ಬೆಂಗಳೂರು: ಈಗ ಕೃತಕ ಬುದ್ಧಿಮತ್ತೆಯ ಕಾಲ. ಎಲ್ಲಿ ನೋಡಿದರೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮಾತು. ಮನುಷ್ಯ ಮಾಡುವುದಕ್ಕಿಂತ ಹೆಚ್ಚು ಸೂಕ್ಷ್ಮ ಕೆಲಸಗಳನ್ನು ಇದು ಮಾಡುತ್ತಿರುವುದೇ ಜನಪ್ರಿಯತೆಗೆ ಕಾರಣ. ಅದರಲ್ಲೂ ವೈದ್ಯಕೀಯ ಲೋಕದಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ಗೆ ಸಿಕ್ಕಾಪಟ್ಟೆ ಸ್ಕೋಪ್ ಸಿಕ್ಕಿದೆ. ಅಂತೆಯೇ ಮಹಿಳೆಯೊಬ್ಬಳ 18 ವರ್ಷಗಳ ಪಾರ್ಶವಾಯು (ಸ್ಟ್ರೋಕ್) ಸಮಸ್ಯೆಯನ್ನು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಗುಣಪಡಿಸಿದೆ.
ಪಾರ್ಶ್ವವಾಯುವಿಗೆ ಒಳಗಾಗಿದ್ದ ಮಹಿಳೆಗೆ ಮೆದುಳಿನ ಸಂಕೇತಗಳನ್ನು ಮಾತು ಮತ್ತು ಮುಖದ ಅಭಿವ್ಯಕ್ತಿಗಳಾಗಿ ಪರಿವರ್ತಿಸುವ ಮೂಲಕ ಆರ್ಟಿಫಿಶಿಯಲ್ ಚಮತ್ಕಾರ ತೋರಿದೆ. ಈ ಸಾಧನೆಯು ಪಾರ್ಶ್ವವಾಯು ಮತ್ತು ಎಎಲ್ಎಸ್ನಂತಹ ಸಮಸ್ಯೆಗಳಿದ ಸಂವಹನ ಸಾಮರ್ಥ್ಯವನ್ನು ಕಳೆದುಕೊಂಡ ವ್ಯಕ್ತಿಗಳಿಗೆ ಭರವಸೆಯನ್ನು ನೀಡಿದೆ.
ಇದನ್ನೂ ಓದಿ: QR Code : ಅಲರ್ಟ್ ಪ್ಲೀಸ್; ಕ್ಯೂಆರ್ ಕೋಡ್ ಕಳಿಸಿ ಹೇಗೆಲ್ಲ ಮೋಸ ಮಾಡ್ತಾರೆ ನೋಡಿ!
ಈ ಹಿಂದೆ ಸ್ಟ್ರೋಕ್ ಆಗಿರುವ ರೋಗಿಗಳು ನಿಧಾನವಾದ ಮಾತಿನ ಸಂಶ್ಲೇಷಕಗಳನ್ನು ಅವಲಂಬಿಸಬೇಕಾಗಿತ್ತು. ಪದಗಳನ್ನು ಕಟ್ಟಲು ಸಾಧ್ಯವಾಗುತ್ತಿರಲಿಲ್ಲ ಹಾಗೂ ಮುಖದ ಚಲನೆಯ ಆಧಾರದಲ್ಲಿ ಮಾಡಬೇಕಾಗಿತ್ತು. ಇದರಿಂದಾಗಿ ನೈಸರ್ಗಿಕ ಸಂಭಾಷಣೆಗಳನ್ನು ನಡೆಸುವುದು ಕಷ್ಟಕರವಾಗಿತ್ತು. ಯುಸಿ ಸ್ಯಾನ್ ಫ್ರಾನ್ಸಿಸ್ಕೋ (ಯುಸಿಎಸ್ಎಫ್) ಯೂಟ್ಯೂಬ್ನ್ಲಿ ಪ್ರಕಟಿಸಿದ ವೀಡಿಯೊದ ಪ್ರಕಾರ, ಹೊಸ ತಂತ್ರಜ್ಞಾನವು ಮೆದುಳಿನ ಮೇಲ್ಮೈಯಲ್ಲಿ ಸಣ್ಣ ಎಲೆಕ್ಟ್ರಾಡ್ಗಳನ್ನು ಬಳಸಿಕೊಂಡು ಮಾತು ಮತ್ತು ಮುಖದ ಅಭಿವ್ಯಕ್ತಿಗಳನ್ನು ನಿಯಂತ್ರಿಸುವ ಮೆದುಳಿನ ಪ್ರದೇಶಗಳಲ್ಲಿ ವಿದ್ಯುತ್ ಚಟುವಟಿಕೆಯನ್ನು ಪತ್ತೆ ಹಚ್ಚಿದೆ. ಅದನ್ನು ಮಾತು ಮತ್ತು ಸಂಬಂಧಿತ ವ್ಯಕ್ತಿಯ ಮುಖದ ಭಾವನೆಗಳಾಗಿ ಭಾಷಾಂತರಿಸಲಾಗಿದೆ. ಇದು ನಗು, ಕೋಪ ಅಥವಾ ಆಶ್ಚರ್ಯದಂತಹ ಅಭಿವ್ಯಕ್ತಿಗಳನ್ನು ಕೂಡ ಪ್ರದರ್ಶಿಸಿತ್ತು.
18 ವರ್ಷದ ಹಳೇ ರೋಗ ವಾಸಿ
47 ವರ್ಷದ ಆನ್ ಎಂಬ ಮಹಿಳೆ ಮಿದುಳಿನ ಪಾರ್ಶ್ವವಾಯುವಿಗೆ ತುತ್ತಾಗಿ 18 ವರ್ಷಗಳ ಕಾಲ ನರಳಿದ್ದರು. ಅವರು ಚಲನೆ-ಟ್ರ್ಯಾಕಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ನಿಮಿಷಕ್ಕೆ 14 ಪದಗಳವರೆಗೆ ನಿಧಾನವಾಗಿ ಸಂವಹನ ನಡೆಸುತ್ತಿದ್ದರು. ಆನ್ ಈಗ ಇತ್ತೀಚಿನ ಹೊಸ ಆರ್ಟಿಫಿಶುಯಲ್ ತಂತ್ರಜ್ಞಾನದ ನೆರವಿನಿಂದ ಸಂವಹನ ಮಾಡಲು ಆರಂಭಿಸಿದ್ದಾರೆ.
ಸಂಶೋಧನಾ ತಂಡವು ಆನ್ ಅವರ ಮೆದುಳಿನ ಮೇಲ್ಮೈಯಲ್ಲಿ, ನಿರ್ದಿಷ್ಟವಾಗಿ ಮಾತು-ಸಂಬಂಧಿತ ಪ್ರದೇಶಗಳಲ್ಲಿ 253 ತೆಳುವಾದ ಎಲೆಕ್ಟ್ರಾಡ್ಗಳನ್ನು ಅಳವಡಿಸಿದೆ. ಅದು ನಾಲಿಗೆ, ದವಡೆ, ಧ್ವನಿನಾಳ ಮತ್ತು ಮುಖದ ಸ್ನಾಯುಗಳನ್ನು ನಿಯಂತ್ರಿಸುವ ಮೆದುಳಿನ ಸಂಕೇತಗಳನ್ನು ಸ್ವೀಕರಿಸಿಕೊಂಡಿತು. ಅದನ್ನುಧ್ವನಿಯಾಗಿ ಪರಿವರ್ತಿಸಲಾಗಿದೆ.
ಎಐ ಅಳವಡಿಕೆಯ ನಂತರ, ಆನ್ ವಿವಿಧ ಮಾತಿನ ಶಬ್ದಗಳಿಗೆ ತನ್ನ ಮೆದುಳಿನ ಸಂಕೇತಗಳನ್ನು ಹೇಳುತ್ತಿದ್ದಾರೆ. ಕಂಪ್ಯೂಟರ್ ಯಶಸ್ವಿಯಾಗಿ 39 ವಿಭಿನ್ನ ಶಬ್ದಗಳನ್ನು ಕಲಿತು ಚಾಟ್ ಜಿಪಿಟಿ ಭಾಷಾ ಮಾದರಿಯಂತೆ ಈ ಸಂಕೇತಗಳನ್ನು ಸುಸಂಬದ್ಧ ವಾಕ್ಯಗಳಾಗಿ ಪರಿವರ್ತಿಸಿತು. ಇದು ಆನ್ ಅವರ ಪಾರ್ಶ್ವವಾಯು ಆಗುವ ಮೊದಲಿನ ಧ್ವನಿಯನ್ನೇ ಹೋಲುತ್ತದೆ.
ನಿಮಿಷಕ್ಕೆ 78 ಪದಗಳನ್ನು ಎಐ ಮೆದುಳಿನಿಂದ ಡಿಕೋಡ್ ಮಾಡಿದೆ. ನೈಸರ್ಗಿಕ ಸಂಭಾಷಣೆಯಲ್ಲಿ ಸಾಮಾನ್ಯವಾಗಿ 110-150 ಪದಗಳಿಗೆ ಹೋಲಿಸಿದರೆ ಇದು ಗಮನಾರ್ಹ ಪ್ರಗತಿಯಾಗಿದೆ. ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ (ಯುಸಿಎಸ್ಎಫ್) ಎಐ ತಂಡ ನೇತೃತ್ವ ವಹಿಸಿರುವ ಪ್ರೊಫೆಸರ್ ಎಡ್ವರ್ಡ್ ಚಾಂಗ್ ಮಾತನಾಡಿ, ಸಂವಹನದ ಸಂಪೂರ್ಣ, ಸಾಕಾರಗೊಂಡ ಮಾರ್ಗವನ್ನು ಪುನಃಸ್ಥಾಪಿಸುವುದು ನಮ್ಮ ಗುರಿಯಾಗಿದೆ. ಇದು ನಿಜವಾಗಿಯೂ ಇತರರೊಂದಿಗೆ ಮಾತನಾಡಲು ನಮಗೆ ಅತ್ಯಂತ ನೈಸರ್ಗಿಕ ಮಾರ್ಗಗಳಾಗಿವೆ ಎಂದು ಹೇಳಿದ್ದಾರೆ.