Site icon Vistara News

Twitter | ಟ್ವಿಟರ್‌ಗೆ ಪೇವಾಲ್! ಬಳಕೆಗೆ ದುಡ್ಡು ಕೊಡಬೇಕಾ?

Elon Musk

ನವದೆಹಲಿ: ಟ್ವಿಟರ್ (Twitter) ಓನರ್ ಎಲಾನ್ ಮಸ್ಕ್ (Elon Musk) ಅವರು ಕಂಪನಿ ಆದಾಯವನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದ್ದಾರೆ. ಆ ಕಾರಣಕ್ಕಾಗಿಯೇ ಅರ್ಧದಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದಾರೆ. ಬ್ಲೂಟಿಕ್ ಚಂದಾದರಿಕೆಯನ್ನು 8 ಡಾಲರ್‌ಗೆ ಹೆಚ್ಚಿಸಿದ್ದಾರೆ. ಇದೀಗ ಅವರು ಮತ್ತೊಂದು ತಂತ್ರವನ್ನು ಹೂಡಿದ್ದಾರೆಂಬ ವರದಿಗಳಿವೆ. ಟ್ವಿಟರ್ ಅನ್ನು ಪೇವಾಲ್‌ (Paywall) ಮೂಲಕ ನಿರ್ಬಂಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಿರ್ದಿಷ್ಟವಾಗಿ ಈ ಪೇವಾಲ್ ಯಾವ ರೀತಿಯಲ್ಲಿ ಇರಲಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಹಾಗಿದ್ದೂ, ಡೇಲಿ ಮೇಲ್ ವರದಿ ಮಾಡಿರುವ ಪ್ರಕಾರ, ಯಾವುದೇ ಬಳಕೆದಾರರಿಗೆ ನಿರ್ದಿಷ್ಟ ಅವಧಿಗೆ ಬಳಸಲು ಅನುಮತಿ ನೀಡುವ ಟ್ವಿಟರ್, ನಿರ್ದಿಷ್ಟ ಅವಧಿಯು ಮುಕ್ತಾಯವಾಗುತ್ತಿದ್ದಂತೆ ಚಂದಾ ಮೂಲಕ ಬಳಕೆಗೆ ಅವಕಾಶ ಕಲ್ಪಿಸಿಕೊಡಲಿದೆ ಎಂದು ತಿಳಿದು ಬಂದಿದೆ. ಈ ಉಚಿತ ಅವಧಿ ಎಷ್ಟರ ಮಟ್ಟಿಗೆ ಇರಲಿದೆ ಎಂಬುದು ಗೊತ್ತಿಲ್ಲ. ಹಾಗಿದ್ದೂ ಈ ಬಗ್ಗೆ ಟ್ವಿಟರ್ ಯಾವುದೇ ಮಾಹಿತಿಯನ್ನು ನೀಡಿಲ್ಲ. ಹಾಗೆಯೇ ಎಷ್ಟು ಶುಲ್ಕ ವಿಧಿಸಬಹುದು ಎಂಬ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ.

ಟ್ವಿಟರ್‌ ಅನ್ನು ಇತ್ತೀಚೆಗಷ್ಟೇ ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಂಡ ಎಲಾನ್ ಮಸ್ಕ್ ಹಲವು ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಮೊದಲಿಗೆ ಟ್ವಿಟರ್ ಸಿಇಒ ಪರಾಗ್ ಅಗ್ರವಾಲ್ ಅವರನ್ನು ಕೆಲಸದಿಂದ ವಜಾ ಮಾಡಿದರು. ಬಳಿಕ, ಅರ್ಧದಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದಾರೆ. ಜತೆಗೇ, ಬ್ಲೂಟಿಕ್ ಚಂದಾದಾರಿಕೆಯ ಮೊತ್ತವನ್ನು 4 ಡಾಲರ್‌ನಿಂದ 8 ಡಾಲರ್‌ಗೆ ಏರಿಕೆ ಮಾಡಿದ್ದಾರೆ.

ಇದನ್ನೂ ಓದಿ | Twitter | ಟ್ವಿಟರ್‌ಗೆ ಇನ್ನು ಕಂಟೆಂಟ್ ಮಾಡರೇಷನ್ ಕೌನ್ಸಿಲ್! ಎಲಾನ್ ಮಸ್ಕ್ ಘೋಷಣೆ

Exit mobile version