ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆಧಾರ್ (Aadhaar) ಆಧಾರಿತ ವಂಚನೆಯ ಪ್ರಕರಣಗಳು (Cyber Fraud Cases) ಹೆಚ್ಚಾಗುತ್ತಿವೆ. ಆಧಾರ್ ಬಳಸಿಕೊಂಡು ಬಳಕೆದಾರರಿಗೆ ಆರ್ಥಿಕವಾಗಿ ನಷ್ಟವುಂಟು ಮಾಡಲಾಗುತ್ತಿದೆ. ಇಲ್ಲವೇ ಅಪರಾಧ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಸೈಬರ್ ವಂಚಕರು ಒಟಿಪಿಗಳು, ಸಿವಿವಿ ಸಂಖ್ಯೆಗಳು ಮತ್ತು ಬ್ಯಾಂಕ್ ವಿವರಗಳನ್ನು ಒಳಗೊಂಡಂತೆ ಸಾಂಪ್ರದಾಯಿಕ ಭದ್ರತಾ ಕ್ರಮಗಳನ್ನು ತಪ್ಪಿಸುವ ಸುಧಾರಿತ ವಿಧಾನವನ್ನು ಕಂಡುಕೊಂಡಿದ್ದಾರೆ. ವಿಶೇಷವಾಗಿ ಆಧಾರ್ ನಂಬರ್ ಮೂಲಕ ವಂಚನೆಯನ್ನು ಸಲೀಸಾಗಿ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹಾಗಾಗಿ, ಮಾಸ್ಕ್ಡ್ ಆಧಾರ್(Masked Aadhaar) ಬಳಸಲು ಶಿಫಾರಸು ಮಾಡಲಾಗುತ್ತಿದೆ.
ಇತ್ತೀಚೆಗೆ ಸೈಬರ್ ಕ್ರಿಮಿನಲ್‌ಗಳು ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (AePS)ನ ಲಾಭವನ್ನು ಪಡೆದುಕೊಳ್ಳುತ್ತಿರುವುದು ಕಂಡುಬಂದಿದೆ. ಸಿಲಿಕಾನ್ ಫಿಂಗರ್‌ಪ್ರಿಂಟ್‌ಗಳು ಮತ್ತು ಅನಧಿಕೃತ ಬಯೋಮೆಟ್ರಿಕ್ ಸಾಧನಗಳನ್ನು ಬಳಸಿಕೊಂಡು ವ್ಯಕ್ತಿಗಳ ಆಧಾರ್-ಲಿಂಕ್ಡ್ ಬಯೋಮೆಟ್ರಿಕ್‌ಗಳನ್ನು ನಕಲು ಮಾಡುವ ಹಗರಣಗಳಲ್ಲಿ ತೊಡಗಿದ್ದಾರೆ. ನಂತರ ಅವರು ಸಂತ್ರಸ್ತರ ಬ್ಯಾಂಕ್ ಖಾತೆಗಳಿಂದ ಹಣಕ್ಕೆ ಕನ್ನ ಕೊರೆಯುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಬಯೋಮೆಟ್ರಿಕ್ಸ್ ಲಾಕ್ ಮಾಡುವುದು ಮತ್ತು ಸಾಧ್ಯವಾದಾಗಲೆಲ್ಲಾ ಮಾಸ್ಕ್ಡ್ ಆಧಾರ್ (ಮಾಸ್ಕ್ಡ್ ಆಧಾರ್)ಗಳಂಥ ಭದ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಗುರುತನ್ನು ಭದ್ರಪಡಿಸಿಕೊಳ್ಳಲು ಹಲವಾರು ಹಣಕಾಸು ಸಂಸ್ಥೆಗಳು ಆಧಾರ್ ಹೊಂದಿರುವವರಿಗೆ ಸಲಹೆ ನೀಡಿವೆ.
ಏನಿದು ಮಾಸ್ಕ್ಡ್ ಆಧಾರ್?
ಮಾಸ್ಕ್ಡ್ ಆಧಾರ್ ಗೌಪ್ಯತೆಯನ್ನು ಹೆಚ್ಚಿಸಲು ಮತ್ತು ಆಧಾರ್ ಮಾಹಿತಿಯು ಬಹಿರಂಗವಾಗದಂತೆ ತಡೆಯುವುದಕ್ಕಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಪರಿಚಯಿಸಿದ ವೈಶಿಷ್ಟ್ಯವಾಗಿದೆ. ಮಾಸ್ಕ್ಡ್ ಆಧಾರ್‌ನಲ್ಲಿ, ಆಧಾರ್ ಸಂಖ್ಯೆಯ ಕೆಲವು ಅಂಕೆಗಳನ್ನು ಮರೆಮಾಚಲಾಗುತ್ತದೆ ಅಥವಾ ಮರೆಮಾಡಲಾಗಿರುತ್ತದೆ. ಆದರೆ ಹೆಸರು, ಫೋಟೋ ಮತ್ತು ಕ್ಯೂಆರ್ ಪ್ರಮುಖ ವಿವರಗಳು ಕಾಣಿಸುತ್ತವೆ.
ಮಾಸ್ಕ್ಡ್ ಆಧಾರ್ ಪಡೆಯುವುದು ಹೇಗೆ?
- ಮೊದಲಿಗೆ https://uidai.gov.in ಜಾಲತಾಣಕ್ಕೆ ಭೇಟಿ ನೀಡಿ
- My Aadhaar ಸೆಕ್ಷನ್ನಲ್ಲಿ Download Aadhaar ಮೇಲೆ ಕ್ಲಿಕ್ ಮಾಡಿ.
- 12 ಡಿಜಿಟ್ ಆಧಾರ್ ನಂಬರ್ ಅಥವಾ 16 ಡಿಜಿಟಿ ವರ್ಚವಲ್ ಐಡಿ ನಮೂದಿಸಿ.
- ಇದರ ಜತೆಗೆ ಅಲ್ಲಿ ಕೇಳಲಾಗುವ ಅಂದರೆ, ಪೂರ್ತಿ ಹೆಸರು, ಪಿನ್ ಕೋಡ್ ಮತ್ತು ಸೆಕ್ಯುರಿಟಿ ಕೋಡ್ ನಮೂದಿಸಿ.
- ಬಳಿಕ Select your preference ಸೆಕ್ಷನ್ನಲ್ಲಿ Masked Aadhaar ಆಕ್ಷನ್ ಆಯ್ಕೆ ಮಾಡಿಕೊಳ್ಳಿ
- ನಿಮ್ಮ ಮೊಬೈಲಿಗೆ ಬರುವ ಒಟಿಪಿ ನಮೂದಿಸಿ ಮತ್ತು ದೃಢೀಕರಣದ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಿ.
- ಬಳಿಕ ನೀವು ಪಾಸ್ವರ್ಡ್ನಿಂದ ರಕ್ಷಿತವಾಗಿರುವ ಮಾಸ್ಕ್ಡ್ ಆಧಾರ್ ಅನ್ನು ಪಿಡಿಎಫ್ ಫಾರ್ಮ್ಯಾಟ್ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಈ ಸುದ್ದಿಯನ್ನೂ ಓದಿ: Aadhaar Card: ಕಳೆದು ಹೋದ ಆಧಾರ್ ಸಂಖ್ಯೆ ಮರಳಿ ಪಡೆಯುವುದು ಹೇಗೆ? ಜಸ್ಟ್ ಹೀಗೆ ಮಾಡಿ