ಹೊಸದಿಲ್ಲಿ: ದೇಶದಲ್ಲಿ ಇಂದು ತುಂಬಾ ಮಂದಿಯ ಸ್ಮಾರ್ಟ್‌ಫೋನ್‌ಗಳಿಗೆ ಇಂದು ಎಮರ್ಜೆನ್ಸಿ ಅಲರ್ಟ್‌ಗಳು ಹೋಗಿವೆ. ʼemergency alert: severe’ ಎಂಬ ಫ್ಲ್ಯಾಶ್ ಮೊಬೈಲ್‌ಗಳಲ್ಲಿ ಬಂದುದರಿಂದ ತುಂಬಾ ಮಂದಿ ಗೊಂದಲಕ್ಕೀಡಾದರು. ನಂತರ ಈ ಬಗ್ಗೆ ದೂರಸಂಪರ್ಕ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಿದೆ.
ʼemergency alert: severe’ ಫ್ಲ್ಯಾಷ್‌ನೊಂದಿಗೆ ಜೋರಾದ ಬೀಪ್ ಕೂಡ ಕೇಳಿಬಂದಿದೆ. ಇದೊದು ತುರ್ತು ಎಚ್ಚರಿಕೆ ವ್ಯವಸ್ಥೆಯ ಪರೀಕ್ಷಾ ಫ್ಲಾಶ್ ಎಂದು ಇಲಾಖೆ ತಿಳಿಸಿದೆ.
“ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ಇದಕ್ಕೆ ನಿಮ್ಮ ಕಡೆಯಿಂದ ಯಾವುದೇ ಕ್ರಮದ ಅಗತ್ಯವಿಲ್ಲ. ಈ ಸಂದೇಶವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ TEST Pan-India ತುರ್ತು ಎಚ್ಚರಿಕೆ ವ್ಯವಸ್ಥೆಯಲ್ಲಿ ಕಳುಹಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ವ್ಯವಸ್ಥೆ” ಎಂದು ಇಲಾಖೆ ಎಲ್ಲರಿಗೆ ಮರಳಿ ಸಂದೇಶ ಕಳಿಸಿದೆ.
ಇಂದು ಮಧ್ಯಾಹ್ನ 12.19ಕ್ಕೆ ಎಲ್ಲಾ ಆಂಡ್ರಾಯ್ಡ್ ಫೋನ್‌ಗಳಲ್ಲಿ ಈ ಎಚ್ಚರಿಕೆ ಸಂದೇಶ ಬಂದಿತು. ಮೊಬೈಲ್ ಆಪರೇಟರ್‌ಗಳು ಮತ್ತು ಸೆಲ್ ಬ್ರಾಡ್‌ಕಾಸ್ಟ್ ಸಿಸ್ಟಮ್‌ಗಳ ತುರ್ತು ಎಚ್ಚರಿಕೆ ಪ್ರಸಾರ ಸಾಮರ್ಥ್ಯಗಳ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ನಿರ್ಣಯಿಸಲು ವಿವಿಧ ಪ್ರದೇಶಗಳಲ್ಲಿ ಕಾಲಕಾಲಕ್ಕೆ ಇಂತಹ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ದೂರಸಂಪರ್ಕ ಇಲಾಖೆಯ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ತಿಳಿಸಿದೆ.
ಇದನ್ನೂ ಓದಿ: WhatsApp Channels: ವಾಟ್ಸ್ಯಾಪ್ ಹೊಸ ಫೀಚರ್ ʼಚಾನೆಲ್ʼ ಈಗ ಭಾರತದಲ್ಲೂ ಲಭ್ಯ; ಏನಿದು, ಸೇರೋದು ಹೇಗೆ?