ವಾಟ್ಸಾಪ್ (WhatsApp) ಎಂದರೆ ಕೇವಲ ಚಾಟ್ (WhatsApp Chat) ಮಾಡಲು, ಅಗತ್ಯ ಸಂದೇಶಗಳನ್ನು (WhatsApp Message) ತ್ವರಿತವಾಗಿ ಕಳುಹಿಸುವ ಆ್ಯಪ್ ಎಂದು ಕೊಂಡಿದ್ದೇವೆ. ಇವು ವಾಟ್ಸಾಪ್‌ನ ಪ್ರಾಥಮಿಕ ಕೆಲಸಗಳು ಎಂಬುದು ಹೌದು. ಆದರೆ, ಇವುಗಳ ಹೊರತಾಗಿಯೂ ವಾಟ್ಸಾಪ್ ನಾನಾ ರೀತಿಯಲ್ಲಿ ಬಳಕೆದಾರರಿಗೆ (WhatsApp Users) ನೆರವು ನೀಡುತ್ತದೆ. ಬೆರಳ ತುದಿಯಲ್ಲಿ ಅನೇಕ ಕೆಲಸಗಳನ್ನು ವಾಟ್ಸಾಪ್‌ಗಳನ್ನು ಬಳಸಿಕೊಂಡು ಮಾಡಬಹುದು. ಉಬರ್ ಬುಕ್(Uber Booking), ಮೆಟ್ರೋ ಟಿಕೆಟ್ ಖರೀದಿ (Metro Ticket), ದಿನಸಿ ಖರೀದಿ, ಹಣ ರವಾನೆ, ದಾಖಲೆ ಪತ್ರಗಳು ಮತ್ತು ಆರೋಗ್ಯ ಸೇವೆ ಸೇರಿದಂತೆ ಇನ್ನಿತರ ಸರ್ವೀಸ್ ಪಡೆದುಕೊಳ್ಳಬಹುದು. ಅಷ್ಟರ ಮಟ್ಟಿಗೆ ವಾಟ್ಸಾಪ್ ನಮಗೆ ಹೆಲ್ಪ್‌ಫುಲ್ ಆಗಿದೆ. ಆದರೆ, ಬಹಳಷ್ಟು ಜನರಿಗೆ ವಾಟ್ಸಾಪ್‌ನ ಉಪಯುಕ್ತತೆಯ ಬಗ್ಗೆ ಗೊತ್ತಿರುವುದಿಲ್ಲ. ಹಾಗಾಗಿ, ನೀವು ವಾಟ್ಸಾಪ್‌ನಿಂದ ಮಾಡಬಹುದು ಕೆಲವು ಕೆಲಸಗಳ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದೇವೆ. ಓದಿ.
ಉಬರ್ ಬುಕ್ ಮಾಡಬಹುದು
ಉಬರ್ ಬುಕ್ ಮಾಡಲು ನೀವು ಉಬರ್ ಆ್ಯಪ್‌ಗೆ ಹೋಗಬೇಕಾದ ಅಗತ್ಯವಿಲ್ಲ. ವಾಟ್ಸಾಪ್ ಮೂಲಕವೂ ಮಾಡಬಹುದು. ಇದ್ಕಕಾಗಿ ನೀವು, 7292000002 ನಂಬರ್ ಅನ್ನು ನಿಮ್ಮ ಮೊಬೈಲ್‌ನಲ್ಲಿ ಸೇವ್ ಮಾಡಿಕೊಟ್ಟುಕೊಳ್ಳಬೇಕು. ಬಳಿಕ, ವಾಟ್ಸಾಪ್ ಚಾಟ್ ಓಪನ್ ಮಾಡಿ ಮತ್ತು ಹಾಯ್ ಎಂದು ಟೈಪ್ ಮಾಡಿ. ಬಳಿಕ ನಿಮ್ಮ ಪಿಕ್ ಅಪ್ ಲೊಕೇಷನ್ ಮತ್ತು ನೀವು ಹೋಗುವ ಸ್ಥಳವನ್ನು ನಮೂದಿಸಿ. ತಕ್ಷಣವೇ ನಿಮಗೆ ನಿಮ್ಮ ಪ್ರಯಾಣಕ್ಕೆ ತಗಲುವ ವೆಚ್ಚ ಮತ್ತು ಡ್ರೈವರ್ ಮಾಹಿತಿ ದೊರೆಯುತ್ತದೆ.
ಮೆಟ್ರೋ ಟಿಕೆಟ್ ಖರೀದಿಸಬಹುದು!
ಹೌದು, ವಾಟ್ಸಾಪ್ ಮೂಲಕ ಮೆಟ್ರೋ ಟಿಕೆಟ್ ಕೂಡ ಖರೀದಿಸಬಹುದು. ಇದಕ್ಕಾಗಿ ನೀವು ಮೊಬೈಲ್ ಕಾಂಟಾಕ್ಟ್ ಲಿಸ್ಟ್‌ನಲ್ಲಿ 9650855800 ನಂಬರ್ ಸೇವ್ ಮಾಡಿಕೊಳ್ಳಬೇಕು. ಬಳಿಕ ಚಾಟ್ ಓಪನ್ ಮಾಡಿ ಹಾಯ್ ಎಂದು ಟೈಪ್ ಮಾಡಬೇಕು. ಬಳಿಕ ನಿಮಗೆ ಬೇಕಾದ ಭಾಷೆಯನ್ನು ಆಯ್ದುಕೊಳ್ಳಿ. ಇಷ್ಟಾದ ನಿಮ್ಮ ಸ್ಟೇಷನ್ ಸ್ಟಾಪ್ಸ್ ನಮೂದಿಸಿ ಮತ್ತು ಎಷ್ಟು ಟಿಕೆಟ್ ಬೇಕು ಎಂಬುದನ್ನು ನಮೂದಿಸಿ. ಜರ್ನಿ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಿ ಮತ್ತು ಮುಂದುವರಿಯರಿ. ಆಗ ನಿಮಗೆ ದೊರೆಯುವ ಕ್ಯೂಆರ್ ಟಿಕೆಟ್ ಅನ್ನು ಸೇವ್ ಮಾಡಿಟ್ಟುಕೊಳ್ಳಿ.
ಜಿಯೋ ಮಾರ್ಟ್ ಮೂಲಕ ಏನಾದರೂ ಖರೀದಿಸಿ
ಈಗಾಗಲೇ ನಿಮಗೆ ಗೊತ್ತಿರುವ ಸಂಗತಿ ಇದು. ರಿಲಯನ್ಸ್ ಇಂಡಸ್ಟ್ರೀಸ್‌ನ ಜಿಯೋ ಮಾರ್ಟ್ ಮತ್ತು ವಾಟ್ಸಾಪ್ ಈ ಕುರಿತು ಸಹಯೋಗವನ್ನು ಹೊಂದಿವೆ. ವಾಟ್ಸಾಪ್ ಮೂಲಕವೇ ಜಿಯೋ ಮಾರ್ಟ್‌ನಿಂದ ದಿನಸಿ ಪದಾರ್ಥಗಳನ್ನು ಖರೀದಿಸಬಹುದು. ಜಿಯೋ ಮಾರ್ಟ್‌ನಲ್ಲಿರುವ 50 ಸಾವಿರಕ್ಕೂ ಅಧಿಕ ಇರುವ ದಿನಸಿಗಳನ್ನು ಬ್ರೌಸ್ ಕೂಡ ಮಾಡಬಹುದು. ಜಿಯೋ ಮಾರ್ಟ್ ಡಿಸ್ಕೌಂಟ್ ಕೂಡ ನೀಡುತ್ತದೆ. ಇದಕ್ಕಾಗಿ ನೀವು ಜಿಯೋ ಮಾರ್ಟ್‌ನ 79770 79770 ನಂಬರ್ ಸೇವ್ ಮಾಡಿಕೊಳ್ಳಬೇಕು. ಚಾಟ್ ಬಾಕ್ಸ್‌ನಲ್ಲಿ ಹಾಯ್ ಟೈಪ್ ಮಾಡಿ. ಆಗ ದೊರೆಯುವ ವಸ್ತುಗಳ ಪಟ್ಟಿಯಲ್ಲಿ, ನಿಮಗೆ ಬೇಕಾದ ವಸ್ತುಗಳನ್ನು ಶೋಧ ಮಾಡಬಹುದು. ನಿಮ್ಮ ಆಯ್ಕೆಯಂತೆ ಬೇಕಾಗಿರುವ ವಸ್ತುಗಳನ್ನು ಕಾರ್ಟ್‌ಗೆ ಸೇರಿಸಿ. ವಾಟ್ಸಾಪ್ ಪೇ ಯುಪಿಐ ಮೂಲಕ ಹಣ ಪಾವತಿಸಿ ಆರ್ಡರ್ ಪೂರ್ತಿ ಮಾಡಿ.
ಹಣ ರವಾನೆ ಕೂಡ ಮಾಡಬಹುದು
ವಾಟ್ಸಾಪ್ ಹಣ ರವಾನೆ ಮತ್ತು ಸ್ವೀಕಾರಕ್ಕೂ ಅವಕಾಶ ಕಲ್ಪಿಸುತ್ತದೆ. ವಾಟ್ಸಾಪ್ ಪೇ ಮೂಲಕ ವಾಟ್ಸಾಪ್ ಬಳಕೆದಾರರು ಹಣದ ವ್ಯವಹಾರ ಮಾಡಬಹುದು. ಒಮ್ಮೆ ನೀವು ನಿಮ್ಮ ವಾಟ್ಸಾಪ್ ಪಾವತಿಗಳ ವ್ಯಾಲೆಟ್‌ಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿದ ನಂತರ, ಯಾವುದೇ ಶುಲ್ಕವಿಲ್ಲದೆ , ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸುವ ಯಾರಿಗಾದರೂ ನೀವು ಸುರಕ್ಷಿತವಾಗಿ ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು.
ಮಹತ್ವದ ದಾಖಲೆ ಪತ್ರ ಪಡೆಯಿರಿ
ವಾಟ್ಸಾಪ್ ಮೂಲಕ ನಿಮ್ಮ ಮಹತ್ವದ ದಾಖಲೆಗಳನ್ನು ಪಡೆದುಕೊಳ್ಳಬಹುದು. ಅಂದರೆ, ಬಳೆಕದಾರರು ತಮ್ಮ ಪಾನ್ ಕಾರ್ಡ್, ಚಾಲನಾ ಪರವಾನಿಗಿ ಇತ್ಯಾದಿ ದಾಖಲೆಗಳನ್ನು ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಬೇಕು. ಬಳಕೆದಾರರು ಮೊದಲಿಗೆ ಡಿಜಿಲಾಕರ್‌ನಲ್ಲಿ ಅಧಿಕೃತ ಖಾತೆ ತೆರೆಯಬೇಕು. ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಆರ್ ಸಿ ಇತ್ಯಾದಿ ದಾಖಲೆಗಳನ್ನು ಡಿಜಿಟಲ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಸೇವೆಯನ್ನು ವಾಟ್ಸಾಪ್ ಮೂಲಕ ಪಡೆದುಕೊಳ್ಳಲು 9013151515 ನಂಬರ್ ಸೇವ್ ಮಾಡಿ ಮತ್ತು ಚಾಟ್ ಓಪನ್ ಮಾಡಿ ಹಾಯ್ ಎಂದು ಟೈಪ್ ಮಾಡಿ. ಡಿಜಿಲಾಕರ್ ಡಾಕ್ಯುಮೆಂಟ್‌ಗಳನ್ನು ಪ್ರವೇಶಿಸಲು ಮೆನು ಪ್ರಾಂಪ್ಟ್‌ಗಳನ್ನು ಅನುಸರಿಸಿ.
ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಿ
ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳುವುದು ಕಷ್ಟ. ಆದರೆ, ವಾಟ್ಸಾಪ್ ಮೂಲಕ ತುಂಬ ಸುಲಭವಾಗಿ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಬಳಕೆದಾರರು +917290055552 ನಂಬರ್ ಸೇವ್ ಮಾಡಿಕೊಳ್ಳಬೇಕು ಮತ್ತು ಹಾಯ್ ಎಂದು ಟೈಪ್ ಮಾಡಿ ಸೆಂಡ್ ಮಾಡಬಹುದು. ಬಳಿಕ ಗೋಚರಿಸುವ ಮೆನುವಿನಲ್ಲಿ ನಿಮಗೆ ಬೇಕಾದ ಸೇವೆಗಳನ್ನು ಆಯ್ಕೆ ಮಾಡಿ. ಪ್ರಾಂಪ್ಟ್ ಅನುಸರಿಸಿ ಮತ್ತು ವೈದ್ಯರಿಗೆ ನಿಮ್ಮ ಅನಾರೋಗ್ಯದ ಮಾಹಿತಿಯನ್ನು ನೀಡಬೇಕು. ನಿಮಗೆ ಸೇವೆ ದೊರೆಯುತ್ತದೆ.
ಈ ಸುದ್ದಿಯನ್ನೂ ಓದಿ: WhatsApp: ವಾಟ್ಸಾಪ್ ಡೆಸ್ಕ್‌ಟಾಪ್ ಬಳಕೆದಾರರಿಗೆ ‘ಒಮ್ಮೆ ವೀಕ್ಷಣೆ’ ಫೀಚರ್ ವಾಪಸ್ ಬಂತು