Site icon Vistara News

IRCTC Scam Alert: ರೈಲ್ವೆ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಿ ಎಂಬ ಲಿಂಕ್ ಬಂದಿದೆಯಾ? ಹುಷಾರ್ ಇದು ಫೇಕ್ ಲಿಂಕ್

IRCTC App

ನವದೆಹಲಿ: ಭಾರತೀಯ ರೈಲ್ವೆ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ(IRCTC) ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದು, ಐಆರ್‌ಸಿಟಿಸಿ (IRCTC Rail Connect App) ನಕಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಫಿಶಿಂಗ್ ಲಿಂಕ್ (Fishing Link) ಹರಿದಾಡುತ್ತಿದೆ ತಿಳಿಸಿದೆ. ಈ ಆ್ಯಪ್ ಮೂಲಕ ಬಳಕೆದಾರರ ಮಾಹಿತಿಯನ್ನು ಕದಿಯುವ ಸಾಧ್ಯೆತಗಳಿರುತ್ತವೆ. ಹಾಗಾಗಿ ಎಚ್ಚರಿಕೆಯನ್ನು ವಹಿಸಬೇಕು ಎಂದು ಐಆರ್‌ಸಿಟಿಸಿ ಎಚ್ಚರಿಕೆಯನ್ನು ನೀಡಿದೆ.

ಐಆರ್‌ಸಿಟಿಸಿ ಅಸಲಿ ಆ್ಯಪ್‌ನಂತೆ ಕಾಣುವ ಈ ಆ್ಯಪ್ ಮೂಲಕ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿರುವವರನ್ನು ಮೊಸಗೊಳಿಸಲು ಬಳಸಲಾಗುತ್ತಿದೆ. ಸಾಮಾನ್ಯ ಬಳಕೆದಾರರಿಗೂ ಇದರಿಂದ ಅಪಾಯವಿದ್ದು, ಅಂಥ ಲಿಂಕ್ ಕ್ಲಿಕ್ ಮಾಡಿ ನಕಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಾರದು ಎಂದು ಐಆರ್‌ಟಿಸಿ ಎಚ್ಚರಿಕೆಯನ್ನು ನೀಡಿದೆ.

ಐಆರ್‌ಸಿಟಿಸಿ ರೈಲ್ ಕೆನೆಕ್ಟ್‌ ಆ್ಯಪ್‌ನ ಫೇಕ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಪ್ರೇರೇಪಿಸುವ ಲಿಂಕ್‌ ಅನ್ನು ಹಂಚಿಕೆ ಮಾಡಲಾಗುತ್ತಿದೆ. ಈ ಮೂಲಕ ಜನರನ್ನು ಮೋಸ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಳಕೆದಾರರ ರಕ್ಷಣೆ ಮಾಡುವುದಕ್ಕಾಗಿ ಐಆರ್‌ಸಿಟಿಸಿ ತ್ವರಿತ ಕ್ರಮವನ್ನು ತೆಗೆದುಕೊಂಡಿದೆ. ಈ ಕುರಿತು ಎಚ್ಚರಿಕೆಯನ್ನು ರವಾನಿಸಿದೆ. ಸೈಬರ್ ಕ್ರೈಮ್‌ನ ಈ ವಂಚನೆಯ ಬಲೆಗೆ ಬೀಳದಂತೆ ತನ್ನ ಜನರಿಗೆ ತೋರಿಸಿದೆ.

ಐಆರ್‌ಸಿಟಿಸಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಎಚ್ಚರಿಕೆಯ ಸಂದೇಶವನ್ನು ಷೇರ್ ಮಾಡಿಕೊಳ್ಳಲಾಗಿದೆ. ಈ ವಂಚನೆಯುಕಾನೂನುಬಾಹಿರ ಉದ್ದೇಶಗಳಿಗಾಗಿ ವ್ಯಕ್ತಿಗಳನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ನಿಜವಾದ ರೈಲ್ ಕನೆಕ್ಟ್ ಮೊಬೈಲ್ ಅಪ್ಲಿಕೇಶನ್‌ಗಳು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಂತಹ ವಿಶ್ವಾಸಾರ್ಹ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರತ್ಯೇಕವಾಗಿ ಲಭ್ಯವಿವೆ ಎಂದು ಐಆರ್‌ಸಿಟಿಸಿ ಹೇಳಿದೆ.

ಈ ಸುದ್ದಿಯನ್ನೂ ಓದಿ : Pink WhatsApp Scam: ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದೀರಾ? ಹಾಗಾದ್ರೆ ನಿಮ್ಮ ಫೋನ್ ಹ್ಯಾಕ್ ಆಗಿರಬಹುದು, ಚೆಕ್ ಮಾಡ್ಕೊಳ್ಳಿ

ಐಆರ್‌ಸಿಟಿಸಿ ಎಚ್ಚರಿಕೆಯನ್ನು ಕೆಲವು ವಂಚನೆಕಾರರು ಫಿಶಿಂಗ್ ಲಿಂಕ್ ಹಂಚಿಕೆ ಮಾಡುತ್ತಿದ್ದಾರೆ. ಆ ಮೂಲಕ ನಿಜವಾದ ಐಆರ್‌ಸಿಟಿಸಿ ರೈಲ್ ಕನೆಕ್ಟ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಪ್ರೇರೇಪಿಸುವ ಮೂಲಕ, ನಕಲಿ ಆ್ಯಪ್ ಇನ್‌ಸ್ಟಾಲ್ ಮಾಡುವಂತೆ ಮಾಡಲಾಗುತ್ತದೆ. ಹಾಗಾಗಿ, ಇಂಥ ಮೋಸದ ಬಲೆಗೆ ಜನರು ಬಲಿಯಾಗಬಾರದು. ಜನರು ಈ ಲಿಂಕ್ ನಂಬಿ ನಕಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಾರದು. ಬದಲಿಗೆ ಅಧಿಕೃತ ಆ್ಯಪ್ ಸ್ಟೋರ್ ಗಳಾದ, ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್‌ಗಳಿಂದ ಮಾತ್ರವೇ ಐಆರ್‌ಸಿಟಿಸಿ ರೈಲ್ ಕೆನೆಕ್ಟ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version