ನವದೆಹಲಿ: ವಾಟ್ಸ್ಆ್ಯಪ್ ಜನಪ್ರಿಯವಾಗುವ ಮುಂಚೆ ಎಸ್‌ಎಂಎಸ್ ಕಿರು ಸಂದೇಶವು ಸಂವಹನ ಲೋಕದ ರಾಜನಂತಿತ್ತು. ಹಾಗಂತ, ಈಗ ಎಸ್ಸೆಮ್ಮೆಸ್ ಸಂಪೂರ್ಣವಾಗಿ ಮರೆಯಾಗಿದೆ ಎಂದರ್ಥವಲ್ಲ. ಬದಲಿಗೆ ಅದರ ಬಳಿಕೆಯು ನಿರ್ದಿಷ್ಟ ಕೆಲಸಗಳಿಗೆ ಮಾತ್ರವೇ ಸೀಮಿತವಾಗಿದೆ. ಮೊಟ್ಟ ಮೊದಲಿಗೆ ಯಾರು, ಯಾವಾಗ ಈ ಎಸ್ಸೆಮ್ಮೆಸ್ ಕಳುಹಿಸಿದರು (First-ever SMS) ಎಂಬ ಕುತೂಹಲ ಸಹಜ. ಜಗತ್ತಿನ ಮೊಟ್ಟ ಮೊದಲ ಎಸ್ಸೆಮ್ಮೆಸ್ ರವಾನೆಯಾಗಿದ್ದು 1992 ಡಿಸೆಂಬರ್ 3ರಂದು. ಅಂದರೆ, ಈ ಡಿಸೆಂಬರ್ 3ಕ್ಕೆ ಮೊದಲ ಎಸ್ಸೆಮ್ಮೆಸ್‌ಗೆ ಬರೋಬ್ಬರಿ 30 ವರ್ಷಗಳಾದವು!
ಸಾಫ್ಟ್‌ವೇರ್ ಪ್ರೋಗ್ರಾಮರ್ ನೀಲ್ ಪ್ಯಾಪ್‌ವರ್ತ್ ಅವರು ತಾವು ಕೆಲಸ ಮಾಡುತ್ತಿದ್ದ ಸಂಸ್ಥೆಯ ಮುಖ್ಯಸ್ಥರಲ್ಲಿ ಒಬ್ಬರಾದ ರಿಚರ್ಡ್ ಜಾರ್ವಿಸ್‌ಗೆ ‘ಮೇರಿ ಕ್ರಿಸ್ಮಸ್’ ಎಂದು 1992ರ ಡಿಸೆಂಬರ್ 3ರಂದು ಕಳುಹಿಸಿದರು. ಇದು ರವಾನೆಯಾದ ಮೊದಲ ಪಠ್ಯ ಸಂದೇಶ ಎಂದು ಗುರುತಿಸಿಕೊಂಡಿದೆ. ತಂತ್ರಜ್ಞಾನವನ್ನು ಪರೀಕ್ಷಿಸುವ ನಿಟ್ಟಿನಲ್ಲಿ ಪ್ಯಾಪ್‌ವರ್ತ್ ಅವರು ಈ ಸಂದೇಶವನ್ನು ಕಳುಹಿಸಿದ್ದರು.
ಅಂದು 1992ರಲ್ಲಿ ಕಳುಹಿಸಲಾದ ಸಂದೇಶವು ಮುಂದೆ ಇಷ್ಟೊಂದು ಜನಪ್ರಿಯವಾಗಬಹುದು ಎಂಬ ಸಣ್ಣ ಕಲ್ಪನೆಯೂ ಇರಲಿಲ್ಲ. ಜತೆಗೆ, ಇಂದು ರವಾನೆಯಾಗುತ್ತಿರುವ ಎಮೋಜಿಗಳು, ಸಂದೇಶ ಕಳುಹಿಸುವ ಇತರ ಅಪ್ಲಿಕೇಶನ್‌ಗಳಿಗೆ ಕಾರಣಬಹುದು ಎಂದು ಗೊತ್ತಿರಲಿಲ್ಲ ಎನ್ನುತ್ತಾರೆ ಪ್ಯಾಪ್‌ವರ್ತ್.
ಇದನ್ನೂ ಓದಿ | UPI Payment | ಆ್ಯಪ್ ಮೂಲಕ ಪೇಮೆಂಟ್ಸ್ ಮಾಡುವಾಗ ಎಚ್ಚರ ವಹಿಸಿ, ಇಲ್ಲದಿದ್ದರೆ ನಷ್ಟ ತಪ್ಪಿದ್ದಲ್ಲ!