Site icon Vistara News

Survey Report: ಭಾರತೀಯರಿಗೆ ನಿತ್ಯ 12 ಸ್ಕ್ಯಾಮ್ ಎಸ್ಸೆಮ್ಮೆಸ್! ಸಮೀಕ್ಷೆಯಲ್ಲಿ ಏನಿದೆ ಮಾಹಿತಿ?

indians receive 12 scam messages, Says McAfee 2023 survey report

ನವದೆಹಲಿ: ಡಿಜಿಟಲ್ ವಂಚನೆ(Digital Fraud), ಸೈಬರ್ ಅಪರಾಧಗಳು (Cyber Crime) ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಸೈಬರ್ ವಂಚಕರು (Cyber Fraud) ಬೀಸುವ ಬಲೆಗೆ ಬೀಳುವ ಸಾಮಾನ್ಯರು ತಮ್ಮ ಖಾಸಗಿ ಮಾಹಿತಿಯನ್ನು ಕಳೆದುಕೊಳ್ಳುವುದರ ಜತೆಗೆ, ಆರ್ಥಿಕವಾಗಿಯೂ ನಷ್ಟವನ್ನು ಅನುಭವಿಸುತ್ತಿದ್ದಾರೆ. ಸಮೀಕ್ಷೆಯೊಂದರ ಪ್ರಕಾರ, ಪ್ರತಿ ಭಾರತೀಯ ದಿನಕ್ಕೆ 12 ಸ್ಕ್ಯಾಮ್ ಟೆಕ್ಸ್ಟ್ ಸಂದೇಶಗಳನ್ನು (Scam Text SMS) ಸ್ವೀಕರಿಸುತ್ತಾರಂತೆ! ಈ ಸ್ಕ್ಯಾಮ್ ಸಂದೇಶಗಳು ಆಲ್ಮೋಸ್ಟ್ ಕಾನೂನುಬದ್ಧ ವೇಷದಲ್ಲೇ ಗ್ರಾಹಕರ ಇನ್‌ಬಾಕ್ಸ್ ಸೇರುತ್ತಿವೆ. ಇದರಿಂದಾಗಿ ಬಳಕೆದಾರರಿಗೆ ಒತ್ತಡ ಮತ್ತು ಹಣಕಾಸು ನಷ್ಟಕ್ಕೆ ಕಾರಣವಾಗುತ್ತಿದೆ. ಹೀಗೆ ಬರುವ ನಾನಾ ಸಂದೇಶಗಳ ಅಸಲಿಯತ್ತನ್ನು ಪರೀಕ್ಷಿಸುವುದಕ್ಕಾಗಿ ಬಳಕೆದಾರರು ವಾರಕ್ಕೆ ಸರಾಸರಿ 1.8 ಗಂಟೆಗಳನ್ನು ಕಳೆಯುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ(Survey Report).

McAfee 2023 ಸ್ಕ್ಯಾಮ್ ವರದಿಯ ಪ್ರಕಾರ, ಭಾರತವು ಸೇರಿದಂತೆ ಸುಮಾರು 7 ದೇಶಗಳ 7 ಸಾವಿರ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಕೃತಕ ಬುದ್ಧಿಮತ್ತೆಯಿಂದ ನಡೆಸಲ್ಪಡುವ ಹಗರಣ ಸಂದೇಶಗಳ ಉಲ್ಬಣಗೊಳ್ಳುತ್ತಿರುವ ಅತ್ಯಾಧುನಿಕತೆಯನ್ನು ಅಧ್ಯಯನವು ಪರಿಶೀಲಿಸಿದೆ. ಎಐ ಚಾಲಿತ ಹಗರಣಗಳ ಹೆಚ್ಚುತ್ತಿರುವ ಅಲೆಯನ್ನು ಎದುರಿಸಲು ಎಐ ಚಾಲಿತ ರಕ್ಷಣಾ ಪರಿಹಾರಗಳ ತುರ್ತು ಅಗತ್ಯವನ್ನು ಸಂಶೋಧನೆಗಳು ಒತ್ತಿಹೇಳುತ್ತವೆ.

ಜನರನ್ನು ಬಲೆಗೆ ಬೀಳಿಸುವ ಸಾಮಾನ್ಯ ತಂತ್ರಗಳಿವು..

ಮೊಬೈಲ್ ಬಳಕೆದಾರರಿಗೆ ಆಮಿಷ ತೋರಿಸಿ, ಅವರನ್ನು ಸೈಬರ್ ಖದೀಮರು ಬಲೆಗೆ ಕೆಡುವುತ್ತಾರೆ. ಸಾಮಾನ್ಯವಾಗಿ, ನೀವು ಪ್ರಶಸ್ತಿ ಗೆದ್ದಿದ್ದೀರಿ, ಫೇಕ್ ಮಿಸ್ಡ್ ಡೆಲಿವರಿ ಅಥವಾ ಡೆಲಿವರಿ ಪ್ರಾಬ್ಲೆಮ್ ನೋಟಿಫಿಕೇಷನ್, ಅಮೆಜಾನ್ ಸೆಕ್ಯುರಿಟಿ ಅಲರ್ಟ್ ಅಥವಾ ಅಕೌಂಟ್ ಅಪ್‌ಡೇಟ್‌ಗೆ ಸಂಬಂಧಿಸಿದಂತೆ ನೋಟಿಫಿಕೇಷನ್ ಸಂದೇಶಗಳು, ನೆಟ್‌ಫ್ಲಿಕ್ಸ್ ಚಂದಾದಾರಿಕೆ ಅಪ್‌ಡೇಟ್ಸ್ ಇತ್ಯಾದಿ ವಿಷಯಗಳ ಹೆಸರಿನಲ್ಲಿ ಸೈಬರ್ ಖದೀಮರು ಸ್ಕ್ಯಾಮ್ ಎಸ್ಸೆಮ್ಮೆಸ್‌ಗಳನ್ನು ಕಳುಹಿಸುತ್ತಾರೆ. ಇವು ಮೇಲ್ನೋಟಕ್ಕೆ ಅಸಲಿ ಎಂಬಂತೆ ತೋರಿದರೆ, ವಾಸ್ತವದಲ್ಲಿ ನಿಮ್ಮ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವ ಪ್ಲ್ಯಾನ್ ಹೊಂದಿರುತ್ತವೆ.

ಈ ಸುದ್ದಿಯನ್ನೂ ಓದಿ: Tax refund message : ತೆರಿಗೆ ರಿಫಂಡ್‌ ಮೆಸೇಜ್‌ ಸ್ಕ್ಯಾಮ್‌ ಆಗಿರಬಹುದು, ಇರಲಿ ಎಚ್ಚರ

ಸರಿಸುಮಾರು 90 ಪ್ರತಿಶತ ಭಾರತೀಯರು ಇಮೇಲ್ ಮತ್ತು ಪಠ್ಯದ ಮೂಲಕ ದೈನಂದಿನ ನಕಲಿ ಸಂದೇಶಗಳು ಅಥವಾ ವಂಚನೆಗಳನ್ನು ಸ್ವೀಕರಿಸುತ್ತಿದ್ದಾರೆ ಎಂದು ಸಮೀಕ್ಷೆ ವೇಳೆ ಒಪ್ಪಿಕೊಂಡಿದ್ದಾರೆ. 84 ಪ್ರತಿಶತದಷ್ಟು ಜನರು ಸಾಮಾಜಿಕ ಮಾಧ್ಯಮಕ್ಕಾಗಿ ಅದನ್ನು ವರದಿ ಮಾಡುತ್ತಾರೆ. ಹಗರಣ ಸಂದೇಶಗಳು ಹೆಚ್ಚು ಮುಂದುವರಿದಂತೆ, 82 ಪ್ರತಿಶತ ಭಾರತೀಯರು ಅವುಗಳನ್ನು ಕ್ಲಿಕ್ ಮಾಡಿದ್ದಾರೆ ಅಥವಾ ಅವುಗಳ ಜಾಲಕ್ಕೆ ಸಿಲುಕಿದ್ದಾರೆ. ಎಐ ಬೆಂಬಲಿತ ಸ್ಕ್ಯಾಮ್‌ಗಳಲ್ಲಿನ ಹೆಚ್ಚಳವು ಡಿಜಿಟಲ್ ಕಮ್ಯುನಿಕೇಷನ್ ಮೇಲಿನ ವಿಶ್ವಾಸದಲ್ಲಿ ಶೇ.37ರಷ್ಟು ಕುಂದುಂಟಾಗಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡು ಭಾರತೀಯರು ತಿಳಿಸಿದ್ದಾರೆ.

Exit mobile version