Site icon Vistara News

ರಿಲಯನ್ಸ್ ಜಿಯೋದಿಂದ 2599 ರೂ.ಗೆ 4ಜಿ ಸ್ಮಾರ್ಟ್‌ಫೋನ್ ಜಿಯೋಫೋನ್ ಪ್ರೈಮಾ ಲಾಂಚ್

JioPhone Prima phone launched by Reliance Jio

ನವದೆಹಲಿ: ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಅವರ ರಿಲಯನ್ಸ್ ಜಿಯೋದಿಂದ (Reliance Jio) ಕೀಪ್ಯಾಡ್ 4ಜಿ ಸ್ಮಾರ್ಟ್‌ಫೋನ್ ‘ಜಿಯೋಫೋನ್ ಪ್ರೈಮಾ’ (JioPhone Prima) ಬಿಡುಗಡೆ ಮಾಡಲಾಗಿದೆ. ಇದು ಕೀಪ್ಯಾಡ್ ಇರುವಂಥ ಸ್ಮಾರ್ಟ್ ಫೋನ್ ಆಗಿದ್ದು, ಕೈಗೆಟುಕುವ ಬೆಲೆಗೆ ಲಭ್ಯವಾಗಲಿದೆ ಹಾಗೂ ಇದು ಸುಧಾರಿತ ಆವೃತ್ತಿ ಆಗಿದೆ. ಜಿಯೋ ಕಂಪನಿಯು 2599 ರೂಪಾಯಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಫೋನ್ ಕೈ ಒಎಸ್ (KaiOS)ನಲ್ಲಿ ಕೆಲಸ ಮಾಡಲಿದೆ. ಅಂದಹಾಗೆ ಯೂಟ್ಯೂಬ್, ಫೇಸ್ ಬುಕ್, ವಾಟ್ಸಾಪ್, ಗೂಗಲ್ ವಾಯ್ಸ್ ಅಸಿಸ್ಟೆಂಟ್ ನಂಥ ಎಲ್ಲ ವೈಶಿಷ್ಟ್ಯಗಳು ಜಿಯೋಫೋನ್ ಪ್ರೈಮಾದಲ್ಲಿ ಕೇವಲ ಒಂದು ಕ್ಲಿಕ್ ನಲ್ಲಿ ದೊರೆಯಲಿದೆ.

ಹೊಸ ಕೀಪ್ಯಾಡ್ ಸ್ಮಾರ್ಟ್ ಫೋನ್ ನೋಟ ಹಾಗೂ ವಿನ್ಯಾಸಕ್ಕಾಗಿ ಜಿಯೋ ಸಾಕಷ್ಟು ಕೆಲಸ ಮಾಡಿದೆ. ಜಿಯೋಫೋನ್ ಪ್ರೈಮಾ ವಿನ್ಯಾಸವು ದಿಟ್ಟ ಹಾಗೂ ಪ್ರೀಮಿಯಂ ಆಗಿ ಕಾಣುತ್ತದೆ. 2.4 ಇಂಚಿನ ಡಿಸ್ ಪ್ಲೇ ಪರದೆಯು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ಸ್ಮಾರ್ಟ್‌ಫೋನ್ 1800mAhನ ಶಕ್ತಿಶಾಲಿ ಬ್ಯಾಟರಿಯೊಂದಿಗೆ ಬರುತ್ತದೆ.

ವಿಡಿಯೋ ಕರೆ ಮತ್ತು ಫೋಟೋಗ್ರಫಿಗಾಗಿ ಮೊಬೈಲ್‌ನ ಎರಡೂ ಬದಿಯಲ್ಲಿ ಡಿಜಿಟಲ್ ಕ್ಯಾಮೆರಾಗಳನ್ನು ನೀಡಲಾಗಿದೆ. ಮೊಬೈಲ್ ಹಿಂಭಾಗದಲ್ಲಿ ಫ್ಲ್ಯಾಷ್ ಲೈಟ್ ಕೂಡ ಇದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್‌ನಂತಹ ಪ್ರೀಮಿಯಂ ಡಿಜಿಟಲ್ ಸೇವೆಗಳೊಂದಿಗೆ ಸ್ಮಾರ್ಟ್‌ಫೋನ್ ಸಿದ್ಧವಾಗಿದೆ. ಜಿಯೋಪೇ ಮೂಲಕ ಯುಪಿಐ ಪಾವತಿ ಮಾಡಬಹುದು.

ಜಿಯೋ ಪ್ರೈಮಾ 23 ಭಾಷೆಗಳನ್ನು ಬೆಂಬಲಿಸುತ್ತದೆ. ಅಂದರೆ ಇದರಲ್ಲಿ 23 ಭಾಷೆಗಳಲ್ಲಿ ಕೆಲಸ ಮಾಡಬಹುದು. ಗಾಢವಾದ ಬಣ್ಣಗಳಲ್ಲಿ ಬರುತ್ತಿರುವ ಈ ಸ್ಮಾರ್ಟ್‌ಫೋನ್ ಅನ್ನು ಪ್ರಮುಖ ರಿಟೇಲ್ ಸ್ಟೋರ್‌ಗಳು ಮತ್ತು ರಿಲಯನ್ಸ್ ಡಿಜಿಟಲ್.ಇನ್, ಜಿಯೋಮಾರ್ಟ್ ಎಲೆಕ್ಟ್ರಾನಿಕ್ಸ್ ಮತ್ತು ಅಮೆಜಾನ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದ ಖರೀದಿಸಬಹುದು.

ಜಿಯೋ ಪ್ರೈಮಾ ಕೇವಲ ಮೊಬೈಲ್ ಅಲ್ಲ, ಆದರೆ ಒಂದು ಸ್ಟೈಲ್ ಎಂದು ಕಂಪನಿಯು ನಂಬುತ್ತದೆ. ಕೈಗೆಟುಕುವ ಬೆಲೆಯಲ್ಲಿ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳ ಜತೆಗೆ ಸಂಪರ್ಕಗೊಂಡಿರುವ 4ಜಿಯಿಂದ ಶಕ್ತಿಯುತವಾದ ಮೊಬೈಲ್ ಅನ್ನು ಬಯಸುವವರಿಗೆ ಇದನ್ನು ವಿನ್ಯಾಸಗೊಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: ರಿಲಯನ್ಸ್ ಜಿಯೋದಿಂದ ಬಂತು ಜಿಯೋಸ್ಪೇಸ್ ಫೈಬರ್; ಇದು ಉಪಗ್ರಹ ಆಧರಿತ ಬ್ರಾಡ್‌ ಬ್ಯಾಂಡ್ ಸೇವೆ

Exit mobile version