Site icon Vistara News

ನಿತ್ಯ ಲಕ್ಷಕ್ಕೂ ಅಧಿಕ ಮಕ್ಕಳಿಗೆ ಜನನಾಂಗ ಫೋಟೋ! ಫೇಸ್‌ಬುಕ್, ಇನ್‌ಸ್ಟಾದಿಂದ ಮಕ್ಕಳನ್ನು ದೂರವಿಡಿ

Genital photos to more than 100,000 children, Keep kids away from Facebook, Instagram

ನವದೆಹಲಿ: ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ (Facebook And Instagram) ಪೋಷಕ ಮೆಟಾದ (Meta) ಆಂತರಿಕ ಪ್ರಸ್ತುತಿಯು ಪ್ರತಿದಿನ 100,000 ಅಪ್ರಾಪ್ತರ ಜನನಾಂಗಗಳ ಫೋಟೋಗಳನ್ನು (adult genitalia) ಮತ್ತು ಪ್ರತಿದಿನ ಲೈಂಗಿಕ ದೌರ್ಜನ್ಯವನ್ನು (Sexual Abuse) ಚಿತ್ರಿಸುವ ಇತರ ಕಂಟೆಂಟ್ ಸ್ವೀಕರಿಸುತ್ತಾರೆ ಎಂದು ಅಂದಾಜಿಸಿದೆ. ವಾಲ್ ಸ್ಟ್ರೀಟ್ ಜರ್ನಲ್ (WSJ)ನಲ್ಲಿನ ವರದಿಯ ಪ್ರಕಾರ, ನ್ಯೂ ಮೆಕ್ಸಿಕೋ ಸಲ್ಲಿಸಿದ ಮೊಕದ್ದಮೆಯಲ್ಲಿ ಕಳೆದ ತಿಂಗಳು ಹೊಸದಾಗಿ ತಿದ್ದುಪಡಿ ಮಾಡಿದ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಿದಾಗ ಆಘಾತಕಾರಿ ಸಂಗತಿಯು ಮುನ್ನೆಲೆಗೆ ಬಂದಿದೆ. ಮೆಟಾದ ವೇದಿಕೆಗಳು ಅಪ್ರಾಪ್ತ ವಯಸ್ಸಿನ ಬಳಕೆದಾರರಿಗೆ ಲೈಂಗಿಕ ವಿಷಯವನ್ನು ಶಿಫಾರಸು ಮಾಡುತ್ತವೆ ಮತ್ತು ಲೈಂಗಿಕ ಶೋಷಕ ವಯಸ್ಕ ಬಳಕೆದಾರರಿಗೆ ಅಪ್ರಾಪ್ತ ವಯಸ್ಸಿನ ಖಾತೆಗಳನ್ನು ಪ್ರಮೋಟ್ ಮಾಡುತ್ತದೆ ಎಂದು ಆರೋಪಿಸಲಾಗಿದೆ. 2021ರಲ್ಲಿ ಆಂತರಿಕವಾಗಿ ಈ ಪ್ರಸ್ತುತಿಯನ್ನು ಮಂಡಿಸಲಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮೆಟಾ ಉದ್ಯೋಗಿಯ ಹೇಳಿಕೆಯನ್ನು ಒಳಗೊಂಡಿರುವ 2021ರ ದಾಖಲೆಗಳಲ್ಲಿ ಒಂದು ದಾಖಲೆಯ ಪ್ರಕಾರ, ಪ್ಲಾಟ್‌ಫಾರ್ಮ್‌ನ ಶಿಫಾರಸು ಅಲ್ಗಾರಿದಮ್‌ಗಳಲ್ಲಿ ಒಂದಾದ “ಪೀಪಲ್ ಯು ಮೇ ನೋ”, ಸಂಭಾವ್ಯ ಲೈಂಗಿಕ ಶೋಷಕ ವಯಸ್ಕ ಬಳಕೆದಾರರಿಗೆ ಮಕ್ಕಳನ್ನು ಸಂಪರ್ಕಿಸಲಾಗುತ್ತದೆ ಎಂಬುದು ಮೆಟಾ ಉದ್ಯೋಗಿಗಳಿಗೆ ತಿಳಿದಿತ್ತು.

ಕೆಲವು ವರ್ಷಗಳ ಹಿಂದೆಯೇ ಈ ಶಂಕಾಸ್ಪದ ಕ್ರಿಯೆಗಳ ಬಗ್ಗೆ ಕಂಪನಿಯ ಕಾರ್ಯನಿರ್ಹಾಕರಿಗೆ ತಿಳಿಸಲಾಗಿತ್ತು. ಆದರೆ, ಸಲಹೆಗಳನ್ನು ತಿರಸ್ಕರಿಸಿ, ಕೇವಲ ಅಲ್ಗಾರಿಮ್‌ಗಳನ್ನು ಸರಿ ಹೊಂದಿಸಬೇಕಾಗುತ್ತದೆ ಎಂದು ತಿಳಿಸಲಾಗಿತ್ತು ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ. ಅಲ್ಗಾರಿದಮ್ ಅನ್ನು ಅದರ ಶಾರ್ಟ್-ಫಾರ್ಮ್ PYMK (ಪೀಪಲ್ ಯು ಮೇ ನೋ) ಮೂಲಕ ಆಂತರಿಕವಾಗಿ ಕರೆಯಲಾಗುತ್ತದೆ ವಾಲ್ ಸ್ಟ್ರೀಟ್ ಜರ್ನಲ್ ತನ್ನ ವರದಿಯಲ್ಲಿ ತಿಳಿಸಿದೆ.

ವರದಿಗೆ ಲಗತ್ತಿಸಲಾದ ಕಾಮೆಂಟ್‌ಗಳಲ್ಲಿ ಫೇಸ್‌ಬುಕ್‌ನ ಒಬ್ಬ ಉದ್ಯೋಗಿ ಅಲ್ಗಾರಿದಮ್ “ಎಲ್ಲಾ ಅನುಚಿತ ವಯಸ್ಕ-ಅಪ್ರಾಪ್ತ ಸಂಪರ್ಕದಲ್ಲಿ 75 ಪ್ರತಿಶತದವರೆಗೆ ಕೊಡುಗೆ ನೀಡಿದೆ ಎಂದು ಹೇಳಿದರು. ನಾವು ವಯಸ್ಕರು ಮತ್ತು ಮಕ್ಕಳ ನಡುವೆ ಪಿವೈಎಂಕೆಯನ್ನು ಏಕೆ ಆಫ್ ಮಾಡಿಲ್ಲ? ಇದು ನಿಜವಾಗಿಯೂ ಅಸಮಾಧಾನವಾಗಿದೆ ಎಂಬ ಇನ್ನೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

ಈ ದಾಖಲೆಗಳ ಉಲ್ಲೇಖದ ಕುರಿತು ಮೆಟಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ನ್ಯೂ ಮೆಕ್ಸಿಕೋ “ಆಯ್ದ ಉಲ್ಲೇಖಗಳು ಮತ್ತು ತಮಗೆ ಬೇಕಾದ ದಾಖಲೆಗಳನ್ನು ಬಳಸಿಕೊಂಡು ನಮ್ಮ ಕೆಲಸವನ್ನು ತಪ್ಪಾಗಿ ನಿರೂಪಿಸುತ್ತದೆ ಎಂದು ವಾಲ್ ಸ್ಟ್ರೀಟ್ ಜನರ್ಲ್‌ಗೆ ತಿಳಿಸಿದೆ. ಕಂಪನಿಯು ಮಕ್ಕಳ ಶೋಖಕರನ್ನು “ನಿರ್ಧರಿತ ಅಪರಾಧಿಗಳು” ಎಂದು ಕರೆದಿದೆ. ಮಕ್ಕಳು ಬಳಕೆದಾರರು ಮತ್ತು ಅವರ ಪೋಷಕರಿಗೆ ಸುರಕ್ಷತೆ ಕೇಂದ್ರೀತ ಸಾಧನಗಳನ್ನು ರೂಪಿಸುವಲ್ಲಿ ಕಂಪನಿಯು ಸಾಕಷ್ಟು ಪ್ರಯತ್ನ ಮಾಡಿದೆ ಎಂದು ಅದು ಹೇಳಿದೆ.

ಈ ಸುದ್ದಿಯನ್ನೂ ಓದಿ: Child Abuse: ಮಕ್ಕಳ ಲೈಂಗಿಕ ದೌರ್ಜನ್ಯ ಕಂಟೆಂಟ್‌ ಹರಿದಾಟ; ಟೆಲಿಗ್ರಾಂ, ಫೋನ್‌ಪೆ, ಪೇಟಿಎಂ ಮೇಲೆ ದೂರು

Exit mobile version