ತಂತ್ರಜ್ಞಾನ
Emergency Alert: ನಿಮ್ಮ ಮೊಬೈಲ್‌ಗೂ ಎಮರ್ಜೆನ್ಸಿ ಅಲರ್ಟ್ ಬಂತಾ? ಕಾರಣ ಇಲ್ಲಿದೆ
ʼemergency alert: severe’ ಫ್ಲ್ಯಾಷ್‌ನೊಂದಿಗೆ ಜೋರಾದ ಬೀಪ್ ಕೂಡ ಕೇಳಿಬಂದಿದೆ. ಇದೊದು ತುರ್ತು ಎಚ್ಚರಿಕೆ ವ್ಯವಸ್ಥೆಯ ಪರೀಕ್ಷಾ ಫ್ಲಾಶ್ ಎಂದು ಇಲಾಖೆ ತಿಳಿಸಿದೆ.
ಹೊಸದಿಲ್ಲಿ: ದೇಶದಲ್ಲಿ ಇಂದು ತುಂಬಾ ಮಂದಿಯ ಸ್ಮಾರ್ಟ್‌ಫೋನ್‌ಗಳಿಗೆ ಇಂದು ಎಮರ್ಜೆನ್ಸಿ ಅಲರ್ಟ್‌ಗಳು ಹೋಗಿವೆ. ʼemergency alert: severe’ ಎಂಬ ಫ್ಲ್ಯಾಶ್ ಮೊಬೈಲ್‌ಗಳಲ್ಲಿ ಬಂದುದರಿಂದ ತುಂಬಾ ಮಂದಿ ಗೊಂದಲಕ್ಕೀಡಾದರು. ನಂತರ ಈ ಬಗ್ಗೆ ದೂರಸಂಪರ್ಕ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಿದೆ.
ʼemergency alert: severe’ ಫ್ಲ್ಯಾಷ್‌ನೊಂದಿಗೆ ಜೋರಾದ ಬೀಪ್ ಕೂಡ ಕೇಳಿಬಂದಿದೆ. ಇದೊದು ತುರ್ತು ಎಚ್ಚರಿಕೆ ವ್ಯವಸ್ಥೆಯ ಪರೀಕ್ಷಾ ಫ್ಲಾಶ್ ಎಂದು ಇಲಾಖೆ ತಿಳಿಸಿದೆ.
“ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ಇದಕ್ಕೆ ನಿಮ್ಮ ಕಡೆಯಿಂದ ಯಾವುದೇ ಕ್ರಮದ ಅಗತ್ಯವಿಲ್ಲ. ಈ ಸಂದೇಶವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ TEST Pan-India ತುರ್ತು ಎಚ್ಚರಿಕೆ ವ್ಯವಸ್ಥೆಯಲ್ಲಿ ಕಳುಹಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ವ್ಯವಸ್ಥೆ” ಎಂದು ಇಲಾಖೆ ಎಲ್ಲರಿಗೆ ಮರಳಿ ಸಂದೇಶ ಕಳಿಸಿದೆ.
ಇಂದು ಮಧ್ಯಾಹ್ನ 12.19ಕ್ಕೆ ಎಲ್ಲಾ ಆಂಡ್ರಾಯ್ಡ್ ಫೋನ್‌ಗಳಲ್ಲಿ ಈ ಎಚ್ಚರಿಕೆ ಸಂದೇಶ ಬಂದಿತು. ಮೊಬೈಲ್ ಆಪರೇಟರ್‌ಗಳು ಮತ್ತು ಸೆಲ್ ಬ್ರಾಡ್‌ಕಾಸ್ಟ್ ಸಿಸ್ಟಮ್‌ಗಳ ತುರ್ತು ಎಚ್ಚರಿಕೆ ಪ್ರಸಾರ ಸಾಮರ್ಥ್ಯಗಳ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ನಿರ್ಣಯಿಸಲು ವಿವಿಧ ಪ್ರದೇಶಗಳಲ್ಲಿ ಕಾಲಕಾಲಕ್ಕೆ ಇಂತಹ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ದೂರಸಂಪರ್ಕ ಇಲಾಖೆಯ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ತಿಳಿಸಿದೆ.
ಇದನ್ನೂ ಓದಿ: WhatsApp Channels: ವಾಟ್ಸ್ಯಾಪ್ ಹೊಸ ಫೀಚರ್ ʼಚಾನೆಲ್ʼ ಈಗ ಭಾರತದಲ್ಲೂ ಲಭ್ಯ; ಏನಿದು, ಸೇರೋದು ಹೇಗೆ?
ಆಟೋಮೊಬೈಲ್
Hydrogen fuel cell Bus : ದೆಹಲಿಯಲ್ಲಿ ಸಂಚರಿಸಲಿದೆ ಅತ್ಯಾಧುನಿಕ ಹೈಡ್ರೋಜನ್ ಬಸ್, ಏನಿದರ ಪ್ರಯೋಜನ?
ದೆಹಲಿಯಲ್ಲಿ ಮೊದಲ ಗ್ರೀನ್ ಹೈಡ್ರೋಜನ್ ಫ್ಯೂಯಲ್ ಸೆಲ್ (Hydrogen fuel cell) ಬಸ್ಗೆ ಕೇಂದ್ರ ಸಚಿವರು ಹಸಿರು ನಿಶಾನೆ ತೋರಲಿದ್ದಾರೆ. ಇಂಡಿಯನ್ ಆಯಿಲ್ 15 ಫ್ಯೂಯಲ್ ಸೆಲ್ ಬಸ್ ಗಳ ಪ್ರಯೋಗಗಳನ್ನು ನಡೆಸಲಿದೆ.
ನವ ದೆಹಲಿ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ದೆಹಲಿಯ ಕರ್ತವ್ಯ ಪಥದಲ್ಲಿ ಭಾರತದ ಮೊದಲ ಹಸಿರು ಹೈಡ್ರೋಜನ್ ಇಂಧನ ಕೋಶ ಚಾಲಿತ ಬಸ್ (Hydrogen fuel cell Bus) ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದ ನಿಗಿದತ ಮಾರ್ಗಗಳಲ್ಲಿ ಹಸಿರು ಹೈಡ್ರೋಜನ್ ನಿಂದ ಚಾಲಿತ 15 ಬಸ್ ಗಳ ಕಾರ್ಯಾಚರಣೆ ನಡೆಯಲಿದೆ. ಇಂಡಿಯನ್ ಆಯಿಲ್ ಸಂಸ್ಥೆಯು ಪ್ರಯೋಗಾರ್ಥವಾಗಿ ಈ ಬಸ್ಗಳ ಸಂಚಾರವನ್ನು ನಡೆಸಲಿದೆ. ಇಂಡಿಯಾ ಗೇಟ್ ನಲ್ಲಿ ಮೊದಲ ಎರಡು ಫ್ಯೂಯಲ್ ಸೆಲ್ ಬಸ್ಗಳಿಗೆ ಚಾಲನೆ ಸಿಗಲಿದೆ.
ಈ ಯೋಜನೆಯು ಒಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಲಿದೆ. ಫ್ಯೂಯಲ್ ಸೆಲ್ ಬಸ್ ಕಾರ್ಯಾಚರಣೆಗಾಗಿ 350 ಬಾರ್ ಒತ್ತಡದಲ್ಲಿ ಗ್ರೀನ್ ಹೈಡ್ರೋಜನ್ ಒದಗಿಸುವ ಭಾರತದ ಮೊದಲ ಯೋಜನೆಯಾಗಿದೆ. ಇಂಡಿಯನ್ ಆಯಿಲ್ ಫರಿದಾಬಾದ್ನಲ್ಲಿರುವ ತನ್ನ ಆರ್ &ಡಿ ಕ್ಯಾಂಪಸ್ನಲ್ಲಿ ಇಂಧನ ತುಂಬಿಸುವ ಸೌಲಭ್ಯವನ್ನು ಸ್ಥಾಪಿಸಿದೆ, ಇದು ಸೌರ ಪಿವಿ ಫಲಕಗಳನ್ನು ಬಳಸಿಕೊಂಡು ವಿದ್ಯುದ್ವಿಭಜನೆಯ ಮೂಲಕ ಉತ್ಪಾದಿಸಿದ ಹಸಿರು ಹೈಡ್ರೋಜನ್ ಅನ್ನು ತುಂಬಿಸಲಿದೆ.
ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿಕೊಂಡು ಉತ್ಪಾದಿಸುವ ಹಸಿರು ಹೈಡ್ರೋಜನ್ ಅನ್ನು ಕಡಿಮೆ ಇಂಗಾಲದ ಇಂಧನ ಮತ್ತು ಆಮದು ಮಾಡಲಾಗುವ ಪೆಟ್ರೋಲಿಯಂ ಇಂಧನಗಳಿಗೆ ಪರ್ಯಾಯವೆಂದು ಹೇಳಲಾಗಿದೆ . ಇದು ಭಾರತದ ಹೇರಳವಾದ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತದೆ. ಪೆಟ್ರೋಲಿಯಂ ಸಂಸ್ಕರಣೆ, ರಸಗೊಬ್ಬರ ಉತ್ಪಾದನೆ ಮತ್ತು ಉಕ್ಕು ಉತ್ಪಾದನೆಯಂತಹ ಕ್ಷೇತ್ರಗಳಿಗೂ ಪೂರಕವಾಗಿದೆ.
ಇದನ್ನೂ ಓದಿ : Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
ಸಂಭಾವ್ಯ ಇಂಧನ, ಶೂನ್ಯ ಮಾಲಿನ್ಯ
ಇ-ಮೊಬಿಲಿಟಿ ಕ್ಷೇತ್ರದಲ್ಲಿ ಹೈಡ್ರೋಜನ್ ಇಂಧನ ಕೋಶ ತಂತ್ರಜ್ಞಾನವು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಹೈಡ್ರೋಜನ್ ಕೋಶಗಳನ್ನು ಇಂಧನವಾಗಿ ಪರಿವರ್ತಿಸುವ ತಾಂತ್ರಿಕತೆ ಇದಾಗಿದೆ. ಇಂಧನ ಕೋಶಗಳಲ್ಲಿನ ಎಲೆಕ್ಟ್ರೋ-ರಾಸಾಯನಿಕ ಪ್ರಕ್ರಿಯೆಯು ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಕರೆಂಟ್ ಮೂಲಕ ಬಸ್ಗಳಲ್ಲಿ ಅಳವಡಿಸಿರುವ ಬ್ಯಾಟರಿಗಳನ್ನು ಚಾರ್ಜ್ ಮಾಡಲಾಗುತ್ತದೆ. ಅದರ ಮೂಲಕ ಬಸ್ನ ಮೋಟಾರ್ಗೆ ಚಾಲನೆ ನೀಡಲಾಗುತ್ತದೆ.
ಬ್ಯಾಟರಿ ಚಾಲಿತ ವಾಹನಗಳಿಗೆ ಹೋಲಿಸಿದರೆ ಫ್ಯೂಯಲ್ ಸೆಲ್ ವಾಹನಗಳು ಕಡಿಮೆ ಸಮಯದಲ್ಲಿ ಇಂಧನ ತುಂಬಿಸುವ ಅನುಕೂಲಗಳನ್ನು ಹೊಂದಿವೆ. ಹೈಡ್ರೋಜನ್ ಅನಿಲವನ್ನು ಹೆಚ್ಚಿನ ಒತ್ತಡದಲ್ಲಿ ಸಂಗ್ರಹಿಸಲಾಗುತ್ತದೆ. ಸಾಮಾನ್ಯವಾಗಿ 350 ಬಾರ್ನಲ್ಲಿ ಇರುತ್ತದೆ. ಬ್ಯಾಟರಿ ಚಾಲಿತ ವಾಹನಗಳನ್ನು ಚಾರ್ಜ್ ಮಾಡಲೆಂದು ದೀರ್ಘ ಕಾಲ ನಿಲ್ಲಿಸಬೇಕಾಗುತ್ತದೆ. ಆದರೆ, ಇದರಲ್ಲಿ ಪೆಟ್ರೋಲ್ನಂತೆಯೇ ಹೈಡ್ರೋಜನ್ ತುಂಬಿಸಬಹುದಾಗಿದೆ.
ಈ ಮೊದಲ ಎರಡು ಬಸ್ಸುಗಳು ಬಿಡುಗಡೆಯಾದ ನಂತರ, ದೀರ್ಘಕಾಲೀನ ಕಾರ್ಯಕ್ಷಮತೆ ಮತ್ತು ಬಾಳಿಕೆಯನ್ನು ಪರಿಶೀಲಿಸಲು 300,000 ಕಿಲೋಮೀಟರ್ ಸಂಚಾರ ನಡೆಸಲಿದೆ. ಇದು ಶೂನ್ಯ ಹೊರ ಸೂಸುವಿಕೆಯನ್ನು ಹೊಂದಿದೆ.
ತಂತ್ರಜ್ಞಾನ
Apple Iphone : ಐಫೋನ್ ಬಳಕೆದಾರರೇ ಇಲ್ಲಿ ಕೇಳಿ; ನಿಮಗೊಂದು ಸೆಕ್ಯುರಿಟಿ ಅಲರ್ಟ್ ಕೊಟ್ಟಿದೆ ಕೇಂದ್ರ ಸರ್ಕಾರ
ಐಫೋನ್ 6ಎಸ್, ಐಫೋನ್ 7 ಸರಣಿ, (Apple Iphone) ಐಫೋನ್ 8 ಸರಣಿ ಮತ್ತು ಐಫೋನ್ ಎಸ್ಇ ಮೊದಲ ತಲೆಮಾರಿನ ಸೇರಿದಂತೆ ಹಳೆಯ ಮಾದರಿಗಳು ಸಹ ದುರ್ಬಲವಾಗಿವೆ ಎಂದು ಸಿಇಆರ್ಟಿ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ತಿಳಿಸಿದೆ.
ನವದೆಹಲಿ: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್ಟಿ -ಇನ್) ಭಾರತದಲ್ಲಿ ಐಫೋನ್ (Apple Iphone) ಬಳಕೆದಾರರಿಗೆ ಭದ್ರತಾ ಎಚ್ಚರಿಕೆ ನೀಡಿದೆ. ಐಫೋನ್ 6ಎಸ್, ಐಫೋನ್ 7 ಸರಣಿ, ಐಫೋನ್ 8 ಸರಣಿ ಮತ್ತು ಐಫೋನ್ ಎಸ್ಇ ಮೊದಲ ತಲೆಮಾರಿನ ಸೇರಿದಂತೆ ಹಳೆಯ ಮಾದರಿಗಳು ದುರ್ಬಲವಾಗಿವೆ ಎಂದು ಸಿಇಆರ್ಟಿ -ಇನ್ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಉಲ್ಲೇಖಿಸಿದೆ. ಐಪ್ಯಾಡ್ ಏರ್, ಪ್ರೊ ಮತ್ತು ಮಿನಿ ಸೇರಿದಂತೆ ಐಪ್ಯಾಡ್ ಬಳಕೆದಾರರು ಐಪ್ಯಾಡ್ ಒಎಸ್ಗಳನ್ನು ಅಪ್‌ಡೇಟ್ ಮಾಡುವಂತೆ ಸೂಚಿಸಲಾಗಿದೆ.
ನಿಮ್ಮ ಐಫೋನ್ ಅನ್ನು ಅಪ್ಡೇಡ್ ಮಾಡಲು ಸೆಟ್ಟಿಂಗ್ಸ್ > ಜನರಲ್ > ಸಾಫ್ಟ್ ವೇರ್ ಅಪ್ಡೇಡ್ ಆಯ್ಕೆ ಮಾಡಿಕೊಳ್ಳಬೇಕು . ಇದೇ ವಿಧಾನವು ಐಪ್ಯಾಡ್ ಬಳಕೆದಾರರಿಗೂ ಅನ್ವಯಿಸುತ್ತದೆ.
ಕೆರ್ನಲ್ನಲ್ಲಿ ಅಸಮರ್ಪಕ ಇನ್ಪುಟ್ ವ್ಯಾಲಿಡೇಷನ್ ” ಮತ್ತು “ವೆಬೆ್ಕಿಟ್ನ ಸಮಸ್ಯೆಗಳಲ್ಲಿ ಅಸಮರ್ಪಕ ಸ್ಟೇಟ್ ಮ್ಯಾನೇಜ್ಮೆಂಟ್ ಕಾರಣದಿಂದಾಗಿ ಆಪಲ್ ಐಒಎಸ್ ಮತ್ತು ಐಪ್ಯಾಡ್ ಒಎಸ್ಗಳು ದುರ್ಬಲಗೊಂಡಿವೆ ಎಂದು ಸಿಇಆರ್ಟಿ -ಇನ್ ಹೇಳಿದೆ. ಕೆರ್ನಲ್ ಯಾವುದೇ ಆಪರೇಟಿಂಗ್ ಸಿಸ್ಟಮ್ಸ್ ಕೇಂದ್ರವಾಗಿದೆ, ಆದರೆ ವೆಬ್ಕಿಟ್ ಆಪಲ್ ಸಫಾರಿ ಬ್ರೌಸರ್ನ ಹಿಂದಿರುವ ಪ್ರಮುಖ ತಂತ್ರಜ್ಞಾನವಾಗಿದೆ. ಸದ್ಯದ ದೌರ್ಬಲ್ಯಗಳನ್ನು ಬಳಸಿಕೊಂಡರೆ, ಸೈಬರ್ ಅಪರಾಧಿಯು, ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಬಹುದು ಮತ್ತು ಸಂಪೂರ್ಣ ಸಿಸ್ಟಮ್ ಮೇಲೆ ದಾಳಿ ಮಾಡಬಹುದು. ಅಂದರೆ ಹ್ಯಾಕರ್ ಸಾಧನದ ಮೇಲೆ ನಿಯಂತ್ರಣ ಸಾಧಿಸಬಹುದು ಎಂದು ಭದ್ರತಾ ಸಂಸ್ಥೆ ಹೇಳಿದೆ. ಸಿಇಆರ್ಟಿ-ಇನ್ ಈ ಅನುಕೂಲವನ್ನು ಅತ್ಯಂತ ಅಪಾಯಕಾರಿ ಎಂದು ಹೇಳಿದೆ.
ಯಾವುದಕ್ಕೆಲ್ಲ ಅಪ್‌ಡೇಟ್
ಆಪಲ್ ಐಫೋನ್ಗಳಿಗಾಗಿ ಹೊಸ ಐಒಎಸ್ ಅಪ್ಡೇಟ್ಗಳನ್ನನು ಹೊರತರಲು ಪ್ರಾರಂಭಿಸಿದ ಕೆಲವು ದಿನಗಳ ನಂತರ ಸರ್ಕಾರದ ಎಚ್ಚರಿಕೆ ಬಂದಿದೆ. ಆಪಲ್ ಐಫೋನ್ 6ಎಸ್ (ಎಲ್ಲಾ ಮಾದರಿಗಳು), ಐಫೋನ್ 7 (ಎಲ್ಲಾ ಮಾದರಿಗಳು), ಐಫೋನ್ ಎಸ್ಇ (1 ನೇ ಪೀಳಿಗೆ ), ಐಪ್ಯಾಡ್ ಏರ್ 2, ಐಪ್ಯಾಡ್ ಮಿನಿ (4 ನೇ ಪೀಳಿಗೆ) ಮತ್ತು ಐಪಾಡ್ ಟಚ್ ಗಾಗಿ (7ನೇ ಪೀಳಿಗೆ) ಐಒಎಸ್ 15.7.7 ಮತ್ತು ಐಪ್ಯಾಡ್ ಒಎಸ್ 15.7.7 ಅಪ್ಡೇಟ್ಗಳನ್ನು ಬಿಡುಗಡೆ ಮಾಡಿದೆ. ಐಫೋನ್ 8 ಮತ್ತು ನಂತರದ ಐಒಎಸ್ 16.5.1 ಮತ್ತು ಐಪ್ಯಾಡ್ ಒಎಸ್ 16.5.1 ಅಪ್ಡೇಟ್ಗಳುನ್ನು ನೀಡಿದೆ. ಐಪ್ಯಾಡ್ ಪ್ರೊ (ಎಲ್ಲಾ ಮಾದರಿಗಳು), ಐಪ್ಯಾಡ್ ಏರ್ 3ನೇ ಪೀಳಿಗೆ ಮತ್ತು ಐಪ್ಯಾಡ್ 5ನೇ ಪೀಳಿಗೆ ಮತ್ತು ಐಪ್ಯಾಡ್ ಮಿನಿ 5 ನೇ ಪೀಳಿಗೆ ಮತ್ತು ನಂತರದ ಫೋನ್ಗಳಿಗೆ ಅಪ್‌ಡೇಟ್ ನೀಡಲಾಗಿದೆ. ಆಂಟಿ ವೈರಸ್ ಕ್ಯಾಸ್ಪರ್ಕಿ ಸಂಶೋಧಕರು ಈ ದೌರ್ಬಲ್ಯಗಳನ್ನು ಕಂಡುಹಿಡಿದಿದ್ದಾರೆ ಎಂದು ಆ್ಯಪಲ್ ಬಿಡುಗಡೆ ಮಾಡಿದೆ.
ಇದನ್ನೂ ಓದಿ : iPhone: ಇನ್ನು 11 ತಿಂಗಳಲ್ಲಿ ಬೆಂಗಳೂರಲ್ಲೇ ಐಫೋನ್ ಉತ್ಪಾದನೆ: ವರ್ಷಕ್ಕೆ 2 ಕೋಟಿ ಮೊಬೈಲ್ ತಯಾರಿ!
ಐಒಎಸ್ ಅಪ್ಡೇಟ್ಗಳನ್ನು ಬಿಡುಗಡೆ ಮಾಡುವ ಮೂಲಕ ಹ್ಯಾಕಿಂಗ್ ಕಳವಳಗಳನ್ನು ಪರಿಹರಿಸಲು ಆಪಲ್ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿದೆ, ಇದು ನಿರ್ದಿಷ್ಟವಾಗಿ ಗುರುತಿಸಲಾದ ದುರ್ಬಲತೆಗಳನ್ನು ಗುರಿಯಾಗಿಸುತ್ತದೆ. ಐಫೋನ್ಗಳಲ್ಲಿನ ಭದ್ರತಾ ನ್ಯೂನತೆಗಳನ್ನು ಮೊದಲು ರಷ್ಯಾದ ಭದ್ರತಾ ಸಾಫ್ಟ್ವೇರ್ ತಯಾರಕ ಕ್ಯಾಸ್ಪರ್ಕ್ಸಿ ಲ್ಯಾಬ್ ಎತ್ತಿ ತೋರಿಸಿದೆ ಎಂದು ಆಪಲ್ ಒಪ್ಪಿಕೊಂಡಿದೆ.
ಗ್ಯಾಜೆಟ್ಸ್
Reliance Jio: ಅಬ್ಬಬ್ಬಾ ಲಾಟರಿ..! ಐಫೋನ್ 15 ಖರೀದಿಸಿದರೆ 6 ತಿಂಗಳು ರಿಲಯನ್ಸ್ ಜಿಯೋ ಫ್ರೀ ಪ್ಲಾನ್
Reliance Jio: ಹೊಸದಾಗಿ ಲಾಂಚ್ ಆಗಿರುವ ಆ್ಯಪಲ್ ಐಫೋನ್ 15 ಖರೀದಿಯ ಮೇಲೆ ರಿಲಯನ್ಸ್ ಜಿಯೋ ಬಂಪರ್ ಆಫರ್ ಘೋಷಣೆ ಮಾಡಿದೆ.
ಮುಂಬೈ, ಮಹಾರಾಷ್ಟ್ರ: ರಿಲಯನ್ಸ್ ರಿಟೇಲ್ ಸ್ಟೋರ್‌ಗಳು (Reliance Retail), ರಿಲಯನ್ಸ್ ಡಿಜಿಟಲ್ ಆನ್‌ಲೈನ್ (Reliance Digital Online) ಅಥವಾ ಜಿಯೋಮಾರ್ಟ್‌ನಲ್ಲಿ (Jio Mart) ಜಿಯೋ ಐಫೋನ್ 15 (iPhone 15) ಖರೀದಿ ಮಾಡಿದರೆ 2,394 ರೂ. ಮೌಲ್ಯದ ಆರು ತಿಂಗಳ ಪ್ಲಾನ್ (Reliance Jio) ಅನ್ನು ಉಚಿತವಾಗಿ ಬಳಕೆದಾರರಿಗೆ ನೀಡಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಳಕೆದಾರರ ನಾಡಿ ಮಿಡಿತವನ್ನು ಅರಿತು ಕೊಂಡಿರುವ ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ 399 ರೂ. ಪ್ಲಾನ್ ಅನ್ನು ಆರು ತಿಂಗಳುಗಳ ವರೆಗೆ ಉಚಿತವಾಗಿ ನೀಡಲಿದೆ. ಇದರ ಒಟ್ಟು ಮೌಲ್ಯ 2,394 ರೂ.ಗಳಾಗಲಿದ್ದು, ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ.
ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ ನೀಡುತ್ತಿರುವ ರೂ. 399 ಪ್ಲಾನ್ ನಲ್ಲಿ ಬಳಕೆದಾರರಿಗೆ ಪ್ರತಿ ನಿತ್ಯ 3 ಜಿಬಿ ಹೈ ಸ್ಪೀಡ್ ಡೇಟಾ ಬಳಕೆಗೆ ದೊರೆಯಲಿದ್ದು, ಜೊತೆಗೆ ಸಂಪೂರ್ಣ ಅನ್ ಲಿಮಿಟೆಡ್ ಕಾಲಿಂಗ್ ಸಹ ಸಿಗಲಿದೆ. ಅಲ್ಲದೇ ಪ್ರತಿನಿತ್ಯ 100 ಎಸ್ಎಂಎಸ್ ಗಳನ್ನು ಸಹ ಉಚಿತವಾಗಿ ಕಳುಹಿಸಬಹುದಾಗಿದೆ.
ಆದರೆ ರಿಲಯನ್ಸ್ ರಿಟೇಲ್ ಸ್ಟೋರ್‌ಗಳು, ರಿಲಯನ್ಸ್ ಡಿಜಿಟಲ್ ಆನ್‌ಲೈನ್ ಅಥವಾ ಜಿಯೋಮಾರ್ಟ್ ನಲ್ಲಿ ಜಿಯೋ ಐಫೋನ್ 15 ಖರೀದಿ ಮಾಡಿದರೆ ಮಾತ್ರವೇ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
ಈ ಸುದ್ದಿಯನ್ನೂ ಓದಿ: Apple iPhone : ಭಾರತದಲ್ಲಿ ಐಫೋನ್ 3ಜಿಯಿಂದ ಮೊದಲ ರಿಟೇಲ್ ಸ್ಟೋರ್ ತನಕ ಆ್ಯಪಲ್‌ನ 15 ವರ್ಷಗಳ ಯಾತ್ರೆ ಹೇಗಿತ್ತು?
ಜಿಯೋ ಬಳಕೆದಾರರಲಲ್ಲದವರಿಗೂ ಈ ಯೋಜನೆಯ ಲಾಭವು ದೊರೆಯಲಿದ್ದು, ಇದಕ್ಕಾಗಿ ಅವರು ಹೊಸ ಜಿಯೋ ಸಿಮ್ ಖರೀದಿ ಮಾಡಬೇಕು ಇಲ್ಲವೇ ಮೊಬೈಲ್ ನಂಬರ್ ಪೊರ್ಟಬಲಿಟಿ ಆಯ್ಕೆಯನ್ನು ತಮ್ಮದಾಗಿಸಿಕೊಳ್ಳಬೇಕಾಗಿದೆ.
ಈ ಪ್ಲಾನ್ ಸೆಪ್ಟೆಂಬರ್ 22ರಿಂದ ಆರಂಭವಾಗಲಿದ್ದು, ಐಫೋನ್ 15 ಖರೀದಿ ಮಾಡಿ ಜಿಯೋ ಸಿಮ್ ಅನ್ನು ಆಕ್ಟಿವ್ ಮಾಡಿದರೆ ಈ ಹೊಸ ಯೋಜನೆಯು 72 ಗಂಟೆಗಳ ಒಳಗೆ ನಿಮ್ಮ ಬಳಕೆಗೆ ಲಭ್ಯವಾಗಲಿದೆ. ಈ ಯೋಜನಯೂ ಕೇವಲ ಐಫೋನ್ 15 ನಲ್ಲಿ ಮಾತ್ರವೇ ಕಾರ್ಯನಿರ್ವಹಿಸಲಿದೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಗ್ಯಾಜೆಟ್ಸ್
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
YouTube: ಮೇಡ್ ಆನ್ ಯುಟ್ಯೂಬ್ ಇವೆಂಟ್‌ನಲ್ಲಿ ಕಂಪನಿಯು ಹೊಸ ಎಡಿಟಿಂಗ್ ಆ್ಯಪ್ ಲಾಂಚ್ ಮಾಡಿದೆ.
ನವದೆಹಲಿ: ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ (Video Streaming) ವೇದಿಕೆಯಾಗಿರುವ ಯುಟ್ಯೂಬ್ (YouTube) ಹೊಸ ವಿಡಿಯೋ ಎಡಿಟಿಂಗ್ ಆ್ಯಪ್ (Editing App) ಯುಟ್ಯೂಬ್ ಕ್ರಿಯೇಟ್ (YouTube Create) ಘೋಷಿಸಿದೆ. ಈ ಮೂಲಕ ಬಳಕೆದಾರರಿಗೆ ವಿಡಿಯೋ ಕ್ರಿಯೇಟ್ ಮತ್ತು ಷೇರ್ ಮಾಡಲು ಅನುಮತಿಸಲಿದೆ. ಗುರುವಾರ ನಡೆದ ಮೇಡ್ ಆನ್ ಯುಟ್ಯೂಬ್ ಇವೆಂಟ್‌ನಲ್ಲಿ ಈ ಹೊಸ ಆ್ಯಪ್ ಕುರಿತು ಘೋಷಣೆ ಮಾಡಲಾಗಿದೆ. ಸದ್ಯ ಈ ಆ್ಯಪ್ ಬೀಟಾ ವರ್ಷನ್‌ನಲ್ಲಿದ್ದು, ಭಾರತ, ಅಮೆರಿಕ, ಜಮರ್ಮನಿ, ಫ್ರಾನ್ಸ್, ಇಂಗ್ಲೆಂಡ್, ಇಂಡೋನೇಷ್ಯಾ, ಕೋರಿಯಾ, ಸಿಂಗಾಪುರ್ ಮಾರುಕಗಳಲ್ಲಿ ಲಭ್ಯವಾಗಲಿದೆ. 2024ರಲ್ಲಿ ಐಒಎಸ್‌ಗೆ ಅಪ್‌ಡೇಟ್ ದೊರೆಯಲಿದೆ.
ವಿಡಿಯೋಗಳ ಉತ್ಪಾದನಾ ಪ್ರಕ್ರಿಯೆಯು ಕಷ್ಟಕರವಾಗಿರುತ್ತದೆ ಎಂದು ನಮಗೆ ತಿಳಿದಿದೆ. ಇದರಿಂದಾಗಿ ಮೊದಲ ಬಾರಿಗೆ ವಿಡಿಯೋ ಮಾಡುವವರು ತಮ್ಮ ಮೊದಲ ವೀಡಿಯೊವನ್ನು ಅಪ್‌ಲೋಡ್ ಮಾಡುವುದಕ್ಕೆ ತುಂಬ ಕಷ್ಟಪಡುತ್ತಾರೆ. ಈ ಪ್ರಕ್ರಿಯೆಯನ್ನು ಸರಳೀಕರಿಸಲು ಮತ್ತು ಯುಟ್ಯೂಬ್‌ನಲ್ಲಿ ವಿಡಿಯೋಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಅನುಮತಿಸಲು ನಾವು ಯುಟ್ಯೂಬ್ ಕ್ರಿಯೇಟ್ ಎಂಬ ಹೊಸ ಮೊಬೈಲ್ ಅಪ್ಲಿಕೇಷನ್ ಆರಂಭಿಸುತ್ತಿದ್ದೇವೆ ಎಂದು ಕಂಪನಿಯು ಮೇಡ್ ಆನ್ ಯುಟ್ಯೂಬ್ ಇವೆಂಟ್‌ನಲ್ಲಿ ಹೇಳಿದೆ.
ಯೂಟ್ಯೂಬ್ ಕ್ರಿಯೇಟ್ ಎನ್ನುವುದು ಕಿರುಚಿತ್ರಗಳು ಮತ್ತು ದೀರ್ಘವಾದ ವೀಡಿಯೊಗಳೆರಡಕ್ಕೂ ವಿಡಿಯೋ ನಿರ್ಮಾಣವನ್ನು ಸರಳ ಮತ್ತು ಸುಲಭ ಮಾಡಲು ವಿನ್ಯಾಸಗೊಳಿಸಿದ ಉಚಿತ ಅಪ್ಲಿಕೇಶನ್ ಎಂದು ಕಂಪನಿಯು ಹೇಳಿದೆ. ಆ ಆ್ಯಪ್ ಸಹಾಯದಿಂದ ವಿಡಿಯೋ ಕ್ರಿಯೇಟರ್ಸ್, ಇತರ ಕೆಲಗಳ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸುವ ಬದಲು ತಮ್ಮ ಸೃಜನಾತ್ಮಕವಾಗಿ ರೂಪಿಸಲು ನೆರವು ಸಾಧ್ಯವಾಗುತ್ತದೆ.
ಈ ಸುದ್ದಿಯನ್ನು ಓದಿ: YouTube New Feature: ನಿಮ್ಮಿಷ್ಟದ ಹಾಡು ಗುನುಗಿದ್ರೂ ಸಾಕು ಯುಟ್ಯೂಬ್ ಆ ಹಾಡನ್ನು ಹೆಕ್ಕಿ ತೆಗೆಯುತ್ತದೆ!
ಹೊಸ ಜನರೇಟಿವ್ ಕೃತಕ ಬುದ್ಧಿಮತ್ತೆ ಚಾಲಿತ ಅಪ್ಲಿಕೇಶನ್ ನಿಖರವಾದ ಎಡಿಟಿಂಗ್ ಟ್ರಿಮ್ಮಿಂಗ್, ಸ್ವಯಂಚಾಲಿತ ಶೀರ್ಷಿಕೆ, ವಾಯ್ಸ್‌ಓವರ್ ಮತ್ತು ಪರಿವರ್ತನೆಗಳಂತಹ ಫೀಚರ್‌ಗಳನ್ನು ಒಳಗೊಂಡಿರುತ್ತದೆ. ಟಿಕ್‌ಟಾಕ್‌ನಂತೆಯೇ ಬೀಟ್-ಮ್ಯಾಚಿಂಗ್ ತಂತ್ರಜ್ಞಾನದೊಂದಿಗೆ ರಾಯಲ್ಟಿ-ಮುಕ್ತ ಸಂಗೀತದ ಶ್ರೇಣಿಯನ್ನು ಆಯ್ಕೆ ಮಾಡಲು ಅಪ್ಲಿಕೇಶನ್ ಬಳಕೆದಾರರಿಗೆ ಅವಕಾಶ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಸುಮಾರು ಮೂರು ಸಾವಿರ ಜನರಿಂದ ಫೀಡ್‌ಬ್ಯಾಕ್ ಪಡೆದುಕೊಂಡ ಬಳಿಕ ಈ ಹೊಸ ಆ್ಯಪ್ ರೂಪಿಸಲಾಗಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಈ ಆ್ಯಪ್‌ಗೆ ಇನ್ನಷ್ಟು ಹೊಸ ಫೀಚರ್‌ಗಳು ಸೇರಲಿವೆ. ಬಳಕೆದಾರರು ಈ ಆ್ಯಪ್ ಬಳಸಿಕೊಂಡು ಎಐ ಸೃಜಿತ ಬ್ಯಾಕ್‌ಗ್ರೌಂಡ್ ಕೂಡ ಬಳಸಿಕೊಳ್ಳಬಹುದು.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
-
ಕರ್ನಾಟಕ24 hours ago
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
-
ಸುವಚನ18 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ9 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
ದೇಶ13 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
ವೈರಲ್ ನ್ಯೂಸ್4 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
ಅಂಕಣ16 hours ago
ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
-
ದೇಶ23 hours ago
‘ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ’! ಡ್ಯಾನಿಶ್ ಅಲಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
-
South Cinema6 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!