Site icon Vistara News

Samsung Galaxy: ಸ್ಯಾಮ್ಸಂಗ್‌ ಬಳಕೆದಾರರೇ ಎಚ್ಚರ! ಸೈಬರ್‌ ದಾಳಿ ಸಾಧ್ಯತೆ

Samsung Galaxy F34 5G

ಹೊಸದಿಲ್ಲಿ: ಸ್ಯಾಮ್ಸಂಗ್‌ ಸ್ಮಾರ್ಟ್‌ಫೋನ್‌ (Samsung smartphone) ಬಳಕೆದಾರರಿಗೆ ಸರ್ಕಾರ ಭದ್ರತಾ ಎಚ್ಚರಿಕೆಯನ್ನು (Security Alert) ನೀಡಿದೆ. ನಿರ್ದಿಷ್ಟವಾಗಿ ಸ್ಯಾಮ್ಸಂಗ್‌ ಗ್ಯಾಲಾಕ್ಸಿ (Samsung Galaxy) ಫೋನ್‌ಗಳ ಬಳಕೆದಾರರನ್ನು ಗುರಿಯಾಗಿಸಿಕೊಂಡು ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಭದ್ರತಾ ಸಲಹೆ ನೀಡಿದ್ದು, ಸೈಬರ್‌ ದಾಳಿಗಳ (Cyber Attack) ಸಾಧ್ಯತೆಯ ಬಗ್ಗೆ ಎಚ್ಚರಿಸಿದೆ.

ಸ್ಯಾಮ್ಸಂಗ್‌ ಗ್ಯಾಲಾಕ್ಸಿ ಫೋನ್‌ಗಳ ಹಳೆಯ ಮತ್ತು ಹೊಸ ಮಾದರಿಗಳೆರಡರಲ್ಲೂ ಬಹು ಭದ್ರತಾ ದೋಷಗಳಿವೆ. Samsung ಫೋನ್‌ ಬಳಕೆದಾರರು ತಮ್ಮ ಫೋನ್‌ನ ಆಪರೇಟಿಂಗ್ ಸಿಸ್ಟಮ್ (Operating system) ಅಥವಾ ಫರ್ಮ್‌ವೇರ್ (Firmware) ಅನ್ನು ತ್ವರಿತವಾಗಿ ನವೀಕರಿಸಬೇಕು ಎಂದು ಸರ್ಟ್-ಇನ್‌ ಎಚ್ಚರಿಸಿದೆ. ಡಿಸೆಂಬರ್ 13ರಂದು ಈ ಭದ್ರತಾ ಎಚ್ಚರಿಕೆ ನೀಡಲಾಗಿದ್ದು, ಇದು ಹೈ ಸೆಕ್ಯುರಿಟಿ ಅಲರ್ಟ್‌ ಆಗಿದೆ.

“ಸ್ಯಾಮ್ಸಂಗ್‌ ಉತ್ಪನ್ನಗಳಲ್ಲಿ ಹಲವಾರು ದುರ್ಬಲತೆಗಳು ವರದಿಯಾಗಿವೆ. ಇದು ಸೈಬರ್‌ ಆಕ್ರಮಣಕಾರರಿಗೆ ಬೈಪಾಸ್ ಮಾಡಲು, ಸೂಕ್ಷ್ಮ ಡೇಟಾಗಳನ್ನು ಕದಿಯಲು ಮತ್ತು ಆಪರೇಟಿಂಗ್‌ ವ್ಯವಸ್ಥೆಯಲ್ಲಿ ಮಾಲ್‌ವೇರ್‌ ಕೋಡ್ ಅನ್ನು ಕಾರ್ಯಗತಗೊಳಿಸಲು ಅನುವು ಮಾಡಿಕೊಡುತ್ತದೆ” ಎಂದು CERT ತನ್ನ ಸೂಚನೆಯಲ್ಲಿ ತಿಳಿಸಿದೆ.

ವರದಿಯ ಪ್ರಕಾರ, ಸ್ಯಾಮ್‌ಸಂಗ್ ಮೊಬೈಲ್ ಆಂಡ್ರಾಯ್ಡ್ 11, 12, 13 ಮತ್ತು 14 ಆವೃತ್ತಿಗಳು ಅಪಾಯದಲ್ಲಿವೆ. ಸೈಬರ್ ದಾಳಿಕೋರರು ಇದನ್ನು ಬ್ರೇಕ್‌ ಮಾಡಿದರೆ ಈ ಕೆಳಗಿನ ಅಪಾಯಗಳು ಉಂಟಾಗಬಹುದು:

ಹಾಗಾದರೆ ಏನು ಮಾಡಬೇಕು?

ಸ್ಯಾಮ್ಸಂಗ್ ಸ್ಮಾರ್ಟ್‌ಪೋನ್‌ ಬಳಕೆದಾರರಿಗೆ ಸರ್ಟ್‌ ಕೆಲವು ಸೂಚನೆಗಳನ್ನು ನೀಡಿದೆ. ಮುಖ್ಯವಾಗಿ Samsung Galaxy ಫೋನ್‌ಗಳ ಬಳಕೆದಾರರು ತಮ್ಮ ಸಾಧನದ ಆಪರೇಟಿಂಗ್ ಸಿಸ್ಟಮ್ (OS) ಮತ್ತು ಫರ್ಮ್‌ವೇರ್ ಅನ್ನು ತ್ವರಿತವಾಗಿ ನವೀಕರಿಸಬೇಕು. ಸಿಸ್ಟಮ್ ಅಪ್‌ಡೇಟ್‌ ನಿರ್ಲಕ್ಷಿಸುವುದರಿಂದ ಹ್ಯಾಕರ್‌ಗಳಿಗೆ ಸಾಧನದ ಸೆಕ್ಯುರಿಟಿ ಮುರಿಯಲು (phone hacking) ಮತ್ತು ಸೂಕ್ಷ್ಮ ಡೇಟಾಗೆ ಅನಧಿಕೃತ ಪ್ರವೇಶವನ್ನು ಪಡೆಯಲು ಅವಕಾಶ ಕೊಟ್ಟಂತಾಗುತ್ತದೆ.

ಇದನ್ನೂ ಓದಿ: WhatsApp update: ಈ ಹಳೇ ಫೋನ್‌ಗಳಲ್ಲಿ ಇನ್ನು ವಾಟ್ಸ್ಯಾಪ್‌ ಸಿಗೋಲ್ಲ! ನಿಮ್ಮ ಫೋನ್‌ ಕೂಡ ಇದೆಯಾ ನೋಡಿಕೊಳ್ಳಿ

Exit mobile version