Site icon Vistara News

ಡೀಪ್‌ಫೇ‌ಕ್ ಎಫೆಕ್ಟ್, ಗೂಗಲ್, ಮೆಟಾ ಜತೆ ಕೇಂದ್ರ ಉನ್ನತ ಸಭೆ!

Ashwini vaishnaw

ನವದೆಹಲಿ: ಪತ್ರಕರ್ತರ ಜತೆಗಿನ ಬಿಜೆಪಿಯ (BJP Party) ದೀಪಾವಳಿ ಮಿಲನ(Deepavali Milan) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಡೀಪ್‌ಫೇಕ್‌ (Deepfake effect) ಬಗ್ಗೆ ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ, ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Union Minister Ashwini Vaishnaw) ಉನ್ನತ ಮಟ್ಟದ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ಗೂಗಲ್ (Google Company) ಮತ್ತು ಮೆಟಾ (Meta Company) ಕಂಪನಿಗಳಿಗೆ ಆಹ್ವಾನ ನೀಡಲಾಗಿದೆ.

ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ರಾಜೀವ್ ಚಂದ್ರಶೇಖರ್ ಅವರಲ್ಲದೆ, ಸಚಿವಾಲಯದ ಉನ್ನತ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಬೆಳವಣಿಗೆಯ ಬಗ್ಗೆ ತಿಳಿದಿರುವ ಮೂಲಗಳು ಹೇಳಿವೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ಮೆಟಾ, ಗೂಗಲ್ ಸೇರಿದಂತೆ ವಿವಿಧ ತಂತ್ರಜ್ಞಾನ ಕಂಪನಿಗಳಿಗೆ ಆಹ್ವಾನಿಸಲಾಗಿದೆ.

ಕಳೆದ ಶುಕ್ರವಾರ ಬಿಜೆಪಿ ಪ್ರಧಾನ ಕಚೇರಿಯಲ್ಲಿ ದೀಪಾವಳಿ ಆಚರಿಸಲು ನಡೆದ ಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಕಲಿ ವಿಡಿಯೋಗಳ ಹರಡುವಿಕೆಯ ವಿರುದ್ಧ ಜಾಗರೂಕರಾಗಿರಿ ಎಂದು ಪತ್ರಕರ್ತರಿಗೆ ಎಚ್ಚರಿಕೆ ನೀಡಿದ್ದರು. ಗಾರ್ಬಾ ಕಾರ್ಯಕ್ರಮದಲ್ಲಿ ಅವರು ನೃತ್ಯ ಮಾಡುತ್ತಿರುವ ವೀಡಿಯೊವನ್ನು ತಪ್ಪಾಗಿ ಚಿತ್ರಿಸಿದ ಇತ್ತೀಚಿನ ಘಟನೆಯನ್ನು ಅವರು ಈ ವೇಳೆ ಉಲ್ಲೇಖಿಸಿದ್ದಾರೆ.

ನಟಿಯೊಬ್ಬರನ್ನು ಒಳಗೊಂಡ ಇತ್ತೀಚಿನ ಡೀಪ್‌ಫೇಕ್ ವೀಡಿಯೊ ಮಹತ್ವದ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ. ಈ ಘಟನೆಗಳು ಸುರಕ್ಷಿತ ಇಂಟರ್ನೆಟ್ ಅನ್ನು ಖಾತ್ರಿಪಡಿಸುವ ಸರ್ಕಾರದ ಹಕ್ಕುಗಳನ್ನು ಪ್ರಶ್ನಿಸುವಂತೆ ಮಾಡಿವೆ. ತಪ್ಪು ಮಾಹಿತಿ ಮತ್ತು ಡೀಪ್‌ಫೇಕ್‌ಗಳಿಂದ ಎದುರಾಗಿರುವ ಸವಾಲುಗಳ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MEITY) ಕಳೆದ ಆರು ತಿಂಗಳೊಳಗೆ ಎರಡನೇ ಸಲಹೆಯನ್ನು ನೀಡಿದೆ. ಡೀಪ್‌ಫೇಕ್‌ಗಳ ಪ್ರಸರಣದ ವಿರುದ್ಧ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಅದು ಒತ್ತಾಯಿಸಿದೆ.

2021ರ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ, ಯಾವುದೇ ಬಳಕೆದಾರರಿಂದ ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಯಲು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಕಾನೂನುಬದ್ಧವಾದ ಅಧಿಕಾರವನ್ನು ಹೊಂದಿವೆ. ಬಳಕೆದಾರರು ಅಥವಾ ಸರ್ಕಾರಿ ಪ್ರಾಧಿಕಾರದಿಂದ ವರದಿಯನ್ನು ಸ್ವೀಕರಿಸಿದ ನಂತರ ಅವರು ಅಂತಹ ವಿಷಯವನ್ನು 36 ಗಂಟೆಗಳ ಒಳಗೆ ತೆಗೆದುಹಾಕಬೇಕಾಗುತ್ತದೆ. ಒಂದೊಮ್ಮೆ ಈ ನಿಯಮವನ್ನು ಅನುಸರಿಸದಿದ್ದರೆ, ಸಂತ್ರಸ್ತ ವ್ಯಕ್ತಿಗಳು ಆನ್ಲೈನ್ ವೇದಿಕೆಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಭಾರತೀಯ ದಂಡ ಸಂಹಿತೆಗಳಡಿಯಲ್ಲಿ ಇದಕ್ಕೆ ಅವಕಾಶವಿದೆ. ಡೀಪ್‌ಫೇಕ್‌ಗಳಿಂದ ತೊಂದರೆಗೊಳದಾಗ ಸಂತ್ರಸ್ತ ವ್ಯಕ್ತಿಗಳು ಹತ್ತಿರದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಬುಹದು. 2021 ರ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳು ಈ ಎಫ್ಐಆರ್ ದಾಖಲಿಸಲು ಅವಕಾಶ ಕಲ್ಪಿಸುತ್ತದೆ.

ಈ ಸುದ್ದಿಯನ್ನೂ ಓದಿ: Actress Kajol: ರಶ್ಮಿಕಾ, ಕತ್ರಿನಾ ಆಯ್ತು, ಈಗ ಕಾಜೋಲ್ ಡೀಪ್‌ಫೇಕ್ ವಿಡಿಯೊ ವೈರಲ್‌!

Exit mobile version