Site icon Vistara News

Four Digit PIN: ಇಂಥ ಪಿನ್ ನಂಬರ್ ಕೊಡ್ತಾ ಇದ್ದೀರಾ? ನಿಮ್ಮ ದುಡ್ಡಿಗೆ ಕಾದಿದೆ ಅಪಾಯ!

Four Digit PIN

ಸಾಮಾನ್ಯವಾಗಿ ನಾವು ನಾಲ್ಕು ಅಂಕೆಯ (Four Digit PIN) ಪಿನ್ ನಂಬರ್ ಹಾಕಬೇಕಾದಾಗ ನಮಗೆ ಸುಲಭವಾಗಿ ನೆನಪಿಟ್ಟುಕೊಳ್ಳಬಹುದಾದ ಅಂಕೆಗಳನ್ನು (numbers) ಹಾಕುತ್ತೇವೆ. ಆದರೆ ಇದು ತುಂಬಾ ಅಪಾಯಕಾರಿ. ಯಾಕೆಂದರೆ ಸುಲಭವಾದ ಪಿನ್ ಸಂಖ್ಯೆಯು ಶೀಘ್ರದಲ್ಲಿ ಸೈಬರ್ ವಂಚಕರ (cyber attacks) ಪಾಲಾಗಬಹುದು. ಹೀಗಾಗಿ ಅತ್ಯಂತ ಸರಳ ಪಿನ್ ಗಳನ್ನು ನೀವು ಯಾವುದೇ ಉದ್ದೇಶಕ್ಕೆ ಬಳಸಿದ್ದರೆ ಕೂಡಲೇ ಅದನ್ನು ಬದಲಾಯಿಸುವುದು ಒಳ್ಳೆಯದು.

ಸಾಮಾನ್ಯವಾಗಿ ನಾವು 1234 ಅಥವಾ 0000 ಅಥವಾ ಜನ್ಮ ದಿನಾಂಕ (date of birth) ಅಥವಾ ಫೋನ್ ಸಂಖ್ಯೆಯಂತಹ (phone number) ವೈಯಕ್ತಿಕ ಮಾಹಿತಿಯನ್ನು ಆಧರಿಸಿದಂತಹ ದುರ್ಬಲ ಪಿನ್ ನಂಬರ್ ಅನ್ನು ನಾವು ಹೊಂದಿರುತ್ತೇವೆ. ಇದು ಸೈಬರ್ ದಾಳಿಕೋರರಿಗೆ ಸುಲಭವಾಗಿ ಸಿಗುತ್ತದೆ.

ವರ್ಷದಿಂದ ವರ್ಷಕ್ಕೆ ಸೈಬರ್ ದಾಳಿಗಳು ಹೆಚ್ಚಾಗುತ್ತಲೇ ಇದೆ. 2024 ರ ಮೊದಲ ತ್ರೈಮಾಸಿಕದಲ್ಲಿ ಸೈಬರ್ ದಾಳಿಯ ಪ್ರಮಾಣ ಶೇ. 33ರಷ್ಟು ಹೆಚ್ಚಾಗಿದೆ. ಭಾರತವು ವಿಶ್ವದಲ್ಲೇ ಅತೀ ಹೆಚ್ಚು ಸೈಬರ್ ದಾಳಿಗೆ ಒಳಗಾದ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಚೆಕ್ ಪಾಯಿಂಟ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಲಿಮಿಟೆಡ್ ವರದಿ ತಿಳಿಸಿದೆ.

ಕಂಪ್ಯೂಟರ್ ವ್ಯವಸ್ಥೆಗಳು, ನೆಟ್‌ವರ್ಕ್‌ಗಳಲ್ಲಿನ ದೌರ್ಬಲ್ಯಗಳನ್ನು ಕಂಡುಹಿಡಿಯುವ ಮೂಲಕ ಸೈಬರ್ ಅಪರಾಧಿಗಳು ಜನರ ವ್ಯವಹಾರ ಖಾತೆಗಳು ಮತ್ತು ಸರ್ಕಾರದ ಖಾತೆಗಳ ಮೇಲೆ ದಾಳಿ ನಡೆಸುತ್ತಾರೆ. ಸೂಕ್ಷ್ಮ ಮಾಹಿತಿಯನ್ನು ಕದಿಯಲು, ಬ್ಯಾಂಕ್ ಖಾತೆಗಳಿಂದ ಹಣವನ್ನು ದೋಚಲು ವಿವಿಧ ವಿಧಾನಗಳನ್ನು ಬಳಸುತ್ತಾರೆ.


ಏನು ಕಾರಣ?

ಸೈಬರ್ ದಾಳಿಯಲ್ಲಿ ದಿಢೀರ್ ಏರಿಕೆಗೆ ಮುಖ್ಯ ಕಾರಣ ನಾವು ಬಳಸುವ ದುರ್ಬಲ ಪಿನ್ ಗಳು. ಇದು ಯಾವುದೇ ವ್ಯವಸ್ಥೆಯನ್ನು ಉಲ್ಲಂಘಿಸಲು ಸುಲಭವಾದ ಮಾರ್ಗವಾಗಿದೆ. ದುರ್ಬಲವಾದ ಪಿನ್ “1234” ಅಥವಾ “0000” ನಂತಹ ಸ್ಪಷ್ಟವಾಗಿರಬಹುದು ಅಥವಾ ಜನ್ಮ ದಿನಾಂಕ ಅಥವಾ ಫೋನ್ ಸಂಖ್ಯೆಯಂತಹ ವೈಯಕ್ತಿಕ ಮಾಹಿತಿಯ ಆಧಾರದ ಮೇಲೆ ಸುಲಭವಾಗಿ ಊಹಿಸಬಹುದಾಗಿದೆ.

ಸಾಮಾನ್ಯವಾದ ಪಿನ್‌ಗಳು ಯಾವುವು?

ಸೈಬರ್‌ ಸೆಕ್ಯುರಿಟಿ ಅಧ್ಯಯನವು ಅನೇಕರು ತಮ್ಮ ಭದ್ರತಾ ಕೋಡ್‌ಗಳಲ್ಲಿ ಸರಳ ಮಾದರಿಗಳ ಪಿನ್ ಗಳನ್ನು ಬಳಸುತ್ತಾರೆ ಎಂದು ತೋರಿಸಿದ್ದಾರೆ. ಪರೀಕ್ಷಿಸಿದ 3.4 ಮಿಲಿಯನ್ ಪಿನ್‌ಗಳಲ್ಲಿ ಸಾಮಾನ್ಯ ಮಾದರಿಗಳು ಹೀಗಿವೆ.

1234, 1111, 0000, 1212, 7777, 1004, 2000, 4444, 2222, 6969 ಈಗಾಗಲೇ ಈ ಮಾದರಿಯ ಪಿನ್ ಗಳು ಸೈಬರ್ ದಾಳಿಗೆ ತುತ್ತಾಗಿದ್ದು, ಯಾರಾದರೂ ಈಗಲೂ ಇಂತಹ ಪಿನ್ ಬಳಸುತ್ತಿದ್ದಾರೆ ಬದಲಾಯಿಸಿಕೊಳ್ಳುವುದು ಒಳ್ಳೆಯದು.
ಸರಳವಾದ ಅಥವಾ ಸುಲಭವಾಗಿ ಊಹಿಸಬಹುದಾದ ಪಿನ್ ಅನ್ನು ಆಯ್ಕೆ ಮಾಡುವುದರಿಂದ ಸೈಬರ್ ಅಪರಾಧಿಗಳಿಗೆ ನೀವು ಸುಲಭ ಗುರಿಯಾಗಬಹುದು. ನಿಮ್ಮ ಖಾತೆಗಳು ಮತ್ತು ಸಾಧನಗಳನ್ನು ರಕ್ಷಿಸಲು ಪಿನ್ ಅನ್ನು ಆಯ್ಕೆ ಮಾಡುವಾಗ ಸುರಕ್ಷತೆಗೆ ಆದ್ಯತೆ ನೀಡುವುದು ಮುಖ್ಯವಾಗಿದೆ. ಬಲವಾದ, ವಿಶಿಷ್ಟವಾದ ಪಿನ್ ಸೂಕ್ಷ್ಮ ಮಾಹಿತಿಗೆ ಅನಧಿಕೃತ ಪ್ರವೇಶದ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ಇಎಸ್ ಇ ಟಿ ಸೈಬರ್ ಸೆಕ್ಯುರಿಟಿ ತಜ್ಞ, ಜೇಕ್ ಮೂರ್, ಸರಳವಾದ ಪಾಸ್‌ಕೋಡ್‌ಗಳನ್ನು ಬಳಸದಂತೆ ಸಲಹೆ ನೀಡಿದ್ದಾರೆ. ಇದು ಜನರನ್ನು ಸೈಬರ್‌ಟಾಕ್‌ಗಳಿಗೆ ಗುರಿಯಾಗಿಸಬಹುದು ಎಂದು ಡೈಲಿ ಮೇಲ್ ವರದಿ ಮಾಡಿದೆ.

ಪರಿಣಿತ ಹ್ಯಾಕರ್‌ಗಳು ಸೀಮಿತ ಸಂಖ್ಯೆಯ ಪ್ರಯತ್ನಗಳಲ್ಲಿ ಪಾಸ್ಕೋಡ್ ಗಳನ್ನು ಊಹಿಸಿ ಶೀಘ್ರದಲ್ಲೇ ಖಾತೆಗಳಿಗೆ, ವಯಕ್ತಿಕ ಮಾಹಿತಿಗಳ ಮೇಲೆ ಕನ್ನ ಹಾಕಬಹುದು. ಸಾಮಾಜಿಕ ಮಾಧ್ಯಮ ಸೇರಿದಂತೆ ವೈಯಕ್ತಿಕ ಖಾತೆಗಳಿಗೆ ಜನ್ಮ ವರ್ಷಗಳು, ವೈಯಕ್ತಿಕ ಮಾಹಿತಿ ಅಥವಾ ಪುನರಾವರ್ತಿತ ಪಾಸ್‌ವರ್ಡ್‌ಗಳನ್ನು ಬಳಸದಂತೆ ಜಾಗತಿಕ ಸೈಬರ್‌ ಸೆಕ್ಯುರಿಟಿ ಸಲಹೆಗಾರರು ಶಿಫಾರಸು ಮಾಡುತ್ತಾರೆ. ಸುಲಭವಾಗಿ ಊಹಿಸಬಹುದಾದ ಪಿನ್‌ಗಳನ್ನು ಬಳಸುವುದರಿಂದ ಜನರು ಸುಲಭವಾಗಿ ದಾಳಿಕೋರರು ಬಲಿಯಾಗುತ್ತಾರೆ.

ಇದನ್ನೂ ಓದಿ: Google Update: ಕೃತಕ ಬುದ್ಧಿಮತ್ತೆ, ವಂಚನೆ ತಡೆಯಲು ಅಲರ್ಟ್‌; ಗೂಗಲ್‌ ಹೊಸ ಘೋಷಣೆಗಳು ಏನೇನು?

ಕಡಿಮೆ ಬಳಕೆಯ ಸಾಮಾನ್ಯ ಪಿನ್

ಕಡಿಮೆ ಬಳಸುವ ಆದರೆ ತೀರಾ ಸಾಮಾನ್ಯವಾದ 4-ಅಂಕಿಯ ಪಿನ್‌ಗಳು ಹೀಗಿವೆ. 8557, 8438, 9539,7063, 6827, 0859, 6793, 0738, 6835.

ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಿದ್ದರೂ ಪಾಸ್‌ಕೋಡ್‌ಗಳನ್ನು ಹ್ಯಾಕ್ ಮಾಡಬಹುದು. ಆದ್ದರಿಂದ ಹೆಚ್ಚುವರಿ ಭದ್ರತೆಗಾಗಿ ಪಾಸ್‌ವರ್ಡ್ ನಿರ್ವಾಹಕರನ್ನು ಬಳಸಲು ಶ್ರೀ ಮೂರ್ ಸಲಹೆ ನೀಡಿದ್ದಾರೆ. ಇದರಿಂದ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಬಹುದು ಮತ್ತು ಸಂಪೂರ್ಣವಾಗಿ ಯಾದೃಚ್ಛಿಕ ಕೋಡ್‌ಗಳನ್ನು ರಚಿಸಲು ಸಹಾಯ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

Exit mobile version