ನವ ದೆಹಲಿ: ಬಳಕೆದಾರರಿಗೆ ಶೀಘ್ರವೇ ವಾಟ್ಸ್ಆ್ಯಪ್ ಮೆಸೇಜ್ ಎಡಿಟ್ (Edited Message) ಮಾಡುವ ಅವಕಾಶ ದೊರೆಯಲಿದೆ. ಈ ವಿಷಯವನ್ನು ಈ ಹಿಂದೆಯೇ ವಾಟ್ಸ್ಆ್ಯಪ್ ಸ್ವತಃ ಘೋಷಣೆ ಮಾಡಿದೆ. ಹೊಸ ನ್ಯೂಸ್ ಏನೆಂದರೆ, ವಾಟ್ಸ್ಆ್ಯಪ್ ಸಂದೇಶವನ್ನು ಎಡಿಟ್ ಮಾಡಿದ್ದರೆ, ಅಂಥ ಮೆಸೇಜ್ ಮೇಲೆ Edited ಎಂಬ ಲೇಬಲ್ ಕಾಣಿಸಿಕೊಳ್ಳುತ್ತಿದೆ! ಅಂದರೆ, ವಾಟ್ಸ್ಆ್ಯಪ್ ಈಗ ಹೊಸ ಫೀಚರ್ ಅನ್ನು ಪರೀಕ್ಷಿಸುತ್ತಿದೆ ಎಂಬುದು ಖಚಿತವಾಗಿದೆ.
ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಹೊಸ 2.22.22.14 ವರ್ಷನ್‌ನಲ್ಲಿ ಈ ಹೊಸ ಫೀಚರ್ ಸಕ್ರಿಯವಾಗಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ. ಸದ್ಯಕ್ಕೆ ಈ ಹೊಸ ಫೀಚರ್ ಬೀಟಾ ವರ್ಷನ್ ಬಳಕೆದಾರರಿಗೆ ಮಾತ್ರವೇ ಲಭ್ಯವಾಗುತ್ತಿದೆ. ಸಂವಹನದಲ್ಲಿ ಪಾರದರ್ಶಕತೆಯನ್ನು ತರುವುದಕ್ಕಾಗಿ ವಾಟ್ಸ್ಆ್ಯಪ್ Edited ಲೇಬಲ್ ಸಂಬಂಧ ಕೆಲಸ ಮಾಡುತ್ತಿದೆ ಎಂದು ತಿಳಿದು ಬಂದಿದೆ.
ಈ ಹೊಸ ಫೀಚರ್ ಎಲ್ಲರಿಗೂ ಲಭ್ಯವಾದಾಗ, ಬಳಕೆದಾರರು ತಾವು ಸೆಂಡ್ ಮಾಡಿದ 15 ನಿಮಿಷದೊಳಗೇ ಮಾತ್ರವೇ ಎಡಿಟ್ ಮಾಡಲು ಸಾಧ್ಯವಾಗಲಿದೆ. ಮೆಸೇಜ್ ಮಾಡಿದ 15 ನಿಮಿಷದೊಳಗೇ ಎಡಿಟ್ ಮಾಡಬೇಕು. ಆದರೆ, ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ವಾಟ್ಸ್‌ಆ್ಯಪ್ ಇನ್ನೂ ನೀಡಿಲ್ಲ. ಬೀಟಾ ವರ್ಷನ್‌ನಲ್ಲಿರುವ ಈ ಫೀಚರ್ ಎಲ್ಲರಿಗೂ ಯಾವಾಗ ಲಭ್ಯವಾಗಲಿದೆ ಎಂಬ ಯಾವುದೇ ಮಾಹಿತಿಯನ್ನೂ ಕಂಪನಿಯು ಒದಗಿಸಿಲ್ಲ.
ಎಡಿಟ್ ಹೇಗೆ ಮಾಡುವುದು?
ಕಳಹಿಸಲಾದ ಮೆಸೇಜ್ ಅನ್ನು ದೀರ್ಘ ಸಮಯದವರಿಗೆ ಒತ್ತಿ ಹಿಡಿಯಬೇಕು. ಆಗ ಪಾಪ್ ಅಪ್ ಮೆನ್ಯುವಿನಲ್ಲಿ ಕಾಣಿಸಿಕೊಳ್ಳುವ ಎಡಿಟ್ ಆಪ್ಷನ್ ಆಯ್ಕೆ ಮಾಡಿಕೊಳ್ಳಬೇಕು. ಸದ್ಯಕ್ಕೆ ಈ ಪಾಪ್ ಮೆನ್ಯುವಿನಲ್ಲಿ ಇನ್ಫೋ ಮತ್ತು ಕಾಪಿ ಆಪ್ಷನ್‌ಗಳು ಮಾತ್ರ ಇವೆ.
1024 ಮೇಂಬರ್ಸ್!
ಎಡಿಟ್ ಬಟನ್ ಹೊಸ ಫೀಚರ್ ಜತೆಗೆ ಗ್ರೂಪ್ ಮೇಂಬರ್ಸ್ ಸಂಖ್ಯೆಯನ್ನು ಹೆಚ್ಚಿಸುವ ಸಂಬಂಧವು ವಾಟ್ಸ್ಆ್ಯಪ್ ಕೆಲಸ ಮಾಡುತ್ತಿದೆ. ಈ ಫೀಚರ್ ಸಾಧ್ಯವಾದರೆ, ಗ್ರೂಪ್‌ನಲ್ಲಿ 1024 ಜನರು ಭಾಗವಹಿಸಬಹುದು. ಸದ್ಯಕ್ಕೆ 512 ಜನರಿಗೆ ಮಾತ್ರವೇ ಅವಕಾಶವಿದೆ.
ಇದನ್ನೂ ಓದಿ | WhatsApp Edit | ಇನ್ನು ಮುಂದೆ ವಾಟ್ಸ್ಆ್ಯಪ್ ಮೆಸೇಜ್ ಎಡಿಟ್ ಮಾಡಬಹುದು! ಆದರೆ..