Site icon Vistara News

Google Chrome: ಗೂಗಲ್‌ ಕ್ರೋಮ್‌ ಬಳಕೆದಾರರಿಗೆ ಸರ್ಕಾರ ನೀಡಿದೆ ಎಚ್ಚರ, ಈಗಲೇ ಅಪ್‌ಡೇಟ್‌ ಮಾಡಿ

google

ಹೊಸದಿಲ್ಲಿ: ಭಾರತದಲ್ಲಿ ಗೂಗಲ್ ಕ್ರೋಮ್ (Google Chrome) ಬಳಕೆದಾರರಿಗೆ ತೀವ್ರ ಸುರಕ್ಷತಾ ಎಚ್ಚರಿಕೆಯನ್ನು ಭಾರತ ಸರ್ಕಾರ ನೀಡಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾದ ಭಾರತೀಯ ಸರ್ಕಾರದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಈ ಎಚ್ಚರಿಕೆ ನೀಡಿದ್ದು, ಸಂಭಾವ್ಯ ಭದ್ರತಾ ಅಪಾಯಗಳ ಬಗ್ಗೆ ಬಳಕೆದಾರರನ್ನು ಎಚ್ಚರಿಸಿದೆ.

Google Chromeನ ಕೆಲವು ನಿರ್ದಿಷ್ಟ ಆವೃತ್ತಿಗಳಲ್ಲಿ ದೋಷಗಳನ್ನು CERT-In ಗುರುತಿಸಿದೆ. CERT-In ಎಚ್ಚರಿಕೆಯ ಪ್ರಕಾರ, Chrome ಬಳಕೆದಾರರು ತಮ್ಮ ಸೂಕ್ಷ್ಮ ಮಾಹಿತಿಗೆ ಅಪಾಯವನ್ನು ಎದುರಿಸಬಹುದು. ಸೈಬರ್‌ ಚೋರರಿಂದ ಫಿಶಿಂಗ್ ದಾಳಿಗಳು, ಡೇಟಾ ಉಲ್ಲಂಘನೆಗಳು ಮತ್ತು ಮಾಲ್‌ವೇರ್ ಸೋಂಕುಗಳು ಇದರಲ್ಲಿ ಸೇರಿವೆ. ಬಳಕೆದಾರರು ಈ ಕುರಿತು ಜಾಗರೂಕರಾಗಿರಲು ಮತ್ತು ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ.

Google Chrome ಅನೇಕ ಭದ್ರತಾ ದೋಷಗಳನ್ನು ಹೊಂದಿದ್ದು ಅದು ಸೈಬರ್‌ ದಾಳಿಕೋರರಿಗೆ ನಿಮ್ಮ ಕಂಪ್ಯೂಟರ್‌ನ ನಿಯಂತ್ರಣವನ್ನು ಪಡೆಯಲು ಅವಕಾಶ ನೀಡುತ್ತದೆ. ಪ್ರಾಂಪ್ಟ್‌ಗಳು, ವೆಬ್ ಪಾವತಿಗಳ API, SwiftShader, Vulkan, Video, ಮತ್ತು WebRTC ಸೇರಿದಂತೆ Chromeನ ಹಲವಾರು ಕಡೆ ಈ ದೋಷಗಳು ಇವೆ.

ದಾಳಿಕೋರರು ದುರುದ್ದೇಶಪೂರಿತ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ನಿಮ್ಮನ್ನು ಮೋಸಗೊಳಿಸಬಹುದು. ನಂತರ ಆಕ್ರಮಣಕಾರರು ನಿಮ್ಮ ಕಂಪ್ಯೂಟರ್‌ನ ನಿಯಂತ್ರಣವನ್ನು ತೆಗೆದುಕೊಂಡು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು. ಬಳಕೆದಾರರು ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

Google Chromeನ ಈ ಆವೃತ್ತಿಗಳಲ್ಲಿ ದೋಷವಿದೆ: Linux ಮತ್ತು Macಗೆ ಕ್ರೋಮ್‌ನ 115.0.5790.170ಗಿಂತ ಹಿಂದಿನ ಆವೃತ್ತಿಗಳು; Windowsಗೆ 115.0.5790.170/.171ಗಿಂತ ಹಿಂದಿನ ಆವೃತ್ತಿಗಳು.

ಸುರಕ್ಷತೆಗೆ ಏನು ಮಾಡಬೇಕು?

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ವೈಟ್‌ಹ್ಯಾಟ್ ಹ್ಯಾಕರ್‌ಗಳ ಕಾರ್ಯವೈಖರಿ

Exit mobile version