Site icon Vistara News

Samsung AI TV: ಏಪ್ರಿಲ್ 17ರಂದು ಸ್ಯಾಮ್‌ಸಂಗ್‌ನ ಎಐ ಟಿವಿಗಳ ಹೊಸ ಶ್ರೇಣಿ ಬಿಡುಗಡೆ

Samsung AI TV

Samsung AI TV

ಬೆಂಗಳೂರು: ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ತನ್ನ ಹೊಸ ಶ್ರೇಣಿಯ ಕೃತಕ ಬುದ್ಧಿಮತ್ತೆ(ಎಐ) ಚಾಲಿತ ಟಿವಿ (Samsung AI TV)ಗಳನ್ನು ಏಪ್ರಿಲ್ 17ರಂದು ಬಿಡುಗಡೆ ಮಾಡಲಿದೆ.

ಇದು ಈ ವರ್ಷ ನಡೆಯುತ್ತಿರುವ ಸ್ಯಾಮ್‌ಸಂಗ್‌ನ ಎಐ ಸಂಬಂಧಿತ ಉತ್ಪನ್ನಗಳ ಅತಿ ದೊಡ್ಡ ಬಿಡುಗಡೆ ಎನಿಸಿಕೊಳ್ಳಲಿದೆ. ಜನವರಿಯಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್24 ಸರಣಿಯ ಮೂಲಕ ಗ್ಯಾಲಕ್ಸಿ ಎಐ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಮಾಡಿದ ಕಂಪನಿಯು ಕಳೆದ ವಾರ ತನ್ನ ಗೃಹೋಪಯೋಗಿ ಉಪಕರಣಗಳಾದ ಬಿಸ್ಪೋಕ್ ಎಐ ಅನ್ನು ಬಿಡುಗಡೆ ಮಾಡಿತ್ತು.

ಸ್ಯಾಮ್‌ಸಂಗ್‌ನ ನಿಯೋ ಕ್ಯೂಎಲ್ಇಡಿ 8ಕೆ ಸರಣಿಗಳು, ನಿಯೋ ಕ್ಯೂಎಲ್ಇಡಿ 4ಕೆ ಸರಣಿಗಳು ಮತ್ತು ಓಎಲ್ಇಡಿ ಸರಣಿಗಳು ಈ ವರ್ಷ ಎಐ ಮೂಲಕ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.

ಸ್ಯಾಮ್‌ಸಂಗ್ ಭಾರತದಲ್ಲಿ ತನ್ನ ಹೊಸ ಶ್ರೇಣಿಯ ಎಐ ಟಿವಿಗಳನ್ನು ಖರೀದಿಸಲು ಆಸಕ್ತಿ ಹೊಂದಿರುವ ಗ್ರಾಹಕರಿಂದ ಆರಂಭಿಕ ಆರ್ಡರ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. Samsung.com ಮತ್ತು ಸ್ಯಾಮ್‌ಸಂಗ್ ಶಾಪ್ ಆ್ಯಪ್‌ನಲ್ಲಿ 5,000 ರೂ. ಪಾವತಿಸುವ ಮೂಲಕ ಗ್ರಾಹಕರು ಸ್ಯಾಮ್‌ಸಂಗ್‌ನ ಹೊಸ ಎಐ ಟಿವಿಗಳನ್ನು ಮುಂಗಡವಾಗಿ ಆರ್ಡರ್ ಮಾಡಬಹುದು. ಸ್ಯಾಮ್‌ಸಂಗ್‌ನ ಹೊಸ ಎಐ-ಚಾಲಿತ ಟಿವಿಗಳನ್ನು ಮುಂಗಡವಾಗಿ ಆರ್ಡರ್ ಮಾಡುವ ಗ್ರಾಹಕರು ಖರೀದಿಯ ಮೇಲೆ ವಿಶೇಷ ಕೊಡುಗೆಗಳನ್ನು ಪಡೆಯಲು ಅರ್ಹತೆ ಹೊಂದಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

ನಿಯೋ ಕ್ಯೂಎಲ್ಇಡಿ 8ಕೆ ಸರಣಿಯನ್ನು (75 ಇಂಚುಗಳು ಮತ್ತು ಅದಕ್ಕಿಂತ ಮೇಲೆ) ಪ್ರೀ-ಆರ್ಡರ್ ಮಾಡುವ ಗ್ರಾಹಕರು ತಮ್ಮ ಖರೀದಿಯ ಮೇಲೆ 1,5000 ರೂ. ಮೌಲ್ಯದ ಕೊಡುಗೆಗಳನ್ನು ಪಡೆಯಬಹುದು. ನಿಯೋ ಕ್ಯೂಎಲ್ಇಡಿ 4ಕೆ ಮತ್ತು ಓಎಲ್ಇಡಿ ಸರಣಿಯನ್ನು ಮುಂಗಡವಾಗಿ ಆರ್ಡರ್ ಮಾಡುವ ಗ್ರಾಹಕರು ತಮ್ಮ ಖರೀದಿಯ ಮೇಲೆ 1,0000 ರೂ. ಮೌಲ್ಯದ ಪ್ರಯೋಜನಗಳನ್ನು ಪಡೆಯಲಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಎಕ್ಸ್‌ಪೀರಿಯನ್ಸ್‌ ಜೋನ್ ಪ್ರಾರಂಭಿಸಲು ಸಹಯೋಗ ಮಾಡಿಕೊಂಡ ಐಬಿಎಂ, ಮೈಕ್ರೋಸಾಫ್ಟ್

ಸ್ಯಾಮ್‌ಸಂಗ್‌ನ ಹೊಸ ನಿಯೋ ಕ್ಯೂಎಲ್‌ಇಡಿ 8ಕೆ ಟಿವಿ, ಅದ್ಭುತ ವೀಕ್ಷಣೆ, ವೈಯಕ್ತೀಕರಿಸಿದ ಅನುಭವ ನೀಡುತ್ತದೆ. ಜತೆಗೆ ವಿದ್ಯುತ್ ಉಳಿತಾಯ ಮತ್ತು ಅಲ್ಟ್ರಾ-ಇಮ್ಮರ್ಸಿವ್ ಆಡಿಯೋ ಮತ್ತು ಶಕ್ತಿಯುತ ಆಡಿಯೊ ಫೀಚರ್‌ಗಳು ಸೇರಿದಂತೆ ವಿನೂತನ ಸೌಕರ್ಯಗಳನ್ನು ಹೊಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version