳನ್ನು ಇಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಭರವಸೆಗಳಿವೆ ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ |Electric double-decker bus | ಭಾರತದ ಮೊಟ್ಟ ಮೊದಲ ಎಲೆಕ್ಟ್ರಿಕ್‌ ಡಬಲ್‌-ಡೆಕ್ಕರ್‌ ಬಸ್‌ಗೆ ಚಾಲನೆ

Exit mobile version