ಮುಂದಿನ ವರ್ಷದಿಂದ ಐಫೋನ್‌ಗಳಲ್ಲಿ ಆರ್‌ಸಿಎಸ್ ಫೀಚರ್! ಆ್ಯಪಲ್ ಘೋಷಣೆ - Vistara News

ಗ್ಯಾಜೆಟ್ಸ್

ಮುಂದಿನ ವರ್ಷದಿಂದ ಐಫೋನ್‌ಗಳಲ್ಲಿ ಆರ್‌ಸಿಎಸ್ ಫೀಚರ್! ಆ್ಯಪಲ್ ಘೋಷಣೆ

RCS Support: ಐಫೋನ್ ಮತ್ತು ಆ್ಯಂಡ್ರಾಯ್ಡ್ ಸಾಧನಗಳ ನಡುವಿನ ಟೆಕ್ಸಿಟಿಂಗ್ ಅನುಭವನ್ನು ಹೆಚ್ಚಿಸುವ ರಿಚ್ ಕಮ್ಯುನಿಕೇಷನ್ ಸರ್ವಿಸ್ ಫೀಚರ್ ಅನ್ನು ತನ್ನ ಐಫೋನ್‌ಗಳಲ್ಲಿ ಅಳವಡಿಸುವುದಾಗಿ ಆ್ಯಪಲ್ ಘೋಷಣೆ ಮಾಡಿದೆ.

VISTARANEWS.COM


on

From next year iphones will have RCS support Says Apple
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಮುಂದಿನ ವರ್ಷದಿಂದ ಆರ್‌ಸಿಎಸ್ (Rich Communication Service – RCS) ಸಪೋರ್ಟ್ ಆರಂಭಿಸವುದಾಗಿ ಘೋಷಿಸಿದೆ. ಐಫೋನ್ (iPhone) ಮ್ತತು ಆಂಡ್ರಾಯ್ಡ್ ಸಾಧನಗಳ (Android devices) ನಡುವಿನ ಟೆಕ್ಸಿಟಿಂಗ್ ಅನುಭವವನ್ನು ಸುಧಾರಿಸುವ ನಿಟ್ಟಿನಲ್ಲಿ ಆ್ಯಪಲ್ ಆರ್‌ಸಿಎಸ್ ವ್ಯವಸ್ಥೆಯನ್ನು 2024ರೊಳಗೆ ಅಳವಡಿಸಿಕೊಳ್ಳುವುದು ಕುರಿತು ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದೆ. ಸದ್ಯ, ಆಂಡ್ರಾಯ್ಡ್ ಫೋನ್ಸ್ (Android Phones) ಮತ್ತು ಟೆಲಿಕಾಂ ಕ್ಯಾರಿಯರ್‌ಗಳು (Telecom Carriers) ಆರ್‌ಸಿಎಸ್ ಮೆಸೇಜಿಂಗ್ ಸ್ಟ್ಯಾಂಡರ್ಡ್‌ಗೆ ಸಪೋರ್ಟ್ ಮಾಡುತ್ತಿವೆ. ಮುಂದಿನ ವರ್ಷ ಸಾಫ್ಟ್‌ವೇರ್ ಅಪ್‌ಡೇಟ್ (Software Update) ಮೂಲಕ ಈ ಫೀಚರ್‌ ಐಫೋನ್‌ಗಳಿಗೆ ಈ ಫೀಚರ್ ಲಭ್ಯವಾಗಲಿದೆ.

ಹೊಸ ಆರ್‌ಸಿಎಸ್ ಮಾನದಂಡವು ಐಮೆಸೇಜ್ ಜೊತೆಗೆ ಕಾರ್ಯನಿರ್ವಹಿಸುತ್ತದೆ ಮತ್ತು ರೀಡ್ ರಿಸಿಪ್ಟ್ಸ್, ಟೈಪಿಂಗ್ ಸೂಚಕಗಳು, ಉತ್ತಮ ಗುಣಮಟ್ಟದ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುವ ಸಾಮರ್ಥ್ಯ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಹಲವಾರು ಸಂದೇಶ ಕಳುಹಿಸುವ ಸಾಮರ್ಥ್ಯವನ್ನು ತರುತ್ತದೆ. ಆರ್‌ಸಿಎಸ್ ಮೊಬೈಲ್ ಡೇಟಾ ಅಥವಾ ವೈ-ಫೈ ಮೂಲಕ ಕೆಲಸ ಮಾಡಬಹುದು.

ಮುಂದಿನ ವರ್ಷದ ನಂತರ ನಾವು ಪ್ರಸ್ತುತ ಜಿಎಸ್ಎಂ ಅಸೋಸಿಯೇಷನ್‌ನಿಂದ ಪ್ರಕಟಿಸಿರುವ ಮಾನದಂಡವಾದ ಆರ್‌ಸಿಎಸ್ ಯುನಿವರ್ಸಲ್ ಪ್ರೊಫೈಲ್‌ಗೆ ಬೆಂಬಲವನ್ನು ಸೇರಿಸುತ್ತೇವೆ. ಎಸ್ಸೆಮ್ಮೆಸ್ ಅಥವಾ ಎಂಎಂಎಸ್‌ಗೆ ಹೋಲಿಸಿದಾಗ ಆರ್‌ಸಿಎಸ್ ಯುನಿವರ್ಸಲ್ ಪ್ರೊಫೈಲ್ ಉತ್ತಮ ಇಂಟರ್‌ಆಪರೇಬಿಲಿಟಿ ಅನುಭವವನ್ನು ನೀಡುತ್ತದೆ ಎಂದು ನಾವು ನಂಬುತ್ತೇವೆ. ಇದು ಐಮೆಸೇಜ್ ಜೊತೆಗೆ ಕಾರ್ಯನಿರ್ವಹಿಸುತ್ತದೆ. ಆ್ಯಪಲ್ ಬಳಕೆದಾರರಿಗೆ ಉತ್ತಮ ಮತ್ತು ಸುರಕ್ಷಿತ ಸಂದೇಶ ಕಳುಹಿಸುವಿಕೆಯ ಅನುಭವವಾಗಿ ಮುಂದುವರಿಯುತ್ತದೆ ಎಂದು ಆ್ಯಪಲ್ ವಕ್ತಾರರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರ್‌ಸಿಎಸ್ ಫೀಚರ್ ಮುಂದಿನ ವರ್ಷ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಐಫೋನ್ ಮಾಡೆಲ್‌ಗಳಲ್ಲಿ ಲಾಂಚ್ ಆಗಲಿದೆ. ರೀಡ್‌ ರಿಸಪ್ಟ್ಸ್ ಮತ್ತು ಟೈಪಿಂಗ್ ಸೂಚಕಗಳು ಸೇರಿದಂತೆ ಐಫೋನ್ ಮತ್ತು ಆಂಡ್ರಾಯ್ಡ್ ಬಳಕೆದಾರರ ನಡುವೆ ಸಂದೇಶ ಕಳುಹಿಸಲು ಐಮೆಸೇಜ್ ಶೈಲಿಯ ಫೀಚರ್‌ಗಳನ್ನು ಸೇರಿಸಲಿದೆ. ಅಲ್ಲದೆ, ಬಳಕೆದಾರರು ಹೊಸ ಪ್ರೋಟೋಕಾಲ್‌ನೊಂದಿಗೆ ಐಫೋನ್ ಮತ್ತು ಆಂಡ್ರಾಯ್ಡ್ ಹ್ಯಾಂಡ್‌ಸೆಟ್‌ಗಳ ನಡುವೆ ಹೆಚ್ಚಿನ ರೆಸಲ್ಯೂಶನ್ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತದೆ.

ಐಫೋನ್ ಮಾದರಿಗಳಲ್ಲಿ ಆರ್‌ಸಿಎಸ್ ಅಳವಡಿಕೆಯು ಜನರು ತಮ್ಮ ಸ್ಥಳವನ್ನು ಪಠ್ಯ ಥ್ರೆಡ್‌ಗಳಲ್ಲಿ ಹಂಚಿಕೊಳ್ಳಲು ಮತ್ತು ಗುಂಪು ಚಾಟ್‌ಗಳನ್ನು ತ್ವರಿತವಾಗಿ ನಿರ್ವಹಿಸಲು ಅನುಮತಿಸುತ್ತದೆ. ಸಾಮಾನ್ಯ ಎಸ್ಸೆಮ್ಮೆಸ್‌ಗಿಂತ ಭಿನ್ನವಾಗಿ, ಆರ್‌ಸಿಎಸ್ ಸೆಲ್ಯುಲಾರ್ ಮತ್ತು ವೈ-ಫೈ ಮೂಲಕವೂ ಕೆಲಸ ಮಾಡಬಹುದು. ಎಸ್ಸೆಮ್ಮೆಸ್ ಸಂದೇಶಗಳಂತೆ ಆರ್‌ಸಿಎಸ್ ಸಂದೇಶಗಳನ್ನು ಹಸಿರು ಬಣ್ಣದಲ್ಲಿ ತೋರಿಸಬಹುದು.

ಪ್ರತಿಯೊಬ್ಬರೂ ಅವರು ಯಾವ ರೀತಿಯ ಫೋನ್‌ಗೆ ಸಂದೇಶ ಕಳುಹಿಸುತ್ತಿದ್ದಾರೆಂದು ಚಿಂತಿಸದೆ ಸುರಕ್ಷಿತ ಮತ್ತು ಆಧುನಿಕ ಸಂದೇಶವನ್ನು ಹೊಂದಿರಬೇಕು. ಆ್ಯಪಲ್ ಅನ್ನು ನೋಡಲು ತುಂಬಾ ಸಂತೋಷವಾಗಿದೆ. ಎಲ್ಲರಿಗೂ ಪಠ್ಯ ಸಂದೇಶವನ್ನು ಉತ್ತಮಗೊಳಿಸಲು ಆರ್‌ಸಿಎಸ್‌ನಲ್ಲಿ ಜಿಎಸ್ಎಂಎನೊಂದಿಗೆ ನಮ್ಮ ನಡೆಯುತ್ತಿರುವ ಕೆಲಸಕ್ಕೆ ಆ್ಯಪಲ್ ಕೂಡ ಸೇರಿಕೊಳ್ಳುತ್ತಿರುವುದು ತುಂಬಾ ಸಂತೋಷವಾಗುತ್ತಿದೆ ಎಂದು ಗೂಗಲ್‌ನ ಪ್ಲಾಟ್‌ಫಾರ್ಮ್ಸ್ ಆ್ಯಂಡ್ ಇಕೋಸಿಸ್ಟಮ್‌ನ ಹಿರಿಯ ಉಪಾಧ್ಯಕ್ಷ ಹಿರೋಷಿ ಲಾಕ್‌ಹೈಮರ್ ಅವರು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Hacking Alert: ʼಹ್ಯಾಕಿಂಗ್‌ ಅಲರ್ಟ್‌ʼಗೂ ಮುನ್ನ ʼಆ್ಯಪಲ್ ಸಾಧನದಲ್ಲಿ ಗಂಭೀರ ದೋಷʼದ ಎಚ್ಚರಿಕೆ ನೀಡಿದ್ದ ಕೇಂದ್ರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತಂತ್ರಜ್ಞಾನ

ಸ್ಯಾಮ್‌ಸಂಗ್‌ನ ‘ಫ್ಯಾಬ್ ಗ್ರಾಬ್ ಫೆಸ್ಟ್’: ಸ್ಮಾರ್ಟ್‌ಫೋನ್‌, ಟಿವಿ, ಲ್ಯಾಪ್‌ಟಾಪ್‌, ಡಿಜಿಟಲ್ ಉಪಕರಣಗಳ ಮೇಲೆ ಅದ್ಭುತ ಆಫರ್

Samsung: ಸ್ಯಾಮ್‌ಸಂಗ್ ತನ್ನ ಅತಿದೊಡ್ಡ ಬೇಸಿಗೆ ಮಾರಾಟ ಮೇಳವಾದ ‘ಫ್ಯಾಬ್ ಗ್ರಾಬ್ ಫೆಸ್ಟ್’ (Fab Grab Fest) ಅನ್ನು ಘೋಷಿಸಿದೆ. ಈ ಫೆಸ್ಟ್ ಮೂಲಕ ಕಂಪನಿಯು Samsung.com, ಸ್ಯಾಮ್‌ಸಂಗ್ ಶಾಪ್ ಆ್ಯಪ್ ಹಾಗೂ ಸ್ಯಾಮ್‌ಸಂಗ್ ಎಕ್ಸ್‌ಕ್ಲೂಸಿವ್ ಮಳಿಗೆಗಳಲ್ಲಿ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಮೇಲೆ ಅದ್ಭುತ ಆಫರ್‌ಗಳು ಮತ್ತು ಅತ್ಯಾಕರ್ಷಕ ಕ್ಯಾಶ್‌ಬ್ಯಾಕ್‌ಗಳನ್ನು ನೀಡುತ್ತದೆ.

VISTARANEWS.COM


on

Samsung
Koo

ಬೆಂಗಳೂರು: ಭಾರತದ ಅತಿ ದೊಡ್ಡ ಗ್ರಾಹಕ ಸ್ನೇಹಿ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ (Samsung) ತನ್ನ ಅತಿದೊಡ್ಡ ಬೇಸಿಗೆ ಮಾರಾಟ ಮೇಳವಾದ ‘ಫ್ಯಾಬ್ ಗ್ರಾಬ್ ಫೆಸ್ಟ್’ (Fab Grab Fest) ಅನ್ನು ಘೋಷಿಸಿದೆ. ಈ ಫೆಸ್ಟ್ ಮೂಲಕ ಕಂಪನಿಯು Samsung.com, ಸ್ಯಾಮ್‌ಸಂಗ್ ಶಾಪ್ ಆ್ಯಪ್ ಹಾಗೂ ಸ್ಯಾಮ್‌ಸಂಗ್ ಎಕ್ಸ್‌ಕ್ಲೂಸಿವ್ ಮಳಿಗೆಗಳಲ್ಲಿ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಮೇಲೆ ಅದ್ಭುತ ಆಫರ್‌ಗಳು ಮತ್ತು ಅತ್ಯಾಕರ್ಷಕ ಕ್ಯಾಶ್‌ಬ್ಯಾಕ್‌ಗಳನ್ನು ನೀಡುತ್ತದೆ.

‘ಫ್ಯಾಬ್ ಗ್ರಾಬ್ ಫೆಸ್ಟ್’ ಸಮಯದಲ್ಲಿ, ಗ್ರಾಹಕರು ಗ್ಯಾಲಕ್ಸಿ ಎಸ್ ಸರಣಿ, ಗ್ಯಾಲಕ್ಸಿ ಝಡ್ ಸರಣಿ ಮತ್ತು ಗ್ಯಾಲಕ್ಸಿ ಎ ಸರಣಿಯ ಸ್ಮಾರ್ಟ್‌ಫೋನ್‌ಗಳ ಆಯ್ದ ಮಾದರಿಗಳ ಮೇಲೆ 64%ವರೆಗೆ ರಿಯಾಯಿತಿ ಪಡೆಯಬಹುದು. ಗ್ಯಾಲಕ್ಸಿ ಟ್ಯಾಬ್ಲೆಟ್‌ಗಳ ಆಯ್ಕೆ ಮಾಡೆಲ್‌ಗಳು, ಆಕ್ಸೆಸರೀಸ್ ಮತ್ತು ವೇರೇಬಲ್ಸ್ ಉತ್ಪನ್ನಗಳ ಮೇಲೆ 77%ರಷ್ಟು ರಿಯಾಯಿತಿ ಲಭ್ಯ. ಗ್ಯಾಲಕ್ಸಿ ಬುಕ್4 ಸರಣಿಯ ಲ್ಯಾಪ್‌ಟಾಪ್‌ಗಳ ಆಯ್ದ ಮಾದರಿಗಳ ಖರೀದಿಯ ಮೇಲೆ ಗ್ರಾಹಕರು 24%ವರೆಗೆ ರಿಯಾಯಿತಿಗಳನ್ನು ಪಡೆಯಬಹುದು.

ಪ್ರಮುಖ ನಿಯೋ-ಕ್ಯೂಎಲ್‌ಇಡಿ 8ಕೆ, ನಿಯೋ ಕ್ಯೂಎಲ್‌ಇಡಿ, ಒಎಲ್‌ಇಡಿ, ದಿ ಫ್ರೇಮ್ ಟಿವಿಗಳು ಮತ್ತು ಕ್ರಿಸ್ಟಲ್ ಯುಹೆಚ್‌ಡಿ ಸರಣಿಯಂತಹ ಸ್ಯಾಮ್‌ಸಂಗ್ ಟಿವಿಗಳ ಆಯ್ಕೆ ಮಾಡೆಲ್‌ಗಳು 43%ರಷ್ಟು ರಿಯಾಯಿತಿಯಲ್ಲಿ ಲಭ್ಯವಿರುತ್ತವೆ. ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ ಮತ್ತು ಓಎಲ್ಇಡಿ ಟಿವಿಗಳ ಆಯ್ದ ಮಾಡೆಲ್‌ಗಳ ಖರೀದಿಯ ಮೇಲೆ ಗ್ರಾಹಕರು 20,000 ರೂ.ವರೆಗೆ ಬ್ಯಾಂಕ್ ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದೆಲ್ಲದರ ಜತೆಗೆ ಗ್ರಾಹಕರು ಎಲ್ಲ ಟಿವಿಗಳ ಖರೀದಿಯಲ್ಲಿ 5,000 ರೂ.ವರೆಗೆ ಎಕ್ಸ್‌ಚೇಂಜ್‌ ಬೋನಸ್‌ನಂತೆ ಪ್ರಯೋಜನಗಳನ್ನು ಪಡೆಯಬಹುದು.

‘ಫ್ಯಾಬ್ ಗ್ರಾಬ್ ಫೆಸ್ಟ್’ 2024ರಲ್ಲಿ ರೆಫ್ರಿಜರೇಟರ್‌ಗಳು, ವಾಷಿಂಗ್ ಮೆಷಿನ್‌ಗಳು, ಮೈಕ್ರೋವೇವ್‌ಗಳು, ಮಾನಿಟರ್‌ಗಳು ಮತ್ತು ಏರ್ ಕಂಡಿಷನರ್‌ಗಳಂತಹ ಡಿಜಿಟಲ್ ಉಪಕರಣಗಳನ್ನು ಕಡಿಮೆ ಬೆಲೆ ಮತ್ತು ಹೆಚ್ಚು ರಿಯಾಯಿತಿಯಲ್ಲಿ ಪಡೆಯಬಹುದು.

ನಮ್ಮ ‘ಹೆಚ್ಚು ಖರೀದಿಸಿ ಹೆಚ್ಚು ಉಳಿಸಿ’ ವೇದಿಕೆಯನ್ನು ಬಳಸಿಕೊಂಡು ಗ್ರಾಹಕರು Samsung.com ಅಥವಾ ಸ್ಯಾಮ್ ಸಂಗ್ ಶಾಪ್ ಆ್ಯಪ್ ಮೂಲಕ ಎರಡು ಅಥವಾ ಹೆಚ್ಚಿನ ಉತ್ಪನ್ನಗಳ ಖರೀದಿಸಿದರೆ ಹೆಚ್ಚುವರಿ 5% ಉಳಿತಾಯ ಮಾಡಬಹುದಾಗಿದೆ. ‘ಹೆಚ್ಚು ಖರೀದಿಸಿ ಹೆಚ್ಚು ಉಳಿಸಿ’ ಪ್ಲಾಟ್‌ಫಾರ್ಮ್ ಗ್ರಾಹಕರಿಗೆ ಸ್ಯಾಮ್‌ಸಂಗ್ ಉತ್ಪನ್ನಗಳ ಮೇಲೆ ಹೆಚ್ಚು ಆಫರ್ ಗಳನ್ನು ಪಡೆಯುವ ಅವಕಾಶ ಒದಗಿಸುತ್ತದೆ.

ಖುಷಿಯ ವಿಚಾರ ಇನ್ನೂ ಇದೆ. ಈ ವೇಳೆಯಲ್ಲಿ ಗ್ರಾಹಕರು ಸೈಡ್-ಬೈ-ಸೈಡ್ ರೆಫ್ರಿಜರೇಟರ್‌ಗಳು, ಚಂದದ ಫ್ರೆಂಚ್-ಡೋರ್ ರೆಫ್ರಿಜರೇಟರ್‌ಗಳು ಮತ್ತು ಫ್ರಾಸ್ಟ್ ಫ್ರೀ ರೆಫ್ರಿಜರೇಟರ್‌ಗಳಂತಹ ವ್ಯಾಪಕ ಶ್ರೇಣಿಯ ಪ್ರೀಮಿಯಂ ಉಪಕರಣಗಳ ಮೇಲೆ 48%ವರೆಗೆ ರಿಯಾಯಿತಿ ಪಡೆಯಬಹುದು. ಬೀಸ್ಪೋಕ್ ಎಐ ಪ್ಯಾಕೇಜ್‌ನ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಆಯ್ದ ಉತ್ಪನ್ನಗಳನ್ನು ಖರೀದಿಸುವ ಮೂಲಕ ಗ್ರಾಹಕರು ತಮ್ಮ ಅಡುಗೆ ಮನೆಯನ್ನು ಅದ್ಭುತವಾಗಿ ರೂಪಾಂತರಿಸಬಹುದು ಮತ್ತು ಅದಕ್ಕಾಗಿ ಹೆಚ್ಚುವರಿ 10% ರಿಯಾಯಿತಿಯನ್ನು ಪಡೆಯಬಹುದು.

ವಾಷಿಂಗ್ ಮೆಷಿನ್‌ಗಳ ಆಯ್ದ ಮಾದರಿಗಳು 50%ವರೆಗಿನ ರಿಯಾಯಿತಿಯಲ್ಲಿ ಲಭ್ಯ. ಸಂಪೂರ್ಣ ಅಟೋಮ್ಯಾಟಿಕ್ ಫ್ರಂಟ್ ಲೋಡಿಂಗ್ ಮತ್ತು ಸಂಪೂರ್ಣ ಅಟೋಮ್ಯಾಟಿಕ್ ಟಾಪ್ ಲೋಡಿಂಗ್ ಯಂತ್ರಗಳ ಡಿಜಿಟಲ್ ಇನ್ವರ್ಟರ್ ಮೋಟಾರ್‌ಗೆ 20-ವರ್ಷದ ವಾರಂಟಿ ಲಭ್ಯವಿರುತ್ತದೆ. ಈ ಉತ್ಪನ್ನಗಳ ಸುಲಭ ಖರೀದಿಗೆ ಕೈಗೆಟುಕುವ ಇಎಂಐ ಆಯ್ಕೆ ಕೂಡ ಲಭ್ಯವಿದ್ದು, ಸಂಪೂರ್ಣ ಅಟೋಮ್ಯಾಟಿಕ್ ಫ್ರಂಟ್ ಲೋಡಿಂಗ್‌ ವಾಷಿಂಗ್ ಮೆಷಿನ್ ಕೇವಲ 1,490 ರೂ., ಸಂಪೂರ್ಣ ಅಟೋಮ್ಯಾಟಿಕ್ ಟಾಪ್ ಲೋಡಿಂಗ್‌ 990 ರೂ. ಮತ್ತು ಸೆಮಿ- ಅಟೋಮ್ಯಾಟಿಕ್ ವಾಷಿಂಗ್ ಮೆಷಿನ್‌ 756 ರೂ. ಇಎಂಐಗೆ ಲಭ್ಯ.

ಈ ಕುರಿತು ಮಾತನಾಡಿರುವ ಸ್ಯಾಮ್‌ಸಂಗ್ ಇಂಡಿಯಾದ ಡಿ2ಸಿ ಬಿಸಿನೆಸ್‌ನ ಉಪಾಧ್ಯಕ್ಷ ಸುಮಿತ್ ವಾಲಿಯಾ, “Samsung.com ಮತ್ತು ಸ್ಯಾಮ್ ಸಂಗ್ ಮಳಿಗೆಗಳಲ್ಲಿ ಬಹು ನಿರೀಕ್ಷಿತ ಬೇಸಿಗೆ ಮಾರಾಟ ಮೇಳ ಆರಂಭಿಸಿದ್ದೇವೆ. ಫ್ಯಾಬ್ ಗ್ರಾಬ್ ಫೆಸ್ಟ್ ಮೂಲಕ ನಾವು ನಮ್ಮ ಗ್ರಾಹಕರಿಗೆ ಉತ್ತಮ ಆಫರ್‌ಗಳು ಮತ್ತು ರಿಯಾಯಿತಿಗಳನ್ನು ನೀಡುತ್ತಿದ್ದೇವೆ. ಈ ಫ್ಯಾಬ್ ಗ್ರಾಬ್ ಫೆಸ್ಟ್‌ನಲ್ಲಿ ಹೆಚ್ಚು ಖರೀದಿಸಿ ಹೆಚ್ಚು ಉಳಿಸಿ ಎಂಬ ಯೋಜನೆ ಅಳವಡಿಕೆಯ ಮೂಲಕ ಸ್ಯಾಮ್‌ಸಂಗ್ ಶ್ರೇಣಿಗಳ ಹೆಚ್ಚು ಉತ್ಪನ್ನಗಳನ್ನು ಖರೀದಿಸುವ ನಮ್ಮ ಗ್ರಾಹಕರಿಗೆ ಹೆಚ್ಚುವರಿ 5% ರಿಯಾಯಿತಿಯನ್ನೂ ನೀಡಲಿದ್ದೇವೆ. ಗ್ರಾಹಕರ ಸಂತಸವನ್ನು ಹೆಚ್ಚಿಸುವ ಜತೆಗೆ, ಆಯ್ದ ಮಾಡೆಲ್‌ಗಳನ್ನು ನಾವು ಅದೇ ದಿನ ಡೆಲಿವರಿ ನೀಡಲಿದ್ದೇವೆ” ಎಂದು ಹೇಳಿದರು.

ಮಾನಿಟರ್‌ಗಳ ಆಯ್ದ ಮಾದರಿಗಳು 61%ವರೆಗಿನ ರಿಯಾಯಿತಿಯಲ್ಲಿ ಲಭ್ಯ. ಗ್ರಾಹಕರು ಸ್ಮಾರ್ಟ್ ಮತ್ತು ಗೇಮಿಂಗ್ ಮಾನಿಟರ್‌ಗಳ ಆಯ್ದ ಮಾದರಿಗಳ ಖರೀದಿಯ ಮೇಲೆ ಉಚಿತ ವಾಲ್ ಮೌಂಟ್ ಅನ್ನು ಕೂಡ ಪಡೆಯಬಹುದು. ಸ್ಯಾಮ್ ಸಂಗ್ ತನ್ನ ಎಲ್ಲ ಮಾನಿಟರ್‌ಗಳ ಮೇಲೆ 3 ವರ್ಷಗಳ ವಾರಂಟಿ ಮತ್ತು 20% ಬ್ಯಾಂಕ್ ಕ್ಯಾಶ್‌ಬ್ಯಾಕ್ (10,000 ರೂ.ವರೆಗೆ) ನೀಡುತ್ತದೆ.

ಕನ್ವರ್ಟಿಬಲ್ ಮತ್ತು ವಿಂಡ್ ಫ್ರೀTM ಏಸಿಗಳ ಆಯ್ದ ಮಾದರಿಗಳು 47%ವರೆಗಿನ ರಿಯಾಯಿತಿಯಲ್ಲಿ ಲಭ್ಯವಿರುತ್ತದೆ. ಎರಡು ಅಥವಾ ಹೆಚ್ಚು ವಿಂಡ್ ಫ್ರೀTM ಏಸಿ ಮಾದರಿಗಳನ್ನು ಖರೀದಿಸುವಾಗ ಗ್ರಾಹಕರು ಹೆಚ್ಚುವರಿ 10% ರಿಯಾಯಿತಿಯನ್ನು ಪಡೆಯಬಹುದು. ವಿಶೇಷವೆಂದರೆ, ಪಿಸಿಬಿ ವಿಭಾಗದಲ್ಲಿ ಈ ಮಾದರಿಗಳು ವಿಸ್ತೃತ ವಾರಂಟಿಯೊಂದಿಗೆ ಬರುತ್ತವೆ. 1-ವರ್ಷದ ಸ್ಟಾಂಡರ್ಡ್ ವಾರಂಟಿ ಜೊತೆಗೆ ಹೆಚ್ಚುವರಿ 4-ವರ್ಷದ ವಿಸ್ತೃತ ವಾರಂಟಿಯನ್ನು ಗ್ರಾಹಕರು ಪಡೆಯಬಹುದು.

ಅತ್ಯಾಕರ್ಷಕ ಬ್ಯಾಂಕ್ ಕೊಡುಗೆಗಳು ಕೂಡ ಲಭ್ಯವಿದೆ. ಗ್ರಾಹಕರು ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಇತರ ಪ್ರಮುಖ ಸಂಸ್ಥೆಗಳ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿದರೆ ಗರಿಷ್ಠ 25,000 ರೂ.ವರೆಗಿನ ಕ್ಯಾಶ್‌ಬ್ಯಾಕ್‌ ಪಡೆಯಬಹುದು ಮತ್ತು ಆ ಮೂಲಕ 22.5%ವರೆಗೆ ಉಳಿತಾಯವನ್ನು ಅನುಭವಿಸಬಹುದು.

ಟ್ಯಾಬ್ಲೆಟ್‌ಗಳು, ಆಕ್ಸೆಸರೀಸ್ ಮತ್ತು ವೇರೇಬಲ್ಸ್(ಧರಿಸಬಹುದಾದ ಉತ್ಪನ್ನಗಳು)ಗಳ ಆಯ್ದ ಮಾದರಿಗಳ ಮೇಲೆ 77%ವರೆಗೆ ರಿಯಾಯಿತಿ
ಗ್ಯಾಲಕ್ಸಿ ಎಸ್ ಸರಣಿ, ಝಡ್ ಸರಣಿ ಮತ್ತು ಎ ಸರಣಿಯ ಸ್ಮಾರ್ಟ್‌ಫೋನ್‌ಗಳ ಆಯ್ದ ಮಾದರಿಗಳ ಮೇಲೆ 64%ವರೆಗೆ ರಿಯಾಯಿತಿ
ಆಯ್ದ ರೆಫ್ರಿಜರೇಟರ್‌ಗಳು ಸೇರಿದಂತೆ ಡಿಜಿಟಲ್ ಉಪಕರಣಗಳ ಮೇಲೆ 48% ವರೆಗೆ ರಿಯಾಯಿತಿ ಮತ್ತು ಆಯ್ದ ಕನ್ವರ್ಟಿಬಲ್ ಮತ್ತು ವಿಂಡ್‌ಫ್ರೀTM ಏಸಿಗಳ ಮೇಲೆ 47%ವರೆಗೆ ರಿಯಾಯಿತಿ
ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ, ಕ್ಯೂಎಲ್ಇಡಿ, ಓಎಲ್ಇಡಿ ಮತ್ತು 4ಕೆ ಯುಎಚ್‌ಡಿ ಟಿವಿಗಳ ಆಯ್ದ ಮಾದರಿಗಳ ಮೇಲೆ 43%ವರೆಗೆ ರಿಯಾಯಿತಿ

ಇದನ್ನೂ ಓದಿ: Samsung AI TV: ಏಪ್ರಿಲ್ 17ರಂದು ಸ್ಯಾಮ್‌ಸಂಗ್‌ನ ಎಐ ಟಿವಿಗಳ ಹೊಸ ಶ್ರೇಣಿ ಬಿಡುಗಡೆ

Continue Reading

ತಂತ್ರಜ್ಞಾನ

High-tech Gadget: ಸೆಕೆಗೆ ಎಸಿ, ಫ್ಯಾನ್‌, ಕೂಲರ್‌ ಸಾಕಾಗ್ತಿಲ್ವಾ..? ಹಾಗಿದ್ರೆ ಇಲ್ಲಿದೆ ನೋಡಿ ಹೈಟೆಕ್‌ ಗ್ಯಾಜೆಟ್‌

High-tech Gadget:ಸೋನಿ ಸಂಸ್ಥೆ ಸೆಕೆಗೆಂದೇ ಹೈಟೆಕ್‌ ಗ್ಯಾಜೆಟ್‌ವೊಂದನ್ನು ಅನಾವರಣಗೊಳಿಸಿದೆ. ಫ್ಯೂಚರಿಸ್ಟಿಕ್‌ ಬಾಡಿ ಏರ್‌ ಕಂಡೀಷನರ್‌ಎಂಬ ಹೈಟೆಕ್‌ ಗ್ಯಾಜೆಟ್‌ವೊಂದನ್ನು ಪರಿಚಯಿಸಲಾಗಿದ್ದು, ಇದನ್ನು ನಿಮ್ಮ ಶರ್ಟ್‌ನ ಹಿಂಭಾಗದಲ್ಲಿ ಸಿಕ್ಕಿಸಬಹುದಾಗಿದೆ. ಈ ನವೀನ ತಂತ್ರಜ್ಞಾನವು ಬೇಸಿಗೆಯಲ್ಲಿ ಬಿಸಿಲಿನ ಬೇಗೆಯಿಂದ ತಪ್ಪಿಸಿ ದೇಹವನ್ನು ತಂಪಾಗಿರಿಸುತ್ತದೆ.

VISTARANEWS.COM


on

High-tec Gadget
Koo

ನವದೆಹಲಿ: ಜನ ಬಿಸಿಲ ಬೇಗೆ ತತ್ತರಿಸಿ ಹೋಗಿದ್ದಾರೆ. ಎಲ್ಲಿ ಹೋರೂ ಬರೀ ಸೆಕೆ…ಸೆಕೆ..ಈ ಸೆಕೆಗೆ ಎಸಿ, ಪ್ಯಾನ್‌, ಕೂಲರ್‌ ಇದ್ಯಾವುದೂ ಸಾಕೇ ಆಗ್ತಿಲ್ಲ. ಹೀಗಿರುವಾಗಿ ಸೋನಿ ಸಂಸ್ಥೆ(Sony) ಸೆಕೆಗೆಂದೇ ಹೈಟೆಕ್‌ ಗ್ಯಾಜೆಟ್‌(high-tech gadget)ವೊಂದನ್ನು ಅನಾವರಣಗೊಳಿಸಿದೆ. ಫ್ಯೂಚರಿಸ್ಟಿಕ್‌ ಬಾಡಿ ಏರ್‌ ಕಂಡೀಷನರ್‌(futuristic body air conditioner) ಎಂಬ ಹೈಟೆಕ್‌ ಗ್ಯಾಜೆಟ್‌ವೊಂದನ್ನು ಪರಿಚಯಿಸಲಾಗಿದ್ದು, ಇದನ್ನು ನಿಮ್ಮ ಶರ್ಟ್‌ನ ಹಿಂಭಾಗದಲ್ಲಿ ಸಿಕ್ಕಿಸಬಹುದಾಗಿದೆ. ಈ ನವೀನ ತಂತ್ರಜ್ಞಾನವು ಬೇಸಿಗೆಯಲ್ಲಿ ಬಿಸಿಲಿನ ಬೇಗೆಯಿಂದ ತಪ್ಪಿಸಿ ದೇಹವನ್ನು ತಂಪಾಗಿರಿಸುತ್ತದೆ.

ರಿಯೋನ್‌ ಪಾಕೆಟ್‌ 5ಎಂದು ಕರೆಯಲ್ಪಡುವ ಈ ಥರ್ಮೋ ಸಾಧನ ಕಿಟ್ ಅನ್ನು ಏಪ್ರಿಲ್ 23 ರಂದು ಬಿಡುಗಡೆ ಮಾಡಲಾಗಿದೆ. ಸಾಧನವನ್ನು ಜನ ಸುಭವಾಗಿ ಧರಿಸಬಹುದಾಗಿದ್ದು, ಇದೊಂದು ಹವಾಮಾನ ನಿಯಂತ್ರಣ ವ್ಯವಸ್ಥೆಯಾಗಿದೆ. ಒಟ್ಟಿನಲ್ಲಿ ಹೇಳಬೇಕೆಂದರೆ ಅದನ್ನು ಧರಿಸಿದರೆ ಎಸಿಯಂಥ ಅನುಭವ ಆಗುತ್ತದೆ. ನಿಮ್ಮ ಕತ್ತಿನ ಹಿಂಭಾಗದಲ್ಲಿ ಧರಿಸಬಹುದಾದ ಈ ನವೀನ ಸಾಧನವು ಎಸಿಯಂತೆ ಕಾರ್ಯನಿರ್ವಹಿಸುತ್ತದೆ. ರಿಯಾನ್ ಪಾಕೆಟ್ 5 ಬೇಸಿಗೆಯಲ್ಲಿ ಐದು ಕೂಲಿಂಗ್ ಹಂತಗಳನ್ನು ಮತ್ತು ತಂಪಾದ ಪರಿಸರಕ್ಕೆ ನಾಲ್ಕು ವಾರ್ಮಿಂಗ್ ಹಂತಗಳನ್ನು ನೀಡುತ್ತದೆ. ಇದು ಕಿಕ್ಕಿರಿದ ರೈಲುಗಳಿಂದ ಹಿಡಿದು ಏರ್‌ಪ್ಲೇನ್ ಕ್ಯಾಬಿನ್‌ಗಳವರೆಗೆ ವಿವಿಧ ಸನ್ನಿವೇಶಗಳಿಗೆ ಹೊಂದಿಕೊಳ್ಳುವಂತ ಸಾಧನ. ಈ ಸಣ್ಣ ಸಾಧನ ರಿಮೋಟ್ ಕಂಟ್ರೋಲರ್‌ನಂತೆ ಕಾರ್ಯನಿರ್ವಹಿಸುತ್ತದೆ, ನಿಮ್ಮ ಸುತ್ತಮುತ್ತಲಿನ ತಾಪಮಾನದ ಸ್ಥಿತಿಗೆ ತಕ್ಕಂತೆ ತನ್ನ ಹಂತಗಳನ್ನು ಸೆಟ್‌ ಮಾಡಿಕೊಂಡು ಇದು ಕಾರ್ಯ ನಿರ್ವಹಿಸುತ್ತದೆ. ಇನ್ನು Reon Pocket 5 ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ, ಕೇವಲ ನಿಮ್ಮ ದೇಹದ ಉಷ್ಣತೆಯ ಮೇಲೆ ಕೇಂದ್ರೀಕರಿಸುತ್ತದೆ.

ಮೊಬೈಲ್‌ನಿಂದಲೂ ಆಪರೇಟ್‌ ಸಾಧ್ಯ:

ಇನ್ನು ರಿಯಾನ್ ಪಾಕೆಟ್ 5ಅನ್ನು ಮೊಬೈಲ್‌ನಿಂದ ಆಪರೇಟ್‌ ಮಾಡಬಹುದೇ ಎಂದು ಕೇಳಿದರೆ, ಹೌದು ಅದೂ ಸಾಧ್ಯವಿದೆ. ರಿಯಾನ್ ಪಾಕೆಟ್ 5 ಅನ್ನು ಹೊಸ ರಿಯಾನ್ ಪಾಕೆಟ್ ಅಪ್ಲಿಕೇಶನ್ ಮೂಲಕ ನಿಯಂತ್ರಿಸಬಹುದು, ಇದು iOS ಮತ್ತು Android ಫೋನಗಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್ ಬ್ಲೂಟೂತ್ ಮೂಲಕ ಐದು ಕೂಲಿಂಗ್ ಮತ್ತು ನಾಲ್ಕು ವಾರ್ಮಿಂಗ್ ಮಟ್ಟವನ್ನು ಸರಿಹೊಂದಿಸಲು ನಿಮಗೆ ಅನುಕೂಲ ಮಾಡಿಕೊಡುತ್ತದೆ. ಟೆಕ್ ರಾಡಾರ್ ಪ್ರಕಾರ, Reon ಪಾಕೆಟ್ 5 ಒಂದು ಬಾರಿ ಚಾರ್ಜ್‌ ಮಾಡಿದರೆ ಬರೋಬ್ಬರಿ 17 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ.

ಸೋನಿಯ ಈ ಹೊಸ ಗ್ಯಾಜೆಟ್‌ ಸಂಪೂರ್ಣವಾಗಿ ಹೊಸದಲ್ಲ. ರಿಯಾನ್ ಪಾಕೆಟ್ ಸರಣಿಯು 2019 ರಲ್ಲಿ ಜಪಾನ್‌ನಲ್ಲಿ ಪ್ರಾರಂಭವಾಯಿತು, ನಂತರದ ಆವೃತ್ತಿಗಳು ಹಾಂಗ್ ಕಾಂಗ್‌ನಂತಹ ಏಷ್ಯಾದ ಮಾರುಕಟ್ಟೆಗಳಲ್ಲಿ ಯಶಸ್ಸನ್ನು ಕಂಡುಕೊಂಡವು. ರಿಯಾನ್ ಪಾಕೆಟ್ 5, ಆದಾಗ್ಯೂ, ಜಾಗತಿಕ ವಿಸ್ತರಣೆಯನ್ನು ಗುರುತಿಸುತ್ತದೆ, UK ಮಾರುಕಟ್ಟೆಯಲ್ಲೂ ಇದು ಚಾಲ್ತಿಯಲ್ಲಿದೆ.

ಇದನ್ನೂ ಓದಿ:Viral Video: ಕತ್ತಿಯಿಂದ ಐವರ ಮೇಲೆ ಡೆಡ್ಲಿ ಅಟ್ಯಾಕ್‌; ದಾಳಿಕೋರನ ಅರೆಸ್ಟ್‌ ವಿಡಿಯೋ ಫುಲ್‌ ವೈರಲ್‌

ಎಲ್ಲಿ ಲಭ್ಯ, ಬೆಲೆ ಎಷ್ಟು?

Reon ಪಾಕೆಟ್ 5 ಗಾಗಿ ಪ್ರೀ ಆರ್ಡರ್‌ಗಳು ಈಗ ಸೋನಿಯ ವೆಬ್‌ಸೈಟ್‌ನಲ್ಲಿ ಆರಂಭವಾಗಿದೆ. ಇದರ ಬೆಲೆ 139 ಪೌಂಡ್‌ಗಳು (ಸುಮಾರು $170 USD ಅಥವಾ AU$260). ಈ ಪ್ರೀ-ಆರ್ಡರ್‌ಗಳ ಶಿಪ್ಪಿಂಗ್ ಮೇ 15 ರಂದು ಪ್ರಾರಂಭವಾಗುತ್ತದೆ. ಮೂಲ ಪ್ಯಾಕೇಜ್, “Reon 5T,” ಸಾಧನವು ಸ್ವತಃ, ರಿಯಾನ್ ಪಾಕೆಟ್ ಟ್ಯಾಗ್ ಮತ್ತು ಬಿಳಿ ನೆಕ್‌ಬ್ಯಾಂಡ್ ಅನ್ನು ಒಳಗೊಂಡಿದೆ. ಹೊಸ REON POCKET 5 ಮೇ 2024 ರಿಂದ ಸಿಂಗಾಪುರದಲ್ಲಿ ಲಭ್ಯವಿರುತ್ತದೆ ಮತ್ತು ನಂತರದ ದಿನಾಂಕದಲ್ಲಿ ಮಲೇಷ್ಯಾ, ಥೈಲ್ಯಾಂಡ್ ಮತ್ತು ವಿಯೆಟ್ನಾಂನಲ್ಲಿ ಲಭ್ಯವಿರಲಿದೆ.

Continue Reading

ತಂತ್ರಜ್ಞಾನ

WhatsApp colour: ವಾಟ್ಸ್ಆ್ಯಪ್​ನ ಬಣ್ಣ ಬದಲಾಗಿದ್ದು ಯಾಕೆ? ಏನಿದರ ಗುಟ್ಟು?

WhatsApp colour: ನಿರಂತರ ಅಪ್ಡೇಟ್ ಆಗುತ್ತಿರುವ ವಾಟ್ಸ್ ಆಪ್ ನಲ್ಲಿ ಈಗ ಬಣ್ಣ ಬದಲಾವಣೆ ಆಗಿದ್ದು, ಹೆಚ್ಚಿನವರು ಇದನ್ನು ಗಮನಿಸಿ ಇಲ್ಲದೇ ಇದ್ದರೂ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಆರಂಭವಾಗಿದೆ. ಯಾಕೆ ಈ ಬಣ್ಣ ಬದಲಾಯಿಸಲಾಗಿದೆ ಗೊತ್ತೇ?

VISTARANEWS.COM


on

By

WhatsApp color
Koo

ಜಗತ್ತಿನಾದ್ಯಂತ (world) ಎರಡು ಬಿಲಿಯನ್ ಗಿಂತಲೂ ಹೆಚ್ಚು ಮಂದಿ ಬಳಸುತ್ತಿರುವ ವಾಟ್ಸ್ ಆಪ್ (whatsApp) ತನ್ನ ವೈಶಿಷ್ಟ್ಯದಿಂದಾಗಿ ನಿರಂತರ ಎಲ್ಲರ ಗಮನ ಸೆಳೆಯುತ್ತದೆ. ಎಲ್ಲರೂ ಬಹು ಸುಲಭವಾಗಿ ಬಳಸಬಹುದಾದ ಈ ಪುಟ್ಟ ಆ್ಯಪ್ ಈಗ ನವೀಕರಣಗೊಂಡಿದ್ದು ಬಣ್ಣದ ಬದಲಾವಣೆಯಿಂದ (WhatsApp colour) ಬಳಕೆದಾರರಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.

ವಾಟ್ಸ್ ಆಪ್ ಈಗ ಒಂದು ಸೂಕ್ಷ್ಮ ಬದಲಾವಣೆಗೆ ಒಳಗಾಗಿದ್ದು ಅದು ಅದರ ಹಸಿರು ಬಣ್ಣ (green colour). ಸಂದೇಶ ಕಳುಹಿಸುವಿಕೆಯ ಅಪ್ಲಿಕೇಶನ್‌ ವಾಟ್ಸ್ ಆ್ಯಪ್​ ನ ಭಾಗಗಳು ಈಗ ಲೋಗೋದಂತೆಯೇ ಹಸಿರು ಬಣ್ಣಕ್ಕೆ ತಿರುಗಿದೆ. ಆದರೆ ಇದು ಹೆಚ್ಚಿನವರ ಗಮನಕ್ಕೆ ಬರಲಿಲ್ಲವಾದರೂ ಕೆಲವರು ಮಾತ್ರ ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಪ್ರಾರಂಭಿಸಿದ್ದಾರೆ.

ಕೆಲವು ಬಳಕೆದಾರರು ಈ ಬದಲಾವಣೆ ತುಂಬಾ ಚೆನ್ನಾಗಿಲ್ಲ ಎಂದು ಹೇಳಿದ್ದು, ಮೆಟಾ (meta) ಮಾಲೀಕತ್ವದ ಈ ಅಪ್ಲಿಕೇಶನ್ ಈ ರೀತಿ ಮಾಡಲು ಏಕೆ ನಿರ್ಧರಿಸಿದೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Deep Fakes: ಶೇ. 75 ಭಾರತೀಯರು ಡೀಪ್‌ಫೇಕ್‌ಗೆ ಒಳಗಾಗಿದ್ದಾರೆ; ಗೊತ್ತಾಗಿದ್ದು ಶೇ.22 ಮಂದಿಗೆ ಮಾತ್ರ!

ಭಾರತೀಯ ಬಳಕೆದಾರರಿಗೂ ಈ ಹೊಸ ಅಪ್ಡೇಟ್ ಲಭ್ಯವಾಗಿದ್ದು, ಒಂದು ವೇಳೆ ವಾಟ್ಸ್ ಆಪ್ ಈ ಸಣ್ಣ ಬದಲಾವಣೆ ಕಂಡು ಬಂದರೆ ಈ ಬಗ್ಗೆ ಆಶ್ಚರ್ಯ ಪಡಬೇಕಿಲ್ಲ.


ವಾಟ್ಸಾಪ್ ಏಕೆ ಹಸಿರಾಗಿದೆ?

ವಾಟ್ಸ್ ಆ್ಯಪ್​​ನ ಮಾಲೀಕರಾಗಿರುವ ಮೆಟಾ ಈ ಬದಲಾವಣೆಗಳ ಮೂಲಕ ಬಳಕೆದಾರರಿಗೆ ಆಧುನಿಕ, ಹೊಸ ಅನುಭವ ನೀಡುವ ಗುರಿಯನ್ನು ಹೊಂದಿದೆ ಮತ್ತು ಅದನ್ನು ಹೆಚ್ಚು ಸುಲಭವಾಗಿ ಮತ್ತು ಬಳಸಲು ಸರಳವಾಗುವಂತೆ ಮಾಡಲಾಗುತ್ತದೆ ಎಂದು ಹೇಳಿದೆ.

ಬದಲಾವಣೆಗಳೇನು?

ವಾಟ್ಸ್ ಆ್ಯಪ್ ನವೀಕರಣದ ಬಳಿಕ iOS ಮತ್ತು Android ಬಳಕೆದಾರರಿಗೆ ಇದು ಲಭ್ಯವಾಗುತ್ತಿದೆ. Android ಬಳಕೆದಾರರು ಹಿಂದಿನ ಹಸಿರು ಬಣ್ಣದಲ್ಲಿ ಬದಲಾವಣೆಯನ್ನು ಗಮನಿಸಬಹುದು.

ವಾಟ್ಸ್​​ಆ್ಯಪ್​ನಲ್ಲಿ ಹಸಿರು ಬಣ್ಣವನ್ನು ಮಾತ್ರವಲ್ಲ ಸ್ಟೇಟಸ್ ಬಾರ್‌ನಿಂದ ಚಾಟ್-ಲಿಸ್ಟ್ ವಿಂಡೋದವರೆಗೆ ಎಲ್ಲವೂ ವಿನ್ಯಾಸ ಬದಲಾವಣೆಯಾಗಿದೆ. ಅಪ್ಲಿಕೇಶನ್‌ನಲ್ಲಿ ಹಂಚಿಕೊಳ್ಳಲಾದ ಲಿಂಕ್‌ಗಳು ಕೂಡ ಹಸಿರು ಬಣ್ಣದಲ್ಲಿ ಗೋಚರಿಸುತ್ತವೆ.

ಆಂಡ್ರಾಯ್ಡ್ ಬಳಕೆದಾರರು ಡಾರ್ಕ್ ಮೋಡ್‌ ನಲ್ಲಿ ಸೂಕ್ಷ್ಮ ಹೊಂದಾಣಿಕೆಗಳನ್ನು ಕಾಣಬಹುದು. ಡಾರ್ಕ್ ಮೋಡ್ ನಲ್ಲಿ ಅದು ಇನ್ನಷ್ಟು ಗಾಢವಾಗುತ್ತದೆ ಮತ್ತು ಲೈಟ್ ಮೋಡ್ ನಲ್ಲಿ ಹೆಚ್ಚುವರಿ ಸ್ಥಳಾವಕಾಶದೊಂದಿಗೆ ಸುಧಾರಿತ ಓದುವಿಕೆಗೆ ಪ್ರಾಶಸ್ತ್ಯ ನೀಡುತ್ತದೆ.

ಬಳಕೆದಾರರ ಅನುಭವ ಸುಧಾರಣೆಗೆ ಕ್ರಮ

ವಾಟ್ಸ್ ಆ್ಯಪ್ ನಲ್ಲಿ ಬಣ್ಣ ಬದಲಾವಣೆಯೊಂದಿಗೆ ಬಳಕೆದಾರರ ಅನುಭವವನ್ನು ಸುಧಾರಿಸುವ ಉದ್ದೇಶದಿಂದ ಹಲವು ನವೀಕರಣಗಳನ್ನು ಮಾಡಿದೆ.

ವಾಟ್ಸ್ ಆ್ಯಪ್ ತನ್ನ ಸಂದೇಶ ಸೂಚಕಗಳಲ್ಲಿ ಕೆಲವು ಪದಗಳನ್ನು ದೊಡ್ಡಕ್ಷರ ಮಾಡಲು ಇತ್ತೀಚೆಗೆ ಪರಿಶೀಲನೆಗೆ ಒಳಗಾಯಿತು. ಕೆಲವು ಬಳಕೆದಾರರು “ಆನ್‌ಲೈನ್” ಮತ್ತು “ಟೈಪಿಂಗ್” ನ ಮೊದಲ ಅಕ್ಷರಗಳನ್ನು ಕ್ರಮವಾಗಿ “ಆನ್‌ಲೈನ್” ಮತ್ತು “ಟೈಪಿಂಗ್” ಎಂದು ದೊಡ್ಡಕ್ಷರದಲ್ಲಿ ಬದಲಾವಣೆಯನ್ನು ಗಮನಿಸಿದ್ದಾರೆ. ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಗಮನಿಸಲಾದ ಬದಲಾವಣೆಯು ಆನ್‌ಲೈನ್‌ನಲ್ಲಿ ಮಹತ್ವದ ಚರ್ಚೆಗಳನ್ನು ಹುಟ್ಟುಹಾಕಿದೆ.

Continue Reading

ತಂತ್ರಜ್ಞಾನ

English Speaking Practice: ಸರಳ, ಸುಲಭವಾಗಿ ಇಂಗ್ಲಿಷ್ ಮಾತನಾಡಬೇಕೇ?; ಗೂಗಲ್​​ನಲ್ಲಿದೆ ‘ಸ್ಪೀಕಿಂಗ್ ಪ್ರಾಕ್ಟೀಸ್’

English Speaking Practice: ಇಂಗ್ಲಿಷ್ ಮಾತನಾಡುವ ಕೌಶಲವನ್ನು ವೃದ್ಧಿಸಿಕೊಳ್ಳಬೇಕೇ. ಇದಕ್ಕಾಗಿ ಇನ್ನು ಹೆಚ್ಚಿನ ಕಡೆ ಅಲೆದಾಡಬೇಕಿಲ್ಲ. ನಾವು ನಿತ್ಯ ಏನಾದರೊಂದು ವಿಷಯದ ಬಗ್ಗೆ ಹುಡುಕಾಡುವ ಗೂಗಲ್ ನಲ್ಲೇ ಇದು ಲಭ್ಯವಾಗಲಿದೆ.

VISTARANEWS.COM


on

By

English Speaking Practice
Koo

ಸ್ಮಾರ್ಟ್ ಫೋನ್ (smart phone) ಬಳಕೆದಾರರ ಇಂಗ್ಲಿಷ್ ಮಾತನಾಡುವ ಕೌಶಲ್ಯವನ್ನು (English Speaking Practice) ಸುಧಾರಿಸಲು ಗೂಗಲ್ (google) ಹೊಸ ವೈಶಿಷ್ಠ್ಯವೊಂದನ್ನು ಪರಿಚಯಿಸಿದೆ. ‘ಸ್ಪೀಕಿಂಗ್ ಪ್ರಾಕ್ಟೀಸ್’ ಎಂದು ಕರೆಯಲ್ಪಡುವ ಈ ಹೊಸ ವೈಶಿಷ್ಟ್ಯವು ಪ್ರಸ್ತುತ ಅರ್ಜೆಂಟೀನಾ (Argentina), ಕೊಲಂಬಿಯಾ (Colombia), ಭಾರತ (India), ಇಂಡೋನೇಷ್ಯಾ (Indonesia), ಮೆಕ್ಸಿಕೋ (Mexico) ಮತ್ತು ವೆನೆಜುವೆಲಾದಲ್ಲಿ (Venezuela) ಗೂಗಲ್ ಹುಡುಕಾಟದಲ್ಲಿ ಲಭ್ಯವಾಗುತ್ತಿದೆ.

ಆರ್ಟಿಫಿಷಿಯಲ್ ಇಂಟಲಿಜೆನ್ಸ್ (AI) ಸಹಾಯದಿಂದ ಹೊಸ ವೈಶಿಷ್ಟ್ಯವು ಸಂವಹನ ಭಾಷಾ ಕಲಿಕೆಯನ್ನು ಪ್ರಾಕ್ಟೀಸ್ ಮಾಡಲು ಬಳಕೆದಾರರಿಗೆ ಅವಕಾಶ ಕಲ್ಪಿಸುತ್ತದೆ. ದಿನನಿತ್ಯ ಬಳಸಬಹುದಾದ ಹೊಸ ಪದಗಳನ್ನು ಕಲಿಯಲು ಇದು ಸಹಾಯ ಮಾಡುತ್ತದೆ ಎಂದು ಟೆಕ್ ದೈತ್ಯ ಗೂಗಲ್ ಹೇಳಿದೆ.

ಟೆಕ್ಕ್ರಂಚ್ ಪ್ರಕಾರ, ಸ್ಪೀಕಿಂಗ್ ಪ್ರಾಕ್ಟೀಸ್ ಅನ್ನು ಟ್ವಿಟರ್​​ ನಲ್ಲಿ ಹಿಂದೆ ಪರಿಚಯಿಸಲಾಗಿತ್ತು. ಈ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ಪ್ರಶ್ನೆ ಕೇಳುವ ಮೂಲಕ ಕಾರ್ಯನಿರ್ವಹಿಸುತ್ತದೆ. ಅದರ ಅನಂತರ ಬಳಕೆದಾರರು ಪೂರ್ವನಿರ್ಧರಿತ ಪದಗಳ ಗುಂಪಿನಿಂದ ಉತ್ತರಿಸಲು ಪ್ರೇರೇಪಿಸುತ್ತಾರೆ.

ಇದನ್ನೂ ಓದಿ: WhatsApp: ಭಾರತ ತೊರೆಯುವುದಾಗಿ ವಾಟ್ಸ್‌ಆ್ಯಪ್‌ ಎಚ್ಚರಿಕೆ; ಶೀಘ್ರದಲ್ಲೇ ಆ್ಯಪ್‌ ಅಲಭ್ಯ?

ಬಳಕೆದಾರರು ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ಗಳಲ್ಲಿ ಒಂದಾದ ವೈಶಿಷ್ಟ್ಯವು ಎಐ ಚಾಟ್‌ಬಾಟ್ ಅನ್ನು ಹೊಂದಿರುತ್ತದೆ. ಅದು ಬಳಕೆದಾರರು ಏನು ಮಾಡಬೇಕು ಎಂದು ತಿಳಿಸುತ್ತದೆ. ಬಳಕೆದಾರರು ಅನಂತರ ‘ದಣಿದ’, ‘ಹೃದಯ’ ಮತ್ತು ‘ವ್ಯಾಯಾಮ’ ದಂತಹ ಪದಗಳನ್ನು ಒಳಗೊಂಡಿರುವ ಒಂದು ಪದದ ಪ್ರತಿಕ್ರಿಯೆಗಳೊಂದಿಗೆ ಉತ್ತರಿಸ ಬೇಕು.


ಜನರು ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ಇಂಗ್ಲಿಷ್ ಸಂವಹನವನ್ನು ವೃದ್ಧಿಸಿಕೊಳ್ಳಲು ಗೂಗಲ್ ತನ್ನ ಎಐ ಆಲಿಸುವ ಕೌಶಲ್ಯಗಳನ್ನು 2023ರ ಅಕ್ಟೋಬರ್ ನಲ್ಲಿ ಹೊರತಂದಿದೆ. ಮೊದಲು ಮಾತನಾಡುವ ವಾಕ್ಯಗಳ ಕುರಿತು ಮಾತ್ರ ಪ್ರತಿಕ್ರಿಯೆಯನ್ನು ಒದಗಿಸುತಿತ್ತು. ಈಗ, ಬಳಕೆದಾರರು ತಾವು ಕಲಿಯುತ್ತಿರುವ ಭಾಷೆಯಲ್ಲಿ ನಡೆಯುತ್ತಿರುವ ಸಂಭಾಷಣೆಗಳನ್ನು ಅಭ್ಯಾಸ ಮಾಡಬಹುದು.


ಇಂಗ್ಲಿಷ್ ಟ್ಯೂಟರಿಂಗ್

ಇದಲ್ಲದೇ ಗೂಗಲ್ ಕಳೆದ ವರ್ಷ ಹೊಸ ಡ್ಯುಯೊಲಿಂಗೋ ನಂತಹ ಇಂಗ್ಲಿಷ್ ಟ್ಯೂಟರಿಂಗ್ ವೈಶಿಷ್ಟ್ಯವನ್ನು ಪರಿಚಯಿಸಿತ್ತು. ಅದು ಜನರು ತಮ್ಮ ಇಂಗ್ಲಿಷ್ ಮಾತನಾಡುವ ಕೌಶಲ್ಯಗಳನ್ನು ಅಭ್ಯಾಸ ಮಾಡಲು ಮತ್ತು ಸುಧಾರಿಸಲು ಸಹಾಯ ಮಾಡಿತು. ಮಾತನಾಡುವ ಅಭ್ಯಾಸ ಕಾರ್ಯವು ಇದನ್ನು ಒಳಗೊಂದು ನಿರ್ಮಿಸಲಾಗಿದೆ.

ಹೇಗೆ ಅಭ್ಯಾಸ ಮಾಡುವುದು?

ಹೊಸ ಮಾತನಾಡುವ ಅಭ್ಯಾಸ ವೈಶಿಷ್ಟ್ಯವನ್ನು ಬಳಸಲು ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ ಟಾಪ್ ನಲ್ಲಿ ಗೂಗಲ್ ಅಪ್ಲಿಕೇಶನ್ ತೆರೆಯಿರಿ ಮತ್ತು ಮೇಲಿನ ಎಡ ಮೂಲೆಯಲ್ಲಿರುವ ಲ್ಯಾಬ್ಸ್ ಐಕಾನ್ ಮೇಲೆ ಟ್ಯಾಪ್ ಮಾಡಿ. ಇಲ್ಲಿ, ನಿಮ್ಮ ಖಾತೆಯಲ್ಲಿ ಲಭ್ಯವಿರುವ ಹೊಸ ವೈಶಿಷ್ಟ್ಯವನ್ನು ನೋಡಬಹುದು.

ಎರಡು ಅತ್ಯಂತ ಜನಪ್ರಿಯ ಭಾಷಾ-ಕಲಿಕೆಯ ಅಪ್ಲಿಕೇಶನ್‌ಗಳಾದ ಡ್ಯುಯೊಲಿಂಗೋ ಮತ್ತು ಬಾಬೆಲ್‌ಗಳಂತಹವುಗಳನ್ನು ಗ್ರಾಹಕರಿಗೆ ಪರಿಚಯಿಸಲು ಗೂಗಲ್ ಬಯಸುತ್ತಿರುವಂತೆ ತೋರುತ್ತಿದೆ. ಈಗಿನಂತೆ ಗೂಗಲ್ ಈ ಪ್ರಾಯೋಗಿಕ ವೈಶಿಷ್ಟ್ಯವನ್ನು ಹೆಚ್ಚಿನ ಪ್ರದೇಶಗಳಿಗೆ ತರಲು ಯೋಜಿಸುತ್ತಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಈವರೆಗೆ ಲಭ್ಯವಾಗಿಲ್ಲ.

Continue Reading
Advertisement
IPL 2024
ಪ್ರಮುಖ ಸುದ್ದಿ10 mins ago

IPL 2024 : ಕೆಕೆಆರ್​ನಲ್ಲಿ ನಾಯಕ ಶ್ರೇಯಸ್​ ಮಾತು ಯಾರೂ ಕೇಳುತ್ತಿಲ್ಲ!

Bomb Threat
ದೇಶ12 mins ago

ಶಾಲೆಗಳಿಗೆ ಇ-ಮೇಲ್‌ ಮೂಲಕ ಹುಸಿ ಬಾಂಬ್‌ ಬೆದರಿಕೆ; ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ!

Prajwal Revanna Case Delete vulgar video and avoid legal action says SIT chief
ಹಾಸನ36 mins ago

Prajwal Revanna Case: ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊ ಇದ್ದರೆ ಡಿಲೀಟ್‌ ಮಾಡಿ, ಇಲ್ಲದಿದ್ದರೆ ಕ್ರಮ: SIT ಮುಖ್ಯಸ್ಥರ ಖಡಕ್‌ ವಾರ್ನಿಂಗ್

IPL 2024
ಕ್ರೀಡೆ54 mins ago

IPL 2024 : ಹಳೆ ಸೇಡು; ರಾಹುಲ್ ವಿರುದ್ಧವೇ ತಿರುಗಿಬಿದ್ದ ನವಿನ್​ ಉಲ್ ಹಕ್​

Prajwal Revanna Case HD Deve Gowda takes a big decision
ಕ್ರೈಂ54 mins ago

Prajwal Revanna Case: ‌ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌; ಮಹತ್ವದ ಫರ್ಮಾನು ಹೊರಡಿಸಿದ ಎಚ್‌.ಡಿ. ದೇವೇಗೌಡ!

Ramana Avatara Movie
ಕರ್ನಾಟಕ58 mins ago

Ramana Avatara Movie: ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ; ‘ರಾಮನ ಅವತಾರ’ ಚಿತ್ರ ನಿಷೇಧಿಸಲು ಆಗ್ರಹ!

Lok Sabha Election
ಕರ್ನಾಟಕ1 hour ago

Lok Sabha Election: ನಾಳೆ ವೋಟಿಂಗ್; ನಿಮ್ಮ ‘ಮತ’ ಕಳವಾದರೆ ಏನು ಮಾಡಬೇಕು? ಇಲ್ಲಿದೆ ಉತ್ತರ

farmer commits suicide in Kabbigere Gollarhatti village
ಕರ್ನಾಟಕ1 hour ago

Self Harming: ಕಬ್ಬಿಗೆರೆ ಗೊಲ್ಲರಹಟ್ಟಿಯಲ್ಲಿ ಸಾಲದ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

All preparations in Yallapur assembly constituency for Lok Sabha election says Ajjappa Sogalada
ಉತ್ತರ ಕನ್ನಡ1 hour ago

Lok Sabha Election 2024: ಲೋಕಸಭಾ ಚುನಾವಣೆಗೆ ಯಲ್ಲಾಪುರದಲ್ಲಿ ಸಕಲ ಸಿದ್ಧತೆ: ಅಜ್ಜಪ್ಪ ಸೊಗಲದ

Innova Crysta new grade GX+ introduced by Toyota Kirloskar Motor
ದೇಶ1 hour ago

Innova Crysta: ಇನ್ನೋವಾ ಕ್ರಿಸ್ಟಾ ನೂತನ ಸರಣಿಯ GX+ ಪರಿಚಯಿಸಿದ ಟಿಕೆಎಂ; ವೈಶಿಷ್ಟ್ಯಗಳೇನು? ದರ ಎಷ್ಟು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ3 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ3 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ4 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ17 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ1 day ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ1 day ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ1 day ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌