Site icon Vistara News

Gmail Account: ನಿಮ್ಮ ಜಿಮೇಲ್ ಖಾತೆ 2 ವರ್ಷದಿಂದ ನಿಷ್ಕ್ರಿಯವೇ? ಹಾಗಿದ್ದರೆ, ಡಿಲಿಟ್ ಆಗೋದು ಪಕ್ಕಾ!

Google will Delete gmail account those inactive more than two years

ನವದೆಹಲಿ: ನಿಷ್ಕ್ರಿಯ ಜಿ ಮೇಲ್ ಖಾತೆಗಳಿಗೆ (Gmail Account) ಸಂಬಂಧಿಸಿದಂತೆ ಗೂಗಲ್ (Google) ಖಡಕ್ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಎರಡು ವರ್ಷ ಅಥವಾ ಅದಕ್ಕಿಂತಲೂ ಹೆಚ್ಚು ವರ್ಷಗಳಿಂದ ನಿಷ್ಕ್ರಿಯವಾಗಿರುವ ಖಾತೆಗಳನ್ನು ತನ್ನ ವೇದಿಕೆಯಿಂದ ಡಿಲಿಟ್ ಮಾಡಲಿದೆ. ಈ ಕುರಿತು ಗೂಗಲ್ ತನ್ನ ಬ್ಲಾಗ್‌ ಪೋಸ್ಟ್‌ನಲ್ಲಿ ನಿರ್ಧಾರ ಪ್ರಕಟಿಸಿದ್ದು, ಭದ್ರತಾ ಕ್ರಮಗಳನ್ನು ಬಲಪಡಿಸಲು ಮತ್ತು ಅದರ ವ್ಯಾಪಕ ಬಳಕೆದಾರರಿಗೆ ಅಪಾಯಗಳನ್ನು ಕಡಿಮೆ ಮಾಡಲು ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿದೆ ಎಂದು ಹೇಳಿದೆ. ಮೂರು ವರ್ಷದ ಹಿಂದೆ ಹೇಳಿಕೆ ನೀಡಿದ್ದ ಗೂಗಲ್, ನಿಷ್ಕ್ರಿಯ ಖಾತೆಯಲ್ಲಿರುವ ವಿಷಯವನ್ನು ಅಳಿಸಿ ಹಾಕುವುದಾಗಿ ಹೇಳಿತ್ತು. ಆದರೆ, ಡಿಲಿಟ್ ಮಾಡುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಈಗ ನಿಷ್ಕ್ರಿಯವಾಗಿರು ಎಲ್ಲ ಖಾತೆಗಳನ್ನು ತೆಗೆದುಹಾಕುವುದಾಗಿ ಸ್ಪಷ್ಪಡಿಸಿದೆ.

ನಮ್ಮ ಆಂತರಿಕ ವಿಶ್ಲೇಷಣೆಯು ಕೈಬಿಡಲಾದ ಖಾತೆಗಳು 2-ಹಂತದ ಪರಿಶೀಲನೆಯನ್ನು ಹೊಂದಿಸಲು ಸಕ್ರಿಯ ಖಾತೆಗಳಿಗಿಂತ ಕನಿಷ್ಠ ಹತ್ತು ಪಟ್ಟು ಕಡಿಮೆ ಸಾಧ್ಯತೆಯನ್ನು ತೋರಿಸುತ್ತದೆ. ಅಂದರೆ, ಈ ಖಾತೆಗಳು ಸಾಮಾನ್ಯವಾಗಿ ದುರ್ಬಲವಾಗಿರುತ್ತವೆ. ಒಮ್ಮೆ ಖಾತೆಯನ್ನು ರಾಜಿ ಮಾಡಿಕೊಂಡರೆ, ಅಪಾಯಕಾರಿ ಕಾರ್ಯಗಳಿಗೆ ಬಳಕೆಯಾಗಬಹುದು, ಸ್ಪ್ಯಾಮ್‌ನಂತಹ ಅನಗತ್ಯ ಅಥವಾ ದುರುದ್ದೇಶಪೂರಿತ ವಿಷಯಕ್ಕಾಗಿ ಬಳಕೆಯಾಗಬುಹದು. ಹಾಗಾಗಿ, ಅಂಥ ಖಾತೆಗಳನ್ನು ಡಿಲಿಟ್ ಮಾಡಲಾಗುತ್ತಿದೆ ಎಂದು ಗೂಗಲ್ ತನ್ನ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ.

2 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಖಾತೆಗಳ ಜತೆಗೆ, ಗೂಗಲ್ ಕಂಪನಿಯು ಗೂಗಲ್ ವರ್ಕ್‌ಸ್ಪೇಸ್(Google WorkSpace), ಡಾಕ್ಸ್, ಡ್ರೈವ್, ಮೀಟ್, ಕ್ಯಾಲೆಂಡರ್ ಸೇರಿದಂತೆ ಯುಟ್ಯೂಬ್(YouTube), ಗೂಗಲ್ ಫೋಟೋಸ್(Google Photos) ಕೂಡ ಡಿಲಿಟ್ ಆಗಲಿವೆ. ನಿಷ್ಕ್ರಿಯ ಖಾತೆಗಳ ಡಿಲಿಟ್ ನೀತಿಯು ಕೇವಲ ವೈಯಕ್ತಿಕ ಖಾತೆಗಳಿಗೆ ಮಾತ್ರವೇ ಅನ್ವಯವಾಗುತ್ತವೆ. ಈ ನೀತಿಯು ಶಾಲೆ, ವ್ಯಾಪಾರೋದ್ಯಮದ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ.

ಇದನ್ನೂ ಓದಿ: Spam Mail | ಜಿಮೇಲ್‌ನಲ್ಲಿ ಸ್ಪ್ಯಾಮ್ ಮೇಲ್ ಕಿರಿಕಿರಿಯೇ? ಅದರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ…

ನಿಷ್ಕ್ರಿಯ ಕಾರಣಕ್ಕೆ ಡಿಲಿಟ್ ಆದ ಖಾತೆಗಳನ್ನು ಮರಳಿ ಪಡೆಯುವ ಅವಕಾಶವನ್ನು ಗೂಗಲ್ ಒದಗಿಸಿದೆ. ಆದರೆ, ಇದಕ್ಕಾಗಿ ಖಾತೆದಾರರು ದೀರ್ಘ ಹಂತಗಳನ್ನು ಪೂರೈಸಬೇಕಾಗುತ್ತದೆ. ಖಾತೆ ಡಿಲಿಟ್ ಮಾಡುವ ಮುಂಚೆ ನಾವು ಸಾಕಷ್ಟು ಸಾರಿ ನೋಟಿಫಿಕೇಷನ್‌ಗಳನ್ನು ಕಳುಹಿಸುತ್ತೇವೆ. ಅಂದರೆ, ಖಾತೆ ಡಿಲಿಟ್ ಆಗುವ ಮೂರು ತಿಂಗಳ ಮುಂಚೆಯೇ ನೋಟಿಫಿಕೇಷನ್‌ಗಳನ್ನು ಕಳುಹಿಸಲಾಗುತ್ತದೆ. ಸಂಬಂಧಿಸದ ಇಮೇಲ್ ಮತ್ತು ರಿಕವರಿ ಇಮೇಲ್‌ಗಳಿಗೆ ಈ ಮಾಹಿತಿಯನ್ನು ರವಾನಿಸಲಾಗುತ್ತದೆ ಎಂದು ಬ್ಲಾಗ್‌ ಪೋಸ್ಟ್‌ನಲ್ಲಿ ಗೂಗಲ್ ತಿಳಿಸಿದೆ.

ತಂತ್ರಜ್ಞಾನದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version