Site icon Vistara News

Google Pixel 7 | ಅಕ್ಟೋಬರ್ 6ಕ್ಕೆ ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್‌ ಫೋನ್, ವಾಚ್ ಲಾಂಚ್!

Googel Pixel 7

ನವ ದೆಹಲಿ: ಐಫೋನ್ 14 ಸಿರೀಸ್ ಫೋನ್‌ ಲಾಂಚ್ ಆದ ಬೆನ್ನಲ್ಲೇ ಗೂಗಲ್ ತನ್ನ ಹೊಸ ಫೋನ್ ಬಿಡುಗಡೆಯ ದಿನಾಂಕವನ್ನು ಖಚಿತಪಡಿಸಿದೆ. ಕಂಪನಿಯು ಗೂಗಲ್ ಪಿಕ್ಸೆಲ್ 7 (Google Pixel 7) ಮತ್ತು ಗೂಗಲ್ ಪಿಕ್ಸೆಲ್ 7 ಪ್ರೋ (Google Pixel Pro) ಸ್ಮಾರ್ಟ್‌ಫೋನ್‌ಗಳನ್ನು ಅಕ್ಟೋಬರ್ 6ರಂದು ಬಿಡುಗಡೆ ಮಾಡಲಿದೆ. ಈ ಫೋನ್‌ ಜತೆಗೆ ಪಿಕ್ಸೆಲ್ ವಾಚ್ ಕೂಡ ಬಿಡುಗಡೆಯಾಗಲಿದೆ.

ಗೂಗಲ್‌ನ ಈ ಎರಡು ಫೋನ್‌ಗಳು ಮೂರು ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿವೆ. ಸಾಮಾನ್ಯವಾಗಿ ಕಂಪನಿಯು ಪಿಕ್ಸೆಲ್ ಫೋನ್‌ಗಳನ್ನು ಅಬ್ಸಿಡಿಯನ್ ಮತ್ತು ಸ್ನೋ ಕಲರ್ ಆಯ್ಕೆಗಳಲ್ಲಿ ನೀಡುತ್ತದೆ. ಈ ಬಾರಿ ಪಿಕ್ಸೆಲ್ 7 ಪ್ರೊ ಗೋಲ್ಡ್ ಕ್ಯಾಮೆರಾ ಸ್ಟ್ರಿಪ್‌ನೊಂದಿಗೆ ಹೇಸಲ್‌ ಮೂರನೇ ಬಣ್ಣದ ಆಯ್ಕೆಯಲ್ಲಿ ದೊರೆಯಲಿದೆ. ಪಿಕ್ಸೆಲ್ 7 ಫೋನ್‌ನ ಮೂರನೇ ಬಣ್ಣದ ರೂಪಾಂತರವು ಕಂಚಿನ ಪಟ್ಟಿಯೊಂದಿಗೆ ಲೆಮೊನ್‌ಗ್ರಾಸ್ ಕಲರ್ ಕಾಣಬಹುದು.

ಕಂಪನಿಯು ಈ ಎರಡು ಫೋನ್‌ಗಳ ಇಮೇಜ್ ರಿಲೀಸ್ ಮಾಡಿದ್ದು, ಉಭಯ ಫೋನ್‌ಗಳ ಮಧ್ಯೆ ಅಂಥ ವ್ಯತ್ಯಾಸವೇನೂ ಇಲ್ಲ. ಲುಕ್‌ನಲ್ಲಿ ತುಸು ಡಿಫರೆನ್ಸ್ ಕಾಣಬಹುದು. ಪಿಕ್ಸೆಲ್ ಸಿರೀಸ್ ಫೋನುಗಳಲ್ಲಿ ಕಂಪನಿಯು ನೆಕ್ಸ್ಟ್ ಜನರೇಷನ್ ಟೆನ್ಸರ್ ಜಿ2 ಎಸ್ಒಸಿ ಅಳವಡಿಸಿದೆ. ಪಿಕ್ಸೆಲ್ ಫೋನ್ ಜತೆಗೇ ಕಂಪನಿಯು ಪಿಕ್ಸೆಲ್ ವಾಚ್ ಕೂಡ ಲಾಂಚ್ ಮಾಡಲಿದೆ. ಹೊಸ ನೆಸ್ಟ್ ಸ್ಮಾರ್ಟ್‌ಫೋನ್ ಡಿವೈಸ್ ಕೂಡ ಇದೇ ಇವೆಂಟ್‌ನಲ್ಲಿ ಲಾಂಚ್ ಆಗಲಿದೆ.

ಎರಡು ಹ್ಯಾಂಡ್‌ಸೆಟ್ ಒಂದೇ ತೆರನಾದ ವಿನ್ಯಾಸಗಳನ್ನು ಹೊಂದಿದೆ. ಆದರೆ, ಪಿಕ್ಸೆಲ್ 7 ಪ್ರೋಗೆ ಮಾತ್ರ ಸ್ವಲ್ಪ ಸೈನಿ ಪಾಲಿಸ್ಡ್ ಲುಕ್ ಇದೆ. ಪಿಕ್ಸೆಲ್ 7 ಮ್ಯಾಟ್ ಫಿನಿಷ್ ಪಡೆದುಕೊಂಡಿದೆ. ಪಿಕ್ಸೆಲ್ 7 ಸ್ಮಾರ್ಟ್‌ಫೋನ್‌ನಲ್ಲಿ ಸಿಂಗಲ್ ಕಟೌಟ್ ಇದ್ದರೆ, ಪಿಕ್ಸೆಲ್ ಪ್ರೋ ಮೆಟಲ್ ಸ್ಟ್ರಿಪ್‌ನಲ್ಲಿಎರಡು ಕಟೌಟ್‌ಗಳನ್ನು ಕಾಣಬಹುದಾಗಿದೆ.

ಮುಂದಿನ ತಲೆಮಾರಿನ ಪ್ರೊಸೆಸರ್ ಆಗಿರುವ Google Tensor G2 ಚಿಪ್‌ಸೆಟ್‌ಗಳನ್ನು ಈ ಎರಡೂ ಫೋನ್‌ಗಳಲ್ಲಿ ಅಳವಡಿಸಲಾಗಿದೆ. ಫೋಟೋಗಳು, ವಿಡಿಯೋಗಳು, ಸೆಕ್ಯುರಿಟಿ ಮತ್ತು ಸ್ಪೀಚ್ ರಿಕಗ್ನೇಷನ್‌ ಹೆಚ್ಚು ವೈಯಕ್ತಿಕರಿಸುವಲ್ಲಿ ಇದು ನೆರವು ಒದಗಿಸುತ್ತದೆ. ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಇರಲಿದೆ. ಅಂದ ಹಾಗೆ, ಇದೇ ಮೊದಲ ಬಾರಿಗೆ ಕಂಪನಿಯು ಸ್ಮಾರ್ಟ್‌ವಾಚ್ ಕೂಡ ಲಾಂಚ್ ಮಾಡಲಿದೆ.

ಇದನ್ನೂ ಓದಿ | iOS 16 | ಐಫೋನ್ 14 ಆಯ್ತು, ಇನ್ನು ಐಒಎಸ್ 16 ಬಿಡುಗಡೆ ಮಾಡಲಿದೆ ಆ್ಯಪಲ್

Exit mobile version