Site icon Vistara News

Google Pay: ಗೂಗಲ್ ಪೇ ಖಾತೆದಾರರಿಗೆ 80 ಸಾವಿರ ರೂ.ವರೆಗೆ ಹಣ ಜಮೆ! ನಿಮಗೂ ಬಂದಿದೆಯಾ, ಚೆಕ್ ಮಾಡ್ಕೊಳ್ಳಿ?

Google Pay

Google Pay app will no longer be available in US; Continues operations in India

ನವದೆಹಲಿ: ಡಿಜಿಟಲ್ ಪೇಮೆಂಟ್ ವೇದಿಕೆಯಾಗಿರುವ ಗೂಗಲ್ ಪೇ (Google Pay) ಬಗ್ಗೆ ಬಳಕೆದಾರರು ಆಗಾಗ ತಾಂತ್ರಿಕ ಸಮಸ್ಯೆ ಬಗ್ಗೆ ಹೇಳುತ್ತಿರುತ್ತಾರೆ. ಆದರೆ, ಸೋಮವಾರ ಮಾತ್ರ ಅಂಥ ತಕಾರರು ಹೇಳಲಿಕ್ಕೆ ಹೋಗಲಿಕ್ಕಿಲ್ಲ. ಯಾಕೆಂದರೆ, ಅವರ ಗೂಗಲ್ ಪೇ ಖಾತೆಗೆ ಸುಮಾರು 80 ಸಾವಿರ ರೂ.ವರೆಗೂ ಹಣ ಜಮೆಯಾಗಿದೆ! ನೀವು ಗೂಗಲ್ ಪೇ ಬಳಸುತ್ತಿದ್ದರೆ ನಿಮ್ಮ ಖಾತೆ ಚೆಕ್ ಮಾಡ್ಕೊಳ್ಳಿ!. ಅಂದ ಹಾಗೆ, ಈ ರೀತಿಯಾಗಿ ಗೂಗಲ್ ಹಣ ನೀಡಿದ್ದರ ಬಗ್ಗೆ ಸಾಕಷ್ಟು ಬಳಕೆದಾರರು ವರದಿ ಮಾಡಿದ್ದಾರೆ. ಆದರೆ, ಈ ಸಂತೋಷ ಬಹಳ ಸಮಯದವರೆಗೂ ಏನೂ ಉಳಿದಿಲ್ಲ. ಯಾಕೆಂದರೆ, ತಾಂತ್ರಿಕ ಕಾರಣದಿಂದಾಗಿ ಬಂದಿದ್ದ ಹಣವನ್ನು ಗೂಗಲ್ ಮತ್ತೆ ವಾಪಸ್ ಪಡೆದುಕೊಂಡಿದೆ! ಅಮೆರಿಕದ ಬಳಕೆದಾರರಿಗೆ ಈ ರೀತಿ ಹಣ ಜಮೆಯಾಗಿತ್ತು. ಆದರೆ, ಭಾರತೀಯ ಬಳಕೆದಾರರಿಂದ ಈ ರೀತಿಯ ಯಾವುದೇ ವರದಿಯಾಗಿಲ್ಲ.

ಗೂಗಲ್ ಪೇ ಖಾತೆದಾರರಿಗೆ ಸುಮಾರು 10 ಡಾಲರ್‌ನಿಂದ 1000 ಡಾಲರ್‌ವರೆಗೂ ದೊರೆತಿದೆ. ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಅಂದಾಜು 80 ಸಾವಿರ ರೂ.ವರೆಗೂ ಜಮೆಯಾಗಿತ್ತು. ಆದರೆ, ಆಕಸ್ಮಿಕವಾಗಿ ಜಮೆಯಾಗಿದ್ದ ಹಣವನ್ನು ಗೂಗಲ್ ಕಂಪನಿಯು ಕೂಡಲೇ ಮತ್ತೆ ಮರಳಿ ವಾಪಸ್ ಪಡೆದುಕೊಂಡಿತು.

Google Pay ಹಣ ವೆಚ್ಚ ಮಾಡಿದ್ದರೆ, ಏನು ಮಾಡೋದು?

ಗೂಗಲ್ ತನ್ನ ತಾಂತ್ರಿಕ ಸಮಸ್ಯೆಯಿಂದ ಹಣವನ್ನು ಬಳಕೆದಾರರ ಖಾತೆಗೆ ಜಮೆ ಮಾಡಿತ್ತು. ಈ ವಿಷಯ ಗೊತ್ತಾಗಿ ಅದು ಆ ಹಣವನ್ನು ವಾಪಸ್ ಪಡೆದುಕೊಳ್ಳವಷ್ಟರಲ್ಲಿ ಬಳಕೆದಾರರು ಹಣವನ್ನು ವೆಚ್ಚ ಮಾಡಿದ್ದರೆ? ಹೌದು, ಈ ಪ್ರಶ್ನೆಗೆ ಗೂಗಲ್ ಪೇ ಉತ್ತರ. ಒಂದೊಮ್ಮೆ ರೀತಿಯಾಗಿ ಖರ್ಚು ಮಾಡಿದ್ದರೆ, ಆ ಹಣವನ್ನು ಕಂಪನಿಯು ವಾಪಸ್ ಪಡೆದುಕೊಳ್ಳುವುದಿಲ್ಲ. ಅಷ್ಟೇ ಅಲ್ಲ, ಯಾವುದೇ ಕ್ರಮಕ್ಕೂ ಮುಂದಾಗುವುದಿಲ್ಲ ಎಂದು ಹೇಳಿದೆ.

ಗೊತ್ತಾಗಿದ್ದು ಹೇಗೆ?

ಜರ್ನಲಿಸ್ಟ್ ಮಿಶಾಲ್ ರಹಮಾನ್ ಎಂಬುವರು ಗೂಗಲ್ ಪೇ ಆಕಸ್ಮಿಕವಾಗಿ ಖಾತೆಗಳಿಗೆ ಹಣ ಜಮೆ ಮಾಡಿದ್ದನ್ನು ವರದಿ ಮಾಡಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ಅವರು, ಓಹೋ.. ಗೂಗಲ್ ಪೇ ಬಳಕೆದಾರರಿಗೆ ಉಚಿತವಾಗಿ ಹಣವನ್ನು ಜಮೆ ಮಾಡಿದೆ. ನಾನು ಈಗಷ್ಟೇ ಗೂಗಲ್ ಪೇ ಓಪನ್ ಮಾಡಿದೆ ಮತ್ತು ನನಗೆ 46 ಡಾಲರ್ ರಿವಾರ್ಡ್ ರೂಪದಲ್ಲಿ ಜಮೆಯಾಗಿತ್ತು. ನಾನು ಈ ಹಣವನ್ನು ಬಳಸಿಕೊಂಡು ಡಾಗ್ ಫುಡ್ ಖರೀದಿಸಿರುವುದಾಗಿ ಹೇಳಿದ್ದಾರೆ.

ಮಿಶಾಲ್ ರಹಮಾನ್ ಅವರ ಟ್ವೀಟ್

ಇದೇ ವೇಳೆ ಗೂಗಲ್ ಪೇ ಖಾತೆಯಲ್ಲಿ ಹಣ ಜಮೆಯಾಗಿರುವುದನ್ನು ಖಚಿಪಡಿಸಿಕೊಳ್ಳುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಮೊದಲಿಗೆ ಗೂಗಲ್ ಪೇ ಓಪನ್, ಡೀಲ್ಸ್ ಟ್ಯಾಬ್ ಸ್ವೈಪ್ ಮಾಡಿ ಮತ್ತು ಮೇಲ್ಗಡೆಯಲ್ಲಿ ರಿವಾರ್ಡ್ಸ್ ಸೇರಿದೆಯಾ ಎಂಬುದನ್ನು ಚೆಕ್ ಮಾಡಿಕೊಳ್ಳಿ. ನನಗೆ ಈ ವಿಭಾಗದಲ್ಲಿ ಗೊತ್ತಾಗಿದ್ದು. ನನಗೆ ಅನ್ನಿಸುತ್ತದೆ, ಬಹುಶಃ ತಾಂತ್ರಿಕ ತಪ್ಪಿನಿಂದಾಗಿ ಈ ಹಣ ಜಮೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಗರ್ಲ್‌ಫ್ರೆಂಡ್‌ ಜತೆ ಸುತ್ತಲು ಅಮಿತ್‌ ಮಿಶ್ರಾ ಅವರಿಂದ 500 ರೂ. ಗೂಗಲ್‌ಪೇ ಮಾಡಿಸಿಕೊಂಡ ಅಭಿಮಾನಿ

ಇದೇ ರೀತಿಯ ಅನುಭವವನ್ನು ಅಮೆರಿಕದಲ್ಲಿ ಬಹಳಷ್ಟು ಬಳಕೆದಾರರು ವರದಿ ಮಾಡಿದ್ದಾರೆ. ಕೆಲವೊಬ್ಬರು 102 ಡಾಲರ್ ಜಮೆಯಾಗಿದೆ ಎಂದು ಹೇಳಿಕೊಂಡರೆ, ಮತ್ತೆ ಕೆಲವರು 240 ಡಾಲರ್ ಕ್ರೆಡಿಟ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ Noice ಎಂದು ಟ್ವಿಟರ್ ಓನರ್ ಎಲಾನ್ ಮಸ್ಕ್ ಕೂಡ ಪ್ರತಿಕ್ರಿಯಿಸಿದ್ದಾರೆ.

Exit mobile version