ನವದೆಹಲಿ: ಮುಂದಿನ ವರ್ಷದಿಂದ ಆರ್‌ಸಿಎಸ್ (Rich Communication Service – RCS) ಸಪೋರ್ಟ್ ಆರಂಭಿಸವುದಾಗಿ ಘೋಷಿಸಿದೆ. ಐಫೋನ್ (iPhone) ಮ್ತತು ಆಂಡ್ರಾಯ್ಡ್ ಸಾಧನಗಳ (Android devices) ನಡುವಿನ ಟೆಕ್ಸಿಟಿಂಗ್ ಅನುಭವವನ್ನು ಸುಧಾರಿಸುವ ನಿಟ್ಟಿನಲ್ಲಿ ಆ್ಯಪಲ್ ಆರ್‌ಸಿಎಸ್ ವ್ಯವಸ್ಥೆಯನ್ನು 2024ರೊಳಗೆ ಅಳವಡಿಸಿಕೊಳ್ಳುವುದು ಕುರಿತು ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದೆ. ಸದ್ಯ, ಆಂಡ್ರಾಯ್ಡ್ ಫೋನ್ಸ್ (Android Phones) ಮತ್ತು ಟೆಲಿಕಾಂ ಕ್ಯಾರಿಯರ್‌ಗಳು (Telecom Carriers) ಆರ್‌ಸಿಎಸ್ ಮೆಸೇಜಿಂಗ್ ಸ್ಟ್ಯಾಂಡರ್ಡ್‌ಗೆ ಸಪೋರ್ಟ್ ಮಾಡುತ್ತಿವೆ. ಮುಂದಿನ ವರ್ಷ ಸಾಫ್ಟ್‌ವೇರ್ ಅಪ್‌ಡೇಟ್ (Software Update) ಮೂಲಕ ಈ ಫೀಚರ್ ಐಫೋನ್‌ಗಳಿಗೆ ಈ ಫೀಚರ್ ಲಭ್ಯವಾಗಲಿದೆ.
ಹೊಸ ಆರ್‌ಸಿಎಸ್ ಮಾನದಂಡವು ಐಮೆಸೇಜ್ ಜೊತೆಗೆ ಕಾರ್ಯನಿರ್ವಹಿಸುತ್ತದೆ ಮತ್ತು ರೀಡ್ ರಿಸಿಪ್ಟ್ಸ್, ಟೈಪಿಂಗ್ ಸೂಚಕಗಳು, ಉತ್ತಮ ಗುಣಮಟ್ಟದ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುವ ಸಾಮರ್ಥ್ಯ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಹಲವಾರು ಸಂದೇಶ ಕಳುಹಿಸುವ ಸಾಮರ್ಥ್ಯವನ್ನು ತರುತ್ತದೆ. ಆರ್‌ಸಿಎಸ್ ಮೊಬೈಲ್ ಡೇಟಾ ಅಥವಾ ವೈ-ಫೈ ಮೂಲಕ ಕೆಲಸ ಮಾಡಬಹುದು.
ಮುಂದಿನ ವರ್ಷದ ನಂತರ ನಾವು ಪ್ರಸ್ತುತ ಜಿಎಸ್ಎಂ ಅಸೋಸಿಯೇಷನ್‌ನಿಂದ ಪ್ರಕಟಿಸಿರುವ ಮಾನದಂಡವಾದ ಆರ್‌ಸಿಎಸ್ ಯುನಿವರ್ಸಲ್ ಪ್ರೊಫೈಲ್‌ಗೆ ಬೆಂಬಲವನ್ನು ಸೇರಿಸುತ್ತೇವೆ. ಎಸ್ಸೆಮ್ಮೆಸ್ ಅಥವಾ ಎಂಎಂಎಸ್‌ಗೆ ಹೋಲಿಸಿದಾಗ ಆರ್‌ಸಿಎಸ್ ಯುನಿವರ್ಸಲ್ ಪ್ರೊಫೈಲ್ ಉತ್ತಮ ಇಂಟರ್‌ಆಪರೇಬಿಲಿಟಿ ಅನುಭವವನ್ನು ನೀಡುತ್ತದೆ ಎಂದು ನಾವು ನಂಬುತ್ತೇವೆ. ಇದು ಐಮೆಸೇಜ್ ಜೊತೆಗೆ ಕಾರ್ಯನಿರ್ವಹಿಸುತ್ತದೆ. ಆ್ಯಪಲ್ ಬಳಕೆದಾರರಿಗೆ ಉತ್ತಮ ಮತ್ತು ಸುರಕ್ಷಿತ ಸಂದೇಶ ಕಳುಹಿಸುವಿಕೆಯ ಅನುಭವವಾಗಿ ಮುಂದುವರಿಯುತ್ತದೆ ಎಂದು ಆ್ಯಪಲ್ ವಕ್ತಾರರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆರ್‌ಸಿಎಸ್ ಫೀಚರ್ ಮುಂದಿನ ವರ್ಷ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಐಫೋನ್ ಮಾಡೆಲ್‌ಗಳಲ್ಲಿ ಲಾಂಚ್ ಆಗಲಿದೆ. ರೀಡ್ ರಿಸಪ್ಟ್ಸ್ ಮತ್ತು ಟೈಪಿಂಗ್ ಸೂಚಕಗಳು ಸೇರಿದಂತೆ ಐಫೋನ್ ಮತ್ತು ಆಂಡ್ರಾಯ್ಡ್ ಬಳಕೆದಾರರ ನಡುವೆ ಸಂದೇಶ ಕಳುಹಿಸಲು ಐಮೆಸೇಜ್ ಶೈಲಿಯ ಫೀಚರ್‌ಗಳನ್ನು ಸೇರಿಸಲಿದೆ. ಅಲ್ಲದೆ, ಬಳಕೆದಾರರು ಹೊಸ ಪ್ರೋಟೋಕಾಲ್‌ನೊಂದಿಗೆ ಐಫೋನ್ ಮತ್ತು ಆಂಡ್ರಾಯ್ಡ್ ಹ್ಯಾಂಡ್‌ಸೆಟ್‌ಗಳ ನಡುವೆ ಹೆಚ್ಚಿನ ರೆಸಲ್ಯೂಶನ್ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತದೆ.
ಐಫೋನ್ ಮಾದರಿಗಳಲ್ಲಿ ಆರ್‌ಸಿಎಸ್ ಅಳವಡಿಕೆಯು ಜನರು ತಮ್ಮ ಸ್ಥಳವನ್ನು ಪಠ್ಯ ಥ್ರೆಡ್‌ಗಳಲ್ಲಿ ಹಂಚಿಕೊಳ್ಳಲು ಮತ್ತು ಗುಂಪು ಚಾಟ್‌ಗಳನ್ನು ತ್ವರಿತವಾಗಿ ನಿರ್ವಹಿಸಲು ಅನುಮತಿಸುತ್ತದೆ. ಸಾಮಾನ್ಯ ಎಸ್ಸೆಮ್ಮೆಸ್‌ಗಿಂತ ಭಿನ್ನವಾಗಿ, ಆರ್‌ಸಿಎಸ್ ಸೆಲ್ಯುಲಾರ್ ಮತ್ತು ವೈ-ಫೈ ಮೂಲಕವೂ ಕೆಲಸ ಮಾಡಬಹುದು. ಎಸ್ಸೆಮ್ಮೆಸ್ ಸಂದೇಶಗಳಂತೆ ಆರ್‌ಸಿಎಸ್ ಸಂದೇಶಗಳನ್ನು ಹಸಿರು ಬಣ್ಣದಲ್ಲಿ ತೋರಿಸಬಹುದು.
ಪ್ರತಿಯೊಬ್ಬರೂ ಅವರು ಯಾವ ರೀತಿಯ ಫೋನ್‌ಗೆ ಸಂದೇಶ ಕಳುಹಿಸುತ್ತಿದ್ದಾರೆಂದು ಚಿಂತಿಸದೆ ಸುರಕ್ಷಿತ ಮತ್ತು ಆಧುನಿಕ ಸಂದೇಶವನ್ನು ಹೊಂದಿರಬೇಕು. ಆ್ಯಪಲ್ ಅನ್ನು ನೋಡಲು ತುಂಬಾ ಸಂತೋಷವಾಗಿದೆ. ಎಲ್ಲರಿಗೂ ಪಠ್ಯ ಸಂದೇಶವನ್ನು ಉತ್ತಮಗೊಳಿಸಲು ಆರ್‌ಸಿಎಸ್‌ನಲ್ಲಿ ಜಿಎಸ್ಎಂಎನೊಂದಿಗೆ ನಮ್ಮ ನಡೆಯುತ್ತಿರುವ ಕೆಲಸಕ್ಕೆ ಆ್ಯಪಲ್ ಕೂಡ ಸೇರಿಕೊಳ್ಳುತ್ತಿರುವುದು ತುಂಬಾ ಸಂತೋಷವಾಗುತ್ತಿದೆ ಎಂದು ಗೂಗಲ್‌ನ ಪ್ಲಾಟ್‌ಫಾರ್ಮ್ಸ್ ಆ್ಯಂಡ್ ಇಕೋಸಿಸ್ಟಮ್‌ನ ಹಿರಿಯ ಉಪಾಧ್ಯಕ್ಷ ಹಿರೋಷಿ ಲಾಕ್‌ಹೈಮರ್ ಅವರು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Hacking Alert: ʼಹ್ಯಾಕಿಂಗ್ ಅಲರ್ಟ್ʼಗೂ ಮುನ್ನ ʼಆ್ಯಪಲ್ ಸಾಧನದಲ್ಲಿ ಗಂಭೀರ ದೋಷʼದ ಎಚ್ಚರಿಕೆ ನೀಡಿದ್ದ ಕೇಂದ್ರ