Site icon Vistara News

Google for India: ಭಾರತದಲ್ಲೇ ತಯಾರಾಗಲಿದೆ ಗೂಗಲ್‌ ʼಪಿಕ್ಸೆಲ್‌ʼ ಫೋನ್!

Google Pixel 8 series smartphone having car crash detection, photo unblur feature

ಹೊಸದಿಲ್ಲಿ: ಗೂಗಲ್ ಕಂಪನಿಯು ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು (Google Pixel smartphone) ಭಾರತದಲ್ಲಿ ತಯಾರಿಸುವುದಾಗಿ ‘Google for Indiaʼದಲ್ಲಿ ಪ್ರಕಟಿಸಿದೆ.

ಗೂಗಲ್ ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ತಯಾರಿಸಲಿದೆ ಎಂದು ಕಂಪನಿಯು ಗುರುವಾರ ‘ಗೂಗಲ್ ಫಾರ್ ಇಂಡಿಯಾ’ದಲ್ಲಿ ಘೋಷಿಸಿತು. ಗೂಗಲ್ ಫಾರ್ ಇಂಡಿಯಾ ಇದು ಕಂಪನಿಯ ಭಾರತೀಯ ವಾರ್ಷಿಕ ಇವೆಂಟ್.‌ ಈ ಸಲ ನಡೆಯುತ್ತಿರುವುದು ಇದರ ಒಂಬತ್ತನೇ ಆವೃತ್ತಿ.

ಪಿಕ್ಸೆಲ್ ಸರಣಿಯ ನೂತನ ಪಿಕ್ಸೆಲ್‌- 8 ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾಗಿದೆ. ಇದರ ಉತ್ಪಾದನೆ ಭಾರತದಲ್ಲಿ ಆರಂಭವಾಗಲಿದೆಯಂತೆ. 2024ರಲ್ಲಿ ಇದರ ಮೊದಲ ರೋಲ್ ಔಟ್ ಅನ್ನು ನಿರೀಕ್ಷಿಸಲಾಗಿದೆ.

“ಭಾರತದಲ್ಲಿ ಹೆಚ್ಚಿನ ಜನರಿಗೆ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ಲಭ್ಯವಾಗುವಂತೆ ಮಾಡಲು ನಾವು ಅವಕಾಶ ಸೃಷ್ಟಿಸುತ್ತಿದ್ದೇವೆ ಮತ್ತು ಭಾರತದಲ್ಲಿ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವ ನಮ್ಮ ಯೋಜನೆಯನ್ನು ಘೋಷಿಸಲು ಉತ್ಸುಕರಾಗಿದ್ದೇವೆ” ಎಂದು ಗೂಗಲ್‌ನ ಸಾಧನಗಳು ಮತ್ತು ಸೇವೆಗಳ ವಿಭಾಗದ ಮುಖ್ಯಸ್ಥ ವಿಪಿ ರಿಕ್ ಓಸ್ಟರ್ಲೋಹ್ ಹೇಳಿದರು.

“ನಾವು ಪಿಕ್ಸೆಲ್ ಫೋನ್‌ಗಳನ್ನು ಸ್ಥಳೀಯವಾಗಿ ಉತ್ಪಾದಿಸಲು ಅಂತಾರಾಷ್ಟ್ರೀಯ ಮತ್ತು ದೇಶೀಯ ತಯಾರಕರೊಂದಿಗೆ ಪಾಲುದಾರರಾಗುತ್ತೇವೆ. ಮೇಕ್ ಇನ್ ಇಂಡಿಯಾ (Make in India) ಉಪಕ್ರಮಕ್ಕೆ ಸೇರಿಕೊಳ್ಳುತ್ತೇವೆ” ಎಂದು ಓಸ್ಟರ್ಲೋಹ್ ಹೇಳಿದರು.

ಭಾರತವು ಪಿಕ್ಸೆಲ್ ಗ್ಯಾಜೆಟ್‌ಗಳಿಗೆ ದೇಶ ಆದ್ಯತೆಯ ಮಾರುಕಟ್ಟೆ. ಇತ್ತೀಚಿನ ವರ್ಷಗಳಲ್ಲಿ ಭಾರತ ನಿಜವಾದ ವಿಶ್ವದರ್ಜೆಯ ಉತ್ಪಾದನೆಯ ಕೇಂದ್ರವಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. ಇದರ ಪರಿಣಾಮವಾಗಿ ಇಲ್ಲಿ ವ್ಯಾಪಾರ ಅಭಿವೃದ್ಧಿ ಹೊಂದಲು ಅಭಿವೃದ್ಧಿಶೀಲ ವಾತಾವರಣವಿದೆ ಎಂದಿದ್ದಾರೆ ಅವರು.

Google Pixel 8 ಮೊಬೈಲ್ ಅನ್ನು 4ನೇ ಅಕ್ಟೋಬರ್ 2023ರಂದು ಬಿಡುಗಡೆ ಮಾಡಲಾಗಿದೆ. ಈ ಫೋನ್ 6.20 ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ ಜೊತೆಗೆ 1080×2400 ಪಿಕ್ಸೆಲ್‌ಗಳ (FHD+) ರೆಸಲ್ಯೂಶನ್ ನೀಡುತ್ತದೆ. ಗೂಗಲ್ ಪಿಕ್ಸೆಲ್ 8 ನಾನ್-ಕೋರ್ ಗೂಗಲ್ ಟೆನ್ಸರ್ ಜಿ3 ಪ್ರೊಸೆಸರ್‌ನಿಂದ ಚಾಲಿತವಾಗಿದೆ. 8GB RAM ಸಾಮರ್ಥ್ಯ ಹೊಂದಿದ್ದು, ಆಂಡ್ರಾಯ್ಡ್ 14 ಅನ್ನು ರನ್ ಮಾಡುತ್ತದೆ ಮತ್ತು 4575mAh ಬ್ಯಾಟರಿಯಿಂದ ಚಾಲಿತವಾಗಿದೆ. ಗೂಗಲ್ ಪಿಕ್ಸೆಲ್ 8 ವೈರ್‌ಲೆಸ್ ಚಾರ್ಜಿಂಗ್ ಮತ್ತು ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Google Pixel 8 ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಹಿಂಬದಿಯ ಕ್ಯಾಮರಾ ಸೆಟಪ್ ಆಟೋಫೋಕಸ್ ಹೊಂದಿದೆ.

ಇದನ್ನೂ ಓದಿ: Google | ಚೀನಾದಿಂದ ಭಾರತಕ್ಕೆ ಪಿಕ್ಸೆಲ್‌ ಸ್ಮಾರ್ಟ್‌ಫೋನ್ ಉತ್ಪಾದನಾ ಘಟಕ ಸ್ಥಳಾಂತರಕ್ಕೆ ಗೂಗಲ್‌ ಚಿಂತನೆ

Exit mobile version