Site icon Vistara News

Google DigiKavach: ಹಣಕಾಸು ವಂಚನೆ ತಡೆಯಲು ‘ಡಿಜಿಕವಚ’ ಆರಂಭಿಸಿದ ಗೂಗಲ್!

To Prevent financial frauds google digital kavach launched

ನವದೆಹಲಿ: ಹಣಕಾಸು ವಂಚನೆಗಳನ್ನು(Financial Frauds) ತಡೆಯುವುದಕ್ಕಾಗಿ ಇಂಟರ್ನೆಟ್ ದೈತ್ಯ ಕಂಪನಿಯಾಗಿರುವ ಗೂಗಲ್ ಭಾರತದಲ್ಲಿ ಡಿಜಿಕವಚ (Google DigiKavach) ಆರಂಭಿಸಿದೆ. ದಿಲ್ಲಿಯಲ್ಲಿ ನಡೆಯುತ್ತಿರುವ ಗೂಗಲ್ ಫಾರ್ ಇಂಡಿಯಾ 9ನೇ ಆವೃತ್ತಿ ಕಾರ್ಯಕ್ರಮದಲ್ಲಿ ಈ ಹೊಸ ಉಪಕ್ರಮವನ್ನು ಘೋಷಿಸಿದೆ. ಹಣಕಾಸು ವಂಚನೆ ಮತ್ತು ಸ್ಕ್ಯಾಮ್ (Scam) ತಡೆಯುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳನ್ನು ಡಬಲ್ ಗೊಳಿಸುತ್ತಿದ್ದೇವೆ ಎಂದು ಗೂಗಲ್ ಹೇಳಿಕೊಂಡಿದೆ.

ಗೂಗಲ್ ಆರಂಭಿಸಿರುವ ಡಿಜಿಕವಚವು ಆರಂಭಿಕ ಬೆದರಿಕೆಯನ್ನು ಪತ್ತೆ ಹಚ್ಚುತ್ತದೆ ಮತ್ತು ಎಚ್ಚರಿಕೆ ನೀಡುವ ವ್ಯವಸ್ಥೆಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಅಪಾಯವನ್ನುಂಟು ಮಾಡುವ ಮುಂಚೆಯೇ ಹಣಕಾಸು ವಂಚನೆಯ ಪ್ಯಾಟರ್ನ್ ಅಧ್ಯಯನ ಮಾಡುತ್ತದೆ.

ಡಿಜಿಕವಚ ವ್ಯವಸ್ಥೆಯಲ್ಲಿ ಸ್ಕ್ಯಾಮರ್‌ಗಳು ಅನುಸರಿಸುವ ಪದ್ಧತಿ ಮತ್ತು ಕಾರ್ಯವಿಧಾನವನ್ನು ಅಧ್ಯಯನ ಮಾಡಲಾಗುತ್ತದೆ. ಬೆದರಿಕೆಗಳನ್ನು ಮೊದಲೇ ಪತ್ತೆಹಚ್ಚಲು ಈ ವಿಧಾನವನ್ನು ಫಾಲೋ ಮಾಡಲಾಗುತ್ತದೆ. ಅಂತಿಮವಾಗಿ, ಬೆದರಿಕೆಯ ಒಳನೋಟಗಳನ್ನು ಪರಿಣಾಮಕಾರಿಯಾಗಿ ಪರಸ್ಪರ ವಿನಿಮಯ ಮಾಡಿಕೊಳ್ಳಲಾಗುತ್ತದೆ.

ಈ ಸುದ್ದಿಯನ್ನೂ ಓದಿ: Google for India: ಭಾರತದಲ್ಲೇ ತಯಾರಾಗಲಿದೆ ಗೂಗಲ್‌ ʼಪಿಕ್ಸೆಲ್‌ʼ ಫೋನ್!

ಡಿಜಿಕವಚಕ್ಕಾಗಿ ಗೂಗಲ್, ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಮೌಂಟೇನ್ ವ್ಯೂ ಟೆಕ್ ಸಂಸ್ಥೆಯು ಫಿನ್‌ಟೆಕ್ ಅಸೋಸಿಯೇಷನ್ ಫಾರ್ ಕನ್ಸ್ಯೂಮರ್ ಎಂಪವರ್‌ಮೆಂಟ್ (FACE)ನೊಂದಿಗೆ ಸಹಯೋಗವನ್ನು ಹೊಂದಿದೆ. FACE ಕಂಪನಿಯು ಸಂಭಾವ್ಯ ಬೆದರಿಕೆಗಳನ್ನು ‘ಆದ್ಯತೆಯ ಮೇಲೆ’ ಎಚ್ಚರಿಸುತ್ತದೆ.

ಭಾರತದಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆಗಳನ್ನು ತಡೆಯುವ ನಿಟ್ಟಿನಲ್ಲಿ ಗೂಗಲ್ ಕವಚವನ್ನು ಆರಂಭಿಸಿದೆ. ಸಾಕಷ್ಟು ಪ್ರಮಾಣದಲ್ಲಿ ಬಳಕೆದಾರರು ಈ ವಂಚನೆಯ ಜಾಲಕ್ಕೆ ಸಿಲುಕಿ, ಹೆಚ್ಚಿನ ಪ್ರಮಾಣದ ನಷ್ಟವನ್ನು ಮಾಡಿಕೊಂಡಿದ್ದಾರೆ. ಹಾಗಾಗಿ, ತನ್ನ ಬಳಕೆದಾರರನ್ನು ಸೈಬರ್ ವಂಚಕರಿಂದ ರಕ್ಷಿಸುವ ನಿಟ್ಟಿನಲ್ಲಿ ಗೂಗಲ್ ಡಿಜಿಕವಚವನ್ನು ಆರಂಭಿಸಿದೆ. ಈ ಪ್ರಯತ್ನ ಎಷ್ಟರಮಟ್ಟಿಗೆ ಸಕ್ಸೆಸ್ ಆಗಲಿದೆ ಎಂದು ಕಾದು ನೋಡಬೇಕು.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version